ಹಿಂದೂಗಳೇ, ವಿಜಯದಶಮಿಯ ಐತಿಹಾಸಿಕ ಮತ್ತು ಧಾರ್ಮಿಕ ಮಹಾತ್ಮೆ ನಿಮಗೆ ತಿಳಿದಿದೆಯೇ ?

೧. ‘ರಾಮನ ಪೂರ್ವಜ ಮತ್ತು ಅಯೋಧ್ಯೆಯ ರಾಜನಾದ ರಘುವು ವಿಶ್ವಜಿತ ಯಜ್ಞವನ್ನು ಮಾಡಿದನು. ಅವನು ತನ್ನ ಎಲ್ಲ ಸಂಪತ್ತನ್ನು ದಾನಮಾಡಿ ಒಂದು ಪರ್ಣಕುಟೀರದಲ್ಲಿ ವಾಸಿಸತೊಡಗಿದನು. ಒಂದು ದಿನ ಕೌತ್ಸನು ಅವನ ಪರ್ಣ ಕುಟೀರಕ್ಕೆ ಬಂದನು. ಅವನಿಗೆ ಗುರುದಕ್ಷಿಣೆ ಕೊಡಲು ೧೪ ಕೋಟಿ ಸುವರ್ಣಮುದ್ರೆಗಳು ಬೇಕಾಗಿದ್ದವು. ರಘುವು ಕುಬೇರನ ಮೇಲೆ ಆಕ್ರಮಣ ಮಾಡಲು ಸಿದ್ಧನಾದನು. ಕುಬೇರನು ಮಂದಾರ (ಒಂದು ರೀತಿಯ ಗಿಡ) ಮತ್ತು ಬನ್ನಿ ವೃಕ್ಷಗಳ ಮೇಲೆ ಸುವರ್ಣದ ಮಳೆಯನ್ನೇ ಸುರಿಸಿದನು. ಕೌತ್ಸನು ಕೇವಲ ೧೪ ಕೋಟಿ ಸುವರ್ಣ ಮುದ್ರೆಗಳನ್ನು ತೆಗೆದುಕೊಂಡನು. ಉಳಿದ ಸುವರ್ಣ ಮುದ್ರೆಗಳನ್ನು ಪ್ರಜೆಗಳು ಒಯ್ದರು. (ಕೌತ್ಸನು ಅವಶ್ಯಕವಿದ್ದಷ್ಟೇ ಸುವರ್ಣಮುದ್ರೆಗಳನ್ನು ತೆಗೆದುಕೊಂಡನು ಮತ್ತು ರಘುವು ಕೌತ್ಸನಿಗೆ ಬೇಡವಾಗಿದ್ದ ಎಲ್ಲ ಸುವರ್ಣಮುದ್ರೆಗಳನ್ನು ಹಂಚಿಬಿಟ್ಟನು. ಇದೇ ಹಿಂದೂ ಸಂಸ್ಕೃತಿ ! ಎಲ್ಲಿ ತ್ಯಾಗವನ್ನು ಆಧರಿಸಿದ ಮಹಾನ ಹಿಂದೂ ಸಂಸ್ಕೃತಿ ಮತ್ತು ಎಲ್ಲಿ ಪ್ರತಿಯೊಂದು ವಿಷಯದ ದುರಾಸೆಯಿರುವ (ಲಾಲಸೆ) ಈಗಿನ ರಾಜಕಾರಣಿಗಳು ಮತ್ತು ಜನರು ! – ಸಂಕಲನಕಾರರು)

೨. ‘ಇದೇ ದಿನ ಶ್ರೀರಾಮನು ರಾವಣನನ್ನು ವಧಿಸಲು ಹೊರಟಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ಜಯಗಳಿಸಿ ಅವನನ್ನು ವಧಿಸಿದ್ದನು. ಈ ಘಟನೆಗಳ ಸಂಕೇತವೆಂದು ಈ ದಿನಕ್ಕೆ ‘ವಿಜಯದಶಮಿ ಎಂದು ಹೆಸರು ಬಂದಿದೆ.

೩. ಅಜ್ಞಾತವಾಸ ಮುಗಿದ ಮೇಲೆ ಪಾಂಡವರು ಶಕ್ತಿಯ ಪೂಜೆಯನ್ನು ಮಾಡಿ ಬನ್ನಿಯ ಗಿಡದಲ್ಲಿಟ್ಟ ತಮ್ಮ ಶಸ್ತ್ರಗಳನ್ನು ತೆಗೆದುಕೊಂಡರು ಮತ್ತು ವಿರಾಟನ ಗೋವುಗಳನ್ನು ಸೆರೆಹಿಡಿದ ಕೌರವಸೇನೆ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯ ಸಾಧಿಸಿದ್ದರು.

ಹಿಂದೂಗಳೇ, ವಿಜಯದಶಮಿಯ ಮಹಾತ್ಮೆಯನ್ನು ಇತರ ಹಿಂದೂಗಳಿಗೂ ತಿಳಿಸಿ !