‘ಭಾಜಪ ಮತ್ತು ಸಂಘದ ವಿಚಾರ ‘ನಾಝೀಯಂತಿದೆ (ಯಂತೆ) ! – ಪಾಕಿಸ್ತಾನದ ಪ್ರಧಾನಮಂತ್ರಿ

ಭಾಜಪ ಮತ್ತು ಸಂಘವಲ್ಲ ಕಳೆದ ೭೨ ವರ್ಷಗಳಿಂದ ಪಾಕಿಸ್ತಾನದ ವಿಚಾರ ನಾಝಿಯಂತಿರುವುದರಿಂದ ಅಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ವಂಶನಾಶವಾಗಿದೆ ಮತ್ತು ಈಗ ಬಲೂಚಿಸ್ತಾನದ ಜನರ ವಿಷಯದಲ್ಲಿಯೂ ಅದೇ ರೀತಿ ಆಗುತ್ತಿದೆ !

ಇಸ್ಲಾಮಾಬಾದ್ – ಗಾಂಧಿ ಮತ್ತು ನೆಹರು ಇವರ ದೇಶವಾಗಿದ್ದ ಭಾರತವನ್ನು ಈಗ ಹಿಂದುತ್ವ ನಿಷ್ಠರಾದ ನರೇಂದ್ರ ಮೋದಿಯವರು ಆಳುತ್ತಿದ್ದಾರೆ. ಅವರ ವಿಚಾರಗಳು ಪಾಕಿಸ್ತಾನಕ್ಕೆ ಮತ್ತು ಭಾರತದಲ್ಲಿರುವ ಎಲ್ಲ ಮುಸಲ್ಮಾನರಿಗೆ ಅಪಾಯಕಾರಿಯಾಗಿದೆ. ಸಂಘ ಮತ್ತು ಭಾಜಪದಲ್ಲಿನ ‘ನಾಝೀ ಸಮಾನತೆಯನ್ನು ತಿಳಿದುಕೊಳ್ಳಲಿಕ್ಕಿದ್ದರೆ, ‘ಗೂಗಲ್ನಲ್ಲಿ ನಾಝೀಯ ವಿಚಾರ ಹೇಗಿತ್ತು ಎಂಬುದನ್ನು ನೋಡಬಹುದು. ಅದನ್ನು ನೋಡಿದರೆ, ನಿಮಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾಜಪ ಇವರ ವಿಚಾರಗಳು ನಾಝೀಯಂತೆ ಇದೆ ಎಂಬುದು ಗಮನಕ್ಕೆ ಬರುವುದು, ಎಂದು ಪಾಕಿಸ್ತಾನದ ಪ್ರಧಾನಮಂತ್ರ ಇಮ್ರಾನ್ ಖಾನ್ ಇವರು ಟ್ವೀಟ್ ಮಾಡಿದ್ದಾರೆ.

Kannada Weekly | Offline reading | PDF