ಹಿಂದೂಗಳನ್ನು ಹೊರದಬ್ಬುವ ಪಾಕಿಸ್ತಾನವು ಕಾಶ್ಮೀರದಲ್ಲಿನ ಜನಸಂಖ್ಯಾ ಸಮತೋಲನದ ಚಿಂತೆ ಮಾಡಬಾರದು ! – ಡಾ. ಡೇವಿಡ್ ಫ್ರಾಲೆ

ನವ ದೆಹಲಿ – ಪಾಕಿಸ್ತಾನವು ಪಾಕ್‌ಆಕ್ರಮಿತ ಕಾಶ್ಮೀರದಲ್ಲಿನ ಜನಸಂಖ್ಯೆಯ ಸಮತೋಲನ ಮೊದಲೇ ಬದಲಾಯಿಸಿದೆ. ಅದು ಈ ಪ್ರದೇಶದಲ್ಲಿ ಉಗ್ರವಾದಿಗಳ ಸಂಖ್ಯೆಯೂ ಬಹುದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದೆ. ಕೆಲವು ಬೆರಳೆಣಿಕೆಯಷ್ಟು ಉದಾಹರಣೆಗಳ ಹೊರತು ಹೆಚ್ಚಿನ ಹಿಂದೂಗಳನ್ನು ಅದು ಹೊರದಬ್ಬಿದೆ. ಪಾಕಿಸ್ತಾನದಲ್ಲಿನ ಜನಸಂಖ್ಯೆಯ ಸಮತೋಲನ ಕೂಡ ಹಾಳುಗೆವಿಡದೆ. ತನ್ನ ದೇಶದಲ್ಲಿ ಇಂತಹ ಸ್ಥಿತಿ ಇರುವಾಗ ಅದಕ್ಕೆ ‘ಕಾಶ್ಮೀರದ ಜನಸಂಖ್ಯೆಯ ಸಮತೋಲನ ಹದಗೆಡುವುದು ಎಂಬ ಚಿಂತೆ ಆಗುತ್ತಿದೆ, ಎಂದು ಅಮೇರಿಕಾದ ತತ್ತ್ವಜ್ಞ, ವಿಚಾರವಂತ ಹಾಗೂ ಭಾರತದ ಹಿಂದೂ ಸಂಸ್ಕೃತಿಯ ಅಭ್ಯಾಸಕ ಡಾ. ಡೇವಿಡ್ ಫ್ರಾಲೆ (ಶ್ರೀ ವಾಮದೇವ ಶಾಸ್ತ್ರಿ) ಇವರು ಟ್ವೀಟ್ ಮಾಡಿದ್ದಾರೆ.

‘ಕಲಮ್ ೩೭೦ ರದ್ದುಪಡಿಸಿರುವುದು ಭಾರತದ ಸಂಚಾಗಿದೆ. ಈ ನಿರ್ಣಯದ ಮೂಲಕ ಕಾಶ್ಮೀರದಲ್ಲಿನ ಜನಸಂಖ್ಯೆಯ ಪ್ರಮಾಣವನ್ನು ಬದಲಾಯಿಸಿ ಹಿಂದೂಗಳ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ, ಎಂದು ಪಾಕಿಸ್ತಾನದಿಂದ ಟೀಕೆಯಾಗುತ್ತಿದೆ. ಈ ಟೀಕೆಗೆ ಡಾ. ಫ್ರಾಲೆ ಇವರು ಈ ಮೇಲಿನ ಉತ್ತರವನ್ನು ನೀಡಿದ್ದಾರೆ.

Kannada Weekly | Offline reading | PDF