ಶ್ರೀಲಂಕಾದ ಧ್ರುವೀಕರಣ : ಬೌದ್ಧರು, ಮುಸಲ್ಮಾನರು ಮತ್ತು ಕ್ರೆಸ್ತರು ಪರಸ್ಪರರ ವೈರಿಗಳೇಕಾಗಿದ್ದಾರೆ ?

ಏಪ್ರಿಲ್ ೨೧, ೨೦೧೯ ರಂದು ಶ್ರೀಲಂಕಾದ ‘ಸೆಬಾಸ್ಟಿಯನ್  ಚರ್ಚ್ನ ಮೇಲೆ ಜಿಹಾದಿ ಭಯೋತ್ಪಾದಕರಿಂದ ನಡೆದ ಆಕ್ರಮಣದ ನಂತರದ ಛಾಯಾಚಿತ್ರ (ಆಧಾರ: ‘ಫಾರೆನ್ ಪ್ವಾಲಿಸಿ ಸುದ್ದಿಜಾಲತಾಣ)

೧೦ ವರ್ಷಗಳ ಹಿಂದೆ ಶ್ರೀಲಂಕಾದಲ್ಲಿನ ಗೃಹಯುದ್ಧವು ಮುಕ್ತಾಯವಾಯಿತು. ಆಗ ಇನ್ನು ಮುಂದೆ ಶ್ರೀಲಂಕಾದಲ್ಲಿ ಶಾಂತಿ ನೆಲೆಸಬಹುದು ಎಂದು ಅನಿಸಿತ್ತು; ಆದರೆ ಇತ್ತೀಚೆಗಷ್ಟೇ ಘಟಿಸಿದ ಭಯೋತ್ಪಾದನೆಯ ಆಕ್ರಮಣಗಳಿಂದ ಈ ಶಾಂತಿ ಕಡಿಮೆ ಕಾಲಾವಧಿಯದ್ದಾಗಿತ್ತು ಎನ್ನುವುದನ್ನು ಸಿದ್ಧಪಡಿಸಿದೆ. ಇತ್ತೀಚೆಗಷ್ಟೇ ಶ್ರೀಲಂಕಾದ ಚರ್ಚ್ ಮತ್ತು ಹೊಟೇಲ್ ಗಳಲ್ಲಿ ನಡೆದ ಭಯೋತ್ಪಾದನಾ ಆಕ್ರಮಣಗಳಲ್ಲಿ ಸುಮಾರು ೨೯೦ ಜನರು ಮರಣ ಹೊಂದಿದರು. ಈ ಪ್ರಕರಣದಲ್ಲಿ ೨೪ ಜನರನ್ನು ಬಂಧಿಸಲಾಗಿದೆ.

ಶ್ರೀಲಂಕಾದ ಇತಿಹಾಸ ಮತ್ತು ಧರ್ಮಕ್ಕನುಸಾರ ಜನಸಂಖ್ಯೆಯ ಪ್ರಮಾಣ !

ಶ್ರೀಲಂಕಾವು ನೈಸರ್ಗಿಕ ಸೌಂದರ್ಯಕ್ಕಾಗಿ ಪ್ರಸಿದ್ಧವಾಗಿದೆ. ೨೦೧೮ ರಲ್ಲಿ ೨೦ ಲಕ್ಷ ಪ್ರವಾಸಿಗರು ಈ ದೇಶಕ್ಕೆ ಭೇಟಿ ನೀಡಿದ್ದರು; ಆದರೆ ಶ್ರೀಲಂಕಾದ ಈ ಸೌಂದರ್ಯಕ್ಕೆ ಮೊದಲಿನಿಂದಲೇ ಹಿಂಸೆಯ ಕಲೆತಾಗಿದೆ. ಜಾಗತಿಕ ವ್ಯಾಪಾರ ಕೇಂದ್ರವಾಗಿರುವ ಶ್ರೀಲಂಕಾದಲ್ಲಿ ವೈವಿಧ್ಯತೆ ನೋಡಲು ಸಿಗುತ್ತದೆ. ಒಂದು ಕಾಲದಲ್ಲಿ ಭಾರತದ ಅವಿಭಾಜ್ಯ ಅಂಗವಾಗಿದ ಶ್ರೀಲಂಕಾದಲ್ಲಿ ಬೌದ್ಧರು ಕಳೆದ ಸುಮಾರು ೨ ಸಾವಿರ ವರ್ಷಗಳಿಂದ ವಾಸಿಸುತ್ತಿದ್ದಾರೆ. ಕ್ರಿಸ್ತಪೂರ್ವ ೧೦೦ ವರ್ಷಗಳಿಂದ ಅವರು ಇಲ್ಲಿ ವಾಸಿಸುತ್ತಿದ್ದಾರೆ. ಅರಬರೊಂದಿಗಿನ ವ್ಯಾಪಾರ ಸಂಬಂಧದಿಂದ ಮಧ್ಯದ ಕಾಲದಲ್ಲಿ ಮುಸಲ್ಮಾನರು ಶ್ರೀಲಂಕಾಗೆ ಬಂದರು. ೧೬ ನೇ ಶತಮಾನದಲ್ಲಿ ಯುರೋಪಿಯನ್ ಸಾಮ್ರಾಜ್ಯವಾದದ ಕಾಲದಲ್ಲಿ ಕ್ರೆಸ್ತರು ಶ್ರೀಲಂಕಾದಲ್ಲಿ ನೆಲೆಸಿದರು. ೧೯೪೮ ರಲ್ಲಿ ಶ್ರೀಲಂಕಾಗೆ ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯದೊರೆಕಿತು. ೧೯೭೨ ರಲ್ಲಿ ಶ್ರೀಲಂಕಾ ಪ್ರಜಾಪ್ರಭುತ್ವದ ದೇಶವಾಯಿತು.

ಸದ್ಯ ಶ್ರೀಲಂಕಾದ ಜನಸಂಖ್ಯೆ ಸುಮಾರು ೨ ಕೋಟಿ ೨೦ ಲಕ್ಷಗಳಷ್ಟಿದೆ. ಇದರಲ್ಲಿ ಶೇ. ೭೦ ರಷ್ಟು ಬೌದ್ಧರು, ಶೇ. ೧೨ ರಷ್ಟು ಹಿಂದೂಗಳು, ಶೇ. ೧೦ ರಷ್ಟು ಮುಸಲ್ಮಾನರು ಮತ್ತು ಶೇ. ೭ ರಷ್ಟು ಕೆಥೋಲಿಕರಿದ್ದಾರೆ. ಇತ್ತೀಚೆಗಷ್ಟೇ ನಡೆದ ಭಯೋತ್ಪಾದಕ ಆಕ್ರಮಣಗಳಲ್ಲಿ ೩ ಚರ್ಚ್‌ಗಳನ್ನು ಗುರಿ ಮಾಡಲಾಯಿತು. ಇದು ಈ ದೇಶದಲ್ಲಿ ಮುಸಲ್ಮಾನರ ಪ್ರಭಾವ ಹೆಚ್ಚುತ್ತಿದೆ ಎನ್ನುವುದರ ಸಂಕೇತವಾಗಿದೆ.

ಬಹುಸಂಖ್ಯಾತ ಬೌದ್ಧರ ಕಟ್ಟರವಾದ !

ಶ್ರೀಲಂಕಾದಲ್ಲಿ ಬಹುಸಂಖ್ಯಾತ ಸಿಂಹಳಿ ಸಮುದಾಯದವರು ಮತ್ತು ಅಲ್ಪಸಂಖ್ಯಾತ ತಮಿಳರಲ್ಲಿ ಮೊದಲಿನಿಂದಲೂ ಸಂಘರ್ಷ ನಡೆಯುತ್ತಿದೆ; ಆದರೆ ಈ ಒತ್ತಡದ ಮುಖ್ಯ ಕಾರಣವೆಂದರೆ ಬೌದ್ಧರ ‘ಕಟ್ಟರವಾದ ಆಗಿದೆ. ೧೯೫೯ ರಲ್ಲಿ ಒಬ್ಬ ಬೌದ್ಧ ಭಿಕ್ಷು ದೇಶದ ನಾಲ್ಕನೇ ಪ್ರಧಾನಮಂತ್ರಿಗಳ ಹತ್ಯೆಯನ್ನು ಮಾಡಿದ್ದನು; ಏಕೆಂದರೆ ಅವರು ದೇಶದ ತಮಿಳು ಅಲ್ಪಸಂಖ್ಯಾತರಿಗೆ ಸ್ವಾಯತ್ತತೆ ನೀಡುವ ಕರಾರಿನ ಮೇಲೆ ಹಸ್ತಾಕ್ಷರ ಮಾಡಿದ್ದರು. ೨೦೧೮ ರಲ್ಲಿ ಬೌದ್ಧರು ಮುಸಲ್ಮಾನರ ಅಂಗಡಿ ಮತ್ತು ಮನೆಗಳ ಮೇಲೆ ಆಕ್ರಮಣ ಮಾಡಿದ್ದರು. ಇದರಲ್ಲಿ ೫ ಜನರು ಮರಣ ಹೊಂದಿದ್ದರು. (ಬಹುತೇಕ ಶ್ರೀಲಂಕಾದ ಮುಸಲ್ಮಾನರು ತಮಿಳರಾಗಿದ್ದಾರೆ ಮತ್ತು ಬಹುತೇಕ ತಮಿಳರು ಹಿಂದೂಗಳಾಗಿದ್ದಾರೆ) ಶ್ರೀಲಂಕಾದ ಒಟ್ಟು ಜನಸಂಖ್ಯೆಯಲ್ಲಿ ಕ್ರೆಸ್ತರು ಕೇವಲ ಶೇ. ೭ ರಷ್ಟಿದ್ದಾರೆ. ಅವರನ್ನು ಧರ್ಮದ ಆಧಾರದಲ್ಲಿನ ಗೃಹಯುದ್ಧದ ಕಾಲಾವಧಿಯಲ್ಲಿ ಎಂದಿಗೂ ಗುರಿ ಮಾಡಿರಲಿಲ್ಲ; ಆದರೆ ೨೦೧೯ ರ ‘ಈಸ್ಟರ್ ರವಿವಾರದಂದು ನಡೆದ ಆಕ್ರಮಣವು ಈ ಪರಂಪರೆಯನ್ನು ನಾಶಗೊಳಿಸಿತು.

ಗೃಹಯುದ್ಧದ ಗಾಯಗಳಿನ್ನೂ ಮಾಗಿಲ್ಲ !

೨೦೧೯ ರ ಜುಲೈನಲ್ಲಿ ಸರಕಾರ ಮತ್ತು ಪ್ರತ್ಯೇಕತಾವಾದಿ ತಮಿಳರ ಸಂಘರ್ಷವು ಮುಕ್ತಾಯವಾಗಿ ೧೦ ವರ್ಷಗಳು ಪೂರ್ಣವಾದವು. ಸುಮಾರು ೩೦ ವರ್ಷಗಳ ವರೆಗೆ ‘ತಮಿಳು ಟೈಗರ್ಸರು ಆತ್ಮಾಹುತಿ ಆಕ್ರಮಣಗಳನ್ನು ಮಾಡಿದರು. ಶ್ರೀಲಂಕಾದ ಆಗಿನ ರಾಷ್ಟ್ರಪತಿ ಮತ್ತು ಓರ್ವ ಮಾಜಿ ಪ್ರಧಾನಮಂತ್ರಿಗಳ ಹತ್ಯೆಯನ್ನೂ ಮಾಡಿದ್ದರು. ವರ್ಷ ೨೦೦೦ ರಲ್ಲಿ ಶ್ರೀಲಂಕಾದ ಮುಕ್ಕಾಲು ಭಾಗದ ಮೇಲೆ ಅವರು ನಿಯಂತ್ರಣವನ್ನು ಪಡೆದಿದ್ದರು. ೨೦೦೯ ಕ್ಕಿಂತ ಮೊದಲು ‘ತಮಿಳು ಟೈಗರ್ಸರನ್ನು ನಿಯಂತ್ರಿಸುವ ಯಾವುದೇ ಮಾರ್ಗವಿರಲಿಲ್ಲ. ೨೦೦೯ ರಲ್ಲಿ ಶ್ರೀಲಂಕಾದ ಸೈನ್ಯವು ತಮಿಳು ಟೈಗರ್ಸರನ್ನು ಬುಡಸಮೇತ ನಾಶಮಾಡಿತು. ವಿಶ್ವ ಸಂಸ್ಥೆ ನೀಡಿರುವ ಮಾಹಿತಿಗನುಸಾರ ಈ ಗೃಹಯುದ್ಧದಲ್ಲಿ ಸುಮಾರು ೪೦ ಸಾವಿರ ನಾಗರಿಕರು ಮರಣ ಹೊಂದಿದರು. ಶ್ರೀಲಂಕಾ ಸರಕಾರವು ಅಂತರರಾಷ್ಟ್ರೀಯ ಸಮುದಾಯಕ್ಕೆ ಯುದ್ಧ ಪ್ರಭಾವಿತ ಪ್ರದೇಶದಲ್ಲಿನ ಜನರಿಗೆ ನ್ಯಾಯ ಒದಗಿಸುವುದಾಗಿ ಭರವಸೆಯನ್ನು ನೀಡಿತ್ತು; ಆದರೆ ಈ ದಿಶೆಯಲ್ಲಿ ಸರಕಾರವು ವಿಶೇಷವಾಗಿ ಏನನ್ನೂ ಮಾಡಲಿಲ್ಲ. ಕೆಲವು ತಮಿಳು ಕುಟುಂಬಗಳು ಗೃಹ ಯುದ್ಧದ ಸಮಯದಲ್ಲಿ ನಾಪತ್ತೆಯಾದ ಸಂಬಂಧಿಕರನ್ನು ಇಂದಿಗೂ ಹುಡುಕುತ್ತಿದ್ದಾರೆ.

ಸಿಂಹಳಿ ಬೌದ್ಧರ ‘ಜಾತೀಯ ರಾಷ್ಟ್ರವಾದ !

ಸಿಂಹಳಿ ಬೌದ್ಧರ ‘ಜಾತಿಯ ರಾಷ್ಟ್ರವಾದದಲ್ಲಿ ಹೆಚ್ಚಳವಾಗಿರುವುದರಿಂದ ಸಾಂಪ್ರದಾಯಿಕ ಸಂಘರ್ಷ ಬಲವಾಗಿದೆ. ದೇಶದಲ್ಲಿ ಹಿಂಸೆಯ ಹೊಸ ಅಲೆಗಳು ನಿರ್ಮಾಣವಾಗಿವೆ. ಕೆಲವು ಸಿಂಹಳಿ ರಾಜಕೀಯ ಮುಖಂಡರ ಅಭಿಪ್ರಾಯದಂತೆ ಗೃಹಯುದ್ಧದಲ್ಲಿ ದೊರೆತ ಗೆಲುವಿನಿಂದ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಕಳೆದ ವರ್ಷ ಕ್ಯಾಂಡಿ ಜಿಲ್ಲೆಯಲ್ಲಿ ಬೌದ್ಧರು ಮತ್ತು ಮುಸಲ್ಮಾನರ ಸಂರ್ಘದ ಬಳಿಕ ಅಲ್ಲಿನ ಅಧಿಕಾರಿಗಳು ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದರು.

ರಾಜಕೀಯ ಅಸ್ಥಿರತೆ !

ಇದೆಲ್ಲವೂ ಕಡಿಮೆ ಎಂಬಂತೆ, ಶ್ರೀಲಂಕಾ ಕಳೆದ ಕೆಲವು ಕಾಲಾವಧಿಯಿಂದ ರಾಜಕೀಯ ಒತ್ತಡದಲ್ಲಿಯೂ ಇದೆ. ಕಳೆದ ವರ್ಷ ಶ್ರೀಲಂಕಾದ ಪ್ರಧಾನಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ನಡೆದಿದ್ದರಿಂದ ರಾಜಕೀಯ ಬಿಕ್ಕಟ್ಟು ಎದುರಾಗಿತ್ತು. ಒಂದೇ ಸಮಯದಲ್ಲಿ ಶ್ರೀಲಂಕಾದಲ್ಲಿ ಇಬ್ಬರು ಪ್ರಧಾನಮಂತ್ರಿಗಳನ್ನು ಘೋಷಿಸಲಾಗಿತ್ತು. ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನಾ ಇವರು ಪ್ರಧಾನಮಂತ್ರಿ ರಾನಿಲ ವಿಕ್ರಮಸಿಂಘೆ ಇವರನ್ನು ಅಧಿಕಾರದಿಂದ ಕೆಳಗಿಳಿಸಿ ಮಹಿಂದ್ರಾ ರಾಜಪಕ್ಷೆ ಇವರನ್ನು ಪ್ರಧಾನಮಂತ್ರಿಗಳನ್ನಾಗಿ ನಿಯುಕ್ತಿಗೊಳಿಸಿದರು. ರಾಜಪಕ್ಷೆಯವರ ಬಳಿ ಬಹುಮತವಿಲ್ಲದಿರುವುದು ಸ್ಪಷ್ಟವಾದ ಬಳಿಕ ರಾಷ್ಟ್ರಪತಿ ಸಿರಿಸೇನಾ ಇವರು ಸಂಸತ್ತನ್ನೇ ವಿಸರ್ಜಿಸಿದರು. ಶ್ರೀಲಂಕಾದಲ್ಲಿ ಸೃಷ್ಟಿಯಾದ ರಾಜಕೀಯ ಬಿಕ್ಕಟ್ಟು ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪದ ಬಳಿಕ ಮುಕ್ತಾಯಗೊಂಡಿತು. ರಾಜಪಕ್ಷೆ ಹಿಂದೆ ಸರಿದರು ಮತ್ತು ವಿಕ್ರಮಸಿಂಘೆ ಪುನಃ ಪ್ರಧಾನಿಯಾದರು.

ಅಲ್ಪಸಂಖ್ಯಾತ ವಿರೋಧಿ ವಾತಾವರಣ !

ಒಂದು ವರದಿಗನುಸಾರ ಜೂನ್ ೨೦೧೪ ರಲ್ಲಿ ಏಲುಥಗಾಮಾ ಗಲಭೆಯ ಬಳಿಕ ಮುಸಲ್ಮಾನರ ವಿರುದ್ಧ ಆಂದೋಲನವನ್ನು ನಡೆಸಲಾಯಿತು. ಬೌದ್ಧ ಸಮುದಾಯವು ‘ಮುಸಲ್ಮಾನರು ಒತ್ತಾಯ ಪೂರ್ವಕವಾಗಿ ಮತಾಂತರಗೊಳಿಸುತ್ತಿದ್ದಾರೆ ಎಂದು ಆರೋಪಿಸಿತ್ತು. ೨೦೧೫ ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಷ್ಟ್ರಪತಿ ಎಮ್. ಸಿರಿಸೇನಾ ಇವರು ‘ಮುಸಲ್ಮಾನರ ಮೇಲೆ ಆಗಿರುವ ಹಿಂಸಾಚಾರದ ಬಗ್ಗೆ ವಿಚಾರಣೆ ನಡೆಸಲಾಗುವುದು, ಎಂದು ಹೇಳಿದ್ದರು; ಆದರೆ ಮುಂದೆ ಈ ವಿಷಯದಲ್ಲಿ ಏನೂ ಆಗಲಿಲ್ಲ. ಚುನಾವಣೆಯ ಮೊದಲು ಓರ್ವ ರಾಜಕೀಯ ವಿಶ್ಲೇಷಕರು ನೀಡಿರುವ ಮಾಹಿತಿಗನುಸಾರ ಶ್ರೀಲಂಕಾದ ಅಲ್ಪಸಂಖ್ಯಾತರಿಗೆ ತಮ್ಮ ಭವಿಷ್ಯ ಅಸುರಕ್ಷಿತ ವೆನಿಸುತ್ತಿದೆ; ಏಕೆಂದರೆ ಅಲ್ಲಿನ ರಾಜಕೀಯ ಪಕ್ಷಗಳು ಬೌದ್ಧ ರಾಷ್ಟ್ರವಾದಿ ಮತದಾರರನ್ನು ತಮ್ಮ ಪರವಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. (ಆಧಾರ: ‘ಆಜ ತಕ್ ಈ ಸುದ್ದಿ ಜಾಲತಾಣ)

Kannada Weekly | Offline reading | PDF