ಇಸ್ಲಾಮೀ ಚಿಹ್ನೆ ಮತ್ತು ಅರೇಬಿಕ್ ಅಕ್ಷರಗಳನ್ನು ತೆಗೆಯಿರಿ ! – ಚೀನಾದ ಆಡಳಿತದಿಂದ ಹೊಟೇಲ್‌ಗಳಿಗೆ ಆದೇಶ

ಚೀನಾ ಹೇಗೆ ಜಿಹಾದಿ ಮಾನಸಿಕತೆಯ ಜನರು ಮತ್ತು ಜಿಹಾದಿ ಉಗ್ರವಾದ ನಿರ್ಮಾಣವಾಗಬಾರದೆಂದು ಕಳೆದ ಅನೇಕ ವರ್ಷಗಳಿಂದ ಬಾಹ್ಯ ಜಗತ್ತಿನ ಬಗ್ಗೆ ಸ್ವಲ್ಪವೂ ವಿಚಾರ ಮಾಡದೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದೆ. ಅದನ್ನು ನೋಡುವಾಗ ಭಾರತ ಅದರಿಂದ ಕಲಿಯುವ ಅವಶ್ಯಕತೆಯಿದೆ !

ಚೀನಾದ ಇಂತಹ ಪ್ರಯತ್ನದಿಂದಲೆ ಅಲ್ಲಿ ಉಗ್ರವಾದಿ ಚಟುವಟಿಕೆಗಳು ನಡೆಯುವುದಿಲ್ಲ. ಚೀನಾದ ಈ ಕೃತಿಯಿಂದ ‘ಉಗ್ರವಾದಿಗಳಿಗೆ ಧರ್ಮ ಇರುತ್ತದೆ ಎಂಬುದು ಕೂಡ ಹೆಚ್ಚು ಸ್ಪಷ್ಟವಾಗುತ್ತದೆ !

ಬೀಜಿಂಗ್ – ಚೀನಾದ ಆಡಳಿತವು ‘ಹಲಾಲ ರೆಸ್ಟೋರೆಂಟ್ಸ್ ಮತ್ತು ‘ಫುಡ್‌ಸ್ಟಾಲ್ಸ್ಗಳಿಂದ ಇಸ್ಲಾಮ್‌ಗೆ ಸಂಬಂಧಿಸಿದ ಚಿಹ್ನೆಗಳನ್ನು ಮತ್ತು ಅರೇಬಿಕ್ ಭಾಷೆಯ ಲೇಖನಗಳನ್ನು ತಕ್ಷಣ ಅಳಿಸಬೇಕೆಂದು ಆದೇಶ ನೀಡಿದೆ. ಚೀನಾದಲ್ಲಿನ ಮುಸಲ್ಮಾನರನ್ನು ಸಾಂಸ್ಕೃತಿಕ ದೃಷ್ಟಿಯಲ್ಲಿ ಚೀನೀಕರಣ ಮಾಡಲು ಈ ಹೆಜ್ಜೆಯನ್ನಿಡಲಾಗಿದೆ. ಚೀನಾದಲ್ಲಿ ಮುಸಲ್ಮಾನರ ಸಂಖ್ಯೆ ೨ ಕೋಟಿಯಷ್ಟಿದ್ದು ಅವರು ಹೆಚ್ಚಿನವರು ಉಘುರ ಪ್ರಾಂತದಲ್ಲಿರುತ್ತಾರೆ.

೧. ಬೀಜಿಂಗ್‌ನಲ್ಲಿನ ಹಲಾಲ ರೆಸ್ಟೋರೆಂಟ್‌ಗಳಲ್ಲಿನ ಕಾರ್ಮಿಕರು ತಮ್ಮ ಹೆಸರನ್ನು ಗುಪ್ತವಾಗಿಡುವ ಆಧಾರದಲ್ಲಿ ಮುಂದಿನ ವಿಷಯ ಹೇಳಿದ್ದಾರೆ, ಇಸ್ಲಾಮಿಗೆ ಸಂಬಂಧ ಪಟ್ಟ ಚಿಹ್ನೆಗಳು, ಅರೇಬಿಕ್ಭಾ ಷೆಯಲ್ಲಿನ ಲೇಖನ ಇತ್ಯಾದಿ ಎಲ್ಲ ವಿಷಯಗಳನ್ನು ಫಲಕಗಳಿಂದ ಅಳಿಸಬೇಕೆಂದು ಆದೇಶ ಬಂದಿದೆ. ಈ ‘ರೆಸ್ಟೋರೆಂಟ್ಸ್ಗಳಲ್ಲಿನ ಕಾರ್ಮಿಕರು ಈ ಆದೇಶವನ್ನು ಪಾಲನೆ ಮಾಡುತ್ತಿದ್ದಾರೆಯೆ ಅಥವಾ ಇಲ್ಲವೆಂಬುದನ್ನು ಆಡಳಿತಾಧಿಕಾರಿಗಳು ನಿರೀಕ್ಷಣೆ ಮಾಡಿದ್ದಾರೆ. ‘ಇದು ವಿದೇಶಿ ಸಂಸ್ಕೃತಿಯಾಗಿದ್ದು ನೀವು ಚೀನೀ ಸಂಸ್ಕೃತಿಯನ್ನು ಅಂಗೀಕರಿಸಬೇಕು ಎಂದು ಕೂಡ ಅವರಿಗೆ ಎಚ್ಚರಿಕೆ ನೀಡಲಾಗಿದೆ.

೨. ಮಸೀದಿಗಳ ಮೇಲೆ ಅರಬಿ ಮುದ್ರೆಗಳಿರುವ ಗೋಪುರಗಳನ್ನು ತೆಗೆಸಿ ಅಲ್ಲಿ ಚೀನೀ ಶಿಖರಗಳ ಶೈಲಿಯನ್ನು ತರಲಾಗಿತ್ತು.

೩. ಬೀಜಿಂಗ್‌ನಲ್ಲಿ ಸುಮಾರು ೧ ಸಾವಿರ ‘ಹಲಾಲ ರೆಸ್ಟೋರೆಂಟ್ಸ್ ಮತ್ತು ‘ಫುಡ್ ಶಾಪ್ಗಳಿವೆ. ಇವುಗಳಿಗೆಲ್ಲ ಮತ್ತು ಸುತ್ತಮುತ್ತಲಿನ ಪ್ರದೇಶದ ‘ರೆಸ್ಟೋರೆಂಟ್ಸ್ಗಳಿಗೂ ಕಾರ್ಯಾಚರಣೆ ಮಾಡಲಾಗುವುದು. ಅನೇಕ ‘ರೆಸ್ಟೋರೆಂಟ್ಸ್ಗಳು ಅರೇಬಿಕ್ ಅಕ್ಷರಗಳನ್ನು ಚೀನೀ ಭಾಷೆಗೆ ಬದಲಾಯಿಸಿವೆ. ಕೆಲವರು ಅರೇಬಿಕ್ ಅಕ್ಷರಗಳನ್ನು ಮುಚ್ಚಿಟ್ಟಿದ್ದಾರೆ.

೪. ವಿದೇಶಿ ಹಸ್ತಕ್ಷೇಪದಿಂದ ಧಾರ್ಮಿಕ ಸಮೂಹಗಳ ಮೇಲೆ ನಿಯಂತ್ರಣವಿಡಲು ಕಠಿಣವಾಗುತ್ತದೆ. ಆದ್ದರಿಂದ ಅರೇಬಿಕ್ ಶಬ್ದ ಮತ್ತು ಇಸ್ಲಾಮಿಗೆ ಸಂಬಂಧಿಸಿದ ಚಿಹ್ನೆಗಳ ಮೇಲೆ ಚೀನಾ ನಿರ್ಬಂಧ ಹೇರಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ‘ಇಸ್ಲಾಮ್‌ನ ಅನುಕರಣೆ ಮಾಡುವವರು ಕೂಡ ಚೀನಾದಲ್ಲಿ ಚೀನೀ ಭಾಷೆಯಲ್ಲಿಯೆ ವ್ಯವಹಾರವನ್ನು ಮಾಡಬೇಕು ಮತ್ತು ಚೀನಾದ ಸಂಸ್ಕೃತಿಯನ್ನು ಪುರಸ್ಕರಿಸಬೇಕು, ಎಂಬುದು ಚೀನಾ ಸರಕಾರದ ಅಪೇಕ್ಷೆಯಾಗಿದೆ ಎಂದು ತಜ್ಞರಿಂದ ಈ ಬಗ್ಗೆ ಹೇಳಿದ್ದಾರೆ.

೫. ಚೀನಾದ ಆಡಳಿತದ ಆದೇಶದ ನಂತರ ಅನೇಕ ಚರ್ಚ್‌ಗಳನ್ನು ಕೂಡ ಮುಚ್ಚಲಾಗಿದೆ ಹಾಗೂ ‘ಕ್ರಾಸ್ ಅನಧಿಕೃತವಾಗಿದೆಯೆಂದು ಹೇಳುತ್ತಾ ಅನೇಕ ‘ಕ್ರಾಸ್ಗಳನ್ನು ತೆಗೆದುಹಾಕಲಾಗಿದೆ.

Kannada Weekly | Offline reading | PDF