ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಗ್ರೆನೆಡಾ (ಸ್ಪೇನ್)ದಲ್ಲಿ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ‘ಲೇಖಕರ ಆಧ್ಯಾತ್ಮಿಕ ಮಟ್ಟ ಮತ್ತು ಅವರ ಆಧ್ಯಾತ್ಮಿಕ ಸ್ಥಿತಿಯಿಂದ ಅವರ ಲೇಖನದ ಮೇಲಿನ ಪ್ರಭಾವ ಈ ವಿಷಯದಲ್ಲಿ ಶೋಧಪ್ರಬಂಧ ಮಂಡನೆ !

ಕೇವಲ ಸಂತರು ಬರೆದಿರುವಂತಹ ಆಧ್ಯಾತ್ಮಿಕ ಗ್ರಂಥದಿಂದ ಸಾತ್ತ್ವಿಕತೆಯು ಪ್ರಕ್ಷೇಪಿತವಾಗುತ್ತದೆ ! – ಸೌ. ದ್ರಗಾನಾ ಕಿಸ್ಲೋವಸ್ಕಿ ಸೌ. ದ್ರಗಾನಾ ಕಿಲ್ಸೌಕ್ಸಿ

ಶೋಧ ಪ್ರಬಂಧವನ್ನು ಮಂಡಿಸುತ್ತಿರುವ ಸೌ. ಡ್ರಗಾನಾ ಕಿಸ್ಲೌಸ್ಕಿ

ಗ್ರೆನೆಡಾ (ಸ್ಪೇನ್) – ‘ವ್ಯಾವಹಾರಿಕ ವಿಷಯದಲ್ಲಿ ಪುಸ್ತಕಗಳನ್ನು ಬರೆಯುವಷ್ಟು ಅಧ್ಯಾತ್ಮಿಕ ವಿಷಯದ ಮೇಲೆ ಗ್ರಂಥವನ್ನು ಬರೆಯುವುದು ಸುಲಭವಿಲ್ಲ, ಏಕೆಂದರೆ ‘ಅಧ್ಯಾತ್ಮವು ಸೂಕ್ಷ್ಮದಲ್ಲಿನ (ಅಂದರೆ ಪಂಚ ಜ್ಞಾನೇಂದ್ರಿಯ, ಮನಸ್ಸು ಮತ್ತು ಬುದ್ಧಿಯ ಆಚೆಗಿನ) ವಿಷಯವಾಗಿರುವುದರಿಂದ ಆಧ್ಯಾತ್ಮಿಕ ಗ್ರಂಥದ ಲೇಖಕರಿಗೆ ಸೂಕ್ಷ್ಮದಲ್ಲಿನ ಅರಿವಾಗುವುದು ಆವಶ್ಯಕವಿರುತ್ತದೆ, ಎಂದಾಗಿದೆ. ಸೂಕ್ಷ್ಮದ ಜ್ಞಾನವಿರುವ ಲೇಖಕರ ಸಾಹಿತ್ಯಗಳಲ್ಲಿ ಸಮಾಜದ ಮನಸ್ಸನ್ನು ಅಧ್ಯಾತ್ಮದ ಬಗ್ಗೆ ಪ್ರಭಾವಿತಗೊಳಿಸುವ ಸಾಮರ್ಥ್ಯ ಇರುತ್ತದೆ. ಆದ್ದರಿಂದ ಕೇವಲ ಸಂತರು ಬರೆದ ಆಧ್ಯಾತ್ಮಿಕ ಗ್ರಂಥದಿಂದ ಸಾತ್ತ್ವಿಕತೆಯು ಪ್ರಕ್ಷೇಪಿತವಾಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೌ. ದ್ರಗಾನಾ ಕಿಸ್ಲೋವಸ್ಕಿ ಇವರು ಪ್ರತಿಪಾದಿಸಿದರು. ಅವರು ಗ್ರೆನೆಡಾ, ಸ್ಪೇನ್‌ದಲ್ಲಿ ೬ ಜುಲೈ ೨೦೧೯ ರಂದು ನಡೆದ ‘ಪುಸ್ತಕಗಳು, ಪ್ರಕಾಶನಗಳು ಮತ್ತು ಗ್ರಂಥಾಲಯ ಈ ವಿಷಯದ ಮೇಲಿನ ೧೭ ನೇ ಅಂತಾರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ‘ಬುಕ್ಸ್, ಪಬ್ಲಿಶಿಂಗ್ ಆಂಡ್ ಲೈಬ್ರರೀಸ್ ರೀಸರ್ಚ್ ಆಂಡ್ ಕಾಮನ್ ಗ್ರೌಂಡ್ ರೀಸರ್ಚ ನೆಟ್ವರ್ಕ್ಸ, ಯುನಿವರ್ಸಿಟಿ ಆಫ್ ಇಲಿನಾಯಿಸ್ ರೀಸರ್ಚ ಪಾರ್ಕ್ ಇವರು ಆಯೋಜಿಸಿದ ಪರಿಷತ್ತಿನಲ್ಲಿ ಸೌ. ದ್ರಗಾನಾ ಕಿಸ್ಲೋವಸ್ಕಿಯವರು ಶೋಧಪ್ರಬಂಧವನ್ನು ಪ್ರಸ್ತುತ ಪಡಿಸಿದರು. ಈ ಶೋಧಪ್ರಬಂಧದ ಲೇಖಕರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರಾಗಿದ್ದಾರೆ.

ಸೌ. ದ್ರಗಾನಾ ಕಿಸ್ಲೋವಸ್ಕಿ ಇವರು ತಮ್ಮ ಮಾತನ್ನು ಮುಂದುವರಿಸುತ್ತ, “ಒಂದು ಪ್ರಯೋಗದಲ್ಲಿ ೩ ಗುಂಪಿನ (ಸಂತರು, ಸಾಮಾನ್ಯ ವ್ಯಕ್ತಿ ಮತ್ತು ಢೋಂಗಿ ಗುರು ಈ ಗುಂಪಿನ) ಲೇಖಕರು ಬರೆದಿರುವ ಪುಸ್ತಕಗಳ ಆಧ್ಯಾತ್ಮಿಕ ಸ್ತರದಲ್ಲಿಯ ಗುಣಮಟ್ಟ ಶಕ್ತಿ ಮತ್ತು ಪ್ರಭಾವಳಿ ಮಾಪಕ ಯಂತ್ರ, ಅದೇ ರೀತಿ ಸೂಕ್ಷ್ಮ ಪರೀಕ್ಷಣೆಯ ಆಧಾರದಲ್ಲಿ ಪರೀಕ್ಷಣೆಯನ್ನು ಮಾಡಲಾಯಿತು ಎರಡೂ ಪದ್ಧತಿಗಳಲ್ಲಿ ಮಾಡಿದ ಅಧ್ಯಯನದಲ್ಲಿ ಸಂತರು ಬರೆದಿರುವ ಗ್ರಂಥದಿಂದ ಹೆಚ್ಚಿನ ಪ್ರಮಾಣದಲ್ಲಿ ಸಾತ್ತ್ವಿಕ ಸ್ಪಂದನವು ಪ್ರಕ್ಷೇಪಿತವಾಗುತ್ತಿರುವುದು ಕಂಡುಬಂದಿತು. ‘ಸಾಮಾನ್ಯ ವ್ಯಕ್ತಿ ಮತ್ತು ‘ಢೋಂಗಿಗುರು ಈ ಎರಡು ಗುಂಪಿನ ಲೇಖಕರು (ನಕಾರಾತ್ಮಕ ಸ್ಪಂದನದ ಪ್ರಭಾವದಲ್ಲಿದ್ದವು) ಬರೆದಿದ್ದ ಪುಸ್ತಕದಿಂದ ತೊಂದರೆದಾಯಕ ಸ್ಪಂದನವು ಪ್ರಕ್ಷೇಪಿತವಾಗುತ್ತಿರುವುದು ಸ್ಪಷ್ಟವಾಯಿತು, ಎಂದರು.

‘ಆಧ್ಯಾತ್ಮಿಕ ಗ್ರಂಥಗಳ ಲೇಖಕರು ಸಂತರಿಗಿಂತ ಕಡಿಮೆ ಆಧ್ಯಾತ್ಮಿಕ ಮಟ್ಟ ಇದ್ದಲ್ಲಿ, ಅವರ ಬರವಣಿಗೆಯಲ್ಲಿ ಹೆಚ್ಚಾಗಿ ಜನಪ್ರಿಯತೆ ಅಥವಾ ಧನಾರ್ಜನೆಯ ಉದ್ದೇಶ ಇರುತ್ತದೆ. ಲೇಖಕರ ಉದ್ದೇಶವು ವ್ಯವಹಾರಿಕವಾಗಿದ್ದಲ್ಲಿ ಅಥವಾ ಆಧ್ಯಾತ್ಮಿಕ ತತ್ತ್ವದ ವಿರುದ್ಧ ಇದ್ದಲ್ಲಿ ಅವರಿಗೆ ಈಶ್ವರನ ಸಹಾಯ ಸಿಗುವುದಿಲ್ಲ. ನಕಾರಾತ್ಮಕ ಸ್ಪಂದನಗಳು ಲೇಖಕರ ವ್ಯಾವಹಾರಿಕ ಮಹತ್ವಾಕಾಂಕ್ಷೆಯ ಲಾಭವಾಗಿ ಅವರಿಗೆ ತಮ್ಮ ರಜ-ತಮ ವಿಚಾರಗಳಿಂದ ಪ್ರಭಾವಿತಗೊಳಿಸಿ ಅವರ ಗ್ರಂಥದ ಮಾಧ್ಯಮದಿಂದ ಸಮಾಜದ ದಾರಿ ತಪ್ಪಿಸುವ ಪ್ರಯತ್ನವಾಗುತ್ತದೆ. ಸಂತರ ಮಾರ್ಗದರ್ಶನದಲ್ಲಿ ಪ್ರತಿದಿನ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರೆ ಪುಸ್ತಕದಿಂದ ಪ್ರಕ್ಷೇಪಿತವಾಗುವ ಸ್ಪಂದನಗಳನ್ನು ನಾವು ನಿಖರವಾಗಿ ಗುರುತಿಸಬಹುದು. ಈ ಮೂಲಕ ನಾವು ಢೋಂಗಿ ಗುರುಗಳಿಂದ ಮೋಸ ಹೋಗುವುದನ್ನು ತಡೆಯಬಹುದು, ಎಂದು ಸೌ.ದ್ರಗಾನಾ ಕಿಸ್ಲೋವಸ್ಕಿ ಇವರು ತಿಳಿಸಿದರು.

Kannada Weekly | Offline reading | PDF