‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಸಾತ್ತ್ವಿಕ ಕಲೆ ಈ ವಿಷಯದ ಸಂಶೋಧನೆಯು ವ್ಯಾಂಕೋವರ್, ಕೆನಡಾದಲ್ಲಿನ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡನೆ !

ಶೋಧಪ್ರಬಂಧ ಮಂಡಿಸುತ್ತಿರುವ ಸೌ. ರಾಧಾ ಮಲ್ಲಿಕ

ವ್ಯಾಂಕೋವರ್, ಕೆನಡಾ – ಕಲಾಕೃತಿಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳನ್ನು, ಅಂದರೆ ಕಲಾಕೃತಿಗಳನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಿದರೆ ಇಲ್ಲಿಯವರೆಗೆ ಕಲಾಕೃತಿಗಳನ್ನು ಯಾವ ರೀತಿಯಲ್ಲಿ ಮೌಲ್ಯಾಂಕನವನ್ನು ನಾವು ಮಾಡಿದೆವೋ, ಅದನ್ನು ಮತ್ತೊಮ್ಮೆ ಮಾಡಬೇಕಾಗುವುದು, ಎಂಬುದು ನಮ್ಮ ಗಮನಕ್ಕೆ ಬರುವುದು. ಹೆಸರಾಂತ ಚಿತ್ರಕಾರನು ಸಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುವಂತಹ ದೇವತೆಯ ಅಥವಾ ಇತರ ಯಾವುದೇ ಚಿತ್ರ ನಿರ್ಮಿಸಬಹುದು ಎಂದಿಲ್ಲ. ಸಕಾರಾತ್ಮಕ ಸ್ಪಂದನವನ್ನು ಪ್ರಕ್ಷೇಪಿಸುವ ಆಧ್ಯಾತ್ಮಿಕ ದೃಷ್ಟಿಕೋನದಿಂದ ಶುದ್ಧವಾಗಿರುವಂತಹ ಕಲಾಕೃತಿಯನ್ನು ನಿರ್ಮಿಸಲು ಕಲಾವಿದನು ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತರಾಗಿರುವ ಮಾರ್ಗದರ್ಶಕರ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ಕಲಾವಿದನು ಅಧ್ಯಾತ್ಮಶಾಸ್ತ್ರಕ್ಕನುಸಾರ ಬಿಡಿಸಿದ ದೇವತೆಗಳ ಚಿತ್ರವು ಸಕಾರಾತ್ಮಕ ಸ್ಪಂದನಗಳ ಮೂಲವಾಗಿದ್ದು ಅದರಿಂದ ಸಮಾಜ ಮತ್ತು ವಾತಾವರಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಇಂತಹ ಕಲಾಕೃತಿಗಳಲ್ಲಿ ಸಾಮಾಜಿಕ ಪರಿವರ್ತನೆಯನ್ನು ಮಾಡುವ ಕ್ಷಮತೆ ಇರುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೌ. ರಾಧಾ ಮಲ್ಲಿಕಾ (ಪೂರ್ವಾಶ್ರಮದ ಕು. ಕ್ರಿಸ್ಟಿ ಲ್ಯೂಂಗ್) ಇವರು ಪ್ರತಿಪಾದಿಸಿದರು.

ವ್ಯಾಂಕೋವರ್, ಕೆನಡಾದಲ್ಲಿ ೯ ರಿಂದ ೧೩ ಜುಲೈ ಈ ಕಾಲಾವಧಿಯಲ್ಲಿ MAKING/INSEA ೨೦೧೯ ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು. ಸೌ. ರಾಧಾ ಮಲ್ಲಿಕ ಇವರು ಈ ಪರಿಷತ್ತಿನಲ್ಲಿ ‘ಆಧ್ಯಾತ್ಮಿಕ ಉನ್ನತಿಗಾಗಿ ಸಾತ್ತ್ವಿಕ ಕಲೆಯ ಅಧ್ಯಯನ, ಅಭ್ಯಾಸ ಮತ್ತು ಅಧ್ಯಾಪನ’ ಈ ಶೋಧಪ್ರಬಂಧವನ್ನು ೧೧ ಜುಲೈ ೨೦೧೯ ರಂದು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರು ಈ ಶೋಧಪ್ರಬಂಧದ ಲೇಖಕರಾಗಿದ್ದಾರೆ. ಈ ಪರಿಷತ್ತಿನ ಆಯೋಜನೆಯನ್ನು ವ್ಯಾಂಕೋವರ್, ಕೆನಡಾದಲ್ಲಿನ ಯುನಿವರ್ಸಿಟಿ ಆಫ್ ಬ್ರಿಟಿಶ ಕೊಲಂಬಿಯಾದಲ್ಲಿ ಮಾಡಲಾಗಿತ್ತು.

ಸೌ. ರಾಧಾ ಮಲ್ಲಿಕ ಇವರು ವಿವಿಧ ಚಿತ್ರಗಳ ಸಂದರ್ಭದಲ್ಲಿ ಮಾಡಿದಂತಹ ಶೋಧನೆಯ ಅಂತರ್ಗತದ ಮಾಡಿದ ವಿವಿಧ ಪ್ರಯೋಗಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಇದರಲ್ಲಿ ಅವರು ‘ಪಿಪ್ (ಪಾಲಿಕಾಂಟ್ರಾಸ್ಟ್ ಇಂಟರ್‌ಫೆರನ್ಸ್ ಫೊಟೋಗ್ರಾಫಿ)’ ಈ ತಂತ್ರಜ್ಞಾನವನ್ನು ಉಪಯೋಗಿಸಿ ಮಾಡಿದ ಸಂಶೋಧನೆಯ ಮಾಹಿತಿಯನ್ನು ನೀಡಿದರು. ಈ ತಂತ್ರಜ್ಞಾನದ ಸಹಾಯದಿಂದ ವಸ್ತು ಮತ್ತು ವ್ಯಕ್ತಿಯ ಊರ್ಜಾಕ್ಷೇತ್ರ ವಲಯದ ಬಗ್ಗೆ (‘aura’ದ) ಅಭ್ಯಾಸ ಮಾಡಲು ಬರುತ್ತದೆ. ಈ ತಂತ್ರಜ್ಞಾನದಿಂದ ಬಿಡಿಸಿದಂತಹ ಛಾಯಾಚಿತ್ರಗಳಲ್ಲಿ (‘ಪಿಪ್’ ಚಿತ್ರಗಳಲ್ಲಿ) ಸಜೀವ ಅಥವಾ ನಿರ್ಜೀವ ವಸ್ತುಗಳ ಊರ್ಜಾಕ್ಷೇತ್ರಗಳನ್ನು ವಿವಿಧ ಬಣ್ಣಗಳಲ್ಲಿ ನೋಡಲು ಬರುತ್ತದೆ. ಅದರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳನ್ನು ಬಣ್ಣಗಳ ಮಾಧ್ಯಮದಿಂದ ನೋಡುವಂತಹ ಸೌಲಭ್ಯ ಇರುತ್ತದೆ.

Kannada Weekly | Offline reading | PDF