ಹಿಂದೂ, ಸಿಕ್ಖ್ ಮತ್ತು ಕ್ರೈಸ್ತರಿಂದ ಪ್ರತಿಭಟನೆ

ಕಳೆದ ೩ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮಾಜದ ೩೧ ಯುವತಿಯರ ಅಪಹರಣ

ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಸಮಾಜದ ಜನರ ವಿಷಯದಲ್ಲಿ ಭಾರತದಲ್ಲಿನ ಪಾಕಿಸ್ತಾನ ಪ್ರೇಮಿಗಳು ಯಾವತ್ತೂ ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಮತಾಂಧರಿಂದ ಅಲ್ಪಸಂಖ್ಯಾತ (ಹಿಂದೂ, ಸಿಕ್ಖ್ ಮತ್ತು ಕ್ರೈಸ್ತ) ಸಮಾಜದ ಜನರ ಮೇಲಿನ ದೌರ್ಜನ್ಯ ನಡೆಯುತ್ತಲೇ ಇದೆ. ಕಳೆದ ೩ ತಿಂಗಳಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಅಲ್ಪಸಂಖ್ಯಾತ ಸಮಾಜದ ೩೧ ಯುವತಿಯರನ್ನು ಅಪಹರಿಸಿದ ಘಟನೆ ನಡೆದಿದೆ. ಪೊಲೀಸರು ಅಪಹರಣದ ದೂರುಗಳನ್ನು ದಾಖಲಿಸಿಕೊಳ್ಳುವುದು ಸಹ ಇಲ್ಲ. ತದ್ವಿರುದ್ಧ ‘ಯುವತಿಯರು ತಾವಾಗಿಯೆ ಮತಾಂತರವಾಗಿ ವಿವಾಹವಾಗುತ್ತಾರೆ, ಎಂದು ಹೇಳಲಾಗುತ್ತದೆ. ಆದ್ದರಿಂದ ಹಿಂದೂಗಳು ಭಾರತಕ್ಕೆ ಬರುತ್ತಿದ್ದಾರೆ. ಅಷ್ಟು ಮಾತ್ರವಲ್ಲದೇ, ಅಲ್ಪಸಂಖ್ಯಾತರ ಅಲ್ಲಿನ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಕೂಡ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಆದ್ದರಿಂದ ಇದರ ವಿರುದ್ಧ ಕಳೆದ ವಾರವಿಡೀ ಹಿಂದೂ, ಸಿಕ್ಖ್ ಮತ್ತು ಕ್ರೈಸ್ತರು ಪ್ರತಿಭಟನೆ ಮಾಡಿದ್ದಾರೆ.

Kannada Weekly | Offline reading | PDF