ಗುರು, ಸಂತರು ಮತ್ತು ಈಶ್ವರ

೧. ಶಿಕ್ಷಕ ಮತ್ತು ಗುರುಗಳಲ್ಲಿರುವ ವ್ಯತ್ಯಾಸ !

ಒಬ್ಬ ಸಂತರು ಬಂದಿದ್ದರು. ಅವರು ‘ನಾನು ಏಳು ಗುರುಗಳನ್ನು ಮಾಡಿಕೊಂಡಿದ್ದೇನೆ ಎಂದು ಹೇಳಿದರು. ನನಗೆ ಆಶ್ಚರ್ಯವೆನಿಸಿತು; ಏಕೆಂದರೆ ಎಲ್ಲರಿಗೂ ಒಬ್ಬನೇ ಗುರುವಿರುತ್ತಾನೆ. ಅವರು ಮಾತನ್ನು ಮುಂದುವರಿಸುತ್ತಾ, ‘ನಾನು ಏಳು ಗುರುಗಳಿಂದ ಬೇರೆ ಬೇರೆ ಏಳು ವಿದ್ಯೆಗಳನ್ನು ಕಲಿತಿದ್ದೇನೆ ಎಂದರು. ಆಗ ನನಗೆ ಅವರು ‘ಗುರು ಶಬ್ದವನ್ನು ‘ಶಿಕ್ಷಕ ಎನ್ನುವ ಅರ್ಥದಲ್ಲಿ ಉಪಯೋಗಿಸುತ್ತಿದ್ದಾರೆಂದು ಅರಿವಾಯಿತು.

೨. ಸಂತರು ಮತ್ತು ಗುರುಗಳು

ಅ. ಸಂತರು : ‘ಸಂತರು ಎಂದರೆ ಸಮಾಜವನ್ನು ಸಾಧನೆಯೆಡೆಗೆ ಹೊರಳಿಸಿ ಆಧ್ಯಾತ್ಮಿಕ ಜೀವನದ ಮಾರ್ಗದಲ್ಲಿ ಮುನ್ನಡೆಸಲು ಮಾರ್ಗದರ್ಶನ ಮಾಡುವವರು.

ಆ. ಗುರು : ‘ಗುರು ಎಂದರೆ ನಿರಂತರವಾಗಿ ಸಾಧನೆಯಲ್ಲಿ ನಿರತರಾಗಿರುವ ಸಾಧಕರನ್ನು ಮೋಕ್ಷದವರೆಗೆ ಕರೆದೊಯ್ಯುವ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಅದನ್ನು ಪೂರ್ಣಗೊಳಿಸುವವರು.

೩. ಗುರುಗಳು, ಸಂತರು ಮತ್ತು ಜಗದ್ಗುರು ಶ್ರೀಕೃಷ್ಣ

‘ವ್ಯಕ್ತಿಗಳೆಷ್ಟೋ ಅಷ್ಟು ಪ್ರಕೃತಿ, ಅಷ್ಟೇ ಸಾಧನಾಮಾರ್ಗಗಳು, ಈ ತತ್ತ್ವಕ್ಕನುಸಾರ  ಭಗವಾನ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಇತ್ಯಾದಿ ಎಲ್ಲ ಯೋಗಗಳನ್ನು ಹೇಳಿದ್ದಾನೆ. ಸಂಪ್ರದಾಯಗಳಲ್ಲಿ ಸಿಲುಕಿರುವ ಗುರುಗಳು ಮತ್ತು ಸಂತರು ಕೇವಲ ತಮ್ಮ ಸಂಪ್ರದಾಯದ ಸಾಧನೆಯನ್ನು ಹೇಳುತ್ತಾರೆ; ಆದ್ದರಿಂದ ಅವರನ್ನು ಕೇವಲ ‘ಗುರು ಮತ್ತು ಸಂತರು ಎಂದು ಪರಿಗಣಿಸಲಾಗುತ್ತದೆ. ಆದರೆ, ಭಗವಾನ ಶ್ರೀಕೃಷ್ಣನನ್ನು ‘ಜಗದ್ಗುರು ಎನ್ನುತ್ತಾರೆ !

೪. ಒಬ್ಬರಿಗೊಬ್ಬರು ಪೂರಕ ಕಾರ್ಯವನ್ನು ಮಾಡುವ ಗುರುಗಳು ಮತ್ತು ಈಶ್ವರ

ಅ. ಗುರುಗಳು ಸಾಧಕನಿಗೆ ಸಾಧನೆಯನ್ನು ಮಾಡಲು ಕಲಿಸುತ್ತಾರೆ. ಅವನು ಉತ್ತಮವಾಗಿ ಸಾಧನೆಯನ್ನು ಮಾಡತೊಡಗಿದಾಗ ಈಶ್ವರನು ಅವನಿಗೆ ಅನುಭೂತಿ ನೀಡುತ್ತಾನೆ. ಆಗ ಅವನಿಗೆ, ‘ಗುರುಗಳು ಹೇಳಿದ ಸಾಧನೆಯಿಂದ, ಗುರುಗಳಿಂದ ಅನುಭೂತಿ ಬಂದಿತು ಎಂದೆನಿಸುತ್ತದೆ. ಈ ರೀತಿ ಈಶ್ವರನು ಗುರುಗಳ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಸಾಧಕರಿಗೆ ಸಹಾಯ ಮಾಡುತ್ತಾನೆ. ಗುರುಗಳಿಗೆ ಈಶ್ವರನೇ ಅನುಭೂತಿ ನೀಡುವುದು ತಿಳಿದಿರುವುದರಿಂದ ಅವರು ಶಿಷ್ಯನಿಗೆ ಹಾಗೆ ಹೇಳುತ್ತಾರೆ. ಇದರಿಂದ ಸಾಧಕರಿಗೆ ಈಶ್ವರನ ಮೇಲಿನ ಶ್ರದ್ಧೆ ಹೆಚ್ಚಾಗಲು ಸಹಾಯವಾಗುತ್ತದೆ.

ಆ. ಗುರು ಕಾಣಿಸದಿರುವ ಮತ್ತು ಅರಿವಾಗದಿರುವ ನಿರ್ಗುಣ ಈಶ್ವರನ ಕುರಿತು ಮಾತನಾಡಿ ಸಾಧಕರಲ್ಲಿ ಶ್ರದ್ಧೆಯನ್ನು ನಿರ್ಮಾಣ ಮಾಡುತ್ತಾನೆ. ಈಶ್ವರನು ಸಗುಣ ದೇಹಧಾರಿ ಗುರುಗಳ ಬಗ್ಗೆ ಸಾಧಕರಿಗೆ ಅನುಭೂತಿಯನ್ನು ನೀಡಿ, ಅವರ ಬಗ್ಗೆ ಶ್ರದ್ಧೆಯನ್ನು ನಿರ್ಮಾಣ ಮಾಡುತ್ತಾನೆ. ಈ ರೀತಿ ಸಗುಣ ದೇಹಧಾರಿ ಗುರು ಮತ್ತು ನಿರ್ಗುಣ ಈಶ್ವರನು ಒಬ್ಬರಿಗೊಬ್ಬರು ಶ್ರದ್ಧೆಯನ್ನು ಹೆಚ್ಚಿಸಿ ಕೊನೆಯಲ್ಲಿ ‘ಇಬ್ಬರೂ ಒಬ್ಬರೇ ಆಗಿದ್ದಾರೆ, ಎನ್ನುವ ಅನುಭೂತಿಯನ್ನು ನೀಡುತ್ತಾರೆ.

೫. ಗುರು ಮತ್ತು ದೇವತೆಗಳ ಆಶೀರ್ವಾದ ಮಾಡುವಾಗಿನ ಹಸ್ತ

ಅ. ದೇವತೆ : ಕೈಗಳ ಹಸ್ತ ಸ್ವಲ್ಪ ನೇರ. ಎಲ್ಲರಿಗೂ ಒಂದೇ ಸಮಯದಲ್ಲಿ ಆಶೀರ್ವಾದ ನೀಡುವ ಹಸ್ತ. (ಎಲ್ಲ ಚಿತ್ರಗಳಲ್ಲಿ ಇದೇ ರೀತಿ ಇರುತ್ತದೆ)

ಆ. ಗುರು ಮತ್ತು ಸಂತರು : ಕೈಗಳು ಕೆಳಗೆ ಬಗ್ಗಿರುವಂತೆ ಅಂದರೆ ತಲೆಯ ಮೇಲೆ ಇಡಬಹುದು ಎನ್ನುವಂತಿರುತ್ತದೆ. ಕೈಗಳ ಹಸ್ತ ಸ್ವಲ್ಪ ಬಗ್ಗಿರುವುದು; ಏಕೆಂದರೆ ಒಬ್ಬ ಅಥವಾ ಕೆಲವು ಶಿಷ್ಯಂದಿರಿಗೆ ಆಶೀರ್ವಾದ ನೀಡುವ ಹಸ್ತವಾಗಿರುತ್ತದೆ.

೬. ಡಾಕ್ಟರರು ಹೇಳುವ ಮತ್ತು ಸಂತರು ಹೇಳುವ ಉಪಾಯ

ಅ. ಡಾಕ್ಟರರು ಹೇಳುವ ಉಪಾಯ : ಯಾವುದಾದರೂ ಅನಾರೋಗ್ಯವುಂಟಾದಲ್ಲ್ಲಿ ಡಾಕ್ಟರರು ರೋಗ ನಿವಾರಣೆಯ ಉಪಾಯವನ್ನು ಹೇಳಿದಾಗ ಆ ಉಪಾಯದ ಪರಿಣಾಮವಾಗುವುದೋ ಅಥವಾ ಇಲ್ಲವೋ, ಆಗುತ್ತಿದ್ದರೆ ಎಷ್ಟರ ಮಟ್ಟಿಗೆ ಆಗುತ್ತದೆ ಎಂದು ನೋಡಲು ಆ ರೋಗಿಯನ್ನು ಮೇಲಿಂದ ಮೇಲೆ ಕರೆಸುತ್ತಾರೆ. ಅವಶ್ಯಕತೆಯಿದ್ದರೆ ಉಪಾಯಗಳನ್ನು ಬದಲಾಯಿಸುತ್ತಾರೆ. ಇದರ ಕಾರಣವೆಂದರೆ, ಡಾಕ್ಟರರಿಗೆ ರೋಗಿಯ ಅಂದರೆ ಸ್ಥಳದ ಸಂದರ್ಭದ ಮಾಹಿತಿ ಇರುತ್ತದೆ. ಕಾಲದ ಸಂದರ್ಭದಲ್ಲಿ ಅಂದರೆ ಕಾಲಾನುಸಾರ ಯಾವ ಉಪಾಯದ ಅವಶ್ಯಕವಿದೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ.

ಆ. ಸಂತರು ಹೇಳುವ ಉಪಾಯ : ಸಂತರು ಉಪಾಯ ಹೇಳುವಾಗ ಸ್ಥಳ ಮತ್ತು ಕಾಲ ಇವೆರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಉಪಾಯಗಳನ್ನು ಹೇಳುತ್ತಾರೆ. ಇದರಿಂದ ಅವರ ಉಪಾಯಗಳಲ್ಲಿ ಬದಲಾವಣೆಯಾಗುವುದಿಲ್ಲ. ಯಾವುದಾದರೂ ಸ್ತ್ರೀಗೆ ಸಂತಾನ ಪಡೆಯಲು ಅವಳಿಗೆ ೧೨ ವರ್ಷ ಅರಳಿಮರಕ್ಕೆ ಪ್ರದಕ್ಷಿಣೆ ಹಾಕುವಂತೆ ಹೇಳಿದ್ದರೆ, ಅದರಲ್ಲಿ ಬದಲಾವಣೆಯಾಗುವುದಿಲ್ಲ. ಹಾಗೆಯೇ ಗುರುಮಂತ್ರದಲ್ಲಿಯೂ ಬದಲಾವಣೆಯಾಗುವುದಿಲ್ಲ.- ಪರಾತ್ಪರ ಗುರು ಡಾ. ಆಠವಲೆ

Kannada Weekly | Offline reading | PDF