ಗುರುಪೂರ್ಣಿಮೆ ನಿಮಿತ್ತ ಸಂತರ ಸಂದೇಶ….

ಸಾಧಕರೇ, ಪರಾತ್ಪರ ಗುರು ಡಾಕ್ಟರರಂತಹ ಅವತಾರಿ ಗುರುಗಳು ಸಿಕ್ಕಿರುವುದರಿಂದ ನಮಗೆ ಪ್ರತಿದಿನವೂ ಗುರುಪೂರ್ಣಿಮೆಯೇ ಆಗಿದೆ, ಅವರ ವಿಶ್ವವ್ಯಾಪಕ ಕಾರ್ಯದಲ್ಲಿ ತನು-ಮನ ಮತ್ತು ಧನವನ್ನು ಸಮರ್ಪಿಸಿ ನಿಮ್ಮ ಉದ್ಧಾರವನ್ನು ಮಾಡಿಕೊಳ್ಳಿರಿ !

(ಸದ್ಗುರು) ಸೌ. ಬಿಂದಾ ಸಿಂಗಬಾಳ

೧. ಪರಾತ್ಪರ ಗುರು ಡಾಕ್ಟರರ ಕೃಪೆಯಿಂದಲೇ ಆಗಿರುವ, ಅವರ ಅಲೌಕಿಕ ಮತ್ತು ಅವತಾರಿ ಕಾರ್ಯದ ಪರಿಚಯ !

ಭಾರತವು ಇಡೀ ಜಗತ್ತಿಗೆ ನೀಡಿದ ಭಾರತದ ಶ್ರೇಷ್ಠ ಸಂಸ್ಕೃತಿಯ ಅದ್ವಿತೀಯ ಕೊಡುಗೆ ಎಂದರೆ ‘ಗುರು-ಶಿಷ್ಯ ಪರಂಪರೆ ! ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ನಮಗೆ ಈ ಪರಂಪರೆಯ ಶ್ರೇಷ್ಠತೆಯನ್ನು ಅನುಭವಿಸಲು ಸಾಧ್ಯವಾಯಿತು ಹಾಗೂ ಪರಬ್ರಹ್ಮಸ್ವರೂಪಿ ಶ್ರೀ ಗುರುಗಳ, ಮೋಕ್ಷ ಗುರುಗಳ, ಸಂಪೂರ್ಣ ಜಗತ್ತಿನ ಕಲ್ಯಾಣಕ್ಕಾಗಿ ಗಂಧದಂತೆ ಸವೆಯುವ ಜಗದ್ಗುರುಗಳ ಮತ್ತು ಧರ್ಮಸಂಸ್ಥಾಪನೆಯನ್ನು ಮಾಡುವ ಅವತಾರಿ ಗುರುಗಳ ಕಾರ್ಯವನ್ನು ನೋಡಲು ಸಿಕ್ಕಿತು.

೨. ವಿಷ್ಣುಸ್ವರೂಪಿ ಗುರುಗಳು ಜೀವನದಲ್ಲಿ ಬರುವುದು, ಸಾಧಕರ ಮಹಾನ ಭಾಗ್ಯ !

ನಮ್ಮ ಜೀವನದಲ್ಲಿ ಪರಾತ್ಪರ ಗುರು ಡಾಕ್ಟರರ ಮಹತ್ವವು ಅಸಾಧಾರಣವಾಗಿದೆ. ಅಹಂಕಾರದಲ್ಲಿ ಸಿಲುಕಿರುವ ಜೀವದ ಆತ್ಮಜ್ಯೋತಿಯನ್ನು ಪ್ರಜ್ವಲಿಸುವ, ನಿರಂತರವಾಗಿ ಶಿಷ್ಯನ ಕಲ್ಯಾಣದ ವಿಚಾರ ಮಾಡುವ, ವಿಶ್ವಕಲ್ಯಾಣಕ್ಕಾಗಿ ಈಶ್ವರಿ ರಾಜ್ಯದ ಸ್ಥಾಪನೆಯ ಸಂಕಲ್ಪವನ್ನು ಮಾಡುವ ಮತ್ತು ಧರ್ಮಗ್ಲಾನಿಯನ್ನು ದೂರಗೊಳಿಸಿ ಭಾರತವನ್ನು ‘ವಿಶ್ವಗುರುವಿನ ಸ್ಥಾನದಲ್ಲಿ ಪುನಃ ವಿರಾಜಮಾನಗೊಳಿಸಲು ಹಗಲುರಾತ್ರಿ ಪ್ರಯತ್ನಿಸುವ ಪರಾತ್ಪರ ಗುರು ಡಾಕ್ಟರರು, ಅಂದರೆ ವಿಷ್ಣು ಸ್ವರೂಪ ಗುರುಗಳು ನಮ್ಮ ಜೀವನದಲ್ಲಿ ಬರುವುದು ಮತ್ತು ಅವರು ಹೇಳಿದ ಮೋಕ್ಷಪಥದಲ್ಲಿ ನಾವು ನಡೆಯುವುದು ಒಂದು ದೊಡ್ಡ ಭಾಗ್ಯವಾಗಿದೆ, ಇದಕ್ಕಿಂತ ದೊಡ್ಡ ಭಾಗ್ಯ ಇನ್ಯಾವುದಿದೆ ?

೩. ಅನೇಕ ಜನ್ಮಗಳಲ್ಲಿ ಮಾಡಿದ ಕಠಿಣ ಸಾಧನೆಯಿಂದಾಗಿ ಪರಾತ್ಪರ ಗುರುದೇವರ ದರ್ಶನವಾಗುವುದು

ಪರಾತ್ಪರ ಗುರು ಡಾಕ್ಟರರು ಜ್ಞಾನ, ವೈರಾಗ್ಯ, ಭಕ್ತಿ ಮತ್ತು ಶಕ್ತಿಯನ್ನು ನೀಡಿ ಸಾಧಕರನ್ನು ಕೃತಾರ್ಥರನ್ನಾಗಿ ಮಾಡಿದ್ದಾರೆ. ತಮ್ಮ ಮಧುರವಾಣಿಯಿಂದ, ಪ್ರೇಮಮಯ ದೃಷ್ಟಿಯಿಂದ, ಚೈತನ್ಯಮಯ ಶಬ್ದಗಳಿಂದ ಮತ್ತು ಸುಂದರ, ಮನಮೋಹಕ ಹಾಸ್ಯಗಳಿಂದ ಅಪಾರ ಕೃಪೆ ಮಾಡುವ ಗುರುಗಳಿಂದಾಗಿ ಸಾಧಕರ ಸಂಪೂರ್ಣ ಜೀವನವೇ ಬೆಳಗಿದೆ. ಅನೇಕ ಜನ್ಮಗಳಲ್ಲಿ ಮಾಡಿದ ಕಠಿಣ ಸಾಧನೆಯಿಂದಾಗಿ ಸಾಧಕರಿಗೆ ಇಂತಹ ದಯಾಮಯ, ಕರುಣಾಮಯಿ ಗುರುದೇವರ ದರ್ಶನವಾಗಿದೆ. ಇಂತಹ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಮಗೆ ಸಾಧ್ಯವೇ ಇಲ್ಲ.

೪. ಸಾಧಕರೇ, ಸೇವಾರೂಪೀ ಭಾವ-ಭಕ್ತಿಯ ಸುಂದರ ಪುಷ್ಪಗಳನ್ನು ಶ್ರೀ ಚರಣಗಳಲ್ಲಿ ಅರ್ಪಿಸಿ !

ಶಿಷ್ಯನ ಜೀವನದಲ್ಲಿನ ಎಲ್ಲಕ್ಕಿಂತ ಮಹತ್ವದ ದಿನವೆಂದರೆ, ‘ಗುರುಪೂರ್ಣಿಮೆ. ಗುರುಪೂರ್ಣಿಮೆಯ ನಿಮಿತ್ತ ಗುರುಗಳಿಗೆ ಸರ್ವಸ್ವವನ್ನು ಅರ್ಪಿಸುವುದೇ ನಿಜವಾದ ಗುರುದಕ್ಷಿಣೆಯಾಗಿದೆ. ನಿಜವಾಗಿ ನೋಡಿದರೆ ಪರಾತ್ಪರ ಗುರು ಡಾಕ್ಟರರಂತಹ ಗುರುಗಳು ಲಭಿಸಿದ್ದರಿಂದ ಸಾಧಕರಿಗೆ ಪ್ರತಿದಿನವೂ ಗುರುಪೂರ್ಣಿಮೆಯೇ ಆಗಿದೆ. ಪರಾತ್ಪರ ಗುರುಗಳು ಆರಂಭಿಸಿದ ಕಾರ್ಯವು ಆಯೋಜಿಸಿದ ಸಮಯದಲ್ಲಿ ಪೂರ್ಣ ವಾಗುವುದೇ ಇದೆ. ಅವರ ಈ ವಿಶ್ವವ್ಯಾಪಕ ಕಾರ್ಯದಲ್ಲಿ ತನು-ಮನ ಮತ್ತು ಧನವನ್ನು ಸಮರ್ಪಿಸಿ ನಮ್ಮನ್ನು ಉದ್ಧಾರ ಮಾಡಿಕೊಳ್ಳುವುದೇ, ಈ ಕಾಲದ ಸಾಧನೆಯಾಗಿದೆ. ಸಾಧಕರೇ, ಸೇವಾರೂಪಿ ಭಾವ-ಭಕ್ತಿಯ ಸುಂದರ ಹೂವುಗಳನ್ನು ಶ್ರೀ ಚರಣಗಳಲ್ಲಿ ಅರ್ಪಿಸಿ ಪರಾತ್ಪರ ಗುರುಗಳ ಅಖಂಡ ಕೃಪೆಯನ್ನು ಪಡೆದುಕೊಳ್ಳಿರಿ ! ಸೇವೆಯಿಂದಲೇ ನಾಲ್ಕೂ ದೇಹಗಳ (ಸ್ಥೂಲ, ಸೂಕ್ಷ್ಮ, ಕಾರಣ ಮತ್ತು ಮಹಾಕಾರಣ ದೇಹಗಳ) ಮತ್ತು ನಾಲ್ಕೂ ವರ್ಣಗಳ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ವರ್ಣಗಳ) ಸಾಧನೆಯಾಗಿ ಶೀಘ್ರಗತಿಯಲ್ಲಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆದ್ದರಿಂದ ಸೇವೆಯ ತಳಮಳ ಮತ್ತು ಧ್ಯಾಸವನ್ನು ಹೆಚ್ಚಿಸಿರಿ !

ಸಾಧಕರೇ, ಈ ಗುರುಪೂರ್ಣಿಮೆಯ ನಿಮಿತ್ತ ಗುರುದೇವರ ವ್ಯಾಪಕ ರೂಪದ ಹಾಗೂ ವಿಶ್ವವ್ಯಾಪಕ ಕಾರ್ಯದ ಅನುಭವವನ್ನು ಪಡೆಯಲು ಪರಿಶ್ರಮಪಟ್ಟು ಪ್ರಯತ್ನಿಸಿರಿ ಮತ್ತು ಗುರುಕಾರ್ಯದ ಪತಾಕೆಯನ್ನು ಎಲ್ಲೆಡೆ ಹಾರಿಸಿರಿ !

ಗುರುಪೂರ್ಣಿಮೆಯ ನಿಮಿತ್ತ, ಶ್ರೇಷ್ಠ ಗುರು-ಶಿಷ್ಯ ಪರಂಪರೆಗೆ ಭಾವಪೂರ್ಣ ನಮಸ್ಕಾರಗಳು ! ಎಲ್ಲೆಡೆ ಚೈತನ್ಯವನ್ನು ಪ್ರಕ್ಷೇಪಿಸುವ ಶ್ರೀ ಗುರುಪಾದುಕೆಗಳಿಗೆ ಕೋಟಿ ಕೋಟಿ ನಮನಗಳು !  ಗುರುಪೂರ್ಣಿಮೆಯ ನಿಮಿತ್ತ, ಶ್ರೀ ವಿಷ್ಣುಸ್ವರೂಪದ ಪರಾತ್ಪರ ಗುರು ಡಾಕ್ಟರರಿಗೆ ಮತ್ತು ಅವರ ಅವತಾರಿ ಕಾರ್ಯಕ್ಕೆ ಕೋಟಿ ಕೋಟಿ ನಮನಗಳು ! – ಸದ್ಗುರು (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೪.೪.೨೦೧೯)

Kannada Weekly | Offline reading | PDF