ಗ್ರಹಣಕಾಲದ ಸಂಧಿಕಾಲದ ಗುರುಪೂರ್ಣಿಮೆ ದಿನ ಗುರುಪೂಜೆಗೆ ಉಪಸ್ಥಿತರಿದ್ದರೆ ತೊಂದರೆಯಲ್ಲ ಲಾಭವಿದೆ

‘ಈ ವರ್ಷದ ಗುರುಪೂರ್ಣಿಮೆಯಂದು, ಅಂದರೆ ೧೬.೭.೨೦೧೯ ರಂದು ಖಂಡಗ್ರಾಸ ಚಂದ್ರಗ್ರಹಣವಿದೆ. ಗ್ರಹಣ ಅವಧಿಯಲ್ಲಿ ಗುರುಪೂಜೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಲ್ಲಿ ತೊಂದರೆಯಾಗದೇ ಲಾಭವೇ ಆಗಲಿದೆ. ಗುರುಪೂರ್ಣಿಮೆಯ ದಿನ ಅನೇಕ ಸ್ಥಳಗಳಲ್ಲಿ ಗುರುಪೂಜೆಯ ಕಾರ್ಯಕ್ರಮಗಳು ನಡೆಯುತ್ತವೆ. ‘ಗ್ರಹಣ ನೋಡಬಾರದು, ಈ ಭಯದಿಂದಾಗಿ ಹಲವಾರು ಬಾರಿ ಸಮಾಜದಲ್ಲಿಯ ವ್ಯಕ್ತಿ, ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರು ಮನೆಯಿಂದ ಹೊರಗೆ ಬರುವುದಿಲ್ಲ. ೧೬.೭.೨೦೧೯ ರಂದು ಮಧ್ಯರಾತ್ರಿ ೧.೩೨ ರಿಂದ ಬೆಳಗಿನ ಜಾವ ೪.೩೦ ರ ತನಕ ಖಂಡಗ್ರಾಸ ಚಂದ್ರಗ್ರಹಣ ಇದೆ. ಅಂದರೆ ೧೬.೭.೨೦೧೯ ಈ ಗುರುಪೂರ್ಣಿಮೆಯಂದು ಗುರುಪೂಜೆಯ ಕಾರ್ಯಕ್ರಮ ಮುಗಿಯುವ ತನಕ ಗ್ರಹಣ ಇಲ್ಲದಿರುವುದರಿಂದ ತಪ್ಪಿಯೂ ನೋಡುವ ಪ್ರಶ್ನೆಯೇ ಬರುವುದಿಲ್ಲ. ೧೬.೭.೨೦೧೯ ಈ ದಿನ ಮಧ್ಯಾಹ್ನ ೪ ರಿಂದ ಗ್ರಹಣಮೋಕ್ಷದ ತನಕ ಅಂದರೆ ೧೭.೭.೨೦೧೯ರ ಬೆಳಗಿನಜಾವ ೪.೩೦ ರ ತನಕ ಗ್ರಹಣವನ್ನು ಪಾಲಿಸಬೇಕು. ಮಕ್ಕಳು, ಅನಾರೋಗ್ಯ ಪೀಡಿತರು, ದುರ್ಬಲ ವ್ಯಕ್ತಿ ಮತ್ತು ಗರ್ಭಿಣಿಯರು ೧೬.೭.೨೦೧೯ ರ ರಾತ್ರಿ ೮.೪೦ ರಿಂದ ಗ್ರಹಣಮೋಕ್ಷದ ತನಕ ಗ್ರಹಣ ಪಾಲಿಸಬೇಕು.

ಗ್ರಹಣ ಕಾಲವು ಸಂಧಿಕಾಲವಾಗಿದ್ದರಿಂದ ವೇಧಾರಂಭದಿಂದ ಗ್ರಹಣ ಮುಗಿಯುವ ತನಕ ನಾಮಜಪ, ಸೇವೆ, ಗುರುಪೂಜೆ ಮಾಡಿದರೆ ಸಾವಿರಾರು ಪಟ್ಟು ಲಾಭವಾಗಲಿದೆ. ಈ ಅವಧಿಯಲ್ಲಿ ಭೋಜನವು ನಿಷಿದ್ಧವಾಗಿದ್ದರಿಂದ ಆಹಾರ ಸೇವಿಸಬಾರದು. ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ ಈ ಕರ್ಮಗಳನ್ನು ಮಾಡಬಹುದು. ಗುರು ಪೂರ್ಣಿಮೆಯ ರಾತ್ರಿ ಗ್ರಹಣ ಇದೆ, ಅಂದರೆ ಸಂಧಿಕಾಲದ ಗುರುಪೂರ್ಣಿಮೆಯೇ ಆಗಿದೆ. ಈ ದಿನ ಗುರುಗಳಿಗೆ ಮಾಡಿದ ಪ್ರಾರ್ಥನೆ, ಕೃತಜ್ಞತೆ, ಸೇವೆ, ದಾನ, ಶ್ರವಣ, ಚಿಂತನ ಇದರಲ್ಲಿಯೂ ಅನಂತಪಟ್ಟು ಲಾಭವಾಗಲಿದೆ. ಸದ್ಯ ಆಪತ್ಕಾಲವಾಗಿರುವುದರಿಂದ ಹಿಂದಿನ ವರ್ಷದಂತೆ ಈ ವರ್ಷವೂ ಗುರುಪೂರ್ಣಿಮೆಯಂದು ಚಂದ್ರಗ್ರಹಣ ಇದೆ. ಸಾಧಕರಿಗೆ ಸಮರ್ಪಿತಭಾವದಿಂದ ಗುರುಋಣ ತೀರಿಸಲು ಇದು ಅಮೂಲ್ಯ ಸಮಾರಂಭವಾಗಿದೆ. ಎಲ್ಲರೂ ಇದರ ಲಾಭ ಪಡೆಯಬೇಕು. –  ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ ಫಲಿತ ವಿಶಾರದೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೩೦.೬.೨೦೧೯)

Kannada Weekly | Offline reading | PDF