ಸಮರ್ಥ ರಾಮದಾಸ ಸ್ವಾಮಿ ಮತ್ತು ಮಾರುತಿ ಕಥೆಯಿಂದ ಅರಿವಾದ ಸದ್ಗುರುಗಳ ಮಹಿಮೆ !

ಪೂ. (ಸೌ.) ಲಕ್ಷ್ಮೀ (ಮಾಯಿ) ನಾಯಿಕ

೧. ಮಾರುತಿಯು ವಟುವಿನ ರೂಪದಲ್ಲಿ ಬಂದು ಸಮರ್ಥರಿಗೆ ಪುರಾಣವನ್ನು ಹೇಳುವಂತೆ ವಿನಂತಿಸುವುದು. ಅವರು ಲಂಕೆಯಲ್ಲಿ ಕಣಗಲೆಯ ಗಿಡದ ಹೂವುಗಳು ಬಿಳಿಯ ಬಣ್ಣದ್ದಾಗಿದೆಯೆಂದು ಹೇಳುವುದು, ಮಾರುತಿಯು ಕೆಂಪು ಬಣ್ಣದ ಹೂವುಗಳಿವೆಯೆಂದು ಹೇಳಿ ಸಮರ್ಥರ ಹೇಳಿಕೆಯನ್ನು ಆಕ್ಷೇಪಿಸುವುದು ಮತ್ತು ಸತ್ಯಾಸತ್ಯತೆಯನ್ನು ಕಂಡು ಹಿಡಿಯಲು ಸ್ವತಃ ಲಂಕೆಗೆ ಹೋಗುವುದು.

ಒಂದು ದಿನ ಮಾರುತಿಯು ವಟುವಿನ ವೇಶದಲ್ಲಿ ಪುರಾಣ-ಶ್ರವಣದ ಸ್ಥಳಕ್ಕೆ ಬಂದು ಸಮರ್ಥರಿಗೆ ಪುರಾಣ ಹೇಳುವಂತೆ ವಿನಂತಿಸಿದನು. ಆಗ ಸಮರ್ಥರು, ನಿನ್ನ ಎದುರಿಗೆ ಪುರಾಣ ಹೇಳುವ ಯೋಗ್ಯತೆ ನನಗಿಲ್ಲ ಮತ್ತು ನನಗೆ ಅದರ ವ್ಯಾಸಂಗವೂ ಇಲ್ಲ ಎಂದು ಹೇಳಿದರು. ಆಗ ಮಾರುತಿಯು ಏಕೆ ಹೆದರುತ್ತೀರಿ ? ನೀವು ಎಲ್ಲಿ ತಪ್ಪುತ್ತೀರೋ, ಅಲ್ಲಿ ನಾನು ಸರಿಪಡಿಸುತ್ತೇನೆ ಎಂದು ಹೇಳಿದನು. ಪುರಾಣ ಹೇಳುವವರ ಆಜ್ಞೆಯನ್ನು ಪಡೆದು ಸಮರ್ಥರು ಪುರಾಣ ಹೇಳತೊಡಗಿದರು. ಮಾರುತಿಯು ಸೀತೆಯನ್ನು ಹುಡುಕಲು ಲಂಕೆಗೆ ಹೋಗುವ ಕಥೆಯನ್ನು ಹೇಳತೊಡಗಿದರು. ಆ ಸಮಯದಲ್ಲಿ ಸಮರ್ಥ ಮತ್ತು ವಟುವಿನ ರೂಪದಲ್ಲಿದ್ದ ಮಾರುತಿಯೊಂದಿಗೆ ನಡೆದ ಸಂವಾದವನ್ನು ಮುಂದೆ ನೀಡುತ್ತಿದ್ದೇವೆ.

ಸಮರ್ಥರು : ಮಾರುತಿಯು ಸೂಕ್ಷ್ಮದಿಂದ ಕಣಗಲೆಯ ಗಿಡದ ಮೇಲೆ ಕುಳಿತಿದ್ದನು. ಆ ಗಿಡದ ಹೂವುಗಳು ಬಿಳಿಯ ಬಣ್ಣದ್ದಾಗಿತ್ತು.

ವಟು(ಮಾರುತಿ) : ಖಂಡಿತವಾಗಿಯೂ ಇಲ್ಲ

ಆ ಸಮಯದಲ್ಲಿ ಇಬ್ಬರ ಮಧ್ಯೆ ವಾದ ಪ್ರಾರಂಭವಾಯಿತು. ಇತರ ಕೇಳುಗರು ವಟುವಿನ (ಮಾರುತಿಯ ಮೇಲೆ) ಮೇಲೆ ಕೋಪೋದ್ರಿಕ್ತರಾದರು. ಏನೋ ಹುಡುಗಾ, ಪುರಾಣದಲ್ಲಿ ಹೇಳಿರುವ ವಿಷಯಗಳು ತಪ್ಪಾಗಿದೆಯೇ ? ಯಾರೊಂದಿಗೆ ವಾದ ಮಾಡುತ್ತಿರುವಿ ? ಇದು ಒಳ್ಳೆಯದಲ್ಲ ಎಂದು ಹೇಳಿದರು. ಆಗ ಸಮರ್ಥರು ಕೇಳುಗರನ್ನು ಸಮಾಧಾನ ಪಡಿಸಿ ಪುರಾಣವನ್ನು ಮುಕ್ತಾಯಗೊಳಿಸಿದರು.

ಮಾರುತಿ(ಸಮರ್ಥರನ್ನು ಉದ್ದೇಶಿಸಿ) : ನಡೆಯಿರಿ, ನಾನು ನಿಮಗೆ ಕಣಗಲೆಯ ಹೂಗಳು ಕೆಂಪಾಗಿರುವುದೋ ಅಥವಾ ಇಲ್ಲವೋ ಎಂದು ಪ್ರತ್ಯಕ್ಷ ತೋರಿಸುತ್ತೇನೆ.

ಸಮರ್ಥ: ನಾನು ನಿನ್ನೊಂದಿಗೆ ಬಂದರೆ ಶ್ರೀರಾಮನ ಪೂಜೆಯಲ್ಲಿ ವಿಘ್ನವಾಗುವುದು.

ಮಾರುತಿ : ಶ್ರೀರಾಮನ ಪೂಜೆಗಾಗಿ ನಾನು ಕಣಗಲೆಯ ಹೂವುಗಳನ್ನು ತರುತ್ತೇನೆ ಎಂದು ಹೇಳಿ ಅವನು ಲಂಕೆಗೆ ಹೋದನು.

೨. ಲಂಕೆಗೆ ಹೋದಾಗ ಕಣಗಲೆಯ ಹೂವುಗಳು ಬಿಳಿಯ ಬಣ್ಣದ್ದಿರುವುದನ್ನು ನೋಡಿ ಮಾರುತಿಗೆ ಆಶ್ಚರ್ಯವೆನಿಸುವುದು ಮತ್ತು ವಿಭೀಷಣನು ಪರಮ ಶ್ರೀರಾಮ ಭಕ್ತರೊಂದಿಗೆ ಭೇಟಿ ಮಾಡಿಸುವಂತೆ ಮಾರುತಿಗೆ ವಿನಂತಿಸುವುದು

ಮಾರುತಿಯು ಹೂವುಗಳನ್ನು ತೆಗೆಯಲು ಪ್ರಾರಂಭಿಸುತ್ತಲೇ ವಿಭೀಷಣನು ಮಾರುತಿಯನ್ನು ನೋಡಿದನು. ಮಾರುತಿಯು ಕಣಗಲೆ ಹೂವುಗಳು ಬಿಳಿಯ ಬಣ್ಣದ್ದಾಗಿರುವುದನ್ನು ನೋಡಿ ಆಶ್ಚರ್ಯದಿಂದ ಈ ಹೂವುಗಳು ಹೀಗೆಯೇ ಇದ್ದವೇ, ಎಂದು ವಿಭೀಷಣನಿಗೆ ಕೇಳಿದನು. ಆಗ ವಿಭೀಷಣನು ಅವುಗಳು ಬಿಳಿಯ ಬಣ್ಣದ್ದಾಗಿತ್ತು ಎಂದು ಹೇಳಿದನು. ಬಳಿಕ ಮಾರುತಿಯು ಘಟಿಸಿದ ಪ್ರಸಂಗವನ್ನು ವಿಭೀಷಣನಿಗೆ ವಿವರಿಸಿದನು. ವಿಭೀಷಣನು ಇಂತಹ ಪರಮ ಶ್ರೀರಾಮಭಕ್ತನನ್ನು ಭೇಟಿ ಮಾಡಿಸುವಂತೆ ಮಾರುತಿಗೆ ವಿನಂತಿಸಿದನು.  ಆಗ ಮಾರುತಿಯು ಅವರು ಪೃಥ್ವಿ ಪ್ರದಕ್ಷಿಣೆಯ ಸಮಯದಲ್ಲಿ ಇಲ್ಲಿ ಬರುವರು ಎಂದು ಹೇಳಿದನು.

೩. ಮಾರುತಿಯು ಕೆಂಪು ಬಣ್ಣದ ಮತ್ತು ತಾವು ಹೇಳಿದ ಬಿಳಿಯ ಬಣ್ಣದ ಹೂಗಳು ಇರುವುದರ ಹಿಂದಿರುವ ಕಾರಣವನ್ನು ಸಮರ್ಥರು ಸ್ಪಷ್ಟಗೊಳಿಸಿದ ಬಳಿಕ ಸೋಲೊಪ್ಪಿಕೊಂಡನು

ಲಂಕೆಯಿಂದ ಮರಳಿದ ಬಳಿಕ ಮಾರುತಿಯು ಸಮರ್ಥರಿಗೆ, ಹೂವುಗಳನ್ನು ನೋಡದೆಯೇ ನಿಮಗೆ ಅವುಗಳು ಬಿಳಿಯಬಣ್ಣದ್ದಾಗಿವೆಯೆಂದು ಹೇಗೆ ತಿಳಿಯಿತು ? ಎಂದು ಕೇಳಿದನು. ಆಗ ಸಮರ್ಥರು ನೀನು ಹೇಳಿದಂತೆ ಹೂವುಗಳು ಕೆಂಪುಬಣ್ಣದ್ದಾಗಿದ್ದವು, ಇದು ಕೂಡ ಸರಿಯಾಗಿದೆ ಮತ್ತು ಅವು ಬಿಳಿಯಬಣ್ಣದ್ದಾಗಿವೆಯೆಂದು ನಾನು ಹೇಳಿದೆನು. ಅದೂ ಕೂಡ ಸರಿಯಾಗಿದೆ. ಸೀತೆಯ ಶೋಧದಲ್ಲಿರುವಾಗ ನೀನು ಕೋಪೋದ್ರಿಕ್ತನಾಗಿದ್ದರಿಂದ ನಿನಗೆ ಹೂವುಗಳೂ ಕೆಂಪುಬಣ್ಣದ್ದಾಗಿ ಕಂಡು ಬಂದಿತು. ರಾವಣನು ಶಿವಭಕ್ತನಾಗಿರುವುದರಿಂದ ಪ್ರತ್ಯಕ್ಷದಲ್ಲಿ ಅವರ ಹೂತೋಟದಲ್ಲಿ ಬಿಳಿಯ ಬಣ್ಣದ ಹೂವುಗಳು ಅಧಿಕ ಇದ್ದಿರಬಹುದು ಎಂದು ನನಗೆ ತಿಳಿದಿತ್ತು ಎಂದು ಹೇಳಿದರು. ಆಗ ಮಾರುತಿ ಸಮಾಧಾನ ಹೊಂದಿದನು ಮತ್ತು ಸಮರ್ಥರಲ್ಲಿ ತನ್ನ ಸೋಲನ್ನು ಒಪ್ಪಿಕೊಂಡನು.

ಇದರಿಂದ ಸದ್ಗುರು ಶ್ರೇಷ್ಠರೋ ಈಶ್ವರನೋ ? ಎನ್ನುವುದಾದರೆ ತ್ರಿಲೋಕದಲ್ಲಿ ಸದ್ಗುರುವೇ ಶ್ರೇಷ್ಠರಾಗಿದ್ದಾರೆ. ಅವರ ಕೃಪಾಶೀರ್ವಾದವಿಲ್ಲದೇ ಯಾವ ಕಾರ್ಯಗಳೂ ಘಟಿಸಲು ಸಾಧ್ಯವೇ ಇಲ್ಲ. ಶ್ರೀರಾಮನ ಆಶೀರ್ವಾದವಿಲ್ಲದೇ ಸೀತೆಯನ್ನು ಶೋಧಿಸುವುದು ಅಥವಾ ಲಂಕೆಗೆ ಹೋಗುವುದು ಸಾಧ್ಯವಿರಲಿಲ್ಲ. ಕೊನೆಗೆ ಈಶ್ವರನೇ ಸದ್ಗುರು ಮತ್ತು ಸದ್ಗುರುವೇ ಈಶ್ವರನು ! – (ಪೂ.) ಸೌ. ಲಕ್ಷ್ಮೀ(ಮಾಯಿ) ನಾಯಿಕ, ಪಾನವಳ, ಬಾಂದಾ, ಸಾವಂತವಾಡಿ, ಸಿಂಧುದುರ್ಗ.

Kannada Weekly | Offline reading | PDF