ಪರಾತ್ಪರ ಗುರು ಡಾ. ಆಠವಲೆಯವರ ಅಲೌಕಿಕ ಕಾರ್ಯವನ್ನು ಪರಿಚಯಿಸುವ ಲೇಖನಮಾಲೆ !

ಪರಾತ್ಪರ ಗುರು ಡಾಕ್ಟರರವರ ಮಾರ್ಗದರ್ಶನದಲ್ಲಿ ಹಿಂದುತ್ವನಿಷ್ಠರಿಗೆ ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ ನೀಡುವ ಹಿಂದೂ ಜನ ಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ೧. ಸದ್ಗುರು ಡಾ. ಚಾರುದತ್ತ ಪಿಂಗಳೆ, ೨. ವಿಶ್ವಸ್ಥ ಶ್ರೀ. ನಾಗೇಶ ಗಾಡೆ ಮತ್ತು ೩. ರಾಷ್ಟ್ರೀಯ ವಕ್ತಾರರಾದ ಶ್ರೀ.ರಮೇಶ ಶಿಂದೆ

ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯವೆಂದರೆ, ಅವರ ವ್ಯಷ್ಠಿ ಮತ್ತು ಸಮಷ್ಠಿ ಸಾಧನೆ ಮತ್ತು ಕಾರ್ಯದ ಸಂದರ್ಭದಲ್ಲಿನ ಅವರ ಶಿಷ್ಯಭಾವ !

ಲೇಖಕರು : ಪರಾತ್ಪರ ಗುರು ಡಾ. ಜಯಂತ ಆಠವಲೆ

ಈ ಹಿಂದಿನ ಸಾಪ್ತಾಹಿಕಗಳಲ್ಲಿನ ಲೇಖನಮಾಲೆಯಲ್ಲಿ ನಾವು ಪರಾತ್ಪರ ಗುರು ಡಾ. ಆಠವಲೆಯವರ ಸ್ಥೂಲದಲ್ಲಿನ ಸರ್ವಾಂಗಸ್ಪರ್ಶಿ ವ್ಯಾಪಕ ಕಾರ್ಯದ ಹಾಗೂ ಸೂಕ್ಷ್ಮದಲ್ಲಿನ ಅಪರಿಮಿತ ಕಾರ್ಯದ ಪರಿಚಯವನ್ನು ಮಾಡಿಕೊಂಡೆವು. ಈ ವಾರದ ಈ ಲೇಖನಮಾಲೆಯಲ್ಲಿನ ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ ವೈಶಿಷ್ಟ್ಯಪೂರ್ಣ ಮತ್ತು ಅಭೂತಪೂರ್ವ ಅಂಶಗಳನ್ನು ತಿಳಿದುಕೊಳ್ಳುವವರಿದ್ದೇವೆ. ಈ ಲೇಖನದ ಮೂಲಕ ‘ಪರಾತ್ಪರ ಗುರು ಡಾಕ್ಟರರ ಅಸಾಮಾನ್ಯತ್ವದ ಅರಿವಾಗಿ ಅವರ ಬಗ್ಗೆ ಎಲ್ಲರ ಶ್ರದ್ಧೆ ದೃಢವಾಗಬೇಕು, ಇದೇ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !

ವಯಸ್ಸಾದ ಅಥವಾ ಅನಾರೋಗ್ಯ ಪೀಡಿತ ಸಾಧಕರಿಗೆ ಆಶ್ರಮದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡುವುದು

‘೨೫ – ೩೦ ವರ್ಷ ಸಾಧನೆ ಮಾಡುವ ಸಾಧಕರಿಗೆ ಮುಂದೆ ವಯಸ್ಸಾದರೆ ಅಥವಾ ಅವರು ಅನಾರೋಗ್ಯಕ್ಕೊಳಗಾದರೆ, ಮನೆಯ ವಾತಾವರಣದಲ್ಲಿ, ಉದಾ. ಮಾಯೆಯಲ್ಲಿನ ವಿಷಯಗಳ ಬಗ್ಗೆ ಮಾತನಾಡುವುದು, ದೂರದರ್ಶನದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವುದು, ಮಕ್ಕಳ ಗಡಿಬಿಡಿ-ಗದ್ದಲ ಇತ್ಯಾದಿ ವಾತಾವರಣದಲ್ಲಿ ನಾಮಜಪಾದಿ ಸಾಧನೆ ಮಾಡುವುದು ಅಸಾಧ್ಯವಾಗುತ್ತದೆ. ಇಂತಹ ಸಾಧಕರ ವಾಸ್ತವ್ಯದ ವ್ಯವಸ್ಥೆಯನ್ನು ಸನಾತನದ ಆಶ್ರಮಗಳಲ್ಲಿ ಮಾಡಲಾಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ

೧. ಪರಾತ್ಪರ ಗುರು ಡಾ. ಆಠವಲೆಯವರ ಸಾಧಕರನ್ನು ತಯಾರಿಸುವ ಅಭೂತಪೂರ್ವ ಕಾರ್ಯ !

೧ ಅ. ಸಾಧಕರ ಸಂಖ್ಯೆಗಲ್ಲ, ಸಾಧಕರ ಗುಣಮಟ್ಟಕ್ಕೆ ಮಹತ್ವ ನೀಡುವುದು : ‘ಇತರ ಸಂಪ್ರದಾಯಗಳ ತುಲನೆಯಲ್ಲಿ ಸನಾತನ ಸಂಸ್ಥೆಯ ಸ್ಥಾಪನೆಯಿಂದ ನಾನು  ಸಾಧಕರ ಗುಣಮಟ್ಟಕ್ಕೆ ಮಹತ್ವ ನೀಡಿದ್ದರಿಂದ, ಇತರ ಸಂಪ್ರದಾಯಗಳಂತೆ ಸಾಧಕರ ಸಂಖ್ಯೆ ಹೆಚ್ಚಿಲ್ಲದಿದ್ದರೂ ಮತ್ತು ನಾನು ಹೇಳಿದ ಕಾಲಾನುಸಾರ ಆವಶ್ಯಕ ‘ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿದ್ದರಿಂದ ೩೦.೬.೨೦೧೯ ರ ವರೆಗೆ ಶೇ. ೬೦ ರಿಂದ ೬೯ ರಷ್ಟು ಮಟ್ಟದ ೧,೨೫೨ ಜನ ಸಾಧಕರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿದ್ದಾರೆ ಮತ್ತು ನೂರಕ್ಕೂ ಹೆಚ್ಚು ಸಾಧಕರು ಸಂತರಾಗಿದ್ದಾರೆ (ಶೇ. ೭೦ ಕ್ಕಿಂತಲೂ ಹೆಚ್ಚು ಮಟ್ಟದ). ಇದರಲ್ಲಿ ಓರ್ವ ಬಾಲಸಂತರ ಸೇರ್ಪಡೆಯಾಗಿದ್ದಾರೆ. ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ೧೦೦ ಸಂತರ ಆವಶ್ಯಕತೆಯಿದೆ, ಎಂದು ನಾನು ೨೦೧೦ ರಲ್ಲಿ ಹೇಳಿದ್ದೆನು.

೧ ಆ. ಇತರ ಸಾಧನೆಯ ಮಾರ್ಗಗಳಿಗಿಂತ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿರುವ ‘ಗುರುಕೃಪಾಯೋಗಕ್ಕನುಸಾರ ಸಾಧನೆಯನ್ನು ಮಾಡಿದ್ದರಿಂದ ಶೀಘ್ರ ಪ್ರಗತಿ ಆಗಿರುವುದರ ಕಾರಣಗಳು : ಕಾಲಾನುಸಾರ ಸಾಧನೆಯ ಮಾರ್ಗಕ್ಕೆ ಮಹತ್ವವಿರುತ್ತದೆ. ಸತ್ಯಯುಗದಲ್ಲಿ ಎಲ್ಲರೂ ಸಾತ್ತ್ವಿಕರಾಗಿದ್ದರಿಂದ ಎಲ್ಲರೂ ಅಖಂಡ ಸಾಧನೆಯಲ್ಲಿ ನಿರತರಾಗಿರುತ್ತಿದ್ದರು. ತ್ರೇತಾಯುಗದಲ್ಲಿ ಸ್ವಭಾವದೋಷ ಮತ್ತು ಅಹಂ, ಹಾಗೆಯೇ ಕೆಟ್ಟ ಶಕ್ತಿಗಳ ತೊಂದರೆಗಳು ಪ್ರಾರಂಭವಾದವು. ದ್ವಾಪರಯುಗದಲ್ಲಿ ಇದರ ಪ್ರಮಾಣ ಹೆಚ್ಚಾಯಿತು. ಮೊದಲಿನ ಯುಗಗಳಲ್ಲಿ ಸ್ವಭಾವದೋಷ ಮತ್ತು ಅಹಂ ಹಾಗೆಯೇ  ಕೆಟ್ಟಶಕ್ತಿಗಳ ತೊಂದರೆಗಳ ಪ್ರಮಾಣ ಕಲಿಯುಗದ ತುಲನೆಯಲ್ಲಿ ಕಡಿಮೆಯಿದ್ದುದರಿಂದ ಅದಕ್ಕಾಗಿ ಪ್ರತ್ಯೇಕ ಸಾಧನೆಯನ್ನು ಹೇಳಬೇಕಾಗಲಿಲ್ಲ.

ಆ ಕಾಲದಲ್ಲಿ ಜ್ಞಾನಯೋಗ, ಧ್ಯಾನಧಾರಣೆ, ಪ್ರಾಣಾಯಾಮ ಇತ್ಯಾದಿ ಮಾರ್ಗಗಳಿಂದ ಪ್ರಗತಿಯಾಗುತ್ತಿತ್ತು; ಆದರೆ ಪ್ರಗತಿಯಾಗಲು ನೂರಾರು ವರ್ಷಗಳು ಬೇಕಾಗುತ್ತಿತ್ತು. ಏಕೆಂದರೆ ‘ಮನೋಲಯ, ಬುದ್ಧಿಲಯ, ಚಿತ್ತಲಯ ಮತ್ತು ಅಹಂಲಯವನ್ನು ಹೇಗೆ ಮಾಡಬೇಕು ಎಂಬುದನ್ನು ಸಾಧನೆಯಲ್ಲಿ ಕಲಿಸುತ್ತಿರಲಿಲ್ಲ. ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂಭಾವ ಹೆಚ್ಚಿರುವುದರಿಂದ ಹಾಗೆಯೇ ಕೆಟ್ಟ ಶಕ್ತಿಗಳ ತೀವ್ರ ತೊಂದರೆ ಇರುವುದರಿಂದ ಸಾಧಕರ ಸಾಧನೆಯು ಸರಿಯಾಗಿ ಆಗುವುದಿಲ್ಲ; ಆದುದರಿಂದ ಕಲಿಯುಗದಲ್ಲಿ ‘ಗುರುಕೃಪಾಯೋಗಕ್ಕೆ ಮಹತ್ವವಿದೆ. ಇದರ ಕಾರಣವೆಂದರೆ ‘ಗುರುಕೃಪಾಯೋಗದಲ್ಲಿ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಸಾಧನೆಯನ್ನು ಹೇಳಲಾಗುತ್ತದೆ, ಹಾಗೆಯೇ ಕೆಟ್ಟಶಕ್ತಿಗಳ ತೊಂದರೆಗಳಿಗೆ ಉಪಾಯಗಳನ್ನೂ ಹೇಳಲಾಗುತ್ತದೆ. ಇದರಿಂದ ಸಾಧಕರ ಮನೋಲಯ, ಬುದ್ಧಿಲಯ, ಚಿತ್ತಲಯ ಮತ್ತು ಅಹಂಲಯ ಬೇಗನೆ ಆಗುತ್ತದೆ. ಇದರಿಂದ ಸಾಧಕರ ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ಪ್ರಗತಿಯಾಗಿರುವುದು ಕಂಡು ಬರುತ್ತದೆ.

೧ ಇ. ಪರಾತ್ಪರ ಗುರು ಡಾಕ್ಟರರು ಎಷ್ಟು ಆಳವಾಗಿ ಸಾಧಕರ ಅಧ್ಯಯನ ಮಾಡಿ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದರು, ಎನ್ನುವುದರ ಒಂದು ಉದಾಹರಣೆ – ಸದ್ಗುರು (ಕು.) ಅನುರಾಧಾ ವಾಡೇಕರರವರ ಆಗಸ್ಟ್ ೨೦೦೦ ರಿಂದ ಆಗಸ್ಟ್ ೨೦೦೬ ರ ವರೆಗಿನ ಸಾಧನೆಯ ಮಾರ್ಗಕ್ರಮಣವನ್ನು ತೋರಿಸುವ ಕೋಷ್ಟಕ

ಟಿಪ್ಪಣಿ ೧ – ವರ್ಷಕ್ಕೆ ಶೇ. ೨.೫ ರಷ್ಟು ವೃದ್ಧಿ,ಅಂದರೆ ಒಳ್ಳೆಯ ಪ್ರಗತಿಯಾಗುತ್ತಿದೆ. ಸಾಮಾನ್ಯ ಸಾಧಕರ ಆಧ್ಯಾತ್ಮಿಕ ಮಟ್ಟ ವರ್ಷಕ್ಕೆ ಶೇ. ೧ ರಷ್ಟು ಹೆಚ್ಚಾಗುತ್ತದೆ.

ಟಿಪ್ಪಣಿ ೨ – ಪ್ರತಿದಿನ ದಿನಪತ್ರಿಕೆಯನ್ನು ಕೂಡ (ದೈನಿಕ ಸನಾತನ ಪ್ರಭಾತ ಪತ್ರಿಕೆ) ಓದುವುದಿಲ್ಲ.

೧ ಇ ೧. ಈ ಕೋಷ್ಟಕದಿಂದ ಪರಾತ್ಪರ ಗುರು ಡಾ. ಆಠವಲೆಯವರ ಗಮನಕ್ಕೆ ಬಂದ ಅಂಶಗಳು : ೨೦೦೬ ರ ಈ ಕೋಷ್ಟಕವನ್ನು ೨೦೧೯ ರಲ್ಲಿ ನೋಡಿದ ನಂತರ ‘ನಾನು ಸಾಧನೆಯನ್ನು ಕಲಿಸಲು ಪ್ರಾರಂಭಿಸಿದಾಗಿನಿಂದ ಪ್ರತಿಯೊಬ್ಬ ಸಾಧಕನ ಕಡೆಗೆ ಎಷ್ಟು ಸವಿಸ್ತಾರವಾಗಿ ನೋಡುತ್ತಿದ್ದೆ ಮತ್ತು ಅದಕ್ಕನುಸಾರ ಮಾರ್ಗದರ್ಶನ ಮಾಡುತ್ತಿದ್ದೆ ಎಂಬುದು ನನ್ನ ಗಮನಕ್ಕೆ ಬಂದಿತು.

ಅ. ‘ಆಧುನಿಕ ವೈದ್ಯರು ರಕ್ತ ಪರೀಕ್ಷೆ ಮಾಡಿ ಅದರಲ್ಲಿ ಏನು ಹೆಚ್ಚು-ಕಡಿಮೆಯಿದೆ ಎಂದು ಪರಿಶೀಲಿಸಿ ಅದಕ್ಕನುಸಾರ ಔಷಧಿಗಳನ್ನು ಕೊಡುತ್ತಾರೆ, ಅದರಂತೆ ಮೇಲಿನ ಉದಾಹರಣೆಯೆಂದು ನೀಡಿದ ಕೋಷ್ಟಕದಲ್ಲಿನ ವಿವಿಧ ಅಂಶಗಳನ್ನು ಅಧ್ಯಯನ ಮಾಡಿ ನಾನು ಮಾರ್ಗದರ್ಶನ ಮಾಡುತ್ತಿದ್ದೆ.

ಆ. ಇಷ್ಟೇ ಅಲ್ಲದೇ, ಸಾಧಕರನ್ನು ಸೂಕ್ಷ್ಮದಲ್ಲಿ ಅಧ್ಯಯನ ಮಾಡಿ ಅವರಿಗೆ ‘ಸಾಧನೆಯಲ್ಲಿ ಯಾವುದಕ್ಕೆ ಪ್ರಾಧಾನ್ಯತೆಯನ್ನು ನೀಡಬೇಕು, ಎಂಬುದನ್ನೂ ಹೇಳುತ್ತಿದ್ದೆ. ಉದಾ. ಆಧ್ಯಾತ್ಮಿಕ ತೊಂದರೆಯಿದ್ದರೆ ಯಾವ ಉಪಾಯ ಮಾಡಬೇಕು ಎಂದು ಹೇಳುತ್ತಿದ್ದೆ. ಈಗ ಗುರುಕೃಪಾಯೋಗಾನುಸಾರ ಸಾಧನೆಯನ್ನು ಕಲಿಸುವವರು ಇತರರಿಗೆ ಮೇಲಿನಂತೆ ಸಾಧನೆ ಕಲಿಸುತ್ತಾರೆ. ಇದರಿಂದ ವೇಗವಾಗಿ ಸಾಧಕರ ಪ್ರಗತಿಯಾಗುತ್ತಿದೆ.

೧ ಇ. ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದ ಕಾರ್ಯವನ್ನು ಕೆಲವು ವರ್ಷಗಳವರೆಗೆ ಮಾಡುವಾಗ, ಆ ಕಾರ್ಯವನ್ನು ಮಾಡುವಂತಹ ಸಾಧಕರನ್ನು ತಯಾರಿಸುವುದು ಮತ್ತು ಸಾಧಕರು ತಯಾರಾದ ಮೇಲೆ ಆ ಕಾರ್ಯವನ್ನು ಅವರಿಗೆ ಒಪ್ಪಿಸಿ ಮುಂದಿನ ಕಾರ್ಯವನ್ನು ಪ್ರಾರಂಭಿಸುವುದು : ನಾನು ೨೦೦೦ ರಿಂದ ಈ ಕಾರ್ಯಪದ್ಧತಿಗನುಸಾರ ಕಾರ್ಯವನ್ನು ಮಾಡುತ್ತಿದ್ದೇನೆ. ಅಧ್ಯಾತ್ಮಪ್ರಸಾರ, ಸಾಧಕರ ಸತ್ಸಂಗ ತೆಗೆದುಕೊಳ್ಳುವುದು, ಆಶ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳುವುದು ಇಂತಹ ಅನೇಕ ಸೇವೆಗಳನ್ನು ಮಾಡಬಲ್ಲ ಅನೇಕ ಸಾಧಕರು ಈಗ ತಯಾರಾಗಿರುವುದರಿಂದ ಈ ಸೇವೆಗಳ ಕಡೆಗೆ ನನಗೆ ವಿಶೇಷ ಗಮನ ನೀಡಬೇಕಾಗುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ

Kannada Weekly | Offline reading | PDF