ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಮನೆಮದ್ದು ವಿಷಯದ ಮಾಹಿತಿ ತಿಳಿಸಿ !

‘ಹಿಂದಿನ ಕಾಲದಲ್ಲಿ ಮನೆಮನೆಗಳಲ್ಲಿ ‘ಅಜ್ಜಿಯವರ ಕೈಚೀಲ’ವಿರುತ್ತಿತ್ತು. ಇದರಿಂದ ಚಿಕ್ಕಪುಟ್ಟ ರೋಗಗಳ ಚಿಕಿತ್ಸೆಗಾಗಿ ಆಧುನಿಕ ವೈದ್ಯರ (ಡಾಕ್ಟರರ) ಆವಶ್ಯಕತೆ ಅನಿಸುತ್ತಿರಲಿಲ್ಲ. ಸದ್ಯದ ಕಾಲದಲ್ಲಿ ಹೆಚ್ಚಿನ ಜನರಿಗೆ ಮನೆಮದ್ದಿನ ಮಾಹಿತಿ ಇಲ್ಲದ ಕಾರಣ ‘ಸ್ವಲ್ಪ ಏನಾದರೂ ಆದರೆ, ಆಧುನಿಕ ವೈದ್ಯರಲ್ಲಿ ಹೋಗು’, ಎಂಬ ಸ್ಥಿತಿ ಇದೆ. ಮುಂಬರುವ ಭೀಕರ ಆಪತ್ಕಾಲದ ಹಿನ್ನೆಲೆಯಲ್ಲಿ ಎಲ್ಲರಿಗೂ ಮನೆಮದ್ದುಗಳ ಬಗ್ಗೆ ತಿಳಿದಿರಬೇಕೆಂದು ಸನಾತನ ಸಂಸ್ಥೆಯು ಪ್ರಯತ್ನಿಸುತ್ತಿದೆ.

ಯಾವ ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ‘ತಮ್ಮ ಪರಿಸರದಲ್ಲಿನ ವನಸ್ಪತಿ ಮತ್ತು ಮನೆಯಲ್ಲಿನ ಮಸಾಲೆ ಮುಂತಾದ ಪದಾರ್ಥಗಳನ್ನು ಮನೆಮದ್ದಿನ ಸ್ವರೂಪದಲ್ಲಿ ಹೇಗೆ ಉಪಯೋಗಿಸಬೇಕು ?’ ಎಂದು ತಿಳಿದಿದ್ದರೆ, ಅವರು ಆ ಮಾಹಿತಿಯನ್ನು ಬರೆದು ಅಥವಾ ಬೆರಳಚ್ಚು ಮಾಡಿ ಸೌ. ಭಾಗ್ಯಶ್ರೀ ಸಾವಂತ ಇವರ ಹೆಸರಿಗೆ ಮುಂದಿನ ವಿಳಾಸಕ್ಕೆ ಕಳುಹಿಸಿ. ಮನೆಮದ್ದಿನ ವಿಷಯದಲ್ಲಿ ಮಾಹಿತಿ ನೀಡುವ ಗ್ರಂಥ ಅಥವಾ ಬರವಣಿಗೆ ಇದ್ದರೆ ಅದನ್ನೂ ಕಳುಹಿಸಬಹುದು. ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿ ಇವರ ಪರಿಚಿತ ಅಥವಾ ಸಂಬಂಧಿಕರಿಗೆ ಈ ಬಗ್ಗೆ ಏನಾದರೂ ಮಾಹಿತಿ ಇದ್ದಲ್ಲಿ ಅದನ್ನೂ ಕಳುಹಿಸಬೇಕು.

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ –403401

Kannada Weekly | Offline reading | PDF