ನೇಪಾಳದಲ್ಲಿ ಮುಸಲ್ಮಾನ ಸಂಘಟನೆಗಳಿಂದ ಸನಾತನ ಹಿಂದೂ ಸಂಸ್ಕೃತಿಯ ರಕ್ಷಣೆಗಾಗಿ ಪ್ರತಿಭಟನೆ !

ಕಾಠಮಾಂಡೂ (ನೇಪಾಳ) – ಕಾಠಮಾಂಡೂವಿನ ಕಣಿವೆಯಲ್ಲಿ ವಾಸಿಸುವ ಮುಸಲ್ಮಾನರು ಸನಾತನ ಹಿಂದೂ ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕೆಂದು ವಿನಂತಿಸಿದ್ದಾರೆ. ಕೆಪಿ ಶರ್ಮಾ ಓಲಿ ಇವರ ಕಮ್ಯುನಿಸ್ಟ್ ಪಕ್ಷದ ಸರಕಾರ ‘ಗುಥೀ (ನ್ಯಾಸ) ಅಧಿನಿಯಮ’ದಲ್ಲಿ ಸಂಶೋಧನೆ ಮಾಡುವುದು ಮತ್ತು ಸಾರ್ವಜನಿಕ ಹಾಗೂ ಖಾಸಗಿ ನ್ಯಾಸಗಳನ್ನು ರಾಷ್ಟ್ರೀಕರಣ ಮಾಡುವುದು ಹಾಗೂ ಒಂದು ಶಕ್ತಿಶಾಲಿ ಆಯೋಗದ ಅಂತರ್ಗತ ಎಲ್ಲ ಧಾರ್ಮಿಕ ಸ್ಥಳಗಳನ್ನು ನಿಯಂತ್ರಿಸುವ ಮಸೂದೆಯನ್ನು ಮಂಡಿಸಿದೆ. ಮುಸಲ್ಮಾನರು ಇದನ್ನು ವಿರೋಧಿಸಿದ್ದಾರೆ. ಸ್ಥಳೀಯ ಮುಸಲ್ಮಾನರ ‘ನೇವಾರ ಮುಸ್ಲಿಮ್ ಸೊಸೈಟಿ’ಯ ಸದಸ್ಯರು ಕೆಲವು ದಿನಗಳ ಹಿಂದೆ ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಮಾಡಬೇಕೆಂದು ಆಗ್ರಹಿಸಿ ನೇಪಾಳದ ರಾಜಧಾನಿ ಕಾಠಮಾಂಡೂವಿನಲ್ಲಿ ಪ್ರತಿಭಟನಾ ಮೆರವಣಿಗೆ ತೆಗೆದಿದ್ದರು. ಮೆರವಣಿಗೆಯಲ್ಲಿ ಅವರು ಈ ಮೇಲಿನ ಆಗ್ರಹದ ಫಲಕಗಳನ್ನು ಹಿಡಿದಿದ್ದರು. ‘ಕಮ್ಯುನಿಸ್ಟ್ ಪಕ್ಷವು ಸಂಸತ್ತಿನಲ್ಲಿ ಮಂಡಿಸಿದ ಮಸೂದೆಗೆ ಬೆಂಬಲ ಸಿಕ್ಕಿದರೆ, ಹಿಂದೂ ಧರ್ಮ ಸಂಕಟಕ್ಕೊಳಗಾಗಬಹುದು’, ಎಂದು ಈ ಸಂಘಟನೆ ಹೇಳಿದೆ.

ನೇಪಾಳದ ಆಡಳಿತಾರೂಢ ಸಾಮ್ಯವಾದಿ ಪಕ್ಷದ ಸರಕಾರ ತಂದಿರುವ ಧಾರ್ಮಿಕ ಸ್ಥಳಗಳ ನಿಯಂತ್ರಣ ಮಾಡುವ ಮಸೂದೆಗೆ ಭಾರತದಲ್ಲಿ ಎಂದಾದರೂ ವಿರೋಧವಾಗಲು ಸಾಧ್ಯವಿದೆಯೇ ?

ನೇಪಾಳದಲ್ಲಿ ಧಾರ್ಮಿಕ ಸ್ಥಳಗಳನ್ನು ನಿಯಂತ್ರಣದಲ್ಲಿಡಲು ಮುಸಲ್ಮಾನರು ವಿರೋಧಿಸುತ್ತಾರೆ. ಆದರೆ ಭಾರತದಲ್ಲಿ ಹಿಂದೂಗಳ ಅನೇಕ ದೇವಸ್ಥಾನಗಳನ್ನು ಸರಕಾರೀಕರಣ ಮಾಡಿದರೂ ಹಿಂದೂಗಳು ನಿಷ್ಕ್ರಿಯರಾಗಿರುತ್ತಾರೆ !

ಸಾಮ್ಯವಾದಿಗಳು ಭಾರತದಲ್ಲಿರಲಿ, ನೇಪಾಳದಲ್ಲಿರಲಿ ಅಧಿಕಾರ ಸಿಕ್ಕಿದ ತಕ್ಷಣ ಹಿಂದೂದ್ವೇಷಿ ಕೃತ್ಯ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಡಿ !

Kannada Weekly | Offline reading | PDF