‘ಸನಾತನ ಪ್ರಭಾತದ ಮೂಲಕ ಹಿಂದುತ್ವನಿಷ್ಠ ಸಂಘಟನೆಗಳ ಹಾಗೂ ರಾಜಕೀಯ ಪಕ್ಷಗಳ ಬಗ್ಗೆ ಪ್ರಕಟಿಸಲಾಗುತ್ತಿದ್ದ ಸಂಪಾದಕೀಯ ದೃಷ್ಟಿಕೋನದಲ್ಲಿ ಬದಲಾವಣೆ !

‘ಸನಾತನ ಪ್ರಭಾತದ ಪ್ರಕಾಶನವು ಆರಂಭವಾದಾಗಲೇ ‘ಈ ನಿಯತಕಾಲಿಕೆಯು ಅಧ್ಯಾತ್ಮಿಕ ರಾಷ್ಟ್ರರಚನೆಯ ಸಿದ್ಧಾಂತವನ್ನಾಧರಿಸಿದ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ದೃಷ್ಟಿಕೋನ ನೀಡುವುದು, ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ಈ ತತ್ತ್ವದ ಆಧಾರದಲ್ಲಿ  ಢೋಂಗಿ ಸೆಕ್ಯೂಲರ್ವಾದಿಗಳ ಬಣ್ಣವನ್ನು ಬಯಲು ಮಾಡಿ ಅವರ ಮೇಲೆ ಮಾತಿನ ಚಾಟಿ ಬೀಸುವುದು ಹಾಗೂ ಹಿಂದುತ್ವನಿಷ್ಠ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳಿಗೆ ಸಣ್ಣ ಸಹೋದರನೆಂದು ಹಿಂದೂಹಿತದ ದೃಷ್ಟಿಯಿಂದ ಅಯೋಗ್ಯ ಕೃತಿಯನ್ನು ಗಮನಕ್ಕೆ ತಂದುಕೊಡುವುದು, ಎಂದು ಸನಾತನ ಪ್ರಭಾತದ ನಿಲುವಾಗಿತ್ತು. ಕಾಂಗ್ರೆಸ್, ಸಮಾಜವಾದಿ, ಕಮ್ಯುನಿಸ್ಟ್ ಇತ್ಯಾದಿ ಸೆಕ್ಯೂಲರ್ವಾದಿ ಪಕ್ಷಗಳ ಸಾಮಾಜಿಕ ಸಂವೇದನಶೂನ್ಯತೆ, ಭ್ರಷ್ಟಾಚಾರ ಮತ್ತು ಹಿಂದೂವಿರೋಧಿ ವೃತ್ತಿ ಈ ವಿಷಯದ ಬಗ್ಗೆ ನಿರ್ಭೀತವಾಗಿ ರಾಜಕೀಯ ದೃಷ್ಟಿಕೋನವನ್ನು ಪ್ರಕಾಶಿಸಿ ಸನಾತನ ಪ್ರಭಾತವು ಸಾಮಾಜಿಕ ಅಸಮಧಾನಕ್ಕೆ ಅನುವು ಮಾಡಿಕೊಟ್ಟಿದೆ. ಅನಂತರ ಕೇಂದ್ರದಲ್ಲಿ ಭಾಜಪ ಅಧಿಕಾರಕ್ಕೆ ಬಂದಿದೆ. ಆಗಲೂ ಸನಾತನ ಪ್ರಭಾತವು ನಿಷ್ಪಕ್ಷಪಾತವಾಗಿ ಸರಕಾರದ ಅಯೋಗ್ಯ ನಿಲುವಿಗೆ ನಿರ್ಭೀತವಾಗಿ ದೃಷ್ಟಿಕೋನವನ್ನು ಬರೆಯಿತು. ಅದೇರೀತಿ ಇತರ ಹಿಂದುತ್ವನಿಷ್ಠ ಸಂಘಟನೆಗಳಿಗೆ ಯೋಗ್ಯ ಕೃತಿಯ ಬಗ್ಗೆಯೂ ನಮ್ಮ ನಿಲುವನ್ನು ಸ್ಪಷ್ಟ ಮಾಡಲು ಪ್ರಯತ್ನಿಸಿತು. ಅದರಲ್ಲಿ ಹಿಂದುತ್ವದ ಬಗ್ಗೆ ಯಾವುದೇ ರೀತಿಯ ಹಾನಿಯಾಗದಿರಲಿ, ಎಂಬ ಉದ್ದೇಶವಿತ್ತು. ಈ ನಿಲುವು ಕೇವಲ ಇತರ ಸಂಘಟನೆಗಳ ಬಗ್ಗೆ ಮಾತ್ರವಲ್ಲದೇ, ಸನಾತನ ಸಂಸ್ಥೆಯ ಸಾಧಕರ ತಪ್ಪಿನ ಬಗ್ಗೆಯೂ ನಿರಪೇಕ್ಷವಾಗಿ ಸನಾತನ ಪ್ರಭಾತದ ಮೂಲಕ ಆಯಾ ಸಮಯದಲ್ಲಿ ಪ್ರಕಟಿಸಲಾಗಿದೆ. ವ್ಯಕ್ತಿಗಿಂತ ಸಂಘಟನೆ ಮಹತ್ವದ್ದಾಗಿದೆ ಮತ್ತು ಸಂಘಟನೆಗಿಂತ ದೇಶ-ಧರ್ಮ ಮಹತ್ವದ್ದಾಗಿದೆ, ಇದುವೇ ಇದರ ಹಿಂದಿನ ನಿಲುವಾಗಿತ್ತು. ಈ ಕಾಲಾವಧಿಯಲ್ಲಿ ಅನೇಕ ಹಿರಿಯ ಹಿಂದುತ್ವನಿಷ್ಠ, ಅದೇರೀತಿ ಧರ್ಮಪ್ರೇಮಿಗಳು ವಿನಮ್ರವಾಗಿ, ಸನಾತನ ಪ್ರಭಾತದ ಮೂಲಕ ವ್ಯಕ್ತ ಪಡಿಸಲಾಗುತ್ತಿದ್ದ ಈ ದೃಷ್ಟಿಕೋನವನ್ನು ಹಿಂದೂ ವಿರೋಧಿಗಳು, ಅದೇರೀತಿ ಸೆಕ್ಯುಲರ್ವಾದಿಗಳು ಬಳಸುತ್ತಿದ್ದಾರೆ. ಅವರು ಈ ದೃಷ್ಟಿಕೋನದ ಮೂಲಕ ಹಿಂದೂಗಳನ್ನು ಒಡಕುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಹಾಗೂ ‘ಹಿಂದೂ ಸಂಘಟನೆಗಳಲ್ಲಿಯೇ ಭಿನ್ನಾಭಿಪ್ರಾಯಗಳಿವೆ, ಎಂದು ಸಮಾಜದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ, ಎಂದು ತಿಳಿಸಿದರು. ಆದ್ದರಿಂದ ‘ಒಂದು ಸಣ್ಣ ಕೃತಿಯಿಂದಲೂ ವ್ಯಾಪಕ ಹಿಂದುತ್ವದ ಹಾನಿಯಾಗಬಾರದು, ಈ ಉದ್ದೇಶದಿಂದಲೇ ‘ಸನಾತನ ಪ್ರಭಾತದ ಮೂಲಕ ಸಂಪಾದಕೀಯ ದೃಷ್ಟಿಕೋನವನ್ನು ಕೊಡುವ ನಿಲುವನ್ನು ಬದಲಾಯಿಸುತ್ತಿದ್ದೇವೆ. ಹೊಸ ನಿಲುವಿನಂತೆ ಇನ್ನು ‘ಸನಾತನ ಪ್ರಭಾತದಿಂದ ಹಿಂದುತ್ವನಿಷ್ಠ ರಾಜಕೀಯ ಪಕ್ಷ, ಅದೇ ರೀತಿ ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ಟೀಕೆಟಿಪ್ಪಣಿ ಮಾಡುವುದಿಲ್ಲ ಬದಲಾಗಿ ಹಿಂದೂ ಸಮಾಜದ ಸ್ವಾಭಾವಿಕ ಅಪೇಕ್ಷೆಯನ್ನು ವ್ಯಕ್ತ ಪಡಿಸಲಾಗುವುದು ಹಾಗೂ ಹಿಂದುತ್ವದ ಕುಟುಂಬದ ಸಂಘಟನೆಗಳಿಗೆ, ಸಂಘಟನಾತ್ಮಕ ಸೂಚನೆಯನ್ನು ನೇರ ತಿಳಿಸಲಾಗುವುದು. – ಸಂಪಾದಕರು

Kannada Weekly | Offline reading | PDF