ಆಪತ್ಕಾಲದಲ್ಲಿ ಗುಣಕಾರಿ ಬಿಂದುಒತ್ತಡ ಉಪಚಾರಪದ್ಧತಿ !

ರೋಗಮುಕ್ತ ಮಾಡುವ ಬಿಂದು ಒತ್ತಡ ಉಪಚಾರ ಪದ್ಧತಿ

ಉಪಯುಕ್ತತೆ ಮತ್ತು ಲಾಭಗಳು

ಈ ಪದ್ಧತಿಯಿಂದ ಪ್ರತಿಯೊಬ್ಬರು ತಮಗೆ ತಾವೇ ಮತ್ತು ಮನೆಯಲ್ಲಿಯೇ ಉಪಾಯವನ್ನು ಮಾಡಿಕೊಳ್ಳಬಹುದು. ಈ ಉಪಾಯವನ್ನು ಅವಶ್ಯಕತೆಗನುಸಾರ ದಿನದಲ್ಲಿ ಒಂದು ಸಲ ಅಥವಾ ಹೆಚ್ಚು ಸಲ ಸಹ ಮಾಡಿಕೊಳ್ಳಬಹುದು. ಈ ಪದ್ಧತಿಯಿಂದ ರೋಗದ ಬಾಹ್ಯಲಕ್ಷಣಗಳನ್ನು ಕಡಿಮೆಗೊಳಿಸಬಹುದು ಮತ್ತು ಪದೇಪದೇ ಉದ್ಭವಿಸುವ ಯಾವುದಾದರೊಂದು ರೋಗವನ್ನು ಹತೋಟಿಯಲ್ಲಿಡಬಹುದು. ಈ ಪದ್ಧತಿಯನ್ನು ಇತರ ಯಾವುದಾದರೊಂದು ಉಪಚಾರ ಪದ್ಧತಿಗೆ ಸಹಾಯಕವೆಂದು ಉಪಯೋಗಿಸಿ ಪ್ರಕೃತಿಯಲ್ಲಿ ಬೇಗನೇ ಸುಧಾರಣೆ ಮಾಡಿಕೊಳ್ಳಬಹುದು. ಈ ಪದ್ಧತಿಯಿಂದ ಶರೀರದ ಅವಯವಗಳ ಮತ್ತು ತಂತ್ರವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು. ಅಲೋಪಥಿಕ್ ಔಷಧಿಗಳ ಸೇವನೆಯಿಂದಾಗುವ ದುಷ್ಪರಿಣಾಮಗಳಂತೆ ಈ ಉಪಾಯದಿಂದ ಯಾವುದೇ ರೀತಿಯ ದುಷ್ಪರಿಣಾಮವಾಗುವುದಿಲ್ಲ. ಈ ಉಪಾಯ ಪದ್ಧತಿಯಿಂದ ಪ್ರತ್ಯಕ್ಷದಲ್ಲಿ ಅರಿವಾಗುವ ಲಾಭಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಲಾಭವಾಗುತ್ತದೆ. ವೈದ್ಯರು ಬರುವವರೆಗೆ ಅಥವಾ ಆಸ್ಪತ್ರೆಯಲ್ಲಿ ದಾಖಲಿಸುವವರೆಗೆ ರೋಗಿಗಾಗುವ ತೊಂದರೆಗಳ ತೀವ್ರತೆಯನ್ನು ಕಡಿಮೆಗೊಳಿಸಬಹುದು. ಹೃದಯ ರೋಗ ಅಥವಾ ತೀವ್ರ ಅಸ್ತಮಾದ ತೊಂದರೆ ಯಾದಾಗ ಅಪಾಯಗಳನ್ನು ತಡೆಗಟ್ಟಲು ರೋಗಿಗೆ ಮುಂದಿನ ವೈದ್ಯಕೀಯ ಸಹಾಯ ಸಿಗುವವರೆಗೆ ಪ್ರಾಥಮಿಕ ಉಪಾಯವನ್ನು ಮಾಡಿ ಸಹಾಯ ಮಾಡಬಹುದು. ಈ ಉಪಾಯಪದ್ಧತಿಯ ಮೇಲಿರುವ ದೃಢವಿಶ್ವಾಸ, ನಮ್ಮ ಪ್ರಯತ್ನ ಹಾಗೂ ದೃಢ ಮನೋಬಲಗಳಿಂದ ರೋಗಮುಕ್ತರಾಗಬಹುದು.

ಲಾಭವಾಗುವುದರ ಹಂತಗಳು

ಅ. ಶಾರೀರಿಕ ವಿಕೃತಿಗಳು ಮುಗಿದರೆ, ವಿಕಾರಗಳು ನಾಶವಾಗುತ್ತವೆ.

ಆ. ಮಾನಸಿಕ ವಿಕಾರಗಳು ನಾಶವಾದರೆ, ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ.

ಇ. ಮಾನಸಿಕ ಆರೋಗ್ಯದಿಂದ ಒಳ್ಳೆಯ ವಿಚಾರಗಳು ನಿರ್ಮಾಣವಾಗುತ್ತವೆ.

ಈ. ಉತ್ತಮ ವಿಚಾರಗಳು ವಿಶ್ವ ಶಾಂತಿಯ ದೃಷ್ಟಿಯಿಂದ ಜನಮಾನಸದಲ್ಲಿ ವೈಚಾರಿಕ ಕ್ರಾಂತಿಯನ್ನು ತರುತ್ತವೆ.

ಉ. ವೈಚಾರಿಕ ಕ್ರಾಂತಿಯಿಂದಲೇ ಧರ್ಮಕ್ರಾಂತಿಯು ಉದಯಿಸಿ ಈಶ್ವರಿ ರಾಜ್ಯದ ಮುಹೂರ್ತ ನಿಶ್ಚಯಿಸುವುದು.

ಲಾಭವಾಗದಿರುವುದು : ಅನೇಕ ಅನುವಂಶಿಕ ರೋಗಗಳು, ಸ್ಕಿರೆsಫ್ರೆನಿಯಾದಂತಹ ಮಾನಸಿಕ ರೋಗಗಳು, ಶಸ್ತ್ರಚಿಕಿತ್ಸೆಯ ಅಗತ್ಯ ವಿರುವ ರೋಗಗಳು, ಅರ್ಬುದ ರೋಗ, ಅಸ್ಥಿಭಂಗ (ಫ್ರಾಕ್ಚರ್) ಮುಂತಾದವುಗಳಿಗೆ ಬಿಂದುಒತ್ತಡದಿಂದ ಹೆಚ್ಚು ಲಾಭವಾಗುವುದಿಲ್ಲ.

‘ಬಿಂದು ಒತ್ತಡ ಉಪಚಾರದ ಅರ್ಥ

ಅ. ಶರೀರದ ಮೇಲಿನ ವಿಶಿಷ್ಟ ಬಿಂದುಗಳ ಮೇಲೆ ಒತ್ತಡವನ್ನು ಹಾಕಿ, ಆಂತರಿಕ ಅವಯವಗಳನ್ನು ಕಾರ್ಯನಿರತಗೊಳಿಸಿ, ವ್ಯಕ್ತಿಯ ಆರೋಗ್ಯವನ್ನು ಸುಧಾರಿಸುವುದಕ್ಕೆ ‘ಬಿಂದುಒತ್ತಡ ಉಪಾಯ ಎನ್ನುತ್ತಾರೆ. ದೇಹದಲ್ಲಿನ ಆಯಾಯ ಭಾಗಗಳಿಗೆ ಸಂಬಂಧಿಸಿದ ಶಕ್ತಿ ಬಿಂದುಗಳ ಮೇಲೆ ಒತ್ತಡವನ್ನು ಹಾಕುವುದೆಂದರೆ ಬಿಂದುಒತ್ತಡ (ಆಕ್ಯುಪ್ರೆಶರ್) ಉಪಾಯ. ಬಿಂದುವು ಶಿವನಲಯ ಶಕ್ತಿಯ ಪ್ರತೀಕವಾಗಿದೆ. ದೇಹದಲ್ಲಿರುವ ಮತ್ತು ಆಯಾಯ ಅವಯವಗಳಿಗೆ ಸಂಬಂಧಿಸಿದ ಘನೀಕರಣವಾಗಿರುವ ಚೇತನದ ಶಕ್ತಿರೂಪಿ ಬಿಂದುವಿನ ಮೇಲೆ ಅವಶ್ಯಕ ಪ್ರಮಾಣದಲ್ಲಿ ಒತ್ತಡವನ್ನು ಹಾಕಿ ರೋಗಗಳನ್ನು ನಿವಾರಿಸುವುದನ್ನೇ ಬಿಂದುಒತ್ತಡ ಉಪಚಾರ ಎನ್ನುತ್ತಾರೆ. ಬಿಂದುಒತ್ತಡದ ಉಪಚಾರವೆಂದರೆ ಕೈಗಳಿಂದ ಸಗುಣ-ನಿರ್ಗುಣ ಸ್ತರದ, ಪಂಚತತ್ತ್ವಗಳ ಆಧಾರದಲ್ಲಿ ಮಾಡಿದ ಉಪಾಯ. ಇಲ್ಲಿ ದೇಹ ರೂಪಿ ಸಗುಣ ಮತ್ತು ಒತ್ತಡದ ಆಧ್ಯಾತ್ಮಿಕ ಅಡಿಪಾಯವನ್ನು ಉಪಯೋಗಿಸಿರುವುದರಿಂದ ಈ ಉಪಚಾರವು ಸಗುಣ-ನಿರ್ಗುಣ ಸ್ತರದ್ದಾಗಿದೆ ಎಂದು ಗೊತ್ತಾಗುತ್ತದೆ.

ಬಿಂದುಒತ್ತಡ : ಕಾಲಾನುಸಾರ ಆವಶ್ಯಕ

ಕಲಿಯುಗದಲ್ಲಿ ರಜ-ತಮಾತ್ಮಕ ಪ್ರಭಾವದ ನಾಶವು ನಿಶ್ಚಿತವಾಗಿರುವುದರಿಂದ ಈಗ ಎಲ್ಲ ಜನರಿಗೂ ಆಪತ್ಕಾಲವಿದೆ. ಈ ಆಪತ್ಕಾಲವು ಎಷ್ಟು ಭಯಾನಕವಾಗಿದೆಯೋ, ಅಷ್ಟೇ ದುಃಖದಾಯಕವಾಗಿದೆ. ಅನೇಕ ದಾರ್ಶನಿಕ ಸಂತರ ಹೇಳಿಕೆಗನುಸಾರ ಯಾವಾಗ ಜಗತ್ತಿನಲ್ಲಿ ಭೀಕರ ಸಂಕಟಗಳು ಪ್ರಾರಂಭವಾಗುತ್ತವೆಯೋ, ಆಗ ಉಂಟಾಗುವ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆಪತ್ತುಗಳೊಂದಿಗೆ ಸ್ವಯಂಪೂರ್ಣರಾಗಿ ಹೋರಾಡುವುದು ಅವಶ್ಯಕವಾಗಿದೆ; ಏಕೆಂದರೆ ಈ ಕಾಲದಲ್ಲಿ ಮಹಾ ಭಯಂಕರ ವಿನಾಶವು ಪ್ರಾರಂಭವಾಗಲಿರುವುದರಿಂದ ಸಾಮಾನ್ಯ ಜೀವಗಳಿಗೆ ಯಾವುದೇ ರೀತಿಯ ಸಹಾಯವು ಸಿಗಲಾರದು. ಇಂತಹ ಆಪತ್ಕಾಲದಲ್ಲಿ ಬಿಂದುಒತ್ತಡ ಪದ್ಧತಿಯು ಅತ್ಯಂತ ಗುಣಕಾರಿ ಮತ್ತು ಅತ್ಯಂತ ಅಗತ್ಯವಾಗಲಿದೆ. ಬಿಂದು ಒತ್ತಡ ಪದ್ಧತಿಯು ಮುಂಬರುವ ಕಾಲದ ಅವಶ್ಯಕತೆಯಾಗಿದೆ. ಇದನ್ನು ಅರಿತುಕೊಂಡು ಎಲ್ಲರೂ ಸ್ವಯಂಪೂರ್ಣರಾಗಲು ಈ ಉಪಾಯಪದ್ಧತಿಯ ಅಧ್ಯಯನ ಮಾಡಿ ಬಳಸಬೇಕು.

Kannada Weekly | Offline reading | PDF