‘ಈಶ್ವರಿ ರಾಜ್ಯ’ದ ನಿರ್ಮಿತಿಯಲ್ಲಿನ ಅನಿವಾರ್ಯ ಪ್ರಕ್ರಿಯೆ : ಸೂಕ್ಷ್ಮದಲ್ಲಿನ ‘ದೇವಾಸುರ ಯುದ್ಧ’ !

ವಾತಾವರಣದಲ್ಲಿ ಒಳ್ಳೆಯ ಮತ್ತು ಕೆಟ್ಟ ಈ ಎರಡೂ ರೀತಿಯ ಶಕ್ತಿಗಳು ಕಾರ್ಯನಿರತವಿರುತ್ತವೆ. ಯಾವುದೇ ಶುಭಕಾರ್ಯ ಮಾಡುವಾಗ ಈ ಒಳ್ಳೆಯ ಮತ್ತು ಕೆಟ್ಟ ಹೀಗೆ ಎರಡೂ ಶಕ್ತಿಗಳ ಸಂಘರ್ಷವಾಗುತ್ತಿರುತ್ತದೆ. ಒಂದು ಚಿಕ್ಕ ಕಾರ್ಯಕ್ಕೂ ಕೆಟ್ಟ ಶಕ್ತಿಗಳು ವಿರೋಧಿಸುತ್ತಿರುವಾಗ ಧರ್ಮಕ್ಕೆ ಬಂದಂತಹ ಸಂಕಟವನ್ನು ದೂರ ಮಾಡುವುದು, ರಾಷ್ಟ್ರದಲ್ಲಿನ ಅನಾಚಾರ ನಾಶ ಮಾಡುವುದು ಇವುಗಳಂತಹ ದೊಡ್ಡ ಸಮಷ್ಟಿ ಕಾರ್ಯಕ್ಕೂ ಈ ನಕಾರಾತ್ಮಕ ಶಕ್ತಿಗಳಿಂದ ದೊಡ್ಡ ಪ್ರಮಾಣದಲ್ಲಿ ವಿರೋಧವಾಗುತ್ತಿರುತ್ತದೆ. ಸೂಕ್ಷವನ್ನು ತಿಳಿಯುವ, ಸಂತರು ಮುಂತಾದವರಿಗೆ ಈ ವಿರೋಧದ ಅರಿವಾಗುತ್ತದೆ. ಅವರು ಈ ಕೆಟ್ಟ ಶಕ್ತಿಗಳೊಂದಿಗೇ ಪ್ರಾಧಾನ್ಯತೆಯಿಂದ ಹೋರಾಡುತ್ತಾರೆ. ‘ಈಶ್ವರಿ ರಾಜ್ಯ’ದ ಸ್ಥಾಪನೆಯ ಸಂಕಲ್ಪವನ್ನು ಮಾಡುವ ಪರಾತ್ಪರ ಗುರು ಡಾ. ಆಠವಲೆಯವರಿಗೂ ಈ ವಿರೋಧವನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸ ಬೇಕಾಗುತ್ತಿದೆ. ಸಾಮಾನ್ಯ ವ್ಯಕ್ತಿಗೆ ಬಾಹ್ಯ ವಿಷಯಗಳು ಕಾಣಿಸುತ್ತವೆ. ಪ್ರತ್ಯಕ್ಷದಲ್ಲಿ ಸ್ಥೂಲದಲ್ಲಿ ಕಾಣಿಸುವ ವಿಶ್ವವು ಶೇ. ೧ ರಷ್ಟೇ ಇರುತ್ತದೆ. ಶೇ. ೯೯ ರಷ್ಟು ವಿಶ್ವ ಸೂಕ್ಷ್ಮದ್ದಿದೆ. ಇಂತಹ ಸೂಕ್ಷ್ಮ ಜಗತ್ತಿನ ಬಗ್ಗೆ ಅರಿತುಕೊಂಡು ಆ ಮಟ್ಟದಲ್ಲಿ ಧರ್ಮಪ್ರಸಾರ, ರಾಷ್ಟ್ರಜಾಗೃತಿ ಮತ್ತು ಆದರ್ಶ ರಾಷ್ಟ್ರದ ನಿರ್ಮಿತಿ ಇವುಗಳಿಗಾಗುವ ವಿರೋಧವನ್ನು ಖಂಡಿಸುವುದು, ಇದು ಸಾಮಾನ್ಯ ವ್ಯಕ್ತಿಯ ಕಲ್ಪನೆಯ ಆಚೆಗಿನದ್ದಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸದ್ಗುರು, ಸಂತರು ಮತ್ತು ಸಾಧಕರು ಸಾಧನೆಯ ಮಾಧ್ಯಮದಿಂದ ಸೂಕ್ಷ್ಮದ ಯುದ್ಧವನ್ನು ಹೋರಾಡುತ್ತಿದ್ದಾರೆ. ಈ ಸೂಕ್ಷ್ಮದಲ್ಲಿನ ಕಾರ್ಯವೇ ಪರಾತ್ಪರ ಗುರು ಡಾ. ಆಠವಲೆಯವರ ಪ್ರಧಾನ ಕಾರ್ಯವಾಗಿದೆ. ಅದೆಲ್ಲವನ್ನು ಶಬ್ದಗಳಲ್ಲಿ ಮಂಡಿಸುವುದು ಅತ್ಯಂತ ಕಠಿಣವಿದೆ; ಆದರೆ ಈ ವಿಶ್ವದ ಬಗ್ಗೆ ಸ್ವಲ್ಪವಾದರೂ ಕಲ್ಪನೆ ಬರಬೇಕೆಂದು ಇಲ್ಲಿ ಅಂಶಾತ್ಮಕ ಬರಹವನ್ನು ಪ್ರಕಟಿಸುತ್ತಿದ್ದೇವೆ.

ಲೇಖಕರು : ಪರಾತ್ಪರ ಗುರು ಡಾ. ಆಠವಲೆ

ಜೂನ್ ೨೦೧೩ ರಲ್ಲಿ ಮಾಡಿದ ‘ದಶಪ್ರಣವೀ ಗಾಯತ್ರಿ ಹವನ’ದ ವೇಳೆ ಅನೇಕ ಒಳ್ಳೆಯ ಮತ್ತು ತೊಂದರೆದಾಯಕ ‘ಆರ್ಬ್ಸ್ ಛಾಯಾಚಿತ್ರದಲ್ಲಿ ಕಾಣಿಸಿತು

೧. ದೇವಾಸುರ ಯುದ್ಧವೆಂದರೇನು ?

ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಯಜ್ಞಯಾಗಾದಿ ವಿಧಿಗಳನ್ನು ಮಾಡುತ್ತಿದ್ದರು. ಆಗ ರಾಕ್ಷಸರು ವಿಘ್ನ ತರುತ್ತಿದ್ದರು, ಋಷಿಮುನಿಗಳನ್ನು ಕೊಲ್ಲುತ್ತಿದ್ದರು, ಆಕಳುಗಳನ್ನು ಕೊಂದು ತಿನ್ನುತ್ತಿದ್ದರು, ಈ ಇತಿಹಾಸವು ನಮಗೆ ತಿಳಿದಿದೆ. ಅಸುರರು ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ದೇವತೆಗಳಿಗೆ ಹಾಗೂ ಪ್ರಭು ಶ್ರೀರಾಮ ಮತ್ತು ಭಗವಾನ ಶ್ರೀಕೃಷ್ಣ ಈ ಸಾಕ್ಷಾತ್ ಅವತಾರಗಳಿಗೂ ತೊಂದರೆ ನೀಡಿದರು ಮತ್ತು ದೇವತೆ ಹಾಗೂ ಅವತಾರಗಳು ಅಸುರರೊಂದಿಗೆ ಯುದ್ಧ ಮಾಡಿ ಧರ್ಮ ವಿಜಯ ಪ್ರಾಪ್ತಮಾಡಿಕೊಂಡರು, ಇದು ನಮಗೆ ತಿಳಿದಿದೆ. ಇಲ್ಲಿಯವರೆಗಿನ ದೇವಾಸುರರ ಯುದ್ಧಗಳಲ್ಲಿ ಕೊನೆಗೆ ದೇವತೆ, ಅವತಾರ ಮತ್ತು ದೇವತೆಗಳ ಪಕ್ಷದಲ್ಲಿರುವವರ ಜಯವಾಗಿದೆ, ಇದು ಇತಿಹಾಸವಾಗಿದೆ. ಸಪ್ತಲೋಕಗಳಲ್ಲಿನ ದೈವೀ ಅಥವಾ ಒಳ್ಳೆಯ ಮತ್ತು ಸಪ್ತ ಪಾತಾಳಗಳಲ್ಲಿನ ಅಸುರಿ ಅಥವಾ ಕೆಟ್ಟ ಶಕ್ತಿ ಇವುಗಳ ಮಧ್ಯ ನಡೆಯುತ್ತಿರುವ ಈ ಯುದ್ಧದ ಸ್ಥೂಲದ ಪ್ರಕಟೀಕರಣವು ಭೂಲೋಕದಲ್ಲಿಯೂ ಕಂಡು ಬರುತ್ತದೆ.

 

೨. ಕಲಿಯುಗದಲ್ಲಿನ ದೇವಾಸುರ ಯುದ್ಧ !

ಪ್ರತಿಯೊಂದು ಯುಗದಲ್ಲಿ ದೇವಾಸುರ ಯುದ್ಧವು ನಿರಂತರವಾಗಿ ನಡೆಯುತ್ತಿರುತ್ತದೆ. ಕಲಿಯುಗದಲ್ಲಿಯೂ ಅದು ನಡೆಯುತ್ತಿದೆ. ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಮಹರ್ಷಿ ಅರವಿಂದರು ಸೂಕ್ಷ್ಮದಲ್ಲಿನ ಯುದ್ಧ ಮಾಡಿ ಭಾರತದ ವಾಯುವ್ಯ ದಿಕ್ಕಿನಿಂದ ಬರುವ ಅಸುರಿ ಶಕ್ತಿಗಳ ನಿರ್ಮೂಲನೆ ಮಾಡಿದ್ದರು. ಈ ಬಗ್ಗೆ ಅವರ ಚರಿತ್ರೆಯಲ್ಲಿಯೂ ಉಲ್ಲೇಖವಿದೆ. ಇಂದಿಗೂ ಭಾರತದಲ್ಲಿನ ಅನೇಕ ಜ್ಞಾತ-ಅಜ್ಞಾತ ಸಂತರು ಹಾಗೂ ಸನಾತನದ ಸಂತರು ದೇವತೆಗಳ ಪಕ್ಷದಲ್ಲಿ ಹೋರಾಡುತ್ತಿದ್ದಾರೆ. ಬ್ರಾಹ್ಮತೇಜ ಅಂದರೆ ಸಾಧನೆಯ ಬಲವಿರುವವರೇ ಸೂಕ್ಷ್ಮ ಯುದ್ಧವನ್ನು ಹೋರಾಡಬಹುದು. ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ಇವರು ದೆಹಲಿಯ ಒಂದು ಸಭೆಯಲ್ಲಿ, “ಪ್ರತಿಯೊಂದು ಯುಗದಲ್ಲಿ ದೇವಾಸುರ ಯುದ್ಧವಾಗುತ್ತಿರುತ್ತದೆ. ಈ ಯುಗದಲ್ಲಿ ‘ಸನಾತನ ಸಂಸ್ಥೆ’ಯು ಈ ಯುದ್ಧವನ್ನು ಮಾಡುತ್ತಿದೆ !”, ಎಂದು ಹೇಳಿದ್ದರು.

ಮಹಾಮೃತ್ಯುಯೋಗದ ನಿವಾರಣೆಗಾಗಿ ಪರಾತ್ಪರ ಗುರು ಡಾಕ್ಟರರಿಗೆ ಯಂತ್ರ ನೀಡುತ್ತಿರುವ ಯೋಗತಜ್ಞ ದಾದಾಜಿ ವೈಶಂಪಾಯನ (೨೦೧೧)

೩. ಸನಾತನದ ಸಾಧಕರಿಗಾಗುವ ಕೆಟ್ಟ ಶಕ್ತಿಗಳ ತೊಂದರೆ ಮತ್ತು ಅದರ ಕಾರಣಗಳು !

‘ಸನಾತನ ಸಂಸ್ಥೆ’ಯ ಹೆಚ್ಚಿನ ಸಾಧಕರಿಗೆ ಕಳೆದ ೧೨ ವರ್ಷಗಳಿಂದ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಈ ತೊಂದರೆ ಮುಖ್ಯವಾಗಿ ಸಮಷ್ಟಿ ಸಾಧನೆ, ಅಂದರೆ ಧರ್ಮಪ್ರಸಾರ ಮಾಡುವ ಸಾಧಕರಿಗೆ ಆಗುತ್ತಿದೆ. ಹೀಗಿರುವಾಗಲೂ ತೊಂದರೆಯಾಗುತ್ತಿರುವವರ ಪೈಕಿ ಕೆಲವು ಜನರು ಸಂತಪದವಿಗೂ ತಲುಪಿದ್ದಾರೆ. ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ಸನಾತನದ ಸಾಧಕರಿಗೆ ಏಕೆ ತೊಂದರೆ ಕೊಡುತ್ತವೆ, ಎಂದು ಕೆಲವರಿಗೆ ಪ್ರಶ್ನೆ ಮೂಡುತ್ತದೆ. ಪೃಥ್ವಿಯ ಮೇಲಿನ ಸಾತ್ತ್ವಿಕತೆಯನ್ನೇ ನಾಶ ಮಾಡುವುದು ಮತ್ತು ಪಿಡುಗುಗಳ ಮಾಧ್ಯಮದಿಂದ ಭೂಲೋಕದಲ್ಲಿ ಅಸುರಿ ರಾಜ್ಯದ ಸ್ಥಾಪನೆ ಮಾಡುವುದು, ಇದು ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ಧ್ಯೇಯವಾಗಿದೆ ಮತ್ತು ಅದಕ್ಕಾಗಿ ಅವು ಪ್ರಯತ್ನಿಸುತ್ತಿರುತ್ತವೆ. ತದ್ವಿರುದ್ಧ ಸನಾತನದ ಸಾಧಕರು ಸಮಷ್ಟಿ ಸಾಧನೆಯೆಂದು ಸಮಾಜಕ್ಕೆ ಸಾಧನೆ ಮಾಡಲು ಉದ್ಯುಕ್ತಗೊಳಿಸಿ ಪೃಥ್ವಿಯ ಮೇಲಿನ ಸಾತ್ತ್ವಿಕತೆಯನ್ನು ಹೆಚ್ಚಿಸಲು ಮತ್ತು ಭೂಲೋಕದಲ್ಲಿ ‘ಹಿಂದೂ ರಾಷ್ಟ್ರ’ ಅಂದರೆ ‘ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತವಾಗಿರುವ ಸಾತ್ತ್ವಿಕ ಜನರ ರಾಷ್ಟ್ರ !’ ಸ್ಥಾಪನೆಗಾಗಿ ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ‘ಅಸುರರ ರಾಜ್ಯ’ ಸ್ಥಾಪನೆಗಾಗಿ ಪ್ರಯತ್ನಿಸುತ್ತಿರುವ ಕೆಟ್ಟ ಶಕ್ತಿಗಳ ಪ್ರಯತ್ನಗಳಿಗೆ ಅಡಚಣೆಯಾಗುತ್ತಿದೆಯೆಂದು ಅವು ಸಮಷ್ಟಿ ಸಾಧನೆ ಮಾಡುವ ಸನಾತನದ ಸಾಧಕರ ಕಾರ್ಯದಲ್ಲಿ ಮತ್ತು ಸೇವೆಯಲ್ಲಿ ಅನೇಕ ವಿಘ್ನಗಳನ್ನು ತರುತ್ತವೆ ಹಾಗೂ ಸಾಧಕರ ಶರೀರ, ಬಟ್ಟೆ, ಮನಸ್ಸು ಹಾಗೂ ಸಾಧಕರ ವಾಸ್ತುಗಳಲ್ಲಿನ ದೇವತೆಗಳ ಚಿತ್ರಗಳು, ವಸ್ತು ಮುಂತಾದವುಗಳ ಮೇಲೆ ಸೂಕ್ಷ್ಮದಿಂದ ಆಕ್ರಮಣ ಮಾಡುತ್ತವೆ.

೩ ಅ. ದೇವಾಸುರ ಯುದ್ಧದ ದೃಶ್ಯ ಸ್ವರೂಪ !

೩ ಅ ೧. ದೇವಾಸುರ ಯುದ್ಧದಿಂದಾಗಿ ಸಾಧಕರ ಮೇಲಾಗುವ ಪರಿಣಾಮ ! : ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳು ಸನಾತನದ ಸಾಧಕರ ಮೇಲೆ ಸೂಕ್ಷ್ಮದಿಂದ ಆಕ್ರಮಣ ಮಾಡುತ್ತಿರುವುದು ಸ್ಥೂಲದಲ್ಲಿ ಕಂಡು ಬರುತ್ತದೆ. ಅದರ ಕೆಲವು ಉದಾಹರಣೆಗಳನ್ನು ಹೇಳುತ್ತೇನೆ.

ಅ. ಸಾಧಕರ ಪ್ರಾಣಶಕ್ತಿ ಕಡಿಮೆಯಾಗುವುದು, ಶಾರೀರಿಕ ಕಾರಣವಿಲ್ಲದೇ ರೋಗಗಳಾಗುವುದು, ಮಾನಸಿಕ ತೊಂದರೆಯಾಗುವುದು

ಆ. ದೇವರ ಮತ್ತು ಸಂತರ ಚಿತ್ರಗಳ ಮೇಲೆ ಕಲೆ ಬೀಳುವುದು, ಅವು ವಿದ್ರೂಪಗೊಳ್ಳುವುದು, ಪರಚಿದ ಗುರುತು ಮೂಡುವುದು, ಸುಟ್ಟು ಹೋಗುವುದು

ಇ. ಸಾಧಕರು ಉಪಯೋಗಿಸುವ ವಸ್ತುಗಳು ತನ್ನಷ್ಟಕ್ಕೆ ತುಂಡಾಗುವುದು, ಅವುಗಳ ಮೇಲೆ ಪರಚುವಿಕೆ ಆಗುವುದು, ತೂತು ಬೀಳುವುದು

ಈ. ಹಾಸುಗಲ್ಲು, ಗೋಡೆ ಮುಂತಾದವುಗಳ ಮೇಲೆ ರಕ್ತದ ಕಲೆ, ಪರಚಿದ ಗುರುತು, ಅಂಗೈಗುರುತು, ಬುರುಡೆಯ ಆಕಾರ ಇತ್ಯಾದಿ ಮೂಡುವುದು

ಉ. ಬಟ್ಟೆಗಳ ಮೇಲೆ ರಕ್ತದ ಅಥವಾ ಕಪ್ಪು ಕಲೆ ಮೂಡುವುದು, ಅವು ತನ್ನಷ್ಟಕ್ಕೆ ಸುಟ್ಟು ಹೋಗುವುದು ಅಥವಾ ಹರಿಯುವುದು, ಅವುಗಳ ಬಣ್ಣ ಬದಲಾಗುವುದು

ಊ. ಸಾಧಕರ ಪಾದಗಳ ಮೇಲೆ ಕಪ್ಪು ಕಲೆ ಬೀಳುವುದು, ಶರೀರದ ಮೇಲೆ ಹುಣ್ಣುಗಳಾಗುವುದು ವಿವಿಧ ಮಾಧ್ಯಮಗಳಿಂದ ಸಾಧಕರ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣಗಳು ಆಗುತ್ತಿರುವುದನ್ನು ದೇಶ-ವಿದೇಶಗಳಲ್ಲಿನ ಅನೇಕ ಸಾಧಕರು ಅನುಭವಿಸುತ್ತಿದ್ದಾರೆ.

೩ ಅ ೨. ದೇವಾಸುರ ಯುದ್ಧದ ಪಂಚಮಹಾಭೂತಗಳ ಮೇಲಾಗುವ ಪರಿಣಾಮ ! : ಪಂಚಮಹಾಭೂತಗಳ ಮೇಲೆಯೂ ದೇವಾಸುರ ಯುದ್ಧದಿಂದಾಗುವ ಪರಿಣಾಮ ದೃಶ್ಯರೂಪದಲ್ಲಿ ಅನುಭವಿಸಬಹುದು. ಇದರ ಉದಾಹರಣೆಗಳು ಮುಂದಿನಂತಿವೆ –

ಅ. ಪೃಥ್ವಿತತ್ತ್ವ : ಭೂಕಂಪ, ಯುದ್ಧ

ಆ. ಆಪತತ್ತ್ವ : ನೆರೆ, ಹಿಮ ಕರುಗುವುದು

ಇ. ತೇಜತತ್ತ್ವ : ತೀವ್ರ ಬಿಸಿಲು, ಜ್ವಾಲಾಮುಖಿ ಜಾಗೃತವಾಗುವುದು

ಈ. ವಾಯುತತ್ತ್ವ : ಭೀಕರ ಬಿರುಗಾಳಿ

ಉ. ಆಕಾಶತತ್ತ್ವ : ಅತ್ಯಂತ ಕರ್ಣಕರ್ಕಶ ಮತ್ತು ತೊಂದರೆದಾಯಕ ನಾದವು ಉತ್ಪನ್ನವಾಗುವುದು

೩ ಆ. ಧರ್ಮಸಂಸ್ಥಾಪನೆಯ ಕಾರ್ಯ ಮಾಡುವ ಪ್ರತಿಯೊಬ್ಬರಿಗೂ ಅಸುರಿ ಶಕ್ತಿಗಳ ತೊಂದರೆಯಾಗುತ್ತದೆ !

ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯವನ್ನು ಮಾಡುವವರ ಮೇಲೆ ಸೂಕ್ಷ್ಮದಿಂದ ಆಕ್ರಮಣಗಳಾಗುವುದು ಸಹಜವಾಗಿದೆ. ಸೂಕ್ಷ್ಮದಲ್ಲಿನ ಯುದ್ಧದಿಂದಾಗಿ ಭಾಷಣ ಮಾಡುವಾಗ ತೋಚದಿರುವುದು, ಬಹಳ ನಿದ್ದೆ ಬರುವುದು, ನಿರಾಶೆಯಾಗುವುದು, ಅಯೋಗ್ಯ ಕೃತಿ ಮಾಡಬೇಕೆಂದೆನಿಸುವುದು, ಕಾರ್ಯದಲ್ಲಿ ಅಡಚಣೆ ಬರುವುದು, ಯಶಸ್ಸು ಸಿಗದಿರುವುದು ಮುಂತಾದ ಅನುಭವಗಳು ಬರುತ್ತವೆ. ಇಂತಹ ಅನುಭವ ತಮಗೂ ಬರುತ್ತಿರಬಹುದು. ಸಾಧನೆ ಮಾಡುವವರಿಗೆ ತಮ್ಮ ಮೇಲಿನ ಸೂಕ್ಷ್ಮದ ಆಕ್ರಮಣಗಳ ತೀವ್ರತೆ ತಿಳಿಯುತ್ತದೆ. ಸಾಧನೆ ಮಾಡದವರಿಗೆ ಆ ವಿಷಯದ ಗಾಂಭೀರ್ಯತೆ ತಿಳಿಯುವುದಿಲ್ಲ.

೪. ದೇವಾಸುರ ಯುದ್ಧದಲ್ಲಿ ಸಂತರ ಸಹಾಯ

ಸ್ಥೂಲದಲ್ಲಿನ ಕಾರ್ಯ ಕಂಡು ಬರುತ್ತದೆ; ಆದರೆ ಸೂಕ್ಷ್ಮದಲ್ಲಿ ನಡೆದ ಕಾರ್ಯದ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಅಸುರಿ ಶಕ್ತಿಗಳ ಹೋರಾಟದಲ್ಲಿ ಸಂತರು ಸೂಕ್ಷ್ಮದಿಂದ ಮಾಡುತ್ತಿರುವ ಕಾರ್ಯದ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ; ಆದರೆ ಸನಾತನದ ಸಾಧಕರು ಸಾಧನೆ ಮಾಡುತ್ತಿರುವುದರಿಂದ ದೇವಾಸುರ ಯುದ್ಧದಲ್ಲಿ ಸಂತರು ಮಾಡುತ್ತಿರುವ ಸಹಾಯದ ಬಗ್ಗೆ ಅವರಿಗೆ ಅರಿವಿದೆ.

ಅ. ಸನಾತನದ ಸಾಧಕರಿಗೆ ಮತ್ತು ಹಿಂದೂ ಧರ್ಮಪ್ರಸಾರದ ಕಾರ್ಯಕ್ಕೆ ಆಗುವ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾಗಬೇಕೆಂದು, ಮಹಾರಾಷ್ಟ್ರದ ನಗರ ಜಿಲ್ಲೆಯ ಸಂತ ಗುರುದೇವ ಡಾ. ಕಾಟೇ ಸ್ವಾಮೀಜಿ ಇವರು ದೇಹತ್ಯಜಿಸುವ ಮೊದಲು ಜಪ, ಹವನ, ಸಪ್ತಶತಿಪಾಠ ಮುಂತಾದವುಗಳನ್ನು ಮಾಡಿದ್ದಾರೆ.

ಆ. ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಲ್ಯಾಣ ಎಂಬಲ್ಲಿನ ಶ್ರೇಷ್ಠ ಸಂತ ಮತ್ತು ‘ ಆನಂದ ಹಿಮಾಲಯ’ ಸಂಪ್ರದಾಯದ ಸಂಸ್ಥಾಪಕರಾದ ಯೋಗತಜ್ಞ ದಾದಾಜಿ ವೈಶಂಪಾಯನ ಇವರು ನನ್ನ ಮೃತ್ಯುಯೋಗವನ್ನು ತಪ್ಪಿಸಬೇಕು, ಅಸುರಿ ಶಕ್ತಿಗಳಿಂದ ಸನಾತನದ ಸಾಧಕರ ರಕ್ಷಣೆಯಾಗಬೇಕು ಮತ್ತು ‘ಸನಾತನ ಸಂಸ್ಥೆ’ಯ ಮೇಲೆ ನಿರ್ಬಂಧ ಬರಬಾರದು, ಎಂದು (ಅವರ ದೇಹತ್ಯಾಗದ ಮೊದಲು) ೧೦ ವರ್ಷಗಳ ಕಾಲ ಕಠಿಣ ಅನುಷ್ಠಾನಗಳನ್ನು ಮಾಡಿದ್ದಾರೆ.

ಈ. ಇಬ್ಬರೂ ಸಂತರು ಮಾಡಿದ ಅನುಷ್ಠಾನಗಳಿಂದಾಗಿಯೇ ನನ್ನ ಮಹಾಮೃತ್ಯುಯೋಗ ಮತ್ತು ಸನಾತನದ ಮೇಲಿನ ಅನ್ಯಾಯಕರ ನಿರ್ಬಂಧವು ಇಲ್ಲಿಯವರೆಗೆ ತಪ್ಪಿದೆ.

ಇ. ಸೋಲಾಪುರ ಜಿಲ್ಲೆಯಲ್ಲಿನ ಕಾಸಾರವಾಡಿಯಲ್ಲಿನ ‘ಶ್ರೀ ಯೋಗಿರಾಜ ವೇದ ವಿಜ್ಞಾನ ಆಶ್ರಮ’ದ ಸಂಸ್ಥಾಪಕರಾದ ಗವಾಮಯಿ ಸತ್ರಿ ಪ.ಪೂ. ನಾರಾಯಣ (ನಾನಾ) ಕಾಳೆಗುರೂಜಿ (ವಯಸ್ಸು ೮೦ ವರ್ಷಗಳು) ಇವರು ಪ.ಪೂ. ಡಾಕ್ಟರರ ಮಹಾಮೃತ್ಯು ಯೋಗ ತಪ್ಪಬೇಕು ಮತ್ತು ‘ಹಿಂದೂ ರಾಷ್ಟ್ರ’ದ ಸ್ಥಾಪನೆಯಾಗಬೇಕು, ಎಂದು ಸೋಮಯಾಗ ಮತ್ತು ಆಯುಷ್ಕಾ ಮೇಷ್ಟಿ ಯಜ್ಞವನ್ನು ಮಾಡಿದರು ಮತ್ತು ಅವರು ಒಂದೂವರೆ ವರ್ಷ ನಡೆಯುವ ಅಶ್ವಮೇಧ ಯಜ್ಞ ಮಾಡಿದರು.

ಈ. ಸಾಧಕರ ರಕ್ಷಣೆಗಾಗಿ ಪುಣೆಯ ಪ.ಪೂ. ಗಣೇಶನಾಥಜಿ ಮಹಾರಾಜರು (ಪ.ಪೂ. ಜೋಶಿ) ಇವರ ಮಾಧ್ಯಮದಿಂದ ಅವರ ಹಿಮಾಲಯವಾಸಿ ಗುರು ಮಹಂತ ಯೋಗಿ ಬೃಹಸ್ಪತಿನಾಥಜಿ ಮಹಾರಾಜರು ಸನಾತನದ ಆಶ್ರಮದಲ್ಲಿ ೩೧ ದಿನ ‘ದಶಪ್ರಣವೀ ಗಾಯತ್ರಿ ಹವನ’ ಮಾಡಲು ಹೇಳಿದರು. ಇದು ಈಗ ‘ಸನಾತನ ಸಂಸ್ಥೆ’ಗೆ ಹಿಮಾಲಯದಲ್ಲಿನ ಸಿದ್ಧ ಯೋಗಿಗಳಿಂದಲೂ ಪ್ರತ್ಯಕ್ಷ ಆಶೀರ್ವಾದ ದೊರಕಲು ಪ್ರಾರಂಭವಾದುದರ ದ್ಯೋತಕವಾಗಿದೆ. ಸನಾತನದ ಆಶ್ರಮದಲ್ಲಿ ಜೂನ್ ೨೦೧೩ ರಲ್ಲಿ ನಡೆದ ಈ ಹವನದ ಸಮಯದಲ್ಲಿಯೂ ‘ದೇವಾಸುರ ಯುದ್ಧ ನಡೆದಿತ್ತು’, ಎಂಬ ಅನುಭವವನ್ನು ನಾವು ಪಡೆದೆವು. ಈ ಗಾಯತ್ರಿ ಹವನದ ಸಮಯದಲ್ಲಿ ಸೂಕ್ಷ್ಮದಲ್ಲಿನ ಒಳ್ಳೆಯ ಮತ್ತು ಕೆಟ್ಟ ಲಿಂಗದೇಹಗಳು ದೃಶ್ಯರೂಪದಲ್ಲಿ ಪ್ರಕಟವಾದವು.

ಈ ಛಾಯಾಚಿತ್ರದಲ್ಲಿ ಯಜ್ಞದ ಪೌರೋಹಿತ್ಯವನ್ನು ಮಾಡುವ ಪುರೋಹಿತರ ತಲೆಯ ಮೇಲೆ ಕಾಣುವ ಗೋಲಾಕಾರ ಲಿಂಗದೇಹಗಳು ಒಳ್ಳೆಯದಾಗಿವೆ ಮತ್ತು ಕೆಲವು ಲಿಂಗದೇಹಗಳು ತೊಂದರೆದಾಯಕವಾಗಿವೆ. ಕೆಲವು ಒಳ್ಳೆಯ ಲಿಂಗದೇಹಗಳ ಮಧ್ಯದಲ್ಲಿ  ಕಾಣಿಸುತ್ತಿದೆ.

ಹಿಂದಿನ ಕಾಲದಲ್ಲಿ ಋಷಿಮುನಿಗಳು ಯಜ್ಞಯಾಗ ಮಾಡುತ್ತಿರುವಾಗ ಒಳ್ಳೆಯ ಮತ್ತು ಕೆಟ್ಟ ಶಕ್ತಿ ಬರುತ್ತಿದ್ದವು. ಅದೇ ರೀತಿ ಈಗಲೂ ಯಜ್ಞದ ಸ್ಥಳದಲ್ಲಿ ಸೂಕ್ಷ್ಮದಿಂದ ಕೆಟ್ಟ ಮತ್ತು ಒಳ್ಳೆಯ ಶಕ್ತಿಗಳು ಬರುತ್ತವೆ. ಈ ಶಕ್ತಿಗಳ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ನಾವು ಮಾಡುತ್ತಿದ್ದೇವೆ.

೫. ಧರ್ಮಜಾಗೃತಿಯ ಕಾರ್ಯದಲ್ಲಿ ಸಂತರು ತಾವಾಗಿಯೇ ಸಹಾಯ ಮಾಡುತ್ತಾರೆ, ಇದರ ಬಗ್ಗೆ ಸನಾತನಕ್ಕೆ ಬಂದ ಅನುಭವ !

ಶ್ರೀ ಹಾಲಸಿದ್ಧನಾಥರ ಭವಿಷ್ಯವಾಣಿ ಹೇಳುವ ಪೂ. ಭಗವಾನ ಡೋಣೆ ಮಹಾರಾಜರೊಂದಿಗೆ ಪರಾತ್ಪರ ಗುರು ಡಾ. ಆಠವಲೆ (ವರ್ಷ ೨೦೧೨)

ನಾವು ಅರಿತುಕೊಳ್ಳುತ್ತಿರುವ ದೇವಾಸುರ ಯುದ್ಧದಲ್ಲಿ ಸಹಾಯ ಮಾಡುತ್ತಿರುವ ಸಂತರು ಎಲ್ಲ ಸಹಾಯವನ್ನು ತಾವಾಗಿಯೇ ಮಾಡಿದ್ದಾರೆ. ಈ ಎಲ್ಲ ಸಂತರು ಎಷ್ಟು ನಿರಪೇಕ್ಷ ಭಾವದಿಂದ ಕಾರ್ಯ ಮಾಡುತ್ತಿದ್ದಾರೆ ಎಂಬುದು ಕೆಲವು ಅಂಶಗಳಿಂದ ನಮಗೆ ತಿಳಿಯುವುದು.

ಅ. ಗುರುದೇವ ಡಾ. ಕಾಟೇಸ್ವಾಮೀಜಿ ಮತ್ತು ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು ಸನಾತನದ ಸಾಧಕರ ಪರಿಚಯವಾಗುವ ಮೊದಲಿನಿಂದಲೇ ಕೆಟ್ಟ ಶಕ್ತಿಗಳ ನಿವಾರಣೆಗಾಗಿ ಕಾರ್ಯ ಮಾಡುತ್ತಿದ್ದರು.

ಆ. ಓರ್ವ ಸಂತರು ಸನಾತನಕ್ಕೆ ಸಹಾಯ ಮಾಡಲು ನಿಯಮಿತವಾಗಿ ಯಜ್ಞ ಮತ್ತು ಇತರ ವಿಧಿಗಳನ್ನು ಮಾಡುತ್ತಾರೆ, ಆದರೆ ಅವರು, ‘ನಾನು ಮಾಡುವ ಸಹಾಯದ ಬಗ್ಗೆ ಎಲ್ಲಿಯೂ ಪ್ರಕಟಿಸಬಾರದು, ಎಂದಿದ್ದಾರೆ.

ಇ. ಕೆಟ್ಟ ಶಕ್ತಿಗಳ ನಿವಾರಣೆಗಾಗಿ ವಿಧಿ ಮಾಡಿದ ನಂತರ ವಿಧಿ ಮಾಡುವ ಸಂತರಿಗೂ ತೊಂದರೆಯಾಗುತ್ತದೆ, ಆದರೂ ಅವರು ನಿರಂತರವಾಗಿ ವಿಧಿ ಮಾಡುತ್ತಾರೆ.

ಈ. ಸಂತರ ದೃಷ್ಟಿಯಿಂದ ರಾಷ್ಟ್ರ ಮತ್ತು ಧರ್ಮ ಈ ವಿಷಯ ಕೂಡಾ ಮಾಯೆಯೇ ಆಗಿರುತ್ತದೆ, ಆದರೂ ಅವರು ಸನಾತನದ ಕಾರ್ಯಕ್ಕೆ ಸಹಾಯ ಮಾಡುತ್ತಿದ್ದಾರೆ.

ಉ. ಒಂದು ದೇವಸ್ಥಾನದ ಅರ್ಚಕರು ಪರಿಚಯವಿಲ್ಲದಿದ್ದರೂ ಓರ್ವ ಸಾಧಕಿಯಲ್ಲಿ ಪ.ಪೂ. ಡಾಕ್ಟರರ ಆರೋಗ್ಯದ ಬಗ್ಗೆ ಕೇಳಿದರು ಮತ್ತು ಅಲ್ಲಿನ ಮಣ್ಣನ್ನು ಪ.ಪೂ ಡಾಕ್ಟರರಿಗೆ ಹಚ್ಚಿಕೊಳ್ಳಲು ನೀಡಿದರು.

ಊ. ಹಿಮಾಲಯದಲ್ಲಿ ವಾಸ್ತವ್ಯವಿರುವ ಕಾನಫಾಟ್ಯಾ ಸಂಪ್ರದಾಯದ ಗುರುಗಳು ತಮ್ಮ ಶಿಷ್ಯರಿಗೆ ‘ಸನಾತನದ ಮತ್ತು ನಮ್ಮ ಕಾರ್ಯ ಒಂದೇ ಆಗಿದೆ ಎಂದು ಹೇಳಿದರು.

ಎ. ಕೆಲವು ವರ್ಷಗಳ ಹಿಂದೆ ಬೇರೆ ಬೇರೆ ನಗರಗಳಲ್ಲಿರುವ ಸನಾತನದ ಇಬ್ಬರು ಸಾಧಕರಲ್ಲಿ ನಾಥ ಸಂಪ್ರದಾಯದ ಇಬ್ಬರು ಬೇರೆಬೇರೆ ಸಾಧುಗಳು ಬಂದರು ಮತ್ತು ಅವರು, “ಮುಂಬರುವ ಆಪತ್ಕಾಲದಲ್ಲಿ ನಾಥ ಸಂಪ್ರದಾಯವು ನಿಮಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡುವುದು, ಎಂಬ ಸಂದೇಶವನ್ನು ನಮ್ಮ ಗುರುಗಳು ನಿಮಗೆ ನೀಡಿದ್ದಾರೆ, ಎಂದು ಹೇಳಿ ಆ ಸಾಧುಗಳು ಹೊರಟು ಹೋದರು. ೨೦೧೨ ರಲ್ಲಿ ಬೆಳಗಾವ ಜಿಲ್ಲೆಯಲ್ಲಿನ ಆಪ್ಪಾಚಿವಾಡಿಯ ಶ್ರೀ ದೇವ ಹಾಲಸಿದ್ಧನಾಥ ಇವರು ತಮ್ಮ ಭಕ್ತರಲ್ಲಿ ಪ್ರಕಟಗೊಂಡು ‘ಸನಾತನದ ಆಶ್ರಮದಲ್ಲಿ ನನ್ನ ವಿಶ್ರಾಂತಿಸ್ಥಾನವಿದೆ. ಅವರ ಕಾರ್ಯಕ್ಕೆ ನಮ್ಮ ಪೂರ್ಣ ಆಶೀರ್ವಾದವಿದೆ, ಎಂದು ಹೇಳಿದ್ದಾರೆ. ಈ ರೀತಿ ನಾಥ ಸಂಪ್ರದಾಯದ ಸಹಾಯಸಿಗುತ್ತಿದೆ.

          ಅನೇಕ ತೊಂದರೆಗಳನ್ನು ಸಹಿಸಿ, ಸ್ವಖರ್ಚಿನಿಂದ, ತಾವಾಗಿ ಮತ್ತು ನಿರಪೇಕ್ಷವಾಗಿ ಕಾರ್ಯವನ್ನು ಮಾಡುವ ಸಂತರ ಈ ಉದಾಹರಣೆಗಳಿಂದ ಸಂತರ ಶ್ರೇಷ್ಠತೆ ಗಮನಕ್ಕೆ ಬರುತ್ತದೆ. ದೇವಾಸುರ ಯುದ್ಧದಲ್ಲಿನ ಕೆಲವು ಗಮನಾರ್ಹ ಅಂಶಗಳ ಬಗ್ಗೆ ನಾನಿಲ್ಲಿ ಉಲ್ಲೇಖಿಸಿದೆ. ಈಗ ಕೆಲವರಿಗೆ, ‘ಸನಾತನ ಸಂಸ್ಥೆಯ ಸಾಧಕರಿಗೇ ಸಂತರ ಸಹಾಯ ಏಕೆ ಸಿಗುತ್ತಿದೆ ? ಎಂಬ ಪ್ರಶ್ನೆ ಬರಬಹುದು. ಇದರ ಕಾರಣವೆಂದರೆ ಸನಾತನದ ಸಾಧಕರು ತನು-ಮನ-ಧನದ ತ್ಯಾಗ ಮಾಡಿ ವ್ಯಷ್ಟಿ ಸಾಧನೆ ಮಾಡುತ್ತಾರೆ ಮತ್ತು ರಾಷ್ಟ್ರ ಹಾಗೂ ಧರ್ಮ ಇವುಗಳ ಕಾರ್ಯವನ್ನೂ ಧರ್ಮಸೇವೆಯೆಂದು, ಸಮಷ್ಟಿ ಸಾಧನೆಯೆಂದು ನಿರಪೇಕ್ಷಭಾವದಿಂದ ಮಾಡುತ್ತಾರೆ. ದೇವಾಸುರ ಯುದ್ಧದ ವಿಷಯವನ್ನು ಅರಿತ ನಂತರ ಸಾಧನೆಯ ಮಹತ್ವ ತಿಳಿಯಲು ಸಹಾಯವಾಗುವುದು.

          ಸೂಕ್ಷ್ಮದಲ್ಲಿನ ಯುದ್ಧದ ಕೆಲವು ವರ್ಷಗಳ ನಂತರ ಸ್ಥೂಲ ಅಂದರೆ ದೃಶ್ಯ ಪರಿಣಾಮ ಕಾಣಿಸುತ್ತದೆ. ಅಸುರಿ ಶಕ್ತಿಗಳ ವಿರುದ್ಧ ಸಂತರು ಸೂಕ್ಷ್ಮದಲ್ಲಿನ ಯುದ್ಧವನ್ನು ಗೆದ್ದರೆ, ಭಾರತದಲ್ಲಿನ ಕ್ಷಾತ್ರತೇಜವಾಗಿರುವ ಹಿಂದುತ್ವನಿಷ್ಠರು ಈ ಯುದ್ಧದಲ್ಲಿ ವಿಜಯ ಪ್ರಾಪ್ತ ಮಾಡಿಕೊಳ್ಳುವರು. ನಾವು ನಮ್ಮ ಧರ್ಮಕರ್ತವ್ಯವೆಂದು ಈ ಧರ್ಮಕ್ರಾಂತಿಯಲ್ಲಿ ಸಹಭಾಗಿಯಾಗಬೇಕಾಗಿದೆ; ಏಕೆಂದರೆ ಧರ್ಮಯುದ್ಧದಲ್ಲಿನ ವಿಜಯದ ನಂತರ ನಮ್ಮೆಲ್ಲರ ಆಧ್ಯಾತ್ಮಿಕ ಉದ್ಧಾರವಾಗುವುದು !

Kannada Weekly | Offline reading | PDF