ಕ್ಷೇತ್ರ ಮರುವಿಂಗಡಣೆ !

ಭಾಜಪ ಕಾಶ್ಮೀರದ ಕಲಂ ೩೭೦ ಹಾಗೂ ಕಲಂ ೩೫ ಅನ್ನು ರದ್ದು ಪಡಿಸುವ ಆಶ್ವಾಸನೆಯನ್ನು ಕಳೆದ ಅನೇಕ ವರ್ಷಗಳಿಂದ ನೀಡುತ್ತಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಭಾಜಪದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ ಶಾಹ ಇವರು ‘ರಾಜ್ಯ ಸಭೆಯಲ್ಲಿ ಬಹುಮತ ಸಿಕ್ಕಿದ ಮೇಲೆ ಎರಡೂ ಕಲಂಗಳನ್ನು ರದ್ದು ಪಡಿಸಲಾಗುವುದು, ಎಂದು ಆಶ್ವಾಸನೆ ನೀಡಿದ್ದರು. ಈಗ ಸ್ವತಃ ಅಮಿತ ಶಾಹ ಅವರು ದೇಶದ ಗೃಹಸಚಿವರಾಗಿದ್ದಾರೆ. ಆದ್ದರಿಂದ ಈ ಜವಾಬ್ದಾರಿಯು ಪ್ರಧಾನಮಂತ್ರಿಯವರ ಮೇಲಿರುವಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಜವಾಬ್ದಾರಿ ಇವರ ಮೇಲಿದೆ. ಆದ್ದರಿಂದ ಅವರು ಹುದ್ದೆಯನ್ನು ಸ್ವೀಕರಿಸಿದ ನಂತರ ಗೃಹ ಸಚಿವಾಲಯದ ವಿವಿಧ ಅಧಿಕಾರಿಗಳ ಜೊತೆ ಸಭೆಯ ಆಯೋಜನೆಯನ್ನು ಮಾಡಿದರು ಮತ್ತು ಅದರಲ್ಲಿ ಮುಖ್ಯವಾಗಿ ಕಾಶ್ಮೀರದ ಬಗ್ಗೆ ಚರ್ಚೆ ಮಾಡಿದರು. ‘ಈ ಚರ್ಚೆಯಲ್ಲಿ ಏನು ಮಾತನಾಡಿದ್ದಾರೆ, ಎಂಬುದು ಸರಕಾರದಿಂದ ಅಧಿಕೃತವಾಗಿ ಹೇಳದಿದ್ದರೂ ಮಾಧ್ಯಮದವರು ನೀಡಿದ ವರದಿಗನುಸಾರ ಕಾಶ್ಮೀರದಲ್ಲಿ ಕಳೆದ ೨ ದಶಕಗಳಿಂದ ನಿರ್ಬಂಧ ಹೇರಿದ್ದ ಗಡಿನಿರ್ಣಯ ಪುನರಾರಂಭಿಸುವ ಬಗ್ಗೆ ವಿಚಾರ ವಿನಿಮಯವಾಗಿ ಅದಕ್ಕೆ ಪ್ರಾಧಾನ್ಯತೆಯನ್ನು ನೀಡಲಾಗಿದೆ ಎಂದು ತಿಳಿಯಬಹುದು. ‘ಕ್ಷೇತ್ರಮರುವಿಂಗಡಣೆ (ಡಿಲಿಮಿಟೇಶನ್) ಇದರ ಅರ್ಥ ‘ಕ್ಷೇತ್ರಗಳ ವಿಂಗಡಣೆ, ಹೀಗೆ ಶಬ್ದಶಃ ಯಥವತ್ತಾಗಿರದೇ ಕಾಶ್ಮೀರದಲ್ಲಿ ಜನಸಂಖ್ಯೆಗನುಸಾರ ಚುನಾವಣಾ ಕ್ಷೇತ್ರವನ್ನು ಪುನಾ ರಚನೆ ಮಾಡುವುದು, ಎಂದಾಗಿದೆ. ಜನಗಣತಿಯಾದ ೧೦ ವರ್ಷಗಳ ನಂತರ ಅದನ್ನು ಮಾಡಬೇಕಿರುತ್ತದೆ. ೧೯೯೫ ತನಕ ಕ್ಷೇತ್ರ ಮರುವಿಂಗಡಣೆ ಮಾಡಲಾಗುತ್ತಿತ್ತು. ೧೯೯೦ ರ ದಶಕದಲ್ಲಿ ಕಾಶ್ಮೀರದಿಂದ ಹಿಂದೂಗಳನ್ನು ಹೊರ ಹಾಕಿದ ನಂತರ ಅಲ್ಲಿಯ ಒಟ್ಟು ಜನಸಂಖ್ಯೆ ಕಡಿಮೆಯಾಯಿತು. ಆದ್ದರಿಂದ ಈಗ ಕ್ಷೇತ್ರ ಮರುವಿಂಗಡಣೆಯಾದರೆ, ಜಮ್ಮುವಿನಲ್ಲಿ ಹಿಂದೂಗಳ ಜನಸಂಖ್ಯೆಯು ಕಾಶ್ಮೀರಕ್ಕಿಂತ ಹೆಚ್ಚಿರುವುದರಿಂದ ಅಲ್ಲಿಯ ಚುನಾವಣಾಕ್ಷೇತ್ರ ಹೆಚ್ಚಾಗುತ್ತದೆ, ಈ ಭಯದಿಂದ ೨೦೦೨ ರಲ್ಲಿ ಅಂದಿನ ಮುಖ್ಯಮಂತ್ರಿ ಫಾರುಖ ಅಬ್ದುಲ್ಲಾರವರು ಕ್ಷೇತ್ರಮರುವಿಂಗಡಣೆಗೆ ನಿರ್ಬಂಧ ಹೇರಿದ್ದರು. ಅದು ಈಗಲೂ ಹಾಗೆಯೇ ಇದೆ. ಅಬ್ದುಲ್ಲ ಕುಟುಂಬದ ಹಿಂದೂದ್ವೇಷ ಮತ್ತು ರಾಷ್ಟ್ರಘಾತಕ ವೃತ್ತಿಯನ್ನು ನೋಡಿದರೆ ಅವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಬೇಕು; ಆದರೆ ಭಾಜಪ ಸರಕಾರ ಬೇಕೆಂದೇ ಇದರತ್ತ ದುರ್ಲಕ್ಷ ಮಾಡುತ್ತಿದೆ. ಈಗಲೂ ಭಾಜಪ ಸರಕಾರ ಕ್ಷೇತ್ರ ಮರುವಿಂಗಡಣೆ ಮಾಡುವ ವಿಚಾರ ಮಾಡಿದಾಗ ಕೂಡಲೇ ಅಬ್ದುಲ್ಲಾ ಹಾಗೂ ಪಿಡಿಪಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿಯವರು ಇದನ್ನು ವಿರೋಧಿಸಿದ್ದಾರೆ. ಇದರ ಬಗ್ಗೆ ಈಗ ದೇಶದಲ್ಲಿ ಒಂದೇ ಒಂದು ಜಾತ್ಯತೀತವಾದಿಗಳು ಹಾಗೂ ಪ್ರಗತಿ(ಅಧೋಗತಿ)ಪರರು ಧ್ವನಿ ಎತ್ತಲು ಸಿದ್ಧರಿಲ್ಲ.

ಜಮ್ಮು-ಕಾಶ್ಮೀರದಲ್ಲಿ ಹಿಂದೂ ಮುಖ್ಯಮಂತ್ರಿ ?

ಜಮ್ಮು-ಕಾಶ್ಮೀರ ವಿಧಾನಸಭೆ ಅಸ್ತಿತ್ವಕ್ಕೆ ಬಂದಾಗ ಶೇಖ ಅಬ್ದುಲ್ಲಾ ಸರಕಾರವು ಕಾಶ್ಮೀರಕ್ಕೆ ೪೩ ಸ್ಥಾನ, ಜಮ್ಮುಗೆ ೩೦ ಹಾಗೂ ಲಡಾಖಗೆ ೨ ಸ್ಥಾನಗಳನ್ನು ನೀಡಿತು. ಸದ್ಯ ಈ ವಿಧಾನಸಭೆಯಲ್ಲಿ ೮೭ ಸ್ಥಾನಗಳಿವೆ. ಅದರಲ್ಲಿ ಜಮ್ಮುವಿನಲ್ಲಿ ೩೭, ಕಾಶ್ಮೀರದಲ್ಲಿ ೪೬ ಹಾಗೂ ಲಡಾಖನಲ್ಲಿ ೪ ಸ್ಥಾನಗಳಿವೆ. ಜಮ್ಮು-ಕಾಶ್ಮೀರದಲ್ಲಿಯ ಎಲ್ಲ್ಲ ಚುನಾವಣಾ ಕ್ಷೇತ್ರಗಳನ್ನು ಹೊಸದಾಗಿ ಪುನಾರಚನೆಯಾದರೆ ಜಮ್ಮುವಿಗೆ ವಿಧಾನಸಭೆಯಲ್ಲಿ ಹೆಚ್ಚು ಪ್ರತಿನಿಧಿತ್ವ ಸಿಗಬಹುದು. ಕಣಿವೆಯ ತುಲನೆಯಲ್ಲಿ ಜಮ್ಮುವಿನಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿರುವುದರಿಂದ ಕಾಶ್ಮೀರದಲ್ಲಿ ಹಿಂದೂ ಮುಖ್ಯಮಂತ್ರಿ ಸಹ ಆಗಬಹುದು. ಹೀಗೇನಾದರು ಆದರೆ ಸರಕಾರಕ್ಕೆ ರಾಜ್ಯಸಭೆಯಲ್ಲಿ ನವೆಂಬರ್ ೨೦೨೦ ರಲ್ಲಿ ಬಹುಮತ ಸಿಕ್ಕಿದ ಮೇಲೆ ಕಲಂ ೩೭೦ ಹಾಗೂ ಕಲಮ್ ‘೩೫ ಅವನ್ನು ರದ್ದು ಪಡಿಸುವ ಪ್ರಸ್ತಾಪಕ್ಕೆ ಒಪ್ಪಿಗೆ ಸಿಗುವುದು ಮತ್ತು ಈ ಪ್ರಸ್ತಾಪವು ಜಮ್ಮು-ಕಾಶ್ಮೀರದ ವಿಧಾನ ಸಭೆಯಲ್ಲಿ ಒಪ್ಪಿಗೆಯಾದ ಮೇಲೆ ಈ ಎರಡೂ ಕಲಂಗಳು ರದ್ದಾಗುವುದು. ಸದ್ಯ ರಾಜ್ಯಸಭೆಯಲ್ಲಿ ಬಹುಮತ ಇಲ್ಲ ಹಾಗೂ ಕ್ಷೇತ್ರ ಮರುವಿಂಗಡಣೆ ಆಗದಿದ್ದುದರಿಂದ ಜಮ್ಮು-ಕಾಶ್ಮೀರದ ವಿಧಾನಸಭೆಯಲ್ಲಿ ಬಹುಮತ ಇಲ್ಲದ್ದರಿಂದ ಅದರ ಅನುಮೋದನೆ ಸಾಧ್ಯವಿಲ್ಲ. ಆದ್ದರಿಂದ ಶಾಹ ಇವರು ಈ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಈ ಪ್ರಯತ್ನವೆಂದರೆ ‘ಈ ಎರಡೂ ಕಲಂಗಳನ್ನು ರದ್ದು ಪಡಿಸುವ ಮೊದಲನೇ ಹಂತವಾಗಿದೆ, ಎಂದು ಹೇಳಲಾಗುತ್ತಿದೆ. ಈಗ ಪ್ರಶ್ನೆ ಉದ್ಭವಿಸುವುದೇನೆಂದರೆ, ‘ಒಂದು ವೇಳೆ ಈ ರೀತಿ ಮಾಡುವುದು ಸಾಧ್ಯವಿದ್ದರೆ, ಕಳೆದ ೫ ವರ್ಷಗಳಲ್ಲಿ ಈ ರೀತಿಯ ಪ್ರಯತ್ನ ಏಕೆ ಮಾಡಲಿಲ್ಲ ?, ‘ಇದರ ಹಿಂದೆ ಏನು ಕಾರಣವಿತ್ತು ?, ‘ಶಾಹ ಏನು ಮಾಡಲು ಪ್ರಯತ್ನಿಸುತ್ತಿದ್ದಾರೆಯೋ, ಅದು ರಾಜನಾಥ ಸಿಂಗರಿಗೆ ಏಕೆ ಸಾಧ್ಯವಾಗಲಿಲ್ಲ ಅಥವಾ ಸರಕಾರಕ್ಕೆ ಕಳೆದ ೫ ವರ್ಷಗಳಲ್ಲಿ ಇದರ ಬಗ್ಗೆ ಇಚ್ಛೆ ಇರಲಿಲ್ಲವೇ ? ಈ ಪ್ರಶ್ನೆಗೆ ಭಾಜಪ ಸರಕಾರ ಉತ್ತರ ಕೊಡುವುದಿಲ್ಲ, ಇದು ಅಷ್ಟೇ ಸತ್ಯವಾಗಿದೆ. ಭಯೋತ್ಪಾದನೆಯ ವಿನಾಶ ಎಂದು ? ಇಂದು ಕ್ಷೇತ್ರ ಮರುವಿಂಗಡಣೆಯಾಗಿ ಹಾಗೂ ನಾಳೆ ಜಮ್ಮು-ಕಾಶ್ಮೀರದಲ್ಲಿ ಭಾಜಪ ಸರ್ಕಾರ ಬಂದು ಹಿಂದೂ ಮುಖ್ಯಮಂತ್ರಿಯಾದರೂ ‘ಅಲ್ಲಿಯ ಭಯೋತ್ಪಾದನೆ ಹಾಗೂ ಕಲ್ಲುತೂರಾಟದ ಘಟನೆಗಳು ನಿಲ್ಲುವುದೇ ?, ‘ಹಿಂದೂಗಳ ಪುನರ್ವಸತಿ ಆಗುವುದೇ ?, ಈ ಪ್ರಶ್ನೆಗಳು ಉಳಿದುಕೊಳ್ಳುತ್ತವೆ; ಏಕೆಂದರೆ ಪಿಡಿಪಿ ಮತ್ತು ಭಾಜಪದ ಸಮ್ಮಿಶ್ರ ಸರಕಾರ ಇರುವಾಗ ಕಲ್ಲು ತೂರಾಟ ಮಾಡುವವರ ಮೇಲಿನ ಅಪರಾಧವನ್ನು ಹಿಂಪಡೆಯಲಾಗಿತ್ತು ಮತ್ತು ಅದಕ್ಕೆ ಭಾಜಪವು ವಿಶೇಷವಾಗಿ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಅನಂತರ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರವೂ ಕಲ್ಲುತೂರಾಟದ ಘಟನೆಯಲ್ಲಿ ಇಳಿಕೆ ಆಗಿರುವುದು ಕಾಣಿಸುತ್ತಿಲ್ಲ. ಈದ್ ದಿನದಂದೂ ನಮಾಜಿನ ನಂತರ ಅನೇಕ ಸ್ಥಳಗಳಲ್ಲಿ ಮುಸಲ್ಮಾನರು ಸೈನಿಕರ ಮೇಲೆ ಕಲ್ಲು ತೂರಾಟ ಮಾಡಿದರು. ಶಾಹ ಇವರು ತೆಗೆದುಕೊಂಡಿದ್ದ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಆಯಿತೋ ಇಲ್ಲವೋ, ಎಂಬುದು ತಿಳಿಯಲಿಲ್ಲ, ಆದರೂ ಕಲ್ಲೆಸೆಯುವುದನ್ನು ಶಾಶ್ವತವಾಗಿ ಹೇಗೆ ತಡೆಯುವುದು ಎಂಬುದನ್ನು ಕಾದು ನೋಡಬೇಕಾಗಿದೆ. ಹಿಂದೂ ಮುಖ್ಯಮಂತ್ರಿ ಆದ ಮೇಲೆ ೩೭೦ ಕಲಂ ರದ್ದಾದರೂ ಕೂಡಲೇ ಹಿಂದೂಗಳು ಅಲ್ಲಿ ಸ್ಥಳವನ್ನು ಖರೀದಿಸುವುದರೊಂದಿಗೆ ಅಲ್ಲಿ ನೆಲೆಸಲು ಹೋಗಬಹುದು ಎಂಬ ಸ್ಥಿತಿ ಬರಬಹುದೇ ? ಎಲ್ಲಿಯವರೆಗೆ ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗುವುದಿಲ್ಲವೋ, ಅಲ್ಲಿಯವರೆಗೆ ಇದು ಎಂದಿಗೂ ಸಾಧ್ಯವಿಲ್ಲ. ಅದಕ್ಕಾಗಿ ಹಿಂದಿನ ಗೃಹಸಚಿವ ಹಾಗೂ ಈಗಿನ ರಕ್ಷಣಾ ಸಚಿವರಾದ ರಾಜನಾಥ ಸಿಂಗ ಇವರು ಭಯೋತ್ಪಾದನೆಯನ್ನು ನಾಶ ಮಾಡಲು ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಪ್ರಯತ್ನ ಮಾಡಬೇಕಾಗಿದೆ; ಆದರೆ ಅವರ ಗೃಹಸಚಿವರಾಗಿದ್ದ ಕಾಲಾವಧಿಯಲ್ಲಿಯ ಅನುಭವವನ್ನು ನೋಡಿದರೆ ಅವರು ಹೀಗೆ ಮಾಡುವರೇ ಅಥವಾ ಮೋದಿ ಅದಕ್ಕಾಗಿ ಅಂದರೆ ಭಯೋತ್ಪಾದನೆಗೆ ಗತಿ ಕಾಣಿಸಲು ಪ್ರಯತ್ನಿಸುವರೆ ಎಂದು ಈಗಂತೂ ಅನ್ನಿಸುತ್ತಿಲ್ಲ. ಕ್ಷೇತ್ರಮರು ವಿಂಗಡಣೆ ಮೂಲಕ ಭಾಜಪ ಒಂದು ಹೆಜ್ಜೆಯನ್ನು ಇಟ್ಟಿದೆ ಇದೊಂದು ಸಮಾಧಾನಕರವಾಗಿದೆ ಎಂದಾಗುವುದು. ಮುಂದಿನ ೫ ವರ್ಷಗಳಲ್ಲಿ ಕಾಶ್ಮೀರದ ಸಮಸ್ಯೆ ಬಗೆಹರಿದರೆ ಅದರ ಶ್ರೇಯಸ್ಸು ಮೋದಿ, ಅಮಿತ ಶಾಹದೊಂದಿಗೆ ಭಾಜಪಗೆ ಸಿಗಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. ಇದರ ಬಗ್ಗೆ ಅವರು ವಿಚಾರ ಮಾಡಬೇಕು ಮತ್ತು ಆ ರೀತಿ ಮಾಡಿ ತೋರಿಸಬೇಕೆಂಬ ಅಪೇಕ್ಷೆ ಇದೆ !

Kannada Weekly | Offline reading | PDF