ಆಪತ್ಕಾಲದ ದೃಷ್ಟಿಯಿಂದ ವಿವಿಧಸ್ತರಗಳಲ್ಲಿ ಮಾಡಬೇಕಾದ ಸಿದ್ಧತೆಗಳ ಬಗ್ಗೆ ಕೆಲವು ಸಾಮಾನ್ಯ ಸೂಚನೆಗಳು

೧. ಮನೆಯಲ್ಲಿನ ಉಪಕರಣಗಳು (ಅಡುಗೆ ಮನೆಯಲ್ಲಿನ ಉಪಕರಣಗಳು, ವಿದ್ಯುತ್, ಉಪಕರಣಗಳು ಮುಂತಾದವುಗಳು), ಸೈಕಲ್, ಎತ್ತಿನಗಾಡಿ, ಮುಂತಾದವುಗಳ ದುರಸ್ತಿಗಾಗಿ ಬೇಕಾಗುವ ಬಿಡಿಭಾಗಗಳನ್ನು ಖರೀದಿಸಿಟ್ಟುಕೊಳ್ಳಬೇಕು !

೨. ಮನೆಯಲ್ಲಿನ ಉಪಕರಣಗಳು, ನಲ್ಲಿ, ಸೈಕಲ್, ಎತ್ತಿನಗಾಡಿ ಮುಂತಾದ ವಸ್ತುಗಳ ದುರಸ್ತಿ ಮಾಡುವುದನ್ನು ಕಲಿಯಬೇಕು !

೩. ಕೆಲವು ವಸ್ತುಗಳ (ಉದಾ. ಧಾನ್ಯ ಬೀಸುವುದಕ್ಕಾಗಿ ‘ಬೀಸುವಕಲ್ಲು) ಖರೀದಿಯನ್ನು ಈಗಲೇ ಮಾಡಬೇಕು, ಮತ್ತು ಕೆಲವು ವಸ್ತುಗಳ (ಉದಾ. ಔಷಧಿಗಳ) ಖರೀದಿಯನ್ನು ಹಂತಹಂತವಾಗಿ/ಅವುಗಳು ಉಳಿಯುವ ಕಾಲಾವಧಿ / ಸರಕಾರಿ ನಿಯಮ ಮತ್ತು ನಿರ್ಬಂಧಗಳನ್ನು ಅರಿತು ಮಾಡಬೇಕು !

೪. ದೂರದರ್ಶನ (‘ಟಿ.ವಿಯ) ಪ್ರಸಾರ ಸ್ಥಗಿತಗೊಂಡರೆ ಆಕಾಶವಾಣಿಯಲ್ಲಿ ನೀಡುವ ಸೂಚನೆ, ವಾರ್ತೆಗಳು ಮುಂತಾದವುಗಳನ್ನು ಕೇಳುವುದಕ್ಕಾಗಿ ‘ರೇಡಿಯೋ ಖರೀದಿಸಿಟ್ಟುಕೊಳ್ಳಬೇಕು ! : ಸಂಚಾರವಾಣಿಯಲ್ಲಿ ‘ರೇಡಿಯೋ ಇರುತ್ತದೆ, ಅದನ್ನು ಸಹ ಉಪಯೋಗಿಸಬಹುದು.

೫. ಗೃಹನಿರ್ಮಾಣ ಸಂಸ್ಥೆ (ಹೌಸಿಂಗ್ ಸೋಸೈಟಿ), ಅಪಾರ್ಟಮೆಂಟ್ ಮುಂತಾದ ಸ್ಥಳದಲ್ಲಿರುವವರು ಒಟ್ಟಾಗಿ ಮುಂದಿನ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ! : ಇದರಲ್ಲಿ ‘ಬಯೋ-ಗ್ಯಾಸ್ ವ್ಯವಸ್ಥೆ ನಿರ್ಮಿಸುವುದು, ಬಾವಿ ತೋಡಿಸುವುದು, ಸೌರ ಶಕ್ತಿಯ ವ್ಯವಸ್ಥೆ ಮಾಡಿಕೊಳ್ಳುವುದು ಇವುಗಳಂತಹ ವ್ಯವಸ್ಥೆಗಳ ಸಮಾವೇಶವಿರಬೇಕು.

೬. ತಮ್ಮ ಮೇಲೆ ದೇವರ ಕೃಪಾದೃಷ್ಟಿ ಇರಲು ಮತ್ತು ತಮ್ಮ ಸುತ್ತಲೂ ಸಂರಕ್ಷಣಾ-ಕವಚ ನಿರ್ಮಾಣವಾಗಲು ಮುಂದಿನ ಕೃತಿಯನ್ನು ಪ್ರತಿದಿನ ಮಾಡಬೇಕು ! : ಇದರಲ್ಲಿ ದೇವರಪೂಜೆ ಮಾಡುವುದು, ಸಾಯಂಕಾಲ ದೇವರೆದುರು ಮತ್ತು ತುಳಸಿಯ ಬಳಿ ದೀಪವನ್ನು ಹಚ್ಚಿ ದೀಪಕ್ಕೆ ನಮಸ್ಕರಿಸುವುದು, ದೀಪ ಹಚ್ಚಿದ ನಂತರ ಮನೆಯಲ್ಲಿನ ಎಲ್ಲರೂ ಒಟ್ಟಾಗಿ ಕುಳಿತು ಸ್ವಾಸ್ಥ್ಯ ಮತ್ತು ಸಂರಕ್ಷಣಾ-ಕವಚವನ್ನು ಒದಗಿಸುವ ಶ್ಲೋಕ/ ಸ್ತೋತ್ರಗಳನ್ನು ಹೇಳುವುದು (ಉದಾ. ‘ಶುಭಂ ಕರೋತಿ, ರಾಮರಕ್ಷಾಸ್ತೋತ್ರ, ಮಾರುತಿಸ್ತೋತ್ರ, ದೇವಿಕವಚ), ರಾತ್ರಿ ಮಲಗುವಾಗ ಹಾಸಿಗೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ನಾಮಜಪ-ಪಟ್ಟಿಗಳ ಮಂಡಲವನ್ನು ಮಾಡುವುದು ಮತ್ತು ರಕ್ಷಣೆಗಾಗಿ ಆರಾಧ್ಯ ದೇವತೆಯನ್ನು ಪ್ರಾರ್ಥಿಸುವುದು ಮುಂತಾದ ಕೃತಿಗಳ ಸಮಾವೇಶವಿರಬೇಕು.

Kannada Weekly | Offline reading | PDF