ಆರೋಗ್ಯ ರಕ್ಷಣೆಗಾಗಿ ಔಷಧಿ ವನಸ್ಪತಿಗಳ ಸಂವರ್ಧನೆ ಮಾಡಲು ಸಚಿತ್ರ ವನಸ್ಪತಿ-ದರ್ಶನ !

ವಿಶ್ವದ ಉತ್ಪತ್ತಿಯ ಸಮಯದಲ್ಲಿ ಪ್ರತ್ಯಕ್ಷ ಬ್ರಹ್ಮದೇವನು ಆಯುರ್ವೇದದ ಸೃಜನ ಮಾಡಿದರು. ಅನಾದಿ ಕಾಲದಿಂದಲೂ ಭಾರತದಲ್ಲಿ ಆರೋಗ್ಯ ರಕ್ಷಣೆಗಾಗಿ ಔಷಧಿ ವನಸ್ಪತಿಗಳನ್ನು ಬಳಸಲಾಗುತ್ತಿದೆ. ಆಯುರ್ವೇದವು ‘ಐದನೇ ವೇದ ಎಂದು ತಿಳಿಯಲಾಗುತ್ತದೆ; ಆದರೆ ಭಾರತದಲ್ಲಿಯೇ ಈ ಶಾಸ್ತ್ರವನ್ನು ಕಡೆಗಣಿಸಿದ್ದರಿಂದ ಇಂದು ಈ ಚಿಕಿತ್ಸಾಶಾಸ್ತ್ರದಲ್ಲಿನ ಒಂದು ಮಹತ್ವದ ಘಟಕವಾಗಿರುವ ಔಷಧಿ ವನಸ್ಪತಿಗಳು ವಿರಳವಾಗುತ್ತಿದೆ. ಈ ವನಸ್ಪತಿಗಳ ಸಂವರ್ಧನೆಗಾಗಿ ಸನಾತನದ ಭಾವಿ ಆಪತ್ಕಾಲದ ಸಂಜೀವನಿ ಈ ಗ್ರಂಥಮಾಲಿಕೆಯಲ್ಲಿನ ‘ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ ! ಗ್ರಂಥವು ಸಮರ್ಪಿತವಾಗಿದೆ. ಈ ಗ್ರಂಥದಲ್ಲಿನ ಕೆಲವು ಔಷಧಿ ವನಸ್ಪತಿಗಳ ಬಣ್ಣದ ಛಾಯಾಚಿತ್ರಗಳನ್ನು ನಮ್ಮ ವಾಚಕರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾಧ್ಯವಿದ್ದರೆ ತಾವೂ ಈ ವನಸ್ಪತಿಗಳ ಕೃಷಿ ಮಾಡಿರಿ !

Kannada Weekly | Offline reading | PDF