ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕಾಗಿ ಸಂದೇಶ

ಹಿಂದೂ ರಾಷ್ಟ್ರ-ಸಂಸ್ಥಾಪನೆಯ ಕಾರ್ಯವನ್ನು ಪರಮನಿಷ್ಠೆಯಿಂದ ಮಾಡಿರಿ !

(ಪರಾತ್ಪರ ಗುರು) ಡಾ. ಆಠವಲೆ

‘ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದಿಂದ ಒಟ್ಟಾದ ಹಿಂದುತ್ವನಿಷ್ಠರಿಗೆ ನನ್ನ ನಮಸ್ಕಾರ ! ಸದ್ಯ ದೇಶ ಮತ್ತು ಕಾಲವು ಸ್ಥಿತ್ಯಂತರದ ಅವಸ್ಥೆಯಿಂದ ಹೋಗುತ್ತಿದೆ. ಈ ಪ್ರತಿಕೂಲ ಕಾಲದಲ್ಲಿ ನಮಗೆ ಹಿಂದೂ ರಾಷ್ಟ್ರ-ಸ್ಥಾಪನೆಯ, ಅಂದರೆ ಧರ್ಮ ಸಂಸ್ಥಾಪನೆಯ ಕಾರ್ಯವನ್ನು ಮಾಡಬೇಕಾಗಿದೆ. ನಮ್ಮ ಸಹಾಯಕ್ಕೆ ಅತಿ ಕಡಿಮೆ ಧರ್ಮನಿಷ್ಠ ಸಹಾಯಕರಿದ್ದಾರೆ, ಆದರೆ ಧರ್ಮಶತ್ರು ಮತ್ತು ಅವರ ಸಹಚರರು ಸಾವಿರಾರು ಪಟ್ಟಿನಲ್ಲಿದ್ದಾರೆ. ಶತ್ರುಗಳ ಹೆಚ್ಚು ಸಂಖ್ಯೆ ಮತ್ತು ಪ್ರತಿಕೂಲ ಕಾಲವಿರುವಾಗ ‘ನಮ್ಮ ಬುದ್ಧಿ, ಹಣ ಅಥವಾ ಬಾಹು ಇವುಗಳ ಬಲದಲ್ಲಿ ಕಾರ್ಯವನ್ನು ಮಾಡುತ್ತೇವೆ, ಎಂದು ವಿಚಾರ ಮಾಡುವುದು ಅಯೋಗ್ಯವೆನಿಸಿಕೊಳ್ಳುವುದು. ಇಂತಹ ಸಮಯದಲ್ಲಿ ಕೇವಲ ಸಾಧನೆಯ ಮೂಲಕ ಪ್ರಾಪ್ತ ಮಾಡಿಕೊಂಡ ಈಶ್ವರನ ಆಶೀರ್ವಾದವೇ ಕೊನೆಯ ಯಶಸ್ಸನ್ನು ಪ್ರಾಪ್ತಮಾಡಿ ಕೊಡುತ್ತದೆ. ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧ್ಯೇಯಪ್ರಾಪ್ತಿಯ ತಳಮಳ, ಅದಕ್ಕಾಗಿ ಆವಶ್ಯಕ ತನು-ಮನ-ಧನಗಳ ಸಮರ್ಪಣೆ ಮತ್ತು ಸಾಧನೆಯ ಬಲ ಹೆಚ್ಚಿಸುವುದು ಆವಶ್ಯಕವಿದೆ. ಗಮನದಲ್ಲಿಡಿ, ಹಿಂದೂ ರಾಷ್ಟ್ರವು ನಮಗೆ ಸಹಜವಾಗಿ ಸಿಗಲಾರದು. ಅದಕ್ಕಾಗಿ ನಮಗೆ ಪರಮ ನಿಷ್ಠೆಯಿಂದ ಕಾರ್ಯ ಮಾಡಬೇಕಾಗುವುದು. ಈ ‘ಅಖಿಲ ಭಾರತೀಯ ಹಿಂದೂ ಅಧಿವೇಶನದಿಂದ ಎಲ್ಲ ಧರ್ಮಯೋಧರಿಗೆ ಇಂತಹ ಕಾರ್ಯಮಾಡುವ ಪ್ರೇರಣೆ ಸಿಗಲಿ, ಎಂದು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ ! – (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ

Kannada Weekly | Offline reading | PDF