ಇಟಲಿಯಲ್ಲಿ ಜರುಗಿದ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಪರಾತ್ಪರ ಗುರು ಡಾ. ಆಠವಲೆಯವರು ಬರೆದ  ‘ಆನಂದಪ್ರಾಪ್ತಿ’ ಈ ವಿಷಯದ ಮೇಲಿನ ಸಂಶೋಧನಾ ಪ್ರಬಂಧ ಮಂಡನೆ !

ನಾಮಜಪ, ಸ್ವಭಾವದೋಷ ನಿರ್ಮೂಲನೆ ಮತ್ತು ಸಾತ್ತ್ವಿಕ ಜೀವನ ಪದ್ಧತಿ ಈ ತ್ರಿಸೂತ್ರಗಳಿಂದ ಆನಂದಪ್ರಾಪ್ತಿಯಾಗುತ್ತದೆ ! –  ಸೌ. ದ್ರಾಗಾನಾ ಕಿಸ್ಲೌಸ್ಕಿ

ಸಂಶೋಧನಾ ಪ್ರಬಂಧ ಮಂಡಿಸುತ್ತಿರುವ ಸೌ. ದ್ರಾಗಾನಾ ಕಿಸ್ಲೌಸ್ಕಿ

ಇಟಲಿ – ‘ನಿರಂತರವಾಗಿ ಸರ್ವೋಚ್ಚ (ಯಾವುದಕ್ಕೆ ಆನಂದ ಹೇಳುತ್ತೇವೆ) ಸುಖವನ್ನು ಅನುಭವಿಸುವ ಸೆಳೆತವು ಮಾನವನ ಪ್ರತಿಯೊಂದು ಕೃತಿಯ ಹಿಂದಿನ ಪ್ರೇರಣೆಯಾಗಿರುತ್ತದೆ. ಹೀಗಿರುವಾಗಲೂ ಇಡಿ ಮನುಕುಲ ಯಾವುದಕ್ಕಾಗಿ ಹಾತೊರೆಯುತ್ತಿದೆಯೋ, ಆ ‘ಆನಂದಪ್ರಾಪ್ತಿ’ ವಿಷಯದ ಬಗ್ಗೆ ಇಂದಿನ ವಿದ್ಯಾಲಯಗಳು ಮತ್ತು ಮಹಾ ವಿದ್ಯಾಲಯಗಳಲ್ಲಿ ಯಾವುದೇ ರೀತಿಯ ಶಿಕ್ಷಣವನ್ನು ನೀಡುವುದಿಲ್ಲ. ನಾಮಜಪ, ಸ್ವಭಾವದೋಷ-ಅಹಂ ನಿರ್ಮೂಲನೆ ಮತ್ತು ಸಾತ್ತ್ವಿಕ ಜೀವನಪದ್ಧತಿ ಅಂಗೀಕರಿಸುವುದು ಈ ತ್ರಿಸೂತ್ರಗಳನ್ನು ಅಂಗೀಕರಿಸಿದರೆ, ಸರ್ವೋಚ್ಚ ಮತ್ತು ಶಾಶ್ವತವಾಗಿ ಉಳಿಯಬಲ್ಲ ಸುಖ, ಅಂದರೆ ಆನಂದಪ್ರಾಪ್ತಿ ಆಗಿ ಮನಃ ಶಾಂತಿ ಸಿಗುವುದು, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೌ. ದ್ರಾಗಾನಾ ಕಿಸ್ಲೌಸ್ಕಿ ಇವರು ಪ್ರತಿಪಾದಿಸಿದರು. ಅವರು ‘ಹೆಪಿನೆಸ್ ಎಂಡ ವೆಲ್‌ಬಿಯಿಂಗ್’ ಈ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ ‘ಡಿಪಾರ್ಟಮೆಂಟ ಆಪ್ ಹ್ಯುಮಾನಿಟಿಜ, ಯುನಿವರ್ಸಟಿ ಆಪ್ ಫೋಗಿಯಾ, ಇಟಲಿ’ ಇವರು ೧೬ ಮತ್ತು ೧೭ ಮೇ ಈ ದಿನದಂದು ಫೋಗಿಯಾ ಇಟಲಿಯಲ್ಲಿ ಆಯೋಜಿಸಲಾಗಿತ್ತು. ಸೌ. ದ್ರಾಗಾನಾ ಕಿಸ್ಲೌಸ್ಕಿ ಇವರು ಈ ಪರಿಷತ್ತಿನಲ್ಲಿ ೧೭ ಮೇ ಯಂದು ‘ಒತ್ತಡಯುಕ್ತ ಜಗತ್ತಿನಲ್ಲಿ ಮನಃಶಾಂತಿ ಸಿಗುವ ಉಪಾಯ’ ಈ ಸಂಶೋಧನೆಯ ಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು, ಸದ್ಗುರು ಸಿರಿಯಾಕ ವಾಲೆ, ಸೌ. ದ್ರಾಗಾನಾ ಕಿಸ್ಲೌಸ್ಕಿ ಮತ್ತು ಶ್ರೀ. ಶಾನ್ ಕ್ಲಾರ್ಕ ಇವರು ಸಹಲೇಖಕರಾಗಿದ್ದಾರೆ. ಸೌ. ದ್ರಾಗಾನಾ ಕಿಸ್ಲೌಸ್ಕಿ ಇವರು ಮಾತು ಮುಂದುವರಿಸುತ್ತಾ, “ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ನಾವು ದುಃಖವನ್ನು ಅನುಭವಿಸುತ್ತೇವೆ. ಅದರಿಂದ ನಮ್ಮ ಮನಃಶಾಂತಿ ಮತ್ತು ಸುಖದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಮ್ಮ ಜೀವನದ ಸಮಸ್ಯೆಗಳಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹೀಗೆ ೩ ಮೂಲಭೂತ ಕಾರಣಗಳಿರುತ್ತವೆ; ಜೀವನದಲ್ಲಿ ಎದುರಾಗುವ ಶೇ. ೫೦ ಕ್ಕಿಂತ ಹೆಚ್ಚು ಸಮಸ್ಯೆಗಳಿಗೆ ಆಧ್ಯಾತ್ಮಿಕ ಕಾರಣಗಳಿರುತ್ತದೆ. ಆದರೆ ಅವುಗಳು ಶಾರೀರಿಕ ಅಥವಾ ಮಾನಸಿಕ ಸಮಸ್ಯೆಗಳ ಸ್ವರೂಪದಲ್ಲಿ ಪ್ರಕಟಗೊಳ್ಳಬಹುದು. ಈ ಅಂಕಿಅಂಶಗಳು ಆಧ್ಯಾತ್ಮಿಕ ಸಂಶೋಧನೆಯಿಂದ ಪ್ರಾಪ್ತವಾಗಿದೆ. ಪ್ರಾರಬ್ಧ, ಪೂರ್ವಜರ ಅತೃಪ್ತ ಲಿಂಗದೇಹ ಮತ್ತು ಸೂಕ್ಷ್ಮದಲ್ಲಿರುವ ಕೆಟ್ಟ ಶಕ್ತಿಗಳು, ಈ ೩ ಪ್ರಮುಖ ಆಧ್ಯಾತ್ಮಿಕ ಕಾರಣಗಳಿರುತ್ತವೆ. ಸಮಸ್ಯೆಗಳ ನಿವಾರಣೆಗಾಗಿ ಸಮಸ್ಯೆಯ ಕಾರಣಗಳ ಮಟ್ಟಗಳಿಗನು ಗುಣವಾಗಿ ಉಪಾಯಗಳನ್ನು ಮಾಡಬೇಕಾಗುತ್ತದೆ ಯಾವಾಗ ಯಾವುದೇ ಒಂದು ಸಮಸ್ಯೆಯ ಮೂಲಭೂತ ಕಾರಣ ಆಧ್ಯಾತ್ಮಿಕವಾಗಿರುತ್ತದೆಯೋ, ಆಗ ಅದರ ಆಧ್ಯಾತ್ಮಿಕ ಉಪಾಯ ಯೋಜನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಸಮಸ್ಯೆಗಳ ಮೂಲ ಕಾರಣ ಆಧ್ಯಾತ್ಮಿಕವಿರುವಾಗ ಆಧ್ಯಾತ್ಮಿಕ ಉಪಾಯಗಳಿಂದ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೂ ಸಹಾಯವಾಗುತ್ತದೆ”, ಎಂದರು.

ಸೌ. ದ್ರಾಗಾನಾ ಕಿಸ್ಲೌಸ್ಕಿ ಇವರು ಆನಂದಪ್ರಾಪ್ತಿಗಾಗಿ ತಿಳಿಸಿರುವ ಮೂರು ಪ್ರಮುಖ ಪ್ರಯತ್ನಗಳು

೧. ನಾಮಜಪ

ಇದೊಂದು ಸರಳ ಆದರೆ ಶಕ್ತಿಶಾಲಿ ಉಪಾಯ ಪದ್ಧತಿಯಾಗಿದೆ. ನಾಮಜಪದಿಂದ ನಿರ್ಮಾಣವಾಗುವ ಆಧ್ಯಾತ್ಮಿಕ ಸ್ಪಂದನಗಳಿಂದ ಮನಸ್ಸಿನ ಶುದ್ಧಿಯಾಗಲು ಪ್ರಾರಂಭವಾಗುತ್ತದೆ. ಈ ಸ್ಪಂದನಗಳು ಆ ವ್ಯಕ್ತಿಯು ಸುತ್ತಲೂ ಒಂದು ಸೂಕ್ಷ್ಮ ಸಂರಕ್ಷಕ ಕವಚವನ್ನು ನಿರ್ಮಾಣಮಾಡಿ, ತೊಂದರೆದಾಯಕ ಸ್ಪಂದನಗಳಿಂದ ರಕ್ಷಣೆ ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿ ತಮ್ಮ ಧರ್ಮಕ್ಕನುಸಾರ ತಿಳಿಸಿರುವ ನಾಮಜಪವನ್ನು ಮಾಡಬಹುದು. ಇಂದಿನ ಕಾಲಕ್ಕನುಸಾರ ‘ಓಂ ನಮೋ ಭಗವತೇ ವಾಸುದೇವಾಯ |,ಇದೊಂದು ಅತ್ಯಂತ ಉಪಯುಕ್ತ ನಾಮಜಪವಾಗಿದೆ. ಸೌ. ದ್ರಾಗಾನಾ ಕಿಸ್ಲೌಸ್ಕಿ ಇವರು ನಾಮಜಪದ ಸಕಾರಾತ್ಮಕ ಪರಿಣಾಮದ ಅಳತೆಯನ್ನು ಮಾಡಲು ಕೈಗೊಂಡ ಒಂದು ಪ್ರಯೋಗದ ಕುರಿತು ಮಾಹಿತಿಯನ್ನು ನೀಡಿದರು. ‘ಜಿ.ಡಿ.ವಿ. ಬಾಯೊವೆಲ ಈ ವೈಜ್ಞಾನಿಕ ಉಪಕರಣದ ಮಾಧ್ಯಮದಿಂದ ವ್ಯಕ್ತಿಯ ಕುಂಡಲಿನಿ ಚಕ್ರಗಳ ಅಳತೆಯನ್ನು ಮಾಡಲಾಗಿದೆ. ಈ ಪ್ರಯೋಗದಲ್ಲಿ ಒಬ್ಬ ವ್ಯಕ್ತಿಯ ಕುಂಡಲಿನಿ ಚಕ್ರಗಳು ನಾಮಜಪದ ಮೊದಲು ಮಧ್ಯಭಾಗದಲ್ಲಿರದೇ ಪಕ್ಕದಲ್ಲಿರುವುದು ಕಂಡು ಬಂದಿತು. ಆ ವ್ಯಕ್ತಿಯು ಕೇವಲ ೪೦ ನಿಮಿಷ ‘ಓಂ ನಮೋ ಭಗವತೇ ವಾಸುದೇವಾಯ| ಈ ನಾಮಜಪವನ್ನು ಮಾಡಿದ ಬಳಿಕ ಆ ವ್ಯಕ್ತಿಯ ಕುಂಡಲಿನಿ ಚಕ್ರಗಳು ಮಧ್ಯಭಾಗದಲ್ಲಿ ಒಂದು ರೇಖೆಯಲ್ಲಿ ಬಂದಿರುವುದು ಕಂಡು ಬಂದಿತು. ಕುಂಡಲಿನಿ ಚಕ್ರಗಳ ಈ ಸ್ಥಿತಿ ಆ ವ್ಯಕ್ತಿಯ ಉತ್ತಮ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿ ತೋರಿಸುತ್ತದೆ.

೨. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ

ಮನಸ್ಸಿನ ಸ್ವಭಾವದೋಷಗಳ ಸಂಸ್ಕಾರವನ್ನು ನಾಶಗೊಳಿಸಲು ಪರಾತ್ಪರ ಗುರು ಡಾ ಆಠವಲೆಯವರು ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಇತ್ತೀಚೆಗೆ ಕೈಗೊಂಡ ಒಂದು ಸಮೀಕ್ಷೆಯ ಕುರಿತು ಸೌ. ದ್ರಾಗಾನಾ ಕಿಸ್ಲೌಸ್ಕಿ ಇವರು ವಿವರಿಸಿದರು. ಈ ಸಮೀಕ್ಷೆಯಲ್ಲಿ ಈ ಪ್ರಕ್ರಿಯೆಯನ್ನು ಕೈಗೊಂಡ ೫೦ ಸಾಧಕರು ಭಾಗವಹಿಸಿದ್ದರು. ಅದರಲ್ಲಿ ಶೇ. ೯೦ ರಷ್ಟು ಸಾಧಕರು ಉದ್ಯೋಗಿಗಳಾಗಿದ್ದರು. ಅವರಿಗೆ ಈ ಪ್ರಕ್ರಿಯೆಯನ್ನು ಕೈಗೊಳ್ಳುವ ಮೊದಲು ಅವರ ಜೀವನದಲ್ಲಿ ಎಲ್ಲಕ್ಕಿಂತ ಅಧಿಕ ಪರಿಣಾಮ ಬೀರುವ ೩ ಪ್ರಮುಖ ದೋಷಗಳ ಪಟ್ಟಿಯನ್ನು ಮಾಡಲು ತಿಳಿಸಲಾಯಿತು. ಸಾಧಕರಿಗೆ ಈ ಸ್ವಭಾವದೋಷಗಳನ್ನು ಶೇ. ೫೦ ರಿಂದ ೮೦ ರಷ್ಟು ಕಡಿಮೆ ಮಾಡಲು ತಗುಲಿದ ಸಾಮಾನ್ಯ ಕಾಲಾವಧಿ ೨ ವರ್ಷ ೫ ತಿಂಗಳು ಆಗಿತ್ತು. ಸಂಬಂಧಗಳು ಮತ್ತು ಕಾರ್ಯಕ್ಷಮತೆ ಇವುಗಳಲ್ಲಿ ಸುಧಾರಣೆಯಾಗಿರುವುದನ್ನು ಎಲ್ಲರೂ ಅನುಭವಿಸಿದ್ದರೂ, ಅದರಲ್ಲಿಯೂ ಸಂಬಂಧದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸುಧಾರಣೆಯಾಯಿತು, ಎಂದು ಶೇ. ೭೭ ರಷ್ಟು  ಸಾಧಕರು ತಿಳಿಸಿದರು.

೩. ಸಾತ್ತ್ವಿಕ ಜೀವನ ಪದ್ಧತಿಯನ್ನು ಅಂಗೀಕರಿಸುವುದು

ನಮ್ಮ ಪ್ರತಿಯೊಂದು ಕೃತಿ ಮತ್ತು ವಿಚಾರಗಳಿಗೆ ನಮ್ಮಲ್ಲಿರುವ ಸಕಾರಾತ್ಮಕತೆ ಅಥವಾ ನಕಾರಾತ್ಮಕತೆಯನ್ನು ವೃದ್ಧಿಸುವ ಕ್ಷಮತೆಯಿರುತ್ತದೆ. ನಮ್ಮ ಆಧ್ಯಾತ್ಮಿಕ ಉನ್ನತಿಯಾಗುತ್ತಾ ಹೋದಂತೆ ನಮ್ಮ ಬಟ್ಟೆ, ಸಂಗೀತ, ಆಹಾರ, ಪಾನೀಯ ಇತ್ಯಾದಿ ದೈನಂದಿನ ಜೀವನಶೈಲಿಯ ನಿರ್ಣಯಗಳಿಂದ ನಿರ್ಮಾಣವಾಗುವ ಸ್ಪಂದನಗಳನ್ನು ಅರಿಯುವ ಕ್ಷಮತೆ ನಿರ್ಮಾಣವಾಗುತ್ತದೆ. ನಮ್ಮ ಆಯ್ಕೆ ಎಷ್ಟು ಸಾತ್ತ್ವಿಕವಾಗಿರುತ್ತದೆಯೋ, ಅಷ್ಟೇ ನಮ್ಮ ಜೀವನದಲ್ಲಿ ಆದಷ್ಟು ಅಧಿಕ ಪ್ರಮಾಣದಲ್ಲಿ ಆನಂದ ಮತ್ತು ಮನಃಶಾಂತಿ ದೊರೆಯುತ್ತದೆ.

Kannada Weekly | Offline reading | PDF