ಹಿಂದೂ ರಾಷ್ಷ್ರದ ಬೇಡಿಕೆ ಮಾಡುವುದು ಸಂವಿಧಾನಬದ್ಧ; ಸಂವಿಧಾನದಲ್ಲಿರುವ ‘ಸೆಕ್ಯುಲರ್ ಶಬ್ದವನ್ನೇ ಸಂವಿಧಾನಬಾಹಿರವಾಗಿ ತುರುಕಿಸಲಾಗಿದೆ ! – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ದೀಪಪ್ರಜ್ವಲನೆಯ ಮೂಲಕ ‘ರಾಷ್ಟ್ರೀಯ ನ್ಯಾಯವಾದಿ ಅಧಿವೇಶನದ ಉದ್ಘಟನೆಯನ್ನು ಮಾಡುತ್ತಿರುವ (ಎಡದಿಂದ) ನಿವೃತ್ತ ನ್ಯಾಯಾಧೀಶ ಸುಧಾಕರ ಚಪಳಗಾವಕರ, ಸದ್ಗುರು (ಡಾ.) ಚಾರುದತ್ತ ಪಿಂಗಳೆ, ನ್ಯಾಯವಾದಿ ಹರಿಶಂಕರ ಜೈನ್ ಹಾಗೂ ನ್ಯಾಯವಾದಿ ರಾಜೇಂದ್ರ ವರ್ಮಾ

 

ನ್ಯಾಯವಾದಿ ಅಧಿವೇಶನದಲ್ಲಿ ಉಪಸ್ಥಿತರಿದ್ದ ಭಾರತಾದ್ಯಂತ ನ್ಯಾಯವಾದಿಗಳು ಹಾಗೂ ಧರ್ಮಪ್ರೇಮಿಗಳು

ರಾಮನಾಥಿ (ಗೋವಾ) – ನಮ್ಮ ದೇಶದ ಸಂವಿಧಾನದಲ್ಲಿ ‘ಸೆಕ್ಯುಲರ್ ಇದೆ ಎಂದು ಹೇಳಲಾಗುತ್ತದೆ; ಆದರೆ ಅದೇ ಸಂವಿಧಾನದಲ್ಲಿರುವ ಕಲಂ ೩೭೦ ರ ಆಧಾರದಲ್ಲಿ ಜಮ್ಮು-ಕಾಶ್ಮೀರ ರಾಜ್ಯದ ಸಂವಿಧಾನದಲ್ಲಿ ‘ಸೆಕ್ಯುಲರ್ ಶಬ್ದವನ್ನು ಹಾಕಲು ವಿರೋಧಿಸಲಾಗುತ್ತಿದೆ. ಆದುದರಿಂದ ನಮ್ಮ ದೇಶ ಸೆಕ್ಯುಲರ್ ಇದೆ; ಆದರೆ ಅದರಲ್ಲಿನ ಜಮ್ಮೂ-ಕಾಶ್ಮೀರ ರಾಜ್ಯ ಸೆಕ್ಯುಲರ್ ಅಲ್ಲ, ಎಂಬ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನವು ಭಾರತ ಪ್ರತಿಯೊಬ್ಬರಿಗೆ ಅಭಿಪ್ರಾಯ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ನೀಡಿರುವಾಗ ಹಿಂದೂ ರಾಷ್ಟ್ರದ ಬೇಡಿಕೆ ಸಂವಿಧಾನಬಾಹಿರ ಆಗಲು ಹೇಗೆ ಸಾಧ್ಯ ? ಇದರ ತುಲನೆಯಲ್ಲಿ ೧೯೭೬ ರಲ್ಲಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಘೋಷಣೆ ಮಾಡಿರುವಾಗ ವಿರೋಧಿ ಪಕ್ಷದವರನ್ನು ಸೆರೆಮನೆಗೆ ಹಾಕಿದ್ದರು ಹಾಗೂ ಸರ್ವೋಚ್ಚ ನ್ಯಾಯಾಲಯ ಹಾಗೂ ಪ್ರಸಾರ ಮಾಧ್ಯಮದ ಅಧಿಕಾರದ ಮೇಲೆ ನಿರ್ಬಂಧವನ್ನು ಹಾಕಿ ಸಂವಿಧಾನದಲ್ಲಿ ೪೨ ನೇ ತಿದ್ದುಪಡಿಯ ಮೂಲಕ ‘ಸೆಕ್ಯುಲರ್ ಹಾಗೂ ‘ಸೋಶಲಿಸ್ಟ್ ಈ ಶಬ್ದವನ್ನು ಹಾಕಿದರು, ಇದೇ ಸಂವಿಧಾನ ಬಾಹಿರವಾಗಿದೆ. ತದ್ವಿರುದ್ದ ‘ಹಿಂದೂ ರಾಷ್ಟ್ರ ಇದು ವಿಶ್ವವ್ಯಾಪಿ ಹಾಗೂ ವಿಶ್ವದ ಕಲ್ಯಾಣಕ್ಕಾಗಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಕಲ್ಪನೆಯಾಗಿದೆ. ‘ಅಭಿವೃದ್ಧಿಯ ಆತ್ಮವು ಧರ್ಮದಲ್ಲಿದೆ, ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಆದ್ದರಿಂದ ಭಾರತಕ್ಕೆ ಇಂದು ಭೌತಿಕವಾಗಿ ಅಲ್ಲ, ಧರ್ಮಾಧಿಷ್ಠಿತ ಅಭಿವೃದ್ಧಿಯ ಆವಶ್ಯಕತೆ ಇದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಹೇಳಿದರು. ಅವರು ಮೇ ೨೭ ರಂದು ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ ಆಯೋಜಿಸಿದ್ದ ೨ ದಿನಗಳ ‘ರಾಷ್ಟ್ರೀಯ ನ್ಯಾಯವಾದಿ ಅಧಿವೇಶನದ ಉದ್ಘಾಟನೆ ಸಮಯದಲ್ಲಿ ಮಾತನಾಡುತ್ತಿದ್ದರು. ಸಂವಿಧಾನದ ಚೌಕಟ್ಟಿನಲ್ಲಿದ್ದು ಹಿಂದುತ್ವಕ್ಕಾಗಿ ಹೋರಾಡುವ ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಗಳಾದ ನ್ಯಾಯವಾದಿ ಸಂಜೀವ ಪುನಾಳೆಕರ ಇವರ ಅನ್ಯಾಯದ ಬಂಧನವನ್ನು ಖಂಡಿಸುವ ಠರಾವನ್ನು ಈ ಅಧಿವೇಶನದಲ್ಲಿ ಮಂಡಿಸಲಾಯಿತು ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಅಂತರ್ಗತ ನಡೆದ ನ್ಯಾಯವಾದಿಗಳ ಈ ಅಧಿವೇಶನದಲ್ಲಿ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಲಕ್ಷ್ಮಣಪುರಿ (ಲಖನೌ)ಯ ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್ನ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಹರಿ ಶಂಕರ ಜೈನ್, ಹಿಂದೂ ವಿಧಿಜ್ಞ ಪರಿಷತ್ತಿನ ಸಂಸ್ಥಾಪಕ ಸದಸ್ಯರಾದ ನಿವೃತ್ತ ನ್ಯಾಯಾಧೀಶ ಸುಧಾಕರ ಚಪಳಗಾವಕರ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ರಾಜೇಂದ್ರ ವರ್ಮಾ ಇವರ ಹಸ್ತದಿಂದ ದೀಪಪ್ರಜ್ವಲನೆ ಮಾಡಲಾಯಿತು. ಈ ಅಧಿವೇಶನಕ್ಕಾಗಿ ದೇಶಾದ್ಯಂತದಿಂದ ೧೦೦ ಕ್ಕೂ ಹೆಚ್ಚು ಧರ್ಮಪ್ರೇಮಿ ನ್ಯಾಯವಾದಿಗಳು ಉಪಸ್ಥಿತರಿದ್ದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ‘ಹಿಂದೂ ರಾಷ್ಟ್ರ ಆಕ್ಷೇಪ ಮತ್ತು ಖಂಡನೆ ಈ ಮರಾಠಿ ಗ್ರಂಥದ ಪ್ರಕಾಶನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿ ಹರಿಶಂಕರ ಜೈನ್ ಇವರು, “ಇಂದು ‘ಸೆಕ್ಯುಲರ್ ಶಬ್ದವನ್ನು ದುರುಪಯೋಗಿಸಿಕೊಂಡು ಕೇವಲ ಅಲ್ಪಸಂಖ್ಯಾತರಿಗೆ ಲಾಭ ಮಾಡಿಕೊಡಲಾಗುತ್ತಿದೆ. ಜನರು ಸೆಕ್ಯುಲರ್ ರಾಷ್ಟ್ರದಿಂದ ಬೇಸತ್ತಿದ್ದು ಹಿಂದೂ ಮತಗಳಿಂದ ಆರಿಸಿ ಬಂದ ಭಾಜಪ ಸರಕಾರವು ಹಿಂದೂ ಹಿತದ ನಿರ್ಣಯ ತೆಗೆದುಕೊಳ್ಳಬೇಕು. ಹಿಂದೂ ನ್ಯಾಯವಾದಿಗಳು ಹೆಮ್ಮೆಯಿಂದ ಹಿಂದುತ್ವದ ಕಾರ್ಯ ಮಾಡುತ್ತಿದ್ದಾರೆ, ಎನ್ನಬೇಕು, ಎಂದರು. ಹಿಂದೂ ವಿಧಿಜ್ಞ ಪರಿಷತ್ತಿನ ಸಂಘಟಕರಾದ ನ್ಯಾಯವಾದಿ ನೀಲೇಶ ಸಾಂಗೋಲಕರರವರು ಮಾತನಾಡುತ್ತಾ, ‘ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ನ್ಯಾಯವಾದಿಗಳ ಕಾರ್ಯಕರ್ತನೆಂದು ಯೋಗದಾನ ಇದರ ಬಗ್ಗೆ ಹಾಗೂ ಬೆಂಗಳೂರಿನ ನ್ಯಾಯವಾದಿ ವಿಜಯ ಶೇಖರಜಿರವರು ‘ಭ್ರಷ್ಟ ನ್ಯಾಯಾಧೀಶರ ವಿರುದ್ಧ ಕಾರ್ಯ ಮಾಡುವಾಗ ನಡೆಸಿ ನ್ಯಾಯಾಂಗ ಹೋರಾಟ, ಈ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು. ಅಧಿವೇಶನವನ್ನು ಶಂಖನಾದದಿಂದ ಆರಂಭಿಸಲಾಯಿತು. ದೀಪ ಪ್ರಜ್ವಲನೆಯ ನಂತರ ಸನಾತನ ಪುರೋಹಿತ ಪಾಠಶಾಲೆಯ ಪುರೋಹಿತರು ವೇದಮಂತ್ರ ಪಠಣ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಅಧಿವೇಶನದ ನಿಮಿತ್ತ ನೀಡಿದ ಸಂದೇಶವನ್ನು ಹಿಂದೂ ವಿಧಿಜ್ಞ ಪರಿಷತ್ತಿನ ಸಂಸ್ಥಾಪಕ ಸದಸ್ಯರಾದ ನ್ಯಾಯವಾದಿ ಸುರೇಶ ಕುಲಕರ್ಣಿಯವರು ಓದಿದರು. ಕಾರ್ಯಕ್ರಮದ ಸೂತ್ರ ಸಂಚಾಲನೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುಮೀತ ಸಾಗವೇಕರ ಇವರು ಮಾಡಿದರು.

Kannada Weekly | Offline reading | PDF