ಸಿಬಿಐನ ಹೊಸ ಆರೋಪಗಳ ಸುಳ್ಳುತನವನ್ನು ಬಯಲಿಗೆಳೆಯುವ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರು ಮಂಡಿಸಿದ ಅಂಶಗಳು !

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

೧. ‘ನ್ಯಾಯವಾದಿ ಸಂಜೀವ ಪುನಾಳೆಕರರು ದಾಭೋಲಕರ ಹತ್ಯೆಗೆಂದು ಬಳಸಿದ ಪಿಸ್ತೂಲನ್ನು ನೀರಿನಲ್ಲಿ ಎಸೆಯುವಂತೆ ನನಗೆ ಸಲಹೆ ನೀಡಿದರು, ಎಂದು ದಾಭೋಲಕರ ಪ್ರಕರಣದ ಆರೋಪಿ ಶರದ ಕಳಸಕರ ಈತ ಹೇಳಿದ್ದಾರೆ ಎನ್ನಲಾಗಿದೆ. ಪ್ರತ್ಯಕ್ಷದಲ್ಲಿ ಆ ಪಿಸ್ತೂಲನ್ನು ನೀರಿನಿಂದ ಪುನಃ ವಶಪಡಿಸಿಕೊಂಡು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಅದೇ ಪಿಸ್ತೂಲಿನಿಂದ ಗುಂಡುತಗುಲಿರುವುದಾಗಿ ಎಲ್ಲಿಯವರೆಗೆ ಸಿದ್ಧವಾಗುವುದಿಲ್ಲವೋ ಅಲ್ಲಿಯವರೆಗೆ ಆ ಪಿಸ್ತೂಲ್ ನಾಶ ಪಡಿಸಲಾಗಿದೆ ಎಂದು ಹೇಳಲು ಆಗುವುದೇ ಇಲ್ಲ. ಆದುದರಿಂದ ‘ಹತ್ಯೆಯ ಪಿಸ್ತೂಲುಗಳು ಹಾಗೂ ಶಸ್ತ್ರಗಳು ನಾಶಪಡಿಸಲು ಸಲಹೆ ನೀಡಿದರು, ಎಂಬ ಆರೋಪವೇ ತಲೆಬುಡವಿಲ್ಲದಂತಾಗಿದೆ.

೨. ಇನ್ನೊಂದೆಡೆ ಅಕ್ಟೋಬರ್ ೨೦೧೮ ರಲ್ಲಿ ಶರದ ಕಳಸಕರ ಇವರಲ್ಲಿ ಅನೇಕ ಪಿಸ್ತೂಲುಗಳು ಹಾಗೂ ಬಾಂಬ್‌ಗಳು ಸಿಕ್ಕಿವೆ ಎಂದು ಅವನನ್ನು ಬಂಧಿಸಲಾಗಿತ್ತು. ಹಾಗಿದ್ದರೆ ಕಳಸಕರ ನ್ಯಾಯವಾದಿ ಪುನಾಳೆಕರ ಇವರು ಹೇಳಿದಂತೆ ತಮ್ಮನ್ನು ರಕ್ಷಿಸಿ ಕೊಳ್ಳಲು ಕೇವಲ ದಾಭೋಲಕರ ಹತ್ಯೆಯ ಪಿಸ್ತೂಲು ನಾಶ ಮಾಡಿದರು ಹಾಗೂ ಉಳಿದ ಪಿಸ್ತೂಲು ಹಾಗೂ ಬಾಂಬ್‌ಗಳನ್ನು ‘ಎಟಿಎಸ್ನವರು ಬಂದು ಬಂಧಿಸಬೇಕೆಂದು ಕಾಪಾಡಿ ಕೊಂಡಿಟ್ಟಿದ್ದರೆ ? ಯಾರೇ ಆರೋಪಿ ಹೀಗೆ ಎಂದಾದರೂ ಮಾಡಲು ಸಾಧ್ಯವೇ ? ಒಟ್ಟಾರೆ ಈ ಕಥೆಯೇ ಬೋಗಸ್ ಇದೆ.

೩. ದಾಭೋಲಕರರ ಶರೀರದಲ್ಲಿ ಯಾವ ಪಿಸ್ತೂಲಿನಿಂದ ಗುಂಡು ಹಾರಿಸಲಾಗಿತ್ತೋ ಆ ಪಿಸ್ತೂಲು ‘ಎಟಿಎಸ್ ಮನೀಷ ನಾಗೋರಿ ಹಾಗೂ ವಿಕಾಸ ಖಂಡೇಲವಾಲಾರಿಂದ ೨೦ ಜೂನ್ ೨೦೧೪ ರಲ್ಲಿಯೇ ಜಪ್ತಿ ಮಾಡಲಾಗಿತ್ತು. ಅಲ್ಲದೇ ದಾಬೋಲಕರರ ಶರೀರದಿಂದ ಸಿಕ್ಕಿದ ಗುಂಡು ಅದೇ ಪಿಸ್ತೂಲಿನಿಂದ ತಾಗಿರುವ ಬಗ್ಗೆ ‘ಬ್ಯಾಲೆಸ್ಟಿಕ್ ವರದಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ವರ್ಷ ೨೦೧೪ ರಿಂದ ಆ ಪಿಸ್ತೂಲು ಸಿಬಿಐ ವಶದಲ್ಲಿದ್ದರೆ ಆ ಪಿಸ್ತೂಲನ್ನು ನಾಶಪಡಿಸಿದ ಪ್ರಶ್ನೆಯೇ ಎಲ್ಲಿಂದ ಉದ್ಭವಿಸುತ್ತದೆ ?

೪. ನ್ಯಾಯವಾದಿ ಹಾಗೂ ಕಕ್ಷಿದಾರ ಇವರಲ್ಲಿನ ಸಂಭಾಷಣೆ ಖಾಸಗಿ ಇರುತ್ತದೆ ಮತ್ತು ನ್ಯಾಯವಾದಿ ಅದು ವಿಶೇಷ ಅಧಿಕಾರ ಇರುತ್ತದೆ. ಅದನ್ನೇ ನಾಳೆ ಅಪರಾಧವೆಂದು ಹೇಳಿದರೆ ಯಾರಾದರೂ ಕಾನೂನು ಸಲಹೆ ನೀಡುವ ನ್ಯಾಯವಾದಿಗೆ ಬೆದರಿಸಿ ಅವರಿಗೆ ಶುಲ್ಕ ನೀಡಲು ನಿರಾಕರಿಸಬಹುದು.

೫. ಆರೋಪಿ ಶರದ ಕಳಸಕರರನ್ನು ಅಕ್ಟೋಬರ್ ೨೦೧೮ ರಲ್ಲಿ ಬಂಧಿಸಲಾಯಿತು. ಆತನ ಮೇಲೆ ಸಿಬಿಐ ಫೆಬ್ರವರಿ ೨೦೧೯ ರಲ್ಲಿ ದೋಷಾರೋಪಪಟ್ಟಿಯನ್ನು ದಾಖಲಿಸಿದೆ. ಆದರೆ ನ್ಯಾಯವಾದಿ ಪುನಾಳೆಕರ ಇವರನ್ನು ಈಗ ದಿನಾಂಕ ೨೬ ಮೇ ೨೦೧೯ ರಂದು ಬಂಧಿಸಲಾಗುತ್ತದೆ. ಹಾಗಿದ್ದರೆ ಇದರ ಬಗ್ಗೆ ೮ ತಿಂಗಳ ಹಿಂದೆ ಮಾಹಿತಿ ಇರುವಾಗ ಸಿಬಿಐನವರು ಏಕೆ ಸುಮ್ಮನಿದ್ದರು ? ಲೋಕಸಭಾ ಚುನಾವಣೆಯಾದ ನಂತರ ಕ್ರಮ ಕೈಗೊಳ್ಳುವುದು, ಇದರ ಅರ್ಥ ದೊಡ್ಡ ಹಾಗೂ ಆಯೋಜನಾಬದ್ಧ ಸಂಚು ರೂಪಿಸಲಾಗಿದೆ.

೬. ನ್ಯಾಯವಾದಿ ಪುನಾಳೆಕರ ಇವರು ಮಾಲೇಗಾವ್-ಮಡಗಾವ್ ಬಾಂಬ್‌ಸ್ಫೋಟದಲ್ಲಿನ ಅನೇಕ ಆರೋಪಿಗಳ ಖಟ್ಲೆಯನ್ನು ಉಚಿತವಾಗಿ ನಡೆಸಿ ಅವರನ್ನು ನಿರಪರಾಧಿಯೆಂದು ಬಿಡುಗಡೆ ಮಾಡಿದರು. ಇಷ್ಟೇ ಅಲ್ಲದೇ, ಅನೇಕ ಹಿಂದುತ್ವವಾದಿ ಕಾರ್ಯಕರ್ತರು ಹಾಗೂ ಆದಿವಾಸಿ ಯುವಕರು ಹಾಗೂ ಪೀಡಿತ ವ್ಯಕ್ತಿಗಳನ್ನು ಖಟ್ಲೆಗಳಿಂದ ಬಿಡಿಸಿ ಅವರನ್ನು ಗೌರವದಿಂದ ಹೊಸಜೀವನ ನೀಡಿದರು.

೭. ೨೦೧೨ ನೇ ಸಾಲಿನಲ್ಲಿ ಮುಂಬೈ ಆಝಾದ ಮೈದಾನದಲ್ಲಾದ ಗಲಭೆಯಲ್ಲಿ ಪತ್ರಕರ್ತ ಹಾಗೂ ಪೊಲೀಸರ ಮೇಲಾದ ಭೀಕರ ಹಲ್ಲೆಯ ವಿರುದ್ಧ ಪತ್ರಕರ್ತರ ವತಿಯಿಂದ ನ್ಯಾಯವಾದಿ ಪುನಾಳೆಕರರು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಉಚಿತ ಖಟ್ಲೆ ನಡೆಸಿದರು. ಇದರಿಂದ ಸರಕಾರಕ್ಕೆ ಗಲಭೆ ಕೋರರಿಗೆ ದಂಡ ವಿಧಿಸಲೇ ಬೇಕಾಯಿತು. ಇದನ್ನು ಅನೇಕ ಪತ್ರಕರ್ತರೂ ಹತ್ತಿರದಿಂದ ನೋಡಿದ್ದಾರೆ.

೮. ‘ನಮ್ಮಲ್ಲಿ ಸಾಕ್ಷಿಗಳಿವೆ, ಎಂದು ಹೇಳುವ ಸಿಬಿಐ ಆರೋಪಿಗಳನ್ನು ಬಂಧಿಸಿದ ನಂತರ ಆ ಖಟ್ಲೆ ನಡೆಸುವ ಧೈರ್ಯವನ್ನೇಕೆ ತೋರಿಸುವುದಿಲ್ಲ ? ಡಾ. ವಿರೇಂದ್ರಸಿಂಹ ತಾವಡೆರವರನ್ನು ಬಂಧಿಸಿ ಅನೇಕ ವರ್ಷಗಳಾಗಿದ್ದರೂ ಆ ಖಟ್ಲೆಯು ಇದುವರೆಗೂ ಆರಂಭವಾಗಿಲ್ಲ. ಈ ಖಟ್ಲೆ ಶೀಘ್ರಗತಿಯಲ್ಲಿ ನ್ಯಾಯಾಲಯದಲ್ಲಿ ನಡೆಸಬೇಕೆಂದು ಅನೇಕಬಾರಿ ಆಗ್ರಹಿಸಿದರೂ ಸಿಬಿಐ ಮೇಲಿನ ನ್ಯಾಯಾಲಯಕ್ಕೆ ಹೋಗಿ ಖಟ್ಲೆ ನಡೆಸುವುದರ ಮೇಲೆಯೇ ತಡೆತರುತ್ತದೆ. ಅದರ ಪರಿಣಾಮದಿಂದ ಖಟ್ಲೆ ನಡೆಯದಿರುವುದರಿಂದ ಆರೋಪಿಗಳಿಗೆ ವರ್ಷಾನುವರ್ಷ ತಮ್ಮ ನಿರಪರಾಧಿತನ ಸಿದ್ಧ ಮಾಡಲು ಅಗದೆ ಸೆರೆಮನೆಯಲ್ಲಿ ಉಳಿಯಬೇಕಾಗುತ್ತಿದೆ. ಇನ್ನೊಂದೆಡೆ ಹೊಸ ಹೊಸ ಆರೋಪಿಗಳನ್ನು ಬಂಧಿಸಿ ಅವರ ತೇಜೋವಧೆ ಮಾಡುವ ಒಮ್ಮುಖ ಹಾಗೂ ಪ್ರಗತಿಪರ ಕಾರ್ಯಕ್ರಮ ನಡೆಯುತ್ತಿದೆ.

೯. ಹಿಂದೂ ವಿಧಿಜ್ಞ ಪರಿಷತ್ತಿನ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀ. ವಿಕ್ರಮ ಭಾವೆ ಇವರು ‘ಕೇಸರಿ ಭಯೋತ್ಪಾದನೆಯ ಬಂಡವಾಳವನ್ನು ಬಯಲಿಗೆಳೆಯುವ ‘ಮಾಲೇಗಾವ್ ಸ್ಫೋಟದ ಹಿಂದಿನ ಅದೃಶ್ಯ ಕೈವಾಡ ಈ (ಮರಾಠಿ) ಪುಸ್ತಕ ಬರೆದುದರಿಂದ ಭಯೋತ್ಪಾದನಾ ನಿಗ್ರಹ ದಳದ ಅನೇಕ ಅಧಿಕಾರಿ ಹಾಗೂ ಕಾಂಗ್ರೆಸ್‌ನ ನಿಜ ಸ್ವರೂಪ ಸಮಾಜದೆದುರು ಬಯಲಾಯಿತು. ಅದರಲ್ಲಿ ಸೆರೆಮನೆಯಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಮೇಲೆ ‘ಒಂದು ಒಳ್ಳೆಯ ಜೀವನ ನಡೆಸಬೇಕು, ಎಂದು ಶ್ರೀ. ಭಾವೆ ಇವರು ಒಬ್ಬ ವಕೀಲರ ನೇತೃತ್ವದಲ್ಲಿ ಮಾಹಿತಿ ಹಕ್ಕನ್ನು ಬಳಸಿ ರಾಜಗಡ ಜಿಲ್ಲೆಯ ಬಾಳಗಂಗಾ ಆಣೆಕಟ್ಟು ಹಾಗೂ ಕಮ್ಯುನಿಸ್ಟರು ಮಾಡಿದ ಅನೇಕ ಭ್ರಷ್ಟಾಚಾರಗಳನ್ನು ಬಯಲಿಗೆಳೆದರು. ಆದುದರಿಂದಲೇ ಶ್ರೀ. ಭಾವೆ ಇವರನ್ನೂ ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಯಿತು, ಎಂದು ನಮಗೆ ಅನಿಸುತ್ತದೆ. ಈ ‘ರಾಷ್ಟ್ರೀಯ ವಕೀಲರ ಅಧಿವೇಶನವು ನ್ಯಾಯವಾದಿ ಪುನಾಳೆಕರ ಹಾಗೂ ಶ್ರೀ. ವಿಕ್ರಮ ಭಾವೆಯವರ ಬೆಂಬಲಕ್ಕೆ ದೃಢವಾಗಿ ನಿಂತಿದ್ದು ಅವರ ಅನ್ಯಾಯಯುತ ಬಂಧನದ ವಿರುದ್ಧದ ಠರಾವನ್ನು ಒಕ್ಕೊರಳಿನಿಂದ ಅನುಮೋದಿಸಲಾಯಿತು.

Kannada Weekly | Offline reading | PDF