ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಅಂತರ್ಗತ ಉದ್ಯಮಿ ಪರಿಷತ್ತುಆಯೋಜಿಸಿರುವ ‘ಪ್ರಥಮ ಉದ್ಯಮಿ ಅಧಿವೇಶನ !

ಉದ್ಯಮಿಗಳೇ, ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯಕ್ಕಾಗಿ ಬೇಕಾಗುವ ಧನಶಕ್ತಿಯನ್ನು ಉತ್ಪತ್ತಿ ಮಾಡುವ ಜವಾಬ್ದಾರಿಯನ್ನು ವಹಿಸಿರಿ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ

‘ಮುಂಡುಗಿಂತ (ಲುಂಗಿಯಂತೆ ವಸ್ತ್ರ) ಧೋತಿ ಶ್ರೇಷ್ಠವಾಗಿರುವುದರ ಶಾಸ್ತ್ರ ಎಂಬ ಕನ್ನಡ ಭಾಷೆಯ ಗ್ರಂಥದ ಪ್ರಕಾಶನ ಮಾಡುತ್ತಿರುವ ಶ್ರೀ. ರಮೇಶ ಶಿಂದೆ, ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಪೂ. ಪ್ರದೀಪ ಖೇಮಕಾ ಹಾಗೂ ಶ್ರೀ. ಮನೋಜ ಖಾಡ್ಯೆ

ರಾಮನಾಥಿ (ಗೋವಾ) – ಧರ್ಮಸಮ್ಮತ ವ್ಯಾಪಾರದ ಮೂಲಕ ಸಮಾಜಸೇವೆ ಮಾಡುವುದು ಹಾಗೂ ರಾಜಕೋಷಕ್ಕೆ ತೆರಿಗೆಯ ಮೂಲಕ ಸಹಾಯ ಮಾಡಿ ರಾಷ್ಟ್ರವನ್ನು ಆರ್ಥಿಕವಾಗಿ ಸಕ್ಷಮವನ್ನು ಮಾಡುವುದು, ಇದು ಉದ್ಯಮಿಗಳ ಮುಖ್ಯ ಕರ್ತವ್ಯವಾಗಿದೆ. ಮೇವಾಡದ ಮಹಾರಾಣಾ ಪ್ರತಾಪ ಇವರು ಪುನಃ ರಾಜ್ಯವನ್ನು ಪ್ರಾಪ್ತ ಮಾಡಿಕೊಳ್ಳಲು ಅಕಬರನ ವಿರುದ್ಧ ಯುದ್ಧ ಸಾರಿದರು, ಆಗ ಭಾಮಾಶಾಹ ಎಂಬ ವ್ಯಾಪಾರಿಯು ತನ್ನ ಧನಶಕ್ತಿಯನ್ನು ಈ ಕಾರ್ಯಕ್ಕೆ ಸಮರ್ಪಿಸಿದನು. ಹಿಂದೂ ರಾಷ್ಟ್ರ-ಸ್ಥಾಪನೆಯು ಆದರ್ಶ ರಾಷ್ಟ್ರವನ್ನು ಸ್ಥಾಪಿಸುವುದು. ಅಂದರೆ ಧರ್ಮಸಂಸ್ಥಾಪನೆಯ ಕಾರ್ಯವೇ ಆಗಿದೆ. ಈ ಕಾರ್ಯಕ್ಕಾಗಿ ಬೇಕಾಗುವ ಧನಶಕ್ತಿಯನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಉದ್ಯಮಿಗಳು ಎತ್ತಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಹೇಳಿದರು. ಅವರು ಮೇ ೨೮ ರಂದು ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಂಗಣದಲ್ಲಿ ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂತರ್ಗತದಲ್ಲಿ ಉದ್ಯಮಿಗಳ ಪರಿಷತ್ತು ಆಯೋಜಿಸಿದ್ದ ‘ಪ್ರಥಮ ಉದ್ಯಮಿ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ವ್ಯಾಸಪೀಠದ ಮೇಲೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ.ರಮೇಶ ಶಿಂದೆ, ಉದ್ಯಮಿ ಪರಿಷತ್ತಿನ ಮಾರ್ಗದರ್ಶಕರಾದ ಪೂ. ಪ್ರದೀಪ ಖೆಮಕಾ ಮತ್ತು ಸಮಿತಿಯ ಪಶ್ಚಿಮ ಮಹಾರಾಷ್ಟ್ರ, ಕೋಕಣ ಹಾಗೂ ಗುಜರಾತ ರಾಜ್ಯದ ಸಮನ್ವಯಕರಾದ ಶ್ರೀ. ಮನೋಜ ಖಾಡ್ಯೆ ಇವರು ಉಪಸ್ಥಿತರಿದ್ದರು.

ಈ ಸಮಯದಲ್ಲಿ ಮಾರ್ಗದರ್ಶನ ಮಾಡುತ್ತಿರುವಾಗ ಶ್ರೀ. ರಮೇಶ ಶಿಂದೆಯವರು, “ಲೋಕಸಭೆಯ ಚುನಾವಣೆಯ ಕಾಲಾವಧಿಯಲ್ಲಿ ನಟ ಕಮಲ ಹಾಸನ ಇವರು ‘ಹಿಂದೂಗಳು ಭಯೋತ್ಪಾದಕರಾಗಿರುತ್ತಾರೆ, ಎಂಬ ಹೇಳಿಕೆಯನ್ನು ನೀಡಿದ್ದರು. ಅದನ್ನು ಆಕ್ಷೇಪಿಸಿದಾಗ ‘ಎಲ್ಲ ಧರ್ಮಗಳಲ್ಲಿ ಭಯೋತ್ಪಾದಕರು ಇರುತ್ತಾರೆ ಎಂದು ಹೇಳಿದರು. ಇನ್ನೂ ಮುಂದೆ ಹೋಗಿ ‘ಹಿಂದೂ ಈ ಶಬ್ದವು ವೇದದಲ್ಲಿಯೇ ಇಲ್ಲ, ಎಂದೂ ಸಹ ಹೇಳಿದ್ದರು. ನಾಯಕರು ಅಥವಾ ನಟರು ತಮ್ಮ ಕೆಲಸವನ್ನು ಮಾಡಬೇಕು. ಅವರು ಧರ್ಮದ ಬಗ್ಗೆ ಮಾತನಾಡಬಾರದು. ಇದರಿಂದ ಈ ರೀತಿಯ ಹೇಳಿಕೆಯನ್ನು ನೀಡುವವರಿಗೆ ಅದೇ ಸಮಯದಲ್ಲಿ ಖಂಡಿಸುವುದು ಆವಶ್ಯಕವಿದೆ. ೧೯೪೭ ರಲ್ಲಿ ಭಾರತವು ಸ್ವಾತಂತ್ರವಾಯಿತು; ಆದರೆ ಇದೇ ಭೂಮಿಗೆ ಸಂಬಂಧಿಸಿದ ತನ್ನ ನಿಲುವನ್ನು ನಿರ್ಮಿಸಲಿಲ್ಲ. ಭಾರತದಲ್ಲಿ ಇಂದಿಗೂ ವಿದೇಶಿ ಭಾಷೆ, ವಿದೇಶಿ ಕಾಲಗಣನೆ ನಡೆಯುತ್ತಿದೆ. ಆದ್ದರಿಂದ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ಸ್ಥಳೀಯ ತಂತ್ರಗಳನ್ನು ಕಾರ್ಯಗತಗೊಳಿಸಬೇಕಿದೆ. ಮಹಮ್ಮದ ಖಾನ ಬಂಗಶ ಈತನ ದಾಳಿಯ ಸಮಯದಲ್ಲಿ ಮಹಾರಾಷ್ಟ್ರದ ಬಾಜಿರಾವ ಪೇಶ್ವೆಯವರು ೧ ಸಾವಿರ ಕಿ.ಮೀ. ಹೋಗಿ ಬುಂದೇಲಖಂಡದಲ್ಲಿಯ ಛತ್ರಸಾಲ ರಾಜನಿಗೆ ಮಾಡಿದ ಸಹಾಯ ಇದು ಪ್ರಾಚೀನ ಕಾಲದಿಂದಲೂ ನಮ್ಮಲ್ಲಿರುವ ರಾಷ್ಟ್ರೀಯ ಏಕತೆಯ ಪರಂಪರೆಯನ್ನು ತೋರಿಸುತ್ತದೆ, ಎಂದರು. ಈ ಸಮಯದಲ್ಲಿ ಶ್ರೀ. ಮನೋಜ ಖಾಡ್ಯೆ ಇವರು ವ್ಯಾಪಾರಿ ಹಾಗೂ ಉದ್ಯಮಿಗಳು ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಯೋಗದಾನವನ್ನು ಹಾಗೂ ಅವರ ಸಂಘಟನೆಯ ದಿಕ್ಕು, ಹಾಗೂ ಪೂ. ಪ್ರದೀಪ ಖೆಮಕಾ ಇವರು ‘ಧರ್ಮಕಾರ್ಯಕ್ಕಾಗಿ ದಾನ ಮಾಡಿದರೆ ಸಾಧನೆಯ ದೃಷ್ಟಿಯಿಂದ ಇರುವ ಮಹತ್ವ ಈ ವಿಷಯದ ಮೇಲೆ ಮನೋಗತವನ್ನು ವ್ಯಕ್ತ ಮಾಡಿದರು.

 ಉದ್ಯಮಿಗಳ ಅಧಿವೇಶನದ ಉದ್ಘಾಟನೆಯನ್ನು ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಪೂ. ಪ್ರದೀಪ ಖೆಮಕಾ, ಶ್ರೀ. ಸಂಜೀವ ಕುಮಾರ, ಶ್ರೀ. ಕರುಣಾಪತಿ ದುಬೆ ಇವರ ಹಸ್ತದಿಂದ ದೀಪಪ್ರಜ್ವಲನೆಯನ್ನು ಮಾಡಲಾಯಿತು. ಈ ಅಧಿವೇಶನಕ್ಕೆ ದೇಶದಾದ್ಯಂತದ ವಿವಿಧ ರಾಜ್ಯಗಳಲ್ಲಿನ ಉದ್ಯಮಿಗಳು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ಸಮಯದಲ್ಲಿ ಸನಾತನದ ಗ್ರಂಥ ‘ಮುಂಡುಗಿಂತ(ಲುಂಗಿಯಂತೆ ವಸ್ತ್ರ) ಧೋತಿ ಶ್ರೇಷ್ಠವಾಗಿರುವುದರ ಶಾಸ್ತ್ರ, ಈ ಕನ್ನಡ ಭಾಷೆಯ ಗ್ರಂಥವನ್ನು ಪ್ರಕಾಶನ ಮಾಡಲಾಯಿತು. ದೀಪಪ್ರಜ್ವಲನೆಯ ನಂತರ ಸನಾತನ ಪುರೋಹಿತ ಪಾಠಶಾಲೆಯ ಪುರೋಹಿತರು ವೇದಮಂತ್ರವನ್ನು ಪಠಿಸಿದರು. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ.ಜಯಂತ ಬಾಳಾಜಿ ಆಠವಲೆ ಇವರು ಅಧಿವೇಶನದ ನಿಮಿತ್ತ ನೀಡಿದಂತಹ ಸಂದೇಶವನ್ನು ಸದ್ಗುರು ನಂದಕುಮಾರ ಜಾಧವ ಇವರು ಓದಿದರು. ಅಧಿವೇಶನದ ಸೂತ್ರ ಸಂಚಾಲನೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಸೌ. ಕ್ಷಿಪ್ರಾ ಜುವೆಕರ ಹಾಗೂ ಶ್ರೀ. ಕಾರ್ತಿಕ ಸಾಳುಂಕೆಯವರು ಮಾಡಿದರು.

Kannada Weekly | Offline reading | PDF