ನ್ಯಾಯವಾದಿ ಸಂಜೀವ ಪುನಾಳೆಕರ ಇವರ ಬಂಧನವು ಹಿಂದುತ್ವದ ಧ್ವನಿ ದಮನಿಸುವ ಯತ್ನ !

ಹಿಂದುತ್ವದ ಧ್ವನಿಯನ್ನು ದಮನಿಸುವ ಪ್ರಯತ್ನವನ್ನು ಇನ್ನು ಹಿಂದೂಗಳು ಸಹಿಸುವುದಿಲ್ಲ ! – ಹಿಂದೂ ಸಂಘಟನೆಗಳು

ಎಡದಿಂದ  ಶ್ರೀ. ಬಲರಾಮ ಠಾಕೂರ, ಸೌ. ನಯನಾ ಭಗತ, ಶ್ರೀ. ರಾಹುಲ್ ಭಟ್, ಡಾ. ವಿಜಯ ಜಂಗಮ, ಶ್ರೀ. ಸುನೀಲ ಘನವಟ, ಈಶ್ವರಪ್ರಸಾದ ಖಂಡೆಲವಾಲ ಮತ್ತು ಶ್ರೀ. ರಾಜೇಂದ್ರ ಸಾವಂತ

ಮುಂಬೈ – ನ್ಯಾಯವಾದಿ ಸಂಜೀವ ಪುನಾಳೆಕರ ಇವರು ಅನೇಕ ವರ್ಷಗಳಿಂದ ಹಿಂದೂ ಸಮಾಜಕ್ಕಾಗಿ ನಿಸ್ವಾರ್ಥ ಭಾವದಿಂದ ಸೇವೆಯನ್ನು ಮಾಡಿದ್ದಾರೆ. ಅನೇಕ ಹಿಂದುತ್ವವಾದಿ ಕಾರ್ಯಕರ್ತರಿಗೆ, ಸಂಘಟನೆಗಳಿಗೆ, ವಾರಕರಿ ಸಂಪ್ರದಾಯದವರಿಗೆ, ಆಧ್ಯಾತ್ಮಿಕ ಸಂಘಟನೆಗಳಿಗೆ ಹಾಗೂ ಸಮಾಜದಲ್ಲಿಯ ಪೀಡಿತರಿಗೆ, ದುಃಖದಲ್ಲಿರುವವರಿಗೆ ಅಡಚಣೆಯ ಸಮಯದಲ್ಲಿ ಸಮಯ-ಕಾಲವನ್ನೂ ನೋಡದೇ ಸಹಾಯ ಮಾಡಿದ್ದಾರೆ. ಆದ್ದರಿಂದ ಈ ಇಂತಹ ವ್ಯಕ್ತಿ ಎಂದೂ ತಪ್ಪು ಮಾಡಲು ಸಾಧ್ಯವಿಲ್ಲ, ಎಂಬುದು ನಮ್ಮ ದೃಢ ನಂಬಿಕೆಯಾಗಿದೆ. ಹಿಂದುತ್ವದ ಉತ್ತುಂಗ ಧ್ವನಿಯನ್ನು ಹಾಗೂ ಆಧಾರಸ್ತಂಭವಾಗಿರುವ ನ್ಯಾಯವಾದಿ ಪುನಾಳೆಕರ ಇವರನ್ನು ಬಂಧಿಸಿ ಸಿಬಿಐ ಒಂದು ರೀತಿಯಲ್ಲಿ ಹಿಂದುತ್ವಕ್ಕೆ ಬಹಿರಂಗವಾಗಿ ಸವಾಲೆಸಗಿದೆ, ಎಂದು ನಾವು ತಿಳಿಯುತ್ತೇವೆ; ಆದರೆ ‘ಹಿಂದಿನಂತೆ ನಾವು ಹಿಂದೂ ಸಮಾಜವನ್ನು ದಮನಿಸುವೆವು ಅಥವಾ ಹಿಂದೂ ಸಮಾಜ ಅನ್ಯಾಯವನ್ನು ಸುಮ್ಮನಿದ್ದು ಸಹಿಸಿಕೊಳ್ಳುವುದು, ಎಂಬ ಭ್ರಮೆಯಲ್ಲಿ ಸಿಬಿಐ ಹಾಗೂ ಪ್ರಗತಿಪರರು ಇರಬಾರದು. ಹಿಂದೂಗಳ ಶಕ್ತಿ ಈಗ ಜಾಗೃತವಾಗಿದೆ, ಇದು ಇತ್ತೀಚೆಗಷ್ಟೆ ನಡೆದ ಲೋಕಸಭೆಯ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ. ದೇಶದಾದ್ಯಂತ ಇದರ ಪರಿಣಾಮ ಕಾಣಿಸಿದೆ. ಆದ್ದರಿಂದ ಹಿಂದುತ್ವದ ಧ್ವನಿಯನ್ನು ದಮನಿಸಲು ಪ್ರಯತ್ನಿಸುವುದನ್ನು ಹಿಂದೂಗಳು ಇನ್ನು ಸಹಿಸುವುದಿಲ್ಲ, ಎಂಬುದನ್ನು ಎಲ್ಲರೂ ಗಮನದಲ್ಲಿಡಬೇಕು, ಎಂದು ಹಿಂದುತ್ವನಿಷ್ಠ ಸಂಘಟನೆಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದವು. ಅದರೊಂದಿಗೆ ನ್ಯಾಯವಾದಿ ಸಂಜೀವ ಪುನಾಳೆಕರ ಇವರ ಬೆಂಬಲಕ್ಕೆ ಧೃಢವಾಗಿ ಹಾಗೂ ಕೊನೆಯ ತನಕ ನಿಂತು ಅವರಿಗೆ ಸಹಾಯ ಮಾಡುವುದಾಗಿಯೂ ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳು ಈ ಸಮಯದಲ್ಲಿ ಸೂಚಿಸಿದವು. ಅದೇ ರೀತಿ ಈ ಅನ್ಯಾಯಯುತ ಬಂಧನದ ವಿರುದ್ಧ ಜನಜಾಗೃತಿಗಾಗಿ ದೇಶದಾದ್ಯಂತ ಹಿಂದೂ ಸಂಘಟನೆಗಳು ಆಂದೋಲನವನ್ನು ಆರಂಭಿಸಿರುವ ಬಗ್ಗೆಯೂ ಈ ಸಮಯದಲ್ಲಿ ಮಾಹಿತಿಯನ್ನು ನೀಡಲಾಯಿತು.
ಮುಂಬೈಯಲ್ಲಿ ಆಯೋಜಿಸಲಾಗಿದ್ದ ಒಂದು ಪತ್ರಿಕಾಗೋಷ್ಠಿಯಲ್ಲಿ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಈ ಮೇಲಿನ ನಿಲುವನ್ನು ಮಂಡಿಸಿದವು. ಇದರಲ್ಲಿ ‘ಕರಣಿ ಸೇನೆಯ ಮಹಾರಾಷ್ಟ್ರದ ಅಧ್ಯಕ್ಷರಾದ ಶ್ರೀ. ಜೀವನ ಸೊಲಂಕಿ, ‘ವೀರಶೈವ ಲಿಂಗಾಯತ ಸಮಾಜದ ಕಾರ್ಯಕಾರಣಿ ಅಧ್ಯಕ್ಷರಾದ ಹಾಗೂ ವಕ್ತಾರರಾದ ಡಾ. ವಿಜಯ ಜಂಗಮ, ‘ಲಷ್ಕರ-ಎ-ಹಿಂದ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಈಶ್ವರಪ್ರಸಾದ ಖಂಡೆಲವಾಲ, ‘ಪನೂನ ಕಾಶ್ಮೀರ ಸಂಘಟನೆಯ ಪಶ್ಚಿಮ ಭಾರತದ ಸಮನ್ವಯಕರಾದ ಶ್ರೀ. ರಾಹುಲ ಭಟ್, ‘ಸನಾತನ ಸಂಸ್ಥೆಯ ವಕ್ತಾರರಾದ ಸೌ. ನಯನಾ ಭಗತ, ‘ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಸಂಘಟಕ ಶ್ರೀ. ಸುನಿಲ ಘನವಟ ಮತ್ತು ಇತರ ಸಂಘಟನೆಯ ಪ್ರತಿನಿಧಿಗಳು ಈ ಸಮಯದಲ್ಲಿ ಉಪಸ್ಥಿತರಿದ್ದರು.

             ಈ ಸಮಯದಲ್ಲಿ ಮಾತನಾಡಿದ ಸಮಿತಿಯ ಶ್ರೀ. ಸುನೀಲ ಘನವಟ ಇವರು, ಪೊಲೀಸ್ ಕಸ್ಟಡಿಯಲ್ಲಿ ಹೊಡೆದು ಬಡಿದು ಆರೋಪಿಗಳಿಂದ ಪಡೆಯುವ ಹೇಳಿಕೆಯಿಂದ ನ್ಯಾಯವಾದಿ ಪುನಾಳೆಕರ ಇವರನ್ನು ಬಂಧಿಸುವುದೆಂದರೆ ವಕೀಲರ ಅಧಿಕಾರ ಹಾಗೂ ಸ್ವಾತಂತ್ರ್ಯದ ಮೇಲಿನ ಗದಾಪ್ರಹಾರವಾಗಿದೆ. ಕೇವಲ ಹಿಂದುತ್ವದ ಧ್ವನಿಯನ್ನು ದಮನಿಸಲು ಮಾಡಿದ ಇದೊಂದು ಅನ್ಯಾಯಯುತ ಕ್ರಮವಾಗಿದೆ. ಹಾಗಾಗಿ ಸಮಸ್ತ ಹಿಂದೂ ಸಂಘಟನೆಗಳು ಆಕ್ರೋಶಗೊಂಡಿವೆ. ಇತ್ತೀಚೆಗೆ ನೆರವೇರಿದ ಚುನಾವಣೆಯಲ್ಲಿ ಹಿಂದೂಗಳು ತಮ್ಮ ಸಂಘಟಿತ ಶಕ್ತಿಯನ್ನು ತೋರಿಸಿದ್ದಾರೆ. ಹಿಂದೂಗಳ ಮೇಲಿನ ಈ ಅನ್ಯಾಯ ನಿಲ್ಲಿಸದಿದ್ದರೆ ಹಿಂದೂಗಳು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸದೇ ಶಾಂತವಾಗಿರಲಾರರು ಎಂಬುದನ್ನು ಎಲ್ಲರೂ ಗಮನದಲ್ಲಿಡಬೇಕು, ಎಂದೂ ಅವರು ಹೇಳಿದರು.

          ಈ ಸಮಯದಲ್ಲಿ ‘ಲಷ್ಕರ-ಎ-ಹಿಂದ್ ನ ಶ್ರೀ. ಖಂಡೇಲವಾಲರವರು ಮಾತನಾಡುತ್ತಾ, “ಡಾ. ದಾಭೋಲಕರ ಹತ್ಯೆ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಬಿಟ್ಟು ನಿರಪರಾಧಿ ವ್ಯಕ್ತಿಗಳನ್ನು ಬಂಧಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಮಾಜಹಿತದ ಕಾರ್ಯ ಮಾಡುವ ನ್ಯಾಯವಾದಿ ಸಂಜೀವ ಪುನಾಳೆಕರರನ್ನು ಬಂಧಿಸುವುದು ಅತ್ಯಂತ ಆಘಾತಕಾರಿಯಾಗಿದೆ ಹಾಗೂ ಸಂದೇಹಾಸ್ಪದವಾಗಿದೆ. ಪುನಾಳೆಕರರು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ. ಈ ಹಿಂದೆಯೂ ಹಿಂದೂ ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ತೇಜೋವಧೆಯ ದೊಡ್ಡ ಸಂಚಿದೆ. ಇಂತಹ ಕೃತ್ಯ ಮಾಡುವ ಸಿಬಿಐ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು, ಎಂದರು.

Kannada Weekly | Offline reading | PDF