ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ಬಯಲಿಗೆಳೆಯಲು ಕೊನೆಯ ತನಕ ಕಾರ್ಯ ಮಾಡುತ್ತಿರುವೆವು ! – ನ್ಯಾಯವಾದಿ ರವೀಂದ್ರ ಘೋಷ, ಅಧ್ಯಕ್ಷರು, ‘ಬಾಂಗ್ಲಾದೇಶ ಮೈನಾರಿಟಿ ವಾಚ್, ಬಾಂಗ್ಲಾದೇಶ

ನ್ಯಾಯವಾದಿ ರವೀಂದ್ರ ಘೋಷ

ರಾಮನಾಥಿ (ಗೋವಾ) – ಬಾಂಗ್ಲಾದೇಶದ ಹಿಂದೂಗಳ ಸ್ಥಿತಿ ದಯನೀಯವಾಗಿದ್ದು ಹಿಂದೂ ಸ್ತ್ರೀಯರ ಮೇಲೆ ಬಲಾತ್ಕಾರ, ಹಿಂದೂಗಳ ಮನೆಯ ಲೂಟಿ ಅಥವಾ ಸುಡುವುದು, ದೇವಸ್ಥಾನ ಒಡೆಯುವುದು ಈ ರೀತಿಯು ಈಗ ಅಲ್ಲಿ ಪ್ರತಿನಿತ್ಯವಾಗಿದೆ. ಬಾಂಗ್ಲಾದೇಶದ ನಿರ್ಮಾಣದ ಸಮಯದಲ್ಲಿ ಶೇ. ೧೮ ರಿಂದ ೨೦ ರಷ್ಟು ಇದ್ದ ಹಿಂದೂಗಳ ಜನಸಂಖ್ಯೆಯು ಇಂದು ಅನೇಕ ಪ್ರದೇಶಗಳಲ್ಲಿ ಶೇ. ೧ ರಿಂದ ೮ ರಷ್ಟು ಆಗಿದೆ. ಬಾಂಗ್ಲಾದೇಶ ಸರಕಾರ ಹಿಂದೂಗಳ ರಕ್ಷಣೆಗಾಗಿ ನಿಷ್ಕ್ರಿಯವಾಗಿದೆ. ಇನ್ನು ಭಾರತ ಸರಕಾರವೇ ತನ್ನ ನಿಷ್ಕ್ರಿಯತೆಯನ್ನು ಬಿಟ್ಟು ನಮ್ಮ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಯ ಕಡೆ ಗಮನ ನೀಡಬೇಕಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡಲು ನಾವು ಕೊನೆಯವರೆಗೂ ಹೋರಾಡುವೆವು, ಎಂದು ‘ಬಾಂಗ್ಲಾದೇಶ ಮೈನಾರಿಟಿ ವಾಚ್’ನ ಅಧ್ಯಕ್ಷರಾದ ನ್ಯಾಯವಾದಿ ರವೀಂದ್ರ ಘೋಷ ಇವರು ಧೃಢವಾಗಿ ಹೇಳಿದರು. ಅವರು ಮೇ ೩೦ ರಂದು ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಮೊದಲನೆಯ ಭಾಗದಲ್ಲಿ ಮಾತನಾಡುತ್ತಿದ್ದರು.

‘ಎಬಿಪಿ ಮಾಝಾ’ ಈ ಮರಾಠಿ ವಾರ್ತಾವಾಹಿನಿಯು ಸ್ವಾತಂತ್ರ್ಯವೀರ ಸಾವರಕರರ ಜಯಂತಿಯಂದು ಅಂದರೆ ಮೇ ೨೮ ರಂದು ‘ಸ್ವಾತಂತ್ರ್ಯವೀರ ಸಾವರಕರ – ನಾಯಕರೋ ಖಳನಾಯಕರೋ ?’ ಎಂಬ ಕಾರ್ಯಕ್ರಮದ ಆಯೋಜನೆ ಮಾಡಿ ಕೋಟಿಗಟ್ಟಲೇ ರಾಷ್ಟ್ರಭಕ್ತರ ಭಾವನೆಯನ್ನು ನೋಯಿಸಿದ್ದಾರೆ. ‘ಎಬಿಪಿ ಮಾಝಾ’ ಈ ವಾರ್ತಾ ವಾಹಿನಿಯು ‘ಯಾರು ಪ್ರತ್ಯಕ್ಷವಾಗಿ ದೇಶವನ್ನು ವಿಭಜಿಸಿದರೋ, ಆ ಮೋಹನದಾಸ ಗಾಂಧಿ ಅಥವಾ ಜವಾಹರಲಾಲ ನೆಹರು’ ಇವರ ಹೆಸರಿನಲ್ಲಿ ‘ನಾಯಕರೋ ಅಥವಾ ಖಳನಾಯಕರೋ ?’ ಎಂಬ ಕಾರ್ಯಕ್ರಮವನ್ನು ಇಡುವ ಧೈರ್ಯವನ್ನು ಮಾಡುವರೇ ?, ಎಂದು ಪ್ರಶ್ನಿಸಿ ಭಾಜಪ ಸರ್ಕಾರವು ಸ್ವಾತಂತ್ರ್ಯವೀರ ಸಾವರಕರರಿಗೆ ‘ಭಾರತರತ್ನ’ ನೀಡಿ ಅವರ ರಾಷ್ಟ್ರಭಕ್ತಿ ಹಾಗೂ ಮಾತೃಭೂಮಿಯ ಅಸ್ಸೀಮ ತ್ಯಾಗವನ್ನು ಗೌರವಿಸಬೇಕು, ಎಂದು ಅಧಿವೇಶನದಲ್ಲಿ ಆಗ್ರಹಿಸಲಾಯಿತು. ವರ್ಲ್ಡ್ ಹಿಂದೂ ಫೆಡರೇಶನ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಅಜಯ ಸಿಂಗ ಅವರು ಮಾತನಾಡುತ್ತಾ, “ಹಿಂದೂಗಳಿಗೆ ನ್ಯಾಯವನ್ನು ಒದಗಿಸಲು ಎಲ್ಲ ಹಿಂದೂಗಳು ಒಟ್ಟಾಗುವುದು ಆವಶ್ಯಕವಿದೆ. ಹಿಂದೂ ಜನಜಾಗೃತಿ ಸಮಿತಿ ಭಾರತದಲ್ಲಿ ಹಿಂದೂಗಳನ್ನು ಜಾಗೃತಗೊಳಿಸಲು ಹಾಗೂ ಧರ್ಮಶಿಕ್ಷಣ ನೀಡಲು ಉತ್ತಮ ಕಾರ್ಯವನ್ನು ಮಾಡುತ್ತಿದೆ”, ಎಂದು ಹೇಳಿದರು. ಈ ಸಮಯದಲ್ಲಿ ಪ್ರಯಾಗರಾಜ (ಉತ್ತರಪ್ರದೇಶ)ದಲ್ಲಿಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಗುರುರಾಜ ಪ್ರಭು ಇವರು ಮಾತನಾಡುತ್ತಾ, “ಒಂದು ಷಡ್ಯಂತ್ರದ ಮೂಲಕ ನೇಪಾಳದಲ್ಲಿ ಸೆಕ್ಯೂಲರ್ ಪ್ರಜಾಪ್ರಭುತ್ವವನ್ನು ಹೇರಲಾಯಿತು. ನೇಪಾಳವನ್ನು ಕಬಳಿಸಲು ಚೀನಾವು ಪ್ರಯತ್ನಿಸುತ್ತಿದೆ. ಅಲ್ಲಿಯ ಹಿಂದೂಗಳ ಹಾಗೂ ಬೌದ್ಧರನ್ನು ಮತಾಂತರಿಸಲು ನೂರಾರು ಚರ್ಚಗಳು ಕಾರ್ಯನಿರತವಾಗಿವೆ. ನೇಪಾಳದಲ್ಲಿ ಪ್ರಜಾಪ್ರಭುತ್ವವನ್ನು ತರಲಾಯಿತೋ, ಆಗ ಸಂವಿಧಾನದಲ್ಲಿ ನೇಪಾಳವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲು ಜನರು ಧ್ವನಿಯನ್ನು ಎತ್ತಿದರು; ಆದರೆ ಸಂವಿಧಾನದಲ್ಲಿ ಒಮ್ಮೆಲೆ ‘ಜಾತ್ಯತೀತ’ ಈ ಶಬ್ದವನ್ನು ತುರುಕಿಸಿ ಸರ್ಕಾರವು ಜನರ ಬೆನ್ನಿಗೆ ಚೂರಿಯನ್ನು ಹಾಕಿತು. ನೇಪಾಳವು ಜಾತ್ಯತೀತ ದೇಶವಾದಾಗಿನಿಂದ ಅಲ್ಲಿಯ ಭಾರತ ವಿರೋಧಿ ಶಕ್ತಿಗಳಿಗೆ ಬಲ ಸಿಕ್ಕಿದೆ”, ಎಂದರು

ಹಿಂದೂಗಳ ರಕ್ಷಣೆಗಾಗಿ ಪ್ರತಿ ಗ್ರಾಮಕ್ಕೆ ಹೋಗಿ ಮತಾಂತರದ ವಿರುದ್ಧ ಕಾರ್ಯ ಮಾಡಿ ! – ಪೂ. ಮಹಂತ ಶ್ರೀರಾಮಜ್ಞಾನಿದಾಸಜಿ ಮಹಾರಾಜ, ಅಧ್ಯಕ್ಷರು, ಮಹಾತ್ಯಾಗಿ ಸೇವಾ ಸಂಸ್ಥಾನ, ಗೋಂದಿಯಾ, ಮಹಾರಾಷ್ಟ್ರ

ಇಂದು ದೇಶವು ಅರಾಜಕತೆಯ ಹೊಸ್ತಿನಲ್ಲಿದೆ. ಮತಾಂತರ ಹಾಗೂ ಅನೇಕ ಸಮಸ್ಯೆಗಳು ನಮ್ಮೆದುರು ಬಾಯಿ ತೆರೆದು ನಿಂತಿವೆ. ಇಂತಹ ಸಮಯದಲ್ಲಿ ಪ್ರಭು ಶ್ರೀರಾಮನ ಆದರ್ಶವನ್ನು ಮುಂದಿಟ್ಟು ನಾವು ಹಿಂದುತ್ವದ ರಕ್ಷಣೆಗಾಗಿ ಪ್ರತಿ ಗ್ರಾಮಕ್ಕೆ ಹೋಗಿ ಕಾರ್ಯ ಮಾಡಬೇಕಾಗುವುದು. ವಿಜ್ಞಾನ ಪ್ರಗತಿ ಸಾಧಿಸಿದೆ; ಆದರೆ ಅದು ದಿಶಾಹೀನವಾಗಿದೆ. ಇಂತಹ ಸಮಯದಲ್ಲಿ ಧರ್ಮ-ಅಧ್ಯಾತ್ಮವೇ ದೇಶದ ಆಶಾಸ್ಥಾನವಾಗಿದೆ. ವೃದ್ಧರು ಯುವಕರಿಗೆ ಧರ್ಮ ಕಾರ್ಯಕ್ಕಾಗಿ ದಿಶೆ ನೀಡುವುದು ಆವಶ್ಯಕವಾಗಿದೆ, ಎಂದು ಮಹಾರಾಷ್ಟ್ರದ ಗೋಂದಿಯಾದ ಮಹಾತ್ಯಾಗಿ ಸೇವಾ ಸಂಸ್ಥಾನದ ಅಧ್ಯಕ್ಷ ಪೂ. ಮಹಂತ ಶ್ರೀರಾಮಜ್ಞಾನಿ ದಾಸಜಿ ಮಹಾರಾಜರು ಮನೋಗತವನ್ನು ವ್ಯಕ್ತಪಡಿಸಿದರು. ಅವರು ‘ಮತಾಂತರದ ಸಮಸ್ಯೆ ಮತ್ತು ಉಪಾಯ’ ಈ ಚರ್ಚಾಕೂಟದಲ್ಲಿ ಮಾರ್ಗರ್ಶನ ಮಾಡುವಾಗ ಮಾತನಾಡುತ್ತಿದ್ದರು. ಈ ಚರ್ಚಾಕೂಟದಲ್ಲಿ ಮತಾಂತರದ ವಿರುದ್ಧ ನಿರ್ಧಿಷ್ಠ ಕೃತಿ ಮಾಡುವುದು ಆವಶ್ಯಕವಾಗಿದೆ ಎಂದು ಪ್ರತಿಯೊಬ್ಬರೂ ಆಗ್ರಹಿಸಿದರು.

ಹಿಂದೂಗಳೇ, ರಾಷ್ಟ್ರ ಕಾರ್ಯಕ್ಕಾಗಿ ಜಾಗೃತರಾಗಿ ! – ಪೂ. ಚಂದ್ರಕಾಂತ ಶುಕ್ಲ ಮಹಾರಾಜ, ಭಾಗವತ ಕಥಾವಾಚಕರು, ಗುಜರಾತ

ಸಂಸತ್ತಿನಲ್ಲಿ ಕೆಲವು ಹಿಂದೂ ಜನಪ್ರತಿನಿಧಿಗಳು ಹಿಂದೂ ಧರ್ಮದ ಮೇಲೆ ಅವಮಾನವಾಗುತ್ತಿರುವಾಗ ಮೌನಕ್ಕೆ ಶರಣಾಗುತ್ತಾರೆ, ಅದೇ ರಿತಿ ನಿಷ್ಕ್ರಿಯರಾಗುತ್ತಾರೆ. ಹಿಂದೂ ಜನಜಾಗೃತಿ ಸಮಿತಿಯ ನೇತೃತ್ವದಿಂದ ನಾವು ‘ಕೇದಾರನಾಥ’ ಚಲನಚಿತ್ರವನ್ನು ವಿರೋಧಿಸಿ ಅದರ ಪ್ರದರ್ಶನವನ್ನು ನಿಲ್ಲಿಸಿದೆವು. ಇದೇ ರೀತಿ ಪ್ರತಿಯೊಬ್ಬರು ಅವರವರ ಸ್ತರದಲ್ಲಿ ಕಾರ್ಯ ಮಾಡಲು ಪ್ರಯತ್ನಿಸಬೇಕಾಗಿದೆ. ಹಿಂದೂಗಳು ಈಗ ಜಾಗೃತವಾಗಬೇಕಾಗಿದೆ; ಇಲ್ಲದಿದ್ದರೆ ಇದು ಕೊನೆಯ ಅವಕಾಶವೆಂದು ತಿಳಿದುಕೊಳ್ಳಬೇಕಾಗಿದೆ, ಎಂಬ ಮನೋಗತವನ್ನು ಗುಜರಾತಿನ ಭಗವತವಕಥಾ ವಾಚಕರಾದ ಪೂ. ಚಂದ್ರಕಾಂತ ಶುಕ್ಲ ಮಹಾರಾಜರು ಹೇಳಿದರು. ಅವರು ‘ಹಿಂದೂಗಳನ್ನು ಸಂಘಟಿಸುವ ಪ್ರಯತ್ನ’ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅಸ್ಸಾಂದಲ್ಲಿನ ಹಿಂದೂ ಜಾಗರಣಾ ಮಂಚ್‌ನ ದಕ್ಷಿಣ ಅಸ್ಸಾಂ ಪ್ರಾಂತನ ಕಾನೂನು ಪ್ರಮುಖರಾದ ನ್ಯಾಯವಾದಿ ರಾಜೀವ ನಾಥ ಇವರು ‘ಅಸ್ಸಾಂ ರಾಜ್ಯದಲ್ಲಿ ಕಾನ್ವೆಂಟ್ ಶಾಲೆಗಳ ಮಾಧ್ಯಮದಿಂದ ಕ್ರೈಸ್ತರ ಮತಾಂತರವು ಹೆಚ್ಚಾಗುತ್ತಿದೆ; ಆದರೆ ನಾವು ಪ್ರಯತ್ನವನ್ನು ಮಾಡಿ ಶಾಲೆಯಲ್ಲಿ ಸರಸ್ವತಿ ಪೂಜೆಯನ್ನು ಆರಂಭಿಸಿದೆವು’, ಎಂದು ಹೇಳಿದರು. ದೆಹಲಿಯಲ್ಲಿನ ‘ಅಗ್ನಿವೀರ’ನ ಶ್ರೀ. ಸತೀಶ ವೈದ ಇವರು ಹಿಂದೂಗಳ ಮತಾಂತರವನ್ನು ತಡೆಯಲು ಮಾಡಿದ ಪ್ರಯತ್ನವನ್ನು ಹಾಗೂ ಅದಕ್ಕೆ ಸಿಕ್ಕಿದ ಜಯದ ಬಗ್ಗೆ ಮನೋಗತವನ್ನು ವ್ಯಕ್ತಪಡಿಸಿದರು.

Kannada Weekly | Offline reading | PDF