ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗಾಗಿ ಜೀವವನ್ನು ಪಣಕ್ಕಿಟ್ಟು ಹೋರಾಡುವ ‘ಬಾಂಗ್ಲಾದೇಶ ಮೈನಾರಿಟಿ ವಾಚ್ನ ಸಂಸ್ಥಾಪಕರಾದ ಪೂ. ರವೀಂದ್ರ ಘೋಷ್ (ವಯಸ್ಸು ೬೭ ವರ್ಷ) !

ಪೂ. (ನ್ಯಾಯವಾದಿ) ರವೀಂದ್ರ ಘೋಷರವರ ಪತ್ನಿ ಸೌ. ಕೃಷ್ಣಾ ಘೋಷ (ವಯಸ್ಸು ೬೩ ವರ್ಷ) ಇವರು ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪಿದರು !

ಪೂ. ರವೀಂದ್ರ ಘೋಷ್

ತಮ್ಮ ಮೇಲೆ ಆನೇಕ ಮಾರಣಾಂತಿಕ ಹಲ್ಲೆಗಳಾದರೂ ಅದರ ವಿಚಾರ ಮಾಡದೇ ಇಸ್ಲಾಮಿ ದೇಶವಾಗಿರುವ ಬಾಂಗ್ಲಾದೇಶದ ಹಿಂದೂಗಳ ಸಲುವಾಗಿ ಜೀವ ಪಣಕ್ಕಿಟ್ಟು ಹೋರಾಡುವ, ಅವರ ಆಧಾರಸ್ತಂಭವಾಗಿರುವ ಬಾಂಗ್ಲಾದೇಶದ ಮಾಜಿ ಸ್ವಾತಂತ್ರ್ಯಸೈನಿಕ ಹಾಗೂ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ನ ಸಂಸ್ಥಾಪಕರಾದ ನ್ಯಾಯವಾದಿ ರವೀಂದ್ರ ಘೋಷರವರು (ವಯಸ್ಸು ೬೭ ವರ್ಷ) ಅವರ ನಿಷ್ಕಾಮ ಕಾರ್ಯದಿಂದಾಗಿ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅದಿವೇಶನದ ಮೂರನೇ ದಿನದಂದು (೩೧.೫.೨೦೧೯) ಘೋಷಿಸಿದರು. ಪತಿಯ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಿರ್ಭಯರಾಗಿ ಹಿಂದುತ್ವದ ಕಾರ್ಯ ಮಾಡುವ ಮತ್ತು ಧರ್ಮಾಚರಣಿಯಾಗಿರುವ ಪೂ. (ನ್ಯಾಯವಾದಿ) ರವೀಂದ್ರ ಘೋಷರವರ ಪತ್ನಿ ಸೌ. ಕೃಷ್ಣಾ ಘೋಷ (ವಯಸ್ಸು ೬೩ ವರ್ಷ) ಇವರು ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿದ್ದಾರೆ ಎಂದು ಘೋಷಿಸಲಾಯಿತು. ಸಮಿತಿಯ ಪೂರ್ವೋತ್ತರ ಭಾರತ ಮಾರ್ಗದರ್ಶಕರಾದ ಪೂ. ನಿಲೇಶ ಸಿಂಗಬಾಳ ಇವರು ಪೂ. (ನ್ಯಾಯವಾದಿ) ರವೀಂದ್ರ ಘೋಷರವರಿಗೆ ಪುಷ್ಪಹಾರ ಅರ್ಪಣೆ ಮಾಡಿ ಮತ್ತು ಉಡುಗೊರೆ ವಸ್ತುಗಳನ್ನು ಕೊಟ್ಟು ಸನ್ಮಾನ ಮಾಡಿದರು ಹಾಗೂ ಸನಾತನದ ಸದ್ಗುರು (ಕು.) ಸ್ವಾತಿ ಖಾಡ್ಯೆಯವರು ಸೌ. ಕೃಷ್ಣಾ ಘೋಷರವರಿಗೆ ಉಡುಗೊರೆ ಕೊಟ್ಟು ಸತ್ಕಾರ ಮಾಡಿದರು. ಈ ಪ್ರಸಂಗದಲ್ಲಿ ಪೂ. (ನ್ಯಾಯವಾದಿ) ರವೀಂದ್ರ ಘೋಷ ಮತ್ತು ಸೌ. ಕೃಷ್ಣಾ ಘೋಷ ಇವರು ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.

Kannada Weekly | Offline reading | PDF