ಅಲ್ಪಸಂಖ್ಯಾತಪ್ರೇಮ !

ನಮ್ಮ ದೇಶದ ಎಲ್ಲ ಪಕ್ಷಗಳ ಸರಕಾರಗಳು ಬಹುಸಂಖ್ಯಾತರ ಭಾವನೆಯನ್ನು ಕಡೆಗಣಿಸಿ ಅಲ್ಪಸಂಖ್ಯಾತರ ಭಾವನೆಯನ್ನು ಕಾಯಲು, ಅಂದರೆ ಅವರನ್ನು ಓಲೈಸಲು ಹಾತೊರೆಯುತ್ತಿರುತ್ತವೆ. ತನ್ನನ್ನು ‘ಹಿಂದುತ್ವನಿಷ್ಠವೆಂದು ಹೇಳಿಕೊಳ್ಳುವ ಭಾಜಪವು ಇದಕ್ಕೆ ಹೊರತಾಗಿಲ್ಲ, ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತರ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆಯಿಂದ ಮತ್ತೊಮ್ಮೆ ಸ್ಪಷ್ಟವಾಯಿತು. ‘ದೇಶದಲ್ಲಿ ಬಡವರ ಶೋಷಣೆಯಾದಂತೆಯೇ ಅಲ್ಪಸಂಖ್ಯಾತರ ಶೋಷಣೆಯೂ ಆಗಿದೆ. ಅವರಲ್ಲಿ ಭಯ ಹುಟ್ಟಿಸಲಾಯಿತು. ಅಲ್ಪಸಂಖ್ಯಾತರನ್ನು ಯಾವಾಗಲೂ ಮತಪೆಟ್ಟಿಗೆಯೆಂದು ಉಪಯೋಗಿಸಲಾಗಿದೆ. ಅವರನ್ನು ಹತ್ತಿಕ್ಕಲಾಯಿತು. ಅವರ ಶಿಕ್ಷಣದ, ಅದೇರೀತಿ ಆರೋಗ್ಯದ ವಿಚಾರ ಮಾಡಲಿಲ್ಲ. ೨೦೧೯ ರಲ್ಲಿ ನಮಗೆ ಇದನ್ನು ಬದಲಿಸಲಿಕ್ಕಿದೆ. ನಮಗೆ ಅಲ್ಪಸಂಖ್ಯಾತರ ವಿಶ್ವಾಸವನ್ನು ಗಳಿಸಲಿಕ್ಕಿದೆ, ಎಂದು ಇತ್ತೀಚೆಗೆ ಪ್ರಧಾನಿ ಮೋದಿಯವರು ಹೇಳಿದ್ದರು. ಪ್ರಧಾನಮಂತ್ರಿಯವರು ತಮ್ಮ ಸರಕಾರದ ಎರಡನೇಯ ಅವಧಿಯ ಕಾರ್ಯದ ದಿಕ್ಕು ಏನಿರಬಹುದು ಎಂಬುದನ್ನು ಸ್ವಲ್ಪದರಲ್ಲಿ ಹಿಂದೂಗಳಿಗೆ ಸ್ಪಷ್ಟವಾಗಿ ಹೇಳಿದರು. ಅದರ ಬಗ್ಗೆ ಯಾವುದೇ ಸಂದೇಹವಿಡಲಿಲ್ಲ; ಆದ್ದರಿಂದಲೇ ಅವರ ಈ ಅಂಶದ ಬಗ್ಗೆ ಸವಿಸ್ತಾರವಾಗಿ ವಿಚಾರ ಮಾಡುವುದು ಆವಶ್ಯಕವಿದೆ.

ಪ್ರಧಾನಮಂತ್ರಿಯ ಈ ಮೇಲಿನ ಹೇಳಿಕೆಯು ಅತ್ಯಂತ ಗಂಭೀರವಾಗಿದೆ. ಮೊದಲಿಗೆ ಅವರು ‘ದೇಶದಲ್ಲಿ ಬಡವರಂತೆ ಅಲ್ಪಸಂಖ್ಯಾತರ ಶೋಷಣೆಯೂ ಆಗಿದೆ, ಎಂದು ಹೇಳಿ ತಮ್ಮದೇ ಆಡಳಿತದ ಮೇಲೆ ಬೊಟ್ಟು ಮಾಡಿದರು. ಇವರ ಈ ಹೇಳಿಕೆಯ ಸ್ಪಷ್ಟ ಅರ್ಥವೆಂದರೆ, ಕಳೆದ ೫ ವರ್ಷಗಳಲ್ಲಿ ಸರಕಾರಕ್ಕೆ ಬಡವರ ಹಾಗೂ ಅಲ್ಪಸಂಖ್ಯಾತರ ಶೋಷಣೆಯನ್ನು ನಿಲ್ಲಿಸಲು ಆಗಲಿಲ್ಲ. ಅಲ್ಪಸಂಖ್ಯಾತರ ಶೋಷಣೆಯನ್ನು ಯಾರು ಮತ್ತು ಹೇಗೆ ಮಾಡಿದರು, ಎಂಬುದನ್ನು ಮಾತ್ರ ಅವರು ಹೇಳಲು ಹಿಂಜರಿದರು. ಮೋದಿಯವರು ಯಾವಾಗಲೂ ತಾವು ಚಹಾ ಮಾರುವವರು ಎಂದು ಅಭಿಮಾನದಿಂದ ಹೇಳುತ್ತಾರೆ. ಅಂದರೆ ‘ಅವರು ಬಡವರಾಗಿದ್ದರು, ಎಂದು ಹೇಳಲಿಕ್ಕಿರುತ್ತದೆ. ಆದರೂ ಅವರ ಸರ್ಕಾರಕ್ಕೆ ಬಡವರ ಮೇಲಿನ ಅನ್ಯಾಯವನ್ನು ದೂರ ಮಾಡಲು ಆಗಲಿಲ್ಲ, ಎಂಬುದನ್ನು ಸ್ವತಃ ಅವರೇ ಸ್ವೀಕರಿಸಿದಂತಾಯಿತು.

ಪ್ರಧಾನಮಂತ್ರಿಯ ಮುಂದಿನ ಹೇಳಿಕೆಯು ಇನ್ನಷ್ಟು ಗಂಭೀರವಾಗಿದೆ. ಅವರು ಮಾತನಾಡುತ್ತಾ, “ದೇಶದಲ್ಲಿ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಲಾಯಿತು. ಅವರನ್ನು ಹತ್ತಿಕ್ಕಲಾಯಿತು !, ಎಂದರು. ೨೦೧೪ ರಲ್ಲಿ ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ನಂತರ ನಡೆದ ಕೆಲವು ಘಟನೆಗಳನ್ನು ಉಲ್ಲೇಖಿಸಿ ಪ್ರಗತಿ(ಅಧೋಗತಿ)ಪರರು ಅಸಹಿಷ್ಣುತೆ ಹೆಚ್ಚಾಗಿದೆ ಎಂದು ಡಂಗುರ ಸಾರಿದ್ದರು. ದೆಹಲಿಯ ಕೆಲವು ಚರ್ಚಗಳ ಮೇಲಾದ ದಾಳಿ, ಅಖ್ಲಾಕ್, ಅದೇರೀತಿ ಕೆಲವು ಗೋಸಾಗಾಟ ಮಾಡುವವರ ಮೇಲಾದ ಹಲ್ಲೆ ಇತ್ಯಾದಿ ಅಂಶದಿಂದ ಪ್ರಗತಿ(ಅಧೋಗತಿ)ಪರರು ಅಸಹಿಷ್ಣ್ಣುತೆ ಹೆಚ್ಚಾಗಿರುವ ಬಗ್ಗೆ ಕೋಲಾಹಲವೆಬ್ಬಿಸಿದ್ದರು. ಆ ಸಮಯದಲ್ಲಿ ಭಾಜಪ ಸರಕಾರದ ಮಂತ್ರಿಗಳು ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಇಲ್ಲವೆಂದು ಎದೆ ತಟ್ಟಿ ಹೇಳಿದ್ದರು; ಅಂದರೆ ‘ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸುತ್ತಿರಲಿಲ್ಲ, ಎಂದು ಆಗಾಗ ಅವರು ಹೇಳುತ್ತಿದ್ದರು. ಇಂದು ೪ ವರ್ಷಗಳ ನಂತರ ಪ್ರಧಾನಮಂತ್ರಿ ಮೋದಿಯವರು ‘ದೇಶದಲ್ಲಿ ಅಲ್ಪಸಂಖ್ಯಾತರನ್ನು ಹತ್ತಿಕ್ಕಲಾಯಿತು, ಹೀಗೆ ಹೇಳುತ್ತಿದ್ದರೆ, ಪ್ರಗತಿ(ಅಧೋಗತಿ)ಪರರ ಆರೋಪವು ನಿಜವಾಗಿತ್ತು, ಎಂಬುದು ಅವರು ಸ್ವತಃ ಒಪ್ಪಿದಂತಾಯಿತು. ಆದರೆ ಆಶ್ಚರ್ಯವೆಂದರೆ ‘ಭಾರತವು ಮುಸಲ್ಮಾನರಿಗಾಗಿ ಜಗತ್ತಿನಲ್ಲಿ ಎಲ್ಲಕ್ಕಿಂತ ಸುರಕ್ಷಿತ ದೇಶವಾಗಿದೆ, ಎಂದು ಜಗತ್ತಿನಾದ್ಯಂತ ಇಸ್ಲಾಮಿ ರಾಷ್ಟ್ರಗಳಿಗೆ ಅನಿಸುತ್ತದೆ; ಆದರೆ ಭಾರತದ ಪ್ರಧಾನಮಂತ್ರಿಗಳಿಗೆ ಹಾಗೆ ಅನಿಸುವುದಿಲ್ಲ ! ಇರಲಿ.

ಪ್ರಧಾನಮಂತ್ರಿಯ ಅಲ್ಪಸಂಖ್ಯಾತರ ಮೇಲಿನ ಪ್ರೀತಿ ಇಷ್ಟಕ್ಕೆ ನಿಲ್ಲಲಿಲ್ಲ, ಅವರು ‘ಅಲ್ಪಸಂಖ್ಯಾತರ ಶಿಕ್ಷಣದ, ಅದೇ ರೀತಿ ಆರೋಗ್ಯದ ಬಗ್ಗೆಯೂ ವಿಚಾರವಾಗಲಿಲ್ಲ, ಎಂದೂ ಹೇಳಿಬಿಟ್ಟರು. ಇಲ್ಲಿಯೂ ಅವರು ಸ್ವತಃ ತಮ್ಮ ಸರಕಾರದ ಬಗ್ಗೆಯೇ ಅವಿಶ್ವಾಸವನ್ನು ತೋರಿಸಿದ್ದಾರೆ. ೨೦೧೪ ನೇ ಇಸವಿಯಲ್ಲಿ ಮೋದಿಯವರು ಅಧಿಕಾರಕ್ಕೆ ಬಂದನಂತರ ಮುಸಲ್ಮಾನ ಹುಡುಗರಿಗೆ ಧಾರ್ಮಿಕ ಶಿಕ್ಷಣ (ವ್ಯವಹಾರಿಕ ಅಲ್ಲ) ನೀಡುವ, ಅದೇ ರೀತಿ ಭಯೋತ್ಪಾದಕರನ್ನು ನಿರ್ಮಾಣ ಮಾಡುವಂತಹ ಮಸೀದಿಗಳಿಗೆ ೧೦೦ ಕೋಟಿ ರೂಪಾಯಿಯ ಅನುದಾನವನ್ನು ನೀಡಿದ್ದರು ! ಈಗ ಅದೇ ಮೋದಿಯವರು ‘ಅಲ್ಪಸಂಖ್ಯಾತರ ಶಿಕ್ಷಣದ ವಿಚಾರ ಆಗಲಿಲ್ಲ, ಎಂದು ಹೇಳುತ್ತಿದ್ದಾರೆ. ಇದು ವಿರೋಧಾಭಾಸವಲ್ಲದೇ ಮತ್ತೇನು ? ಕೊನೆಯಲ್ಲಿ ಅವರು ‘೨೦೧೯ ರಲ್ಲಿ ನಮಗೆ ಇದೇ (ಮೇಲಿನ ಎಲ್ಲ ವಿಷಯಗಳನ್ನು) ಬದಲಾಯಿಸಬೇಕಿದೆ. ನಮಗೆ ಅಲ್ಪಸಂಖ್ಯಾತರ ವಿಶ್ವಾಸವನ್ನುಗಳಿಸಬೇಕಿದೆ, ಎಂದು ಹೇಳಿ ಭಾಜಪವು ಕಾಂಗ್ರೆಸ್ಸಿನ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಅಲ್ಪಸಂಖ್ಯಾತರನ್ನು ಓಲೈಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ವಿಶೇಷವೆಂದರೆ ಮೋದಿ ಯಾರ ಪರವಾಗಿ ಮಾತನಾಡುತ್ತಿದ್ದಾರೋ ಆ ಮುಸಲ್ಮಾನ ಮತ್ತು ಕ್ರೈಸ್ತರಿಗೆ ಮೋದಿಯ ಬಗ್ಗೆ ಇರುವ ನಿಲುವು ಎಲ್ಲರಿಗೆ ತಿಳಿದಿದೆ. ಇದೇ ಮುಸಲ್ಮಾನರು ಗುಜರಾತ ಗಲಭೆಯಲ್ಲಿ ಮೋದಿಯವರಿಗೆ ಖಳನಾಯಕ ಎಂದು ಹಣೆಪಟ್ಟಿಕಟ್ಟಲು ಕೋಲಾಹಲವೆಬ್ಬಿಸಿದ್ದರು ಮತ್ತು ಈಗಲೂ ಅದೇ ರೀತಿ ಮಾಡುತ್ತಿದ್ದಾರೆ. ಅದರಂತೆ ಈಶಾನ್ಯದಿಕ್ಕಿನ ಚರ್ಚ ಸಂಸ್ಥೆಯು ವಿಧಾನಸಭೆಯ ಚುನಾವಣೆಯ ಸಮಯದಲ್ಲಿ ‘ಭಾಜಪಗೆ ಮತ ಹಾಕಬಾರದು, ಎಂದು ಫತ್ವಾ ಹೊರಡಿಸಿತ್ತು. ಗೋವಾದಲ್ಲಿ ಒಂದು ಚರ್ಚನಿಂದ ಓರ್ವ ಪಾದ್ರಿ ಇದೇ ರೀತಿ ಹೇಳಿಕೆಯನ್ನು ನೀಡಿದ್ದರು. ಈ ಇತಿಹಾಸವನ್ನು ಹೇಗೆ ಮರೆಯಬಹುದು ?

ಹಿಂದೂಗಳ ವಿಚಾರ ಯಾರು ಮಾಡುತ್ತಾರೆ ?

ಯಾವ ಪ್ರಶ್ನೆಯನ್ನು ಪ್ರಧಾನಮಂತ್ರಿಯವರು ಅಲ್ಪಸಂಖ್ಯಾತರ ಸಂದರ್ಭದಲ್ಲಿ ಮಂಡಿಸಿದರೋ, ಅದೇ ಪ್ರಶ್ನೆ ೧೦೦ ಕೋಟಿ ಹಿಂದೂಗಳಿಗೂ ಕಾಡುತ್ತಿದೆಯಲ್ಲವೇ ? ಆದರೆ ಈಗ ಅಧಿಕಾರಕ್ಕೆ ಬಂದನಂತರ ಹಿಂದೂಗಳ ವಿಚಾರ ಮಾಡಲು ಸಮಯ ಯಾರಿಗಿದೆ ? ಯಾವ ರೀತಿ ದೇಶದಲ್ಲಿ ಮುಸಲ್ಮಾನ, ಕ್ರೈಸ್ತ ಇತ್ಯಾದಿ ಸಮಾಜವು ಅಲ್ಪಸಂಖ್ಯಾತವಾಗಿರುವುದು ಅಪರಾಧವಲ್ಲವೋ, ಅದೇ ರೀತಿ ಹಿಂದೂ ಬಹುಸಂಖ್ಯಾತವಾಗಿರುವುದು ಕೂಡ ಅಪರಾಧವಲ್ಲ. ಇಲ್ಲಿಯವರೆಗೆ ದೇಶದಲ್ಲಿ ಎಲ್ಲಕ್ಕಿಂತ ಹೆಚ್ಚು ಅನ್ಯಾಯ ಹಾಗೂ ಅತ್ಯಾಚಾರ ಬಹುಸಂಖ್ಯಾತ ಹಿಂದೂಗಳು ಸಹಿಸಬೇಕಾಯಿತು. ಭಾರತದ ವಿಭಜನೆಯಾದಾಗ ೧೦ ಲಕ್ಷ ಹಿಂದೂಗಳ ಕೊಲೆಯಾಯಿತು, ಕಾಶ್ಮೀರದಿಂದ ನಾಲ್ಕುವರೆ ಲಕ್ಷ ಹಿಂದೂಗಳನ್ನು ಹೊರದಬ್ಬಲಾಯಿತು, ಸಾವಿರಾರು ಜನರ ಹತ್ಯೆಯಾಯಿತು. ಇಂದಿಗೂ ಅಲ್ಲಿ ಹಿಂದೂಗಳು ಇರಲು ಸಾಧ್ಯವಾಗುತ್ತಿಲ್ಲ. ಈಶಾನ್ಯ ಭಾರತದಲ್ಲಿ ಹಿಂದೂಗಳು ಮತಾಂತರವಾಗಿ ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ದೇಶದಲ್ಲಿ ೮ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಕಾಶ್ಮೀರದಲ್ಲಿಯಂತೂ ಹಿಂದೂಗಳು ನಗಣ್ಯರಾಗಿದ್ದಾರೆ. ಹೀಗಿರುವಾಗ ಕಳೆದ ೫ ವರ್ಷಗಳಲ್ಲಿ ಇದರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಕಾರವೆತ್ತಲಿಲ್ಲ, ಇದು ವಾಸ್ತವಿಕತೆಯಾಗಿದೆ. ಇಷ್ಟಾದರೂ ಪ್ರಧಾನಮಂತ್ರಿಗೆ ಹಿಂದೂಗಳಲ್ಲ, ಅಲ್ಪಸಂಖ್ಯಾತರು ಅಸುರಕ್ಷಿತರಾಗಿದ್ದಾರೆ ಎಂದು ಹೇಗೆ ಅನಿಸುತ್ತದೆ ? ಪ್ರಧಾನಮಂತ್ರಿಯವರ ಒಮ್ಮಿದೊಮ್ಮೆಲೆ ಉಕ್ಕಿಬಂದ ಕೇವಲ ಅಲ್ಪಸಂಖ್ಯಾತರ ಮೇಲಿನ ಪ್ರೀತಿಯು ಆಶ್ಚರ್ಯಕರವಾಗಿದೆ. ಪ್ರಧಾನಮಂತ್ರಿಯವರ ಅಲ್ಪಸಂಖ್ಯಾತರ ಮೇಲಿನ ಪ್ರೀತಿಯನ್ನು ನೋಡಿದರೆ, ‘ಒಂದು ಕಾಲದಲ್ಲಿ ಗುಜರಾತನಲ್ಲಿ ಮುಸಲ್ಮಾನರ ದುಂಡನೆ ಟೋಪಿಯನ್ನು ಹಾಕಿಕೊಳ್ಳಲು ನಿರಾಕರಿಸಿದ ಇದೇ ಮೋದಿನಾ ?, ಎಂಬ ಪ್ರಶ್ನೆ ಮೂಡದೇ ಇರಲಾರದು ಅಲ್ಲವೇ ?

Kannada Weekly | Offline reading | PDF