ನಿರಪರಾಧಿ ಹಿಂದುತ್ವನಿಷ್ಠರನ್ನು ಬಂಧಿಸುವ ಪೊಲೀಸರಿಗೆ ೨೫ ಲಕ್ಷ ರೂಪಾಯಿ (ಬಹುಮಾನ) ನೀಡುವ ಹಿಂದುದ್ವೇಷಿ ಕರ್ನಾಟಕ ಸರಕಾರ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.

೧. ಇಂತಹ ಅಲ್ಪಸಂಖ್ಯಾಂತರನ್ನು ಹಿಂದೂಗಳು ಹೇಗೆ ನಂಬುವುದು ?

‘ಹನೀಫ ಮತ್ತು ಶಾಹರುಖ ಸಹಿತ ೧೫ ಮಂದಿ ಅಜ್ಞಾತರು ಮಥುರಾ (ಉತ್ತರಪ್ರದೇಶ)ದ ಚೌಕ ಪೇಟೆಯಲ್ಲಿ ಲಸ್ಸಿ ಮಾರಾಟ ಮಾಡುವ ಭಾರತ ಎಂಬವನನ್ನು ಥಳಿಸಿ ಹತ್ಯೆ ಮಾಡಿದರು. ಅನಂತರ ಅಲ್ಲಿ ಜನರು ಪ್ರತಿಭಟನೆಯನ್ನು ಆರಂಭಿಸಿದರು.

೨. ಕಾಂಗ್ರೆಸ್ ಮುಖ್ಯಮಂತ್ರಿಗಳ ಸಾವರಕರ ದ್ವೇಷವನ್ನು ತಿಳಿದುಕೊಳ್ಳಿ !

ಛತ್ತೀಸಗಡದ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಭೂಪೇಶ ಬಘೇಲ ಇವರು ‘ಸಾವರಕರರು ಧರ್ಮದ ಆಧಾರದಲ್ಲಿ ಹಿಂದೂ ಮತ್ತು ಮುಸಲ್ಮಾನ ರಾಷ್ಟ್ರ ಇವುಗಳ ಪರಿಕಲ್ಪನೆಯನ್ನು ಮಂಡಿಸಿದರು ಮತ್ತು ಅದನ್ನು ಮಹಮ್ಮದ ಅಲಿ ಜಿನ್ನಾ ಪೂರ್ಣ ಮಾಡಿದರು, ಎಂದು ಹೇಳಿದರು.

೩. ನಿರಪರಾಧಿ ಹಿಂದುತ್ವನಿಷ್ಠರನ್ನು ಬಂಧಿಸುವ ಪೊಲೀಸರಿಗೆ ೨೫ ಲಕ್ಷ ರೂಪಾಯಿ (ಬಹುಮಾನ) ನೀಡುವ ಹಿಂದುದ್ವೇಷಿ ಕರ್ನಾಟಕ ಸರಕಾರ !

ಗೌರಿ ಲಂಕೇಶ ಹತ್ಯೆಯ ತನಿಖೆ ಮಾಡುವ ವಿಶೇಷ ತನಿಖಾ ದಳಕ್ಕೆ ೨೫ ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗಿ ಕರ್ನಾಟಕದ ಕಾಂಗ್ರೆಸ್ ಮತ್ತು ಜನತಾದಳ (ಜಾತ್ಯತೀತ) ಮೈತ್ರಿ ಸರಕಾರ ಘೋಷಿಸಿದೆ.

೪. ಪ್ರಧಾನಮಂತ್ರಿ ಮೋದಿಯವರು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ತರಬೇತಿ ಕೇಂದ್ರಗಳನ್ನು ನಾಶಗೊಳಿಸಬೇಕು !

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ೧೬ ಭಯೋತ್ಪಾದನಾ ತರಬೇತಿ ಕೇಂದ್ರಗಳು ಸಕ್ರಿಯವಾಗಿವೆ, ಎಂಬ ಮಾಹಿತಿಯು ಗೂಢಚರ ಇಲಾಖೆಗೆ ದೊರೆತಿದೆ. ಇಲ್ಲಿಯ ಎಲ್ಲ ಭಯೋತ್ಪಾದಕರು ಕಾಶ್ಮೀರದೊಳಗೆ ನುಸುಳುವ ಸಿದ್ಧತೆಯಲ್ಲಿದ್ದಾರೆ.

೫. ಪ್ರಗತಿ(ಅಧೋಗತಿ)ಪರರಿಗೆ ಮಮತಾ ಬ್ಯಾನರ್ಜಿಯವರ ಸರ್ವಾಧಿಕಾರ ಕಾಣಿಸುವುದಿಲ್ಲವೇ ?

‘ಜೈ ಶ್ರೀರಾಮ’ನ ಘೋಷಣೆಗಳನ್ನು ಕೂಗುವವರ ಚರ್ಮ ಸುಲಿದು ಹಾಕುವೆವು’, ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಎಚ್ಚರಿಕೆ ನೀಡಿದ್ದಾರೆ ಹಾಗೂ ಅವರನ್ನು ಬಂಧಿಸುವ ಆದೇಶವನ್ನೂ ಹೊರಡಿಸಿದ್ದಾರೆ.

೬. ಮತಾಂಧರಿಂದಾಗುತ್ತಿರುವ ಹಿಂದೂಗಳ ಹತ್ಯೆಗಳ ಕುರಿತು ಪ್ರಸಾರಮಾಧ್ಯಮಗಳು ಏಕೆ ಸುಮ್ಮನಿವೆ ?

ಮಧ್ಯಪ್ರದೇಶದ ದೇವಾಸದಲ್ಲಿ ಮಸೀದಿಯ ಎದುರು ಸಾಗುತ್ತಿದ್ದ ವಿವಾಹದ ದಿಬ್ಬಣದಲ್ಲಿನ ವಾದ್ಯಗಳ ಧ್ವನಿ ಕಡಿಮೆ ಮಾಡದಿದ್ದರಿಂದ ಅದರ ಮೇಲೆ ಮಸೀದಿಯಿಂದ ಕಲ್ಲುತೂರಾಟ ಮಾಡಲಾಯಿತು. ಅದರಲ್ಲಿ ಧರ್ಮೇಂದ್ರ ಶಿಂದೆ ಎಂಬ ಯುವಕನು ಮೃತಪಟ್ಟರೆ, ಇನ್ನೂ ಕೆಲವರು ಗಾಯಗೊಂಡರು.

೭. ಭಾರತವು ಪಾಕ್‌ಗೆ ಭಯೋತ್ಪಾದಕ ದೇಶವೆಂದು ಯಾವಾಗ ಘೋಷಿಸುವುದು ?

ಇಸ್ಲಾಮಾಬಾದದಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಭಾರತೀಯ ರಾಯಭಾರಿ ಕಛೇರಿಯು ಆಯೋಜಿಸಿದ ಇಫ್ತಾರ ಪಾರ್ಟಿಗೆಂದು ಆಗಮಿಸಿದ್ದ ಅತಿಥಿಗಳನ್ನು ಬೆದರಿಸಿ ಅವರನ್ನು ಕಾರ್ಯಕ್ರಮ ಸ್ಥಳದಿಂದ ಬಲವಂತವಾಗಿ ಮರಳಿ ಕಳುಹಿಸಿದರು ಹಾಗೂ ವಿಚಾರಣೆಯ ನೆಪದಲ್ಲಿ ಅವರ ವಾಹನಗಳನ್ನೂ ವಶಪಡಿಸಿಕೊಂಡರು.

Kannada Weekly | Offline reading | PDF