ನ್ಯಾಯವಾದಿ ಪುನಾಳೇಕರ ಪರ ಹೋರಾಡಲು ಸಿದ್ಧ !- ಹಿಂದುತ್ವನಿಷ್ಠ ನ್ಯಾಯವಾದಿ ಪಿ. ಕೃಷ್ಣಮೂರ್ತಿ, ಮಡಿಕೇರಿ

ಎಡದಿಂದ ನ್ಯಾಯವಾದಿ ಹೇಮಂತ ಕೆ.ಪಿ.,ನ್ಯಾಯವಾದಿ ಪಿ. ಕೃಷ್ಣಮೂರ್ತಿ ಮತ್ತು ವಕೀಲೆ ರಿಮಾ ಎಮ್.ಟಿ.

ಮಡಿಕೇರಿ – ಸಿಬಿಐ ಡಾ. ನರೇಂದ್ರ ದಾಬೋಲಕರ ಹತ್ಯೆ ಪ್ರಕರಣದಲ್ಲಿ ನ್ಯಾಯವಾದಿ ಸಂಜೀವ ಪುನಾಳೇಕರ ಇವರನ್ನು ಸಿಲುಕಿಸಲು ಪ್ರಯತ್ನಿಸುತ್ತಿದೆ. ಮಡಿಕೇರಿ ಜಿಲ್ಲೆಯ ಸಮಸ್ತ ಧರ್ಮಪ್ರೇಮಿ ನಾಗರಿಕರು, ನ್ಯಾಯವಾದಿಗಳು ಹಾಗೂ ದೇಶಾದ್ಯಂತದ ನ್ಯಾಯವಾದಿಗಳು ಈ ಬಂಧನವನ್ನು ಕಾನೂನುಮಾರ್ಗದಿಂದ ವಿರೋಧಿಸಬೇಕು, ಎಂದು ಹಿಂದುತ್ವನಿಷ್ಠ ನ್ಯಾಯವಾದಿ ಪಿ. ಕೃಷ್ಣಮೂರ್ತಿಯವರು ಪತ್ರಕರ್ತರ ಪರಿಷತ್ತಿನಲ್ಲಿ ಕರೆ ನೀಡಿದರು. ನ್ಯಾಯವಾದಿ ಸಂಜೀವ ಪುನಾಳೇಕರರವರ ಪರವಾಗಿ ಹೋರಾಡಲು ನಾನು ಸಿದ್ಧನಿದ್ದೇನೆ, ಎಂದೂ ಅವರು ಹೇಳಿದರು. ನ್ಯಾಯವಾದಿ ಪುನಾಳೇಕರರನ್ನು ಅನ್ಯಾಯವಾಗಿ ಬಂಧಿಸಿದ ವಿರುದ್ಧ ಮೇ ೩೦ ರಂದು ಇಲ್ಲಿ ಪತ್ರಕರ್ತರ ಪರಿಷತ್ತನ್ನು ಆಯೋಜಿಸಲಾಗಿತ್ತು.

ಈ ಪರಿಷತ್ತಿನಲ್ಲಿ ನ್ಯಾಯವಾದಿ ಕೃಷ್ಣಮೂರ್ತಿಯವರು ಮುಂದಿನ ವಿಷಯ ತಿಳಿಸಿದರು,

೧. ಹಿಂದುತ್ವನಿಷ್ಠರ ವಿರುದ್ಧ ಷಡ್ಯಂತ್ರ ನಡೆಸಿ ಖಟ್ಲೆ ದಾಖಲಿಸಲಾಗುತ್ತಿವೆ. ಈಗ ಅವರ ವತಿಯಿಂದ ಹೋರಾಡುವ ನ್ಯಾಯವಾದಿಗಳ ಮೇಲೆಯೇ ಖಟ್ಲೆ ದಾಖಲಿಸಲಾಗುತ್ತಿದೆ. ಇದು ಹಿಂದುತ್ವನಿಷ್ಠರನ್ನು ನಿರ್ನಾಮ ಮಾಡುವ ಆಯೋಜನಾಬದ್ಧ ಕುತಂತ್ರವಿದೆ. ಸಿಬಿಐನ ಓರ್ವ ಅಧಿಕಾರಿ ನಂದಕುಮಾರ ನಾಯರ ಇವರು ಸನಾತನ ಸಂಸ್ಥೆ, ಸನಾತನದ ಸಾಧಕರು ಮತ್ತು ಇತರ ಧರ್ಮಪ್ರೇಮಿ ಹಿಂದೂಗಳಿಗೆ ಡಾ. ದಾಭೋಲಕರ ಪ್ರಕರಣದಲ್ಲಿ ಸಿಕಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ಆಯಾಯ ಸಮಯಕ್ಕೆ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೇಕರ ಇವರು ಪ್ರಧಾನಮಂತ್ರಿ, ಕೇಂದ್ರ ದಕ್ಷತಾ ಆಯೋಗ, ಸಿಬಿಐನ ನಿರ್ದೇಶಕರು ಮುಂತಾದವರಲ್ಲಿ ಸಾಕ್ಷಿಗಳೊಂದಿಗೆ ದೂರು ನೀಡಿದರು. ಇದರ ಪರಿಣಾಮವಾಗಿ ನಂದಕುಮಾರ ನಾಯರ ಇವರು ನ್ಯಾಯವಾದಿ ಪುನಾಳೇಕರ ಇವರನ್ನೇ ಡಾ. ದಾಭೋಲಕರ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದಾರೆ, ಎಂದು ಅವರು ಆರೋಪಿಸಿದರು.

೨. ಕೇವಲ ಹಿಂದೂಗಳ ವತಿಯಿಂದ ಪ್ರತಿವಾದ ಮಾಡುತ್ತಾರೆ ಎಂದು ನ್ಯಾಯವಾದಿ ಸಂಜೀವ ಪುನಾಳೇಕರ ಇವರನ್ನು ಬಂಧಿಸಲಾಗಿದೆ. ಜಿಲ್ಲೆಯ ಅನೇಕ ನ್ಯಾಯವಾದಿಗಳು ಈ ಘಟನೆಯನ್ನು ಖಂಡಿಸುತ್ತಿದ್ದಾರೆ.

Kannada Weekly | Offline reading | PDF