ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ ಸಂಜೀವ ಪುನಾಳೆಕರ ಇವರನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಶ್ರೀರಾಮ ಸೇನೆಯಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮನವಿ

ನ್ಯಾಯವಾದಿ ಪುನಾಳೆಕರ ಇವರನ್ನು ಬಿಡುಗಡೆ ಮಾಡದಿದ್ದರೆ ಆಂದೋಲನ ಮಾಡುವುದಾಗಿ ಎಚ್ಚರಿಕೆ !

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವ ಶ್ರೀರಾಮ ಸೇನೆಯ ಪದಾಧಿಕಾರಿ ಮತ್ತು ಕಾರ್ಯಕರ್ತರು

ಮಂಗಳೂರು – ಹಿಂದೂಗಳ ಪರವಾಗಿ ನಿರಂತರವಾಗಿ ಹೋರಾಡುತ್ತಿದ್ದ ನ್ಯಾಯವಾದಿ ಸಂಜೀವ ಪುನಾಳೆಕರ ಇವರನ್ನು ಸಿ.ಬಿ.ಐ. ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹಿಂದೂ ನ್ಯಾಯವಾದಿಗಳನ್ನು ಮುಗಿಸುವ ಷಡ್ಯಂತ್ರವನ್ನು ಶ್ರೀರಾಮ ಸೇನೆಯು ಬಲವಾಗಿ ಖಂಡಿಸುತ್ತದೆ. ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ನ್ಯಾಯವಾದಿ ಪುನಾಳೆಕರ ಇವರು ೨೦೦೮ರ ಮಾಲೆಗಾಂವ ಸ್ಫೋಟದ ಕರಾಳ ಸತ್ಯವನ್ನು ಬಯಲಿಗೆಳೆದಿದ್ದು, ಅದೇ ರೀತಿಯಲ್ಲಿ ದಾಭೋಲಕರ ಹತ್ಯೆ ಪ್ರಕರಣ, ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿಯೂ ಅಮಾಯಕ ಹಿಂದೂಗಳನ್ನು ಬಂಧಿಸಿದಾಗ ಅವರ ಪರವಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸಾಧ್ವಿ ಪ್ರಜ್ಞಾಸಿಂಗ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕರವರ ಗೋವಾ ಪ್ರವೇಶ ನಿಷೇಧದ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿದ್ದು ನ್ಯಾಯವಾದಿ ಪುನಾಳೆಕರ ಇವರನ್ನು ಬಂಧಿಸಿ ಹಿಂದೂಗಳ ಧ್ವನಿಯನ್ನು ಅಡಗಿಸುವ ಷಡ್ಯಂತ್ರವು ಅತ್ಯಂತ ಖಂಡನೀಯವಾಗಿದ್ದು, ಇದನ್ನು ವಿರೋಧಿಸಿ ಶ್ರೀರಾಮ ಸೇನೆ ಹೋರಾಟ ನಡೆಸಲಿದೆ. ಅವರನ್ನು ಕೂಡಲೇ ಬಂಧನ ಮುಕ್ತಗೊಳಿಸಿ, ಹಿಂದೂ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎನ್ನುವ ಮನವಿಯನ್ನು ಶ್ರೀರಾಮ ಸೇನೆಯವತಿಯಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಯವರಿಗೆ ಇಲ್ಲಿಯ ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್ ಅಮ್ಟಾಡಿ, ಜಿಲ್ಲಾ ಅಧ್ಯಕ್ಷ ಶ್ರೀ. ಪ್ರದೀಪ ಮೂಡುಶೆಡ್ಡೆ, ಶ್ರೀ.ಅರುಣ ಕದ್ರಿ, ಶ್ರೀ.ಹರೀಶ ಬೊಕ್ಕಪಟ್ನ. ಶ್ರೀ. ಕಿಶೋರ್ ನೀರುಮಾರ್ಗ, ಶ್ರೀ. ವೆಂಕಟೇಶ ಪಡಿಯಾರ್, ಶ್ರೀ. ಪುರಂದರ ಕದ್ರಿ, ಶ್ರೀ. ಶಿವಾನಂದ ನೀರುಮಾರ್ಗ, ಶ್ರೀ. ರವಿರಾಜ ಮೂಡುಶೆಡ್ಡೆ, ಶ್ರೀ. ಗಣೇಶ ಮೂಡುಶೆಡ್ಡೆ ಮುಂತಾದವರು ಉಪಸ್ಥಿತರಿದ್ದರು.

Kannada Weekly | Offline reading | PDF