ನಮ್ರತೆ ಮತ್ತು ಸೇವಾಭಾವ ಹೊಂದಿರುವ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವ ಬೆಂಗಳೂರಿನ ನ್ಯಾಯವಾದಿ ವಿಜಯಶೇಖರ !

ಮೇ ೨೮ ರಂದು ಅಧಿವೇಶನದಲ್ಲಿ ನ್ಯಾಯವಾದಿ ವಿಜಯಶೇಖರ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವರೆಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿ ವಿಜಯಶೇಖರ ವ್ಯಕ್ತಪಡಿಸಿದ ಅಭಿಪ್ರಾಯ –

ನ್ಯಾಯವಾದಿ ವಿಜಯಶೇಖರ

ಇನ್ನು ಮುಂದೆ ಸಂಪೂರ್ಣ ಸಮರ್ಪಣಾ ಭಾವದಿಂದ ಸೇವೆ ಮಾಡಿ ಗುರುಕಾರ್ಯದಲ್ಲಿ ಅಳಿಲು ಸೇವೆಯನ್ನು  ಸಲ್ಲಿಸುತ್ತೇನೆ !- ನ್ಯಾಯವಾದಿ ವಿಜಯಶೇಖರ

ನಾನು ಶೇ ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವುದನ್ನು ಕೇಳುತ್ತಲೇ ಆಶ್ಚರ್ಯಚಕಿತನಾದೆನು. ನನ್ನ ತಾಯಿ ಮತ್ತು ಪತ್ನಿಯಿಂದಾಗಿ ನನಗೆ ಇದು ಸಾಧ್ಯವಾಯಿತು. ಗುರುದೇವರ ಕೃಪೆಯಿಂದ ಇದೆಲ್ಲವೂ ಸಾಧ್ಯವಾಯಿತು. ೨೦೦೩ರಲ್ಲಿ ನಾನು ಸನಾತನದ ಸಂಪರ್ಕಕ್ಕೆ ಬಂದೆನು. ಆಗಿನಿಂದ ನಾನು ನನಗೆ ಸಾಧ್ಯವಾದಷ್ಟು  ಗುರುಸೇವೆಯನ್ನು ಮಾಡುತ್ತೇನೆ. ಕಾರ್ಯಾಲಯದ ಸೇವೆ ಪ್ರಾರಂಭಿಸುವ ಮೊದಲು ನಾನು ಗುರುದೇವರಲ್ಲಿ ‘ಹೇ ಗುರುದೇವಾ ನನ್ನಿಂದ ಒಳ್ಳೆಯ ಕಾರ್ಯಗಳಾಗಲಿ, ಇದಕ್ಕಾಗಿ ನನಗೆ ಪ್ರೇರಣೆ ಮತ್ತು ಶಕ್ತಿಯನ್ನು ಒದಗಿಸಿರಿ ಎಂದು ಪ್ರಾರ್ಥಿಸುತ್ತೇನೆ. ನನ್ನಿಂದ ಸೇವೆಯಾಗ ಬೇಕೆಂದು ನಾನು ಸಾಧಕರನ್ನು ಕಾರ್ಯಕ್ರಮದ ಸ್ಥಳಕ್ಕೆ ಬಿಡುವುದು ಮತ್ತು ತದನಂತರ ಅವರನ್ನು ಅವರ ನಿವಾಸಕ್ಕೆ ತಲುಪಿಸುವುದು, ಇತ್ಯಾದಿ ಸೇವೆಗಳನ್ನು ಮಾಡುತ್ತೇನೆ. ಈ ವಿಷಯವನ್ನು ಒಬ್ಬ ಸಂತರಿಗೆ ಹೇಳಿದಾಗ ಅವರು ‘ನೀವು ಸಾರಥಿಯಾಗಿದ್ದೀರಿ. ಭಗವಾನ ಶ್ರೀಕೃಷ್ಣನೂ ಸಾರಥಿಯೇ ಆಗಿದ್ದನು. ಇನ್ನು ಮುಂದೆ ನಿಮಗೆ ಬಹಳ ಕಾರ್ಯಗಳನ್ನು ಮಾಡಬೇಕಾಗಿದೆ, ಎಂದು ಹೇಳಿದ್ದರು. ಗುರುದೇವರ ಕೃಪಾಶೀರ್ವಾದದಿಂದ ಇನ್ನು ಮುಂದೆ ನಾನು ಸಂಪೂರ್ಣ ಸಮರ್ಪಣಾ ಭಾವದಿಂದ ಸೇವೆಯನ್ನು ಮಾಡುತ್ತೇನೆ ಮತ್ತು ಗುರುಕಾರ್ಯದಲ್ಲಿ ಅಳಿಲು ಸೇವೆಯನ್ನು ಸಲ್ಲಿಸುತ್ತೇನೆ. ಎಂದರು.

ಸನಾತನದ ಕರ್ನಾಟಕ ರಾಜ್ಯ ಧರ್ಮಪ್ರಸಾರಕರಾದ ಪೂ. ರಮಾನಂದ ಗೌಡ ಇವರು ನ್ಯಾಯವಾದಿ ವಿಜಯಶೇಖರ ಇವರನ್ನು ಸತ್ಕರಿಸಿದರು.

‘ನಮ್ರತೆ, ಆಜ್ಞಾಪಾಲನೆ, ಸೇವಾಭಾವ ಈ ಗುಣಗಳಿಂದ ನ್ಯಾಯವಾದಿ ವಿಜಯಶೇಖರರ ಆಧ್ಯಾತ್ಮಿಕ ಉನ್ನತಿಯಾಗಿದೆ, ಎಂದು ಪೂ. ರಮಾನಂದ ಗೌಡರವರು ಹೇಳಿದರು.

Kannada Weekly | Offline reading | PDF