ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ ಸಂಜೀವ ಪುನಾಳೆಕರ ಇವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಸಮಸ್ತ ಹಿಂದುತ್ವನಿಷ್ಠ ಸಂಘಟನೆಗಳಿಂದ ಆಗ್ರಹ !

ನ್ಯಾಯವಾದಿ ಸಂಜೀವ ಪುನಾಳೆಕರ ಮತ್ತು ಶ್ರೀ. ವಿಕ್ರಮ ಭಾವೆಯವರ ಅನ್ಯಾಯಕರವಾಗಿ ಬಂಧನದ ಕುರಿತು ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಕುಮಟಾ, ಬೆಳಗಾವಿ ಮತ್ತು ವಿಜಯಪೂರದಲ್ಲಿಯೂ ಪ್ರತಿಭಟನೆ ಹಾಗೂ ಮಹಾರಾಷ್ಟ್ರದ ದಾದರ, ಠಾಣೆ, ನಂದುರಬಾರ, ಧುಳೆ, ನಗರ, ತಾಸಗಾಂವ (ಸಾಂಗಲಿ) ಸೋಲಾಪೂರದಲ್ಲಿ ಆಂದೋಲನ !

ದಾದರ(ಮುಂಬಯಿ)ಯಲ್ಲಿ ಆಂದೋಲನ ಮಾಡುತ್ತಿರುವ ಧರ್ಮಪ್ರೇಮಿಗಳು

ಮುಂಬಯಿ – ಡಾ. ದಾಭೋಲಕರ ಇವರ ಹತ್ಯೆಯ ಪ್ರಕರಣದಲ್ಲಿ ಪ್ರಖರ ಹಿಂದುತ್ವನಿಷ್ಠ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಗಳಾದ ನ್ಯಾಯವಾದಿ ಸಂಜೀವ ಪುನಾಳೆಕರ ಮತ್ತು ಪರಿಷತ್ತಿನ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀ. ವಿಕ್ರಮ ಭಾವೆಯವರನ್ನು ಕೇಂದ್ರೀಯ ತನಿಖಾ ದಳ (ಸಿ.ಬಿ.ಐ) ಮೇ ೨೫ ರಂದು ಬಂಧಿಸಿರುವುದು ಅತ್ಯಂತ ಖಂಡನೀಯ ಮತ್ತು ಸಂಶಯಾಸ್ಪದವಾಗಿದೆ. ಈ ಪ್ರಕರಣದಲ್ಲಿ ಕಳೆದ ೩ ವರ್ಷಗಳಲ್ಲಿ ಸಿ.ಬಿ.ಐ. ಅನೇಕ ನಿರಪರಾಧಿ ಹಿಂದೂಗಳನ್ನು ಶಂಕಿತರೆಂದು ಬಂಧಿಸಿದೆ. ಇದರಿಂದ ಸಿ.ಬಿ.ಐ. ನಡೆ ಹಿಂದುತ್ವನಿಷ್ಠರಲ್ಲಿ ಒತ್ತಡ ನಿರ್ಮಾಣ ಮಾಡುವಂತಹದ್ದಾಗಿದೆ. ಹಿಂದುತ್ವ ನಿಷ್ಠರೆಂದು ಹೇಳಿಕೊಳ್ಳುವ ಸರಕಾರ ಅಧಿಕಾರದಲ್ಲಿರುವಾಗ ಹಿಂದೂಗಳ ಮೇಲೆ ಇಂತಹ ಅನ್ಯಾಯವಾಗುತ್ತಿರುವುದು ಹಿಂದೂಗಳಿಗೆ ಆಘಾತಕಾರಿಯಾಗಿದೆ. ಏಕೆಂದರೆ ನ್ಯಾಯವಾದಿ ಸಂಜೀವ ಪುನಾಳೆಕರ ಮತ್ತು ಶ್ರೀ. ವಿಕ್ರಮ ಭಾವೆಯವರನ್ನು ಕೂಡಲೇ ಗೌರವದಿಂದ ಬಿಡುಗಡೆಗೊಳಿಸಬೇಕು ಎಂದು ಮಹಾರಾಷ್ಟ್ರ ಮತ್ತು  ಗಳು ಆಂದೋಲನಗಳನ್ನು  ನಡೆಸಿದವು.

ಮಹಾರಾಷ್ಟ್ರದಲ್ಲಿ ವಿವಿಧ ಸಂಘಟನೆಗಳ ಹಿಂದುತ್ವನಿಷ್ಠರು ಮೇ ೨೭ರಂದು ದಾದರ, ಠಾಣೆ, ಸೋಲಾಪೂರ, ನಂದುರಬಾರ, ನಗರ ಮತ್ತು ಸಾಂಗಲಿಯಲ್ಲಿ ಆಂದೋಲನಗಳನ್ನು ನಡೆಸಿದರು. ಮೇ ೨೬ ರಂದು ಕೊಲ್ಹಾಪುರದಲ್ಲಿಯೂ ಈ ಕುರಿತು ಆಂದೋಲನ ನಡೆಸಿದರು.

ಕರ್ನಾಟಕದ ಬೆಂಗಳೂರು, ಮಂಗಳೂರು, ಕುಮಟಾ ಮತ್ತು ವಿಜಯಪೂರ ಈ ನಾಲ್ಕು ನಗರಗಳಲ್ಲಿ ಹಿಂದುತ್ವನಿಷ್ಠರ ಪ್ರತಿಭಟನೆ !

ಬೆಂಗಳೂರು – ಪ್ರಖರ ಹಿಂದುತ್ವನಿಷ್ಠ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೆಕರ ಮತ್ತು ಪರಿಷತ್ತಿನ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀ. ವಿಕ್ರಮ ಭಾವೆಯವರನ್ನು ಕೇಂದ್ರೀಯ ತನಿಖಾ ದಳ (ಸಿ.ಬಿ.ಐ.) ಡಾ. ನರೇಂದ್ರ ದಾಭೋಲಕರ ಇವರ ಹತ್ಯೆಯ ಪ್ರಕರಣದಲ್ಲಿ ನಡೆಸಿದ ಬಂಧನದ ವಿರುದ್ಧ ಕರ್ನಾಟಕದ ಬೆಂಗಳೂರು, ಮಂಗಳೂರು, ಕುಮಟಾ ಮತ್ತು ವಿಜಯಪೂರ ನಗರಗಳಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಿಂದೂಗಳ ನ್ಯಾಯೋಚಿತ ಹಕ್ಕನ್ನು ಪಡೆಯಲು ಹೋರಾಡುವ ನ್ಯಾಯವಾದಿ ಸಂಜೀವ ಪುನಾಳೆಕರ ಇವರ ಬಂಧನ ಖಂಡನೀಯ ! – ನವೀನ ಗೌಡ, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು

ಬೆಂಗಳೂರು – ಹಿಂದೂಗಳ ನ್ಯಾಯೋಚಿತ ಹಕ್ಕನ್ನು ಪಡೆಯಲು ಹೋರಾಡುವ ನ್ಯಾಯವಾದಿ ಸಂಜೀವ ಪುನಾಳೆಕರ ಇವರ ಬಂಧನ ಖಂಡನೀಯವಾಗಿದೆಯೆಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನವೀನ ಗೌಡ ಹೇಳಿದರು. ಈ ಬಂಧನದ ವಿರುದ್ಧ ಬೆಂಗಳೂರಿನ ಟೌನ್ ಹಾಲ್ ಎದುರಿಗೆ ಹಿಂದುತ್ವನಿಷ್ಠರು ಪ್ರತಿಭಟನೆ ನಡೆಸಿದರು. ಶ್ರೀ. ಗೌಡ ತಮ್ಮ ಮಾತನ್ನು ಮುಂದುವರಿಸುತ್ತಾ, ಹಿಂದೂಗಳಿಗಾಗಿ ಹೋರಾಡುವವರ ರೆಕ್ಕೆಯನ್ನು ಕತ್ತರಿಸುವಂತಿದೆ. ನ್ಯಾಯವಾದಿ ಪುನಾಳೆಕರ ಇವರನ್ನು ಡಾ. ದಾಭೋಲಕರ ಇವರ ಹತ್ಯೆಯ ಪ್ರಕರಣದಲ್ಲಿ ಬಂಧಿಸಿರುವುದು ಒಂದು ರೀತಿಯ ಷಡ್ಯಂತ್ರ್ಯವಾಗಿದೆ. ಪ್ರಗತಿಪರರ ಮತ್ತು ಸಾಮ್ಯವಾದಿಗಳ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಹಿಂದುತ್ವ ನಿಷ್ಠರು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಇತರ ಹಿಂದುತ್ವನಿಷ್ಠ ಸಂಘಟನೆಗಳ ಅನೇಕ ಕಾರ್ಯಕರ್ತರೂ ಭಾಗವಹಿಸಿದ್ದರು.

ನ್ಯಾಯವಾದಿ ಪುನಾಳೆಕರ ಇವರನ್ನು ತಕ್ಷಣ ಬಿಡುಗಡೆ ಮಾಡಿ ! – ಮಂಗಳೂರಿನಲ್ಲಿ ಹಿಂದುತ್ವನಿಷ್ಠರ ಘೋಷಣೆ

ಮಂಗಳೂರು – ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ ಸಂಜೀವ ಪುನಾಳೆಕರ ಇವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಹಿಂದುತ್ವನಿಷ್ಠರು ಆಗ್ರಹಿಸಿದರು. ಈ ಬಂಧನವನ್ನು ಖಂಡಿಸಿ ಮಂಗಳೂರು ನಗರದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರಿಗೆ ಆಂದೋಲನ ನಡೆಸಲಾಯಿತು. ಇದರದಲ್ಲಿ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಆಂದೋಲನದ ಮುಖಾಂತರ ಮಂಡಿಸಲಾದ ಬೇಡಿಕೆಗಳು

ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ನಿಷ್ಪಕ್ಷಪಾತದಿಂದ ಮಾಡಬೇಕು. ಹಾಗೆಯೇ ಈ ಪ್ರಕರಣದಲ್ಲಿ ಸಿ.ಬಿ.ಐ. ಪಾತ್ರವನ್ನು ಕೂಡ ತನಿಖೆ ನಡೆಸಬೇಕು.

ಡಾ. ದಾಭೋಲಕರ ಹತ್ಯೆಯ ಪ್ರಕರಣದ ತನಿಖೆಯನ್ನು ಸಿ.ಬಿ.ಐ. ಅಧಿಕಾರಿ ನಂದಕುಮಾರ ನಾಯರ ಇವರಿಂದ ಹಿಂಪಡೆದು ಅದನ್ನು ಇತರ ನಿಷ್ಪಕ್ಷ ಅಧಿಕಾರಿಗೆ ವಹಿಸಬೇಕು ಅಥವಾ ಈ ತನಿಖೆಯನ್ನು ನ್ಯಾಯಾಲಯದ ನಿರೀಕ್ಷಣೆಯಲ್ಲಿ ನಡೆಸಬೇಕು.

Kannada Weekly | Offline reading | PDF