ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೆಕರ ಹಾಗೂ ಹಿಂದೂ  ವಿಧಿಜ್ಞ ಪರಿಷತ್ತಿನ ಶ್ರೀ. ವಿಕ್ರಮ ಭಾವೆ ಬಂಧನ

ನ್ಯಾಯವಾದಿ ಸಂಜೀವ ಪುನಾಳೆಕರರ ಬಂಧನ ಖಂಡನೀಯ ! – ಸನಾತನ ಸಂಸ್ಥೆ

ನ್ಯಾಯವಾದಿ ಸಂಜೀವ ಪುನಾಳೆಕರ

ಮುಂಬೈ – ಡಾ. ನರೇಂದ್ರ ದಾಭೋಳಕರ ಇವರ ಹತ್ಯೆ ಪ್ರಕರಣದಲ್ಲಿ ಸಿಬಿಐ ಹಿಂದೂ ವಿಧಿಜ್ಞ ಪರಿಷತ್ತಿನ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೆಕರ ಹಾಗೂ ‘ಮಾಲೇಗಾವ್ ಬಾಂಬ್‌ಸ್ಫೋಟದ ಹಿಂದಿರುವ ಅದೃಶ್ಯ ಕೈವಾಡ (ಮರಾಠಿ) ಈ ಪುಸ್ತಕದ ಲೇಖಕ ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ ಶ್ರೀ. ವಿಕ್ರಮ ಭಾವೆ ಇವರನ್ನು ಬಂಧಿಸಿದೆ. ಸನಾತನ ಸಂಸ್ಥೆಯು  ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಪತ್ರಿಕಾ ಪ್ರಕಟಣೆ ನೀಡಿ ಈ ಬಂಧನವನ್ನು ಖಂಡಿಸಿದ್ದು ಕೇಂದ್ರದಲ್ಲಿ ಹಿಂದುತ್ವವಾದಿ ಸರಕಾರ ಅಧಿಕಾರದಲ್ಲಿರುವಾಗ ನ್ಯಾಯವಾದಿ ಸಂಜೀವ ಪುನಾಳೆಕರ ಮತ್ತು ಶ್ರೀ. ವಿಕ್ರಮ ಭಾವೆ ಇವರ ಬಂಧನವಾಗುವುದು ಒಂದು ಷಡ್ಯಂತ್ರವಾಗಿದೆ. ಸನಾತನ ಸಂಸ್ಥೆಯ ಮೇಲೆ ಒತ್ತಡ ತರುವ ಪ್ರಗತಿಪರರ ಆಗ್ರಹದ ಮುಂದೆ ಸಿಬಿಐ ಮಣಿದಿದೆ. ಮಾಲೇಗಾವ್ ಸ್ಫೋಟ ಪ್ರಕರಣದಲ್ಲಿ ಕೇಸರಿ ಭಯೋತ್ಪಾದನೆಯ ಸುಳ್ಳುತನವನ್ನು ಹೊರಗೆಡವಿದ, ಸಮಾಜ ಹಿತಕ್ಕಾಗಿ ಅನೇಕ ಅರ್ಜಿ ಸಲ್ಲಿಸಿದ ನ್ಯಾಯವಾದಿ ಪುನಾಳೆಕರರ ಬಂಧನ ಗಂಭೀರವಾಗಿದೆ. ದೇಶಾದ್ಯಂತದ ದೇಶಭಕ್ತರು, ಹಿಂದೂ ಸಂಘಟನೆಗಳು, ನ್ಯಾಯವಾದಿಗಳು ನ್ಯಾಯವಾದಿ ಪುನಾಳೆಕರ ಇವರಿಗೆ ಬೆಂಬಲ ಸೂಚಿಸಿದ್ದಾರೆ, ಎಂದಿದ್ದಾರೆ.

Kannada Weekly | Offline reading | PDF