ಶ್ರೀಸತ್ಯನಾರಾಯಣ ದೇವರು

ಪ್ರತಿಯೊಬ್ಬ ಮನುಷ್ಯನ ಉತ್ಪತ್ತಿ ಈಶ್ವರನಿಂದ ಅಂದರೆ ಸಚ್ಚಿದಾನಂದದಿಂದ ಆಗಿದೆ. ಆದ್ದರಿಂದ ಮನುಷ್ಯನಿಗೆ ಈ ಮರ್ತ್ಯ ಲೋಕದಲ್ಲಿ ನಿರಂತರ ಆನಂದದ ಸೆಳೆತ ಇರುತ್ತದೆ. ಅದಕ್ಕಾಗಿ ಅವನು ಜೀವನವಿಡೀ ಸಂಘರ್ಷ ಮಾಡುತ್ತಿರುತ್ತಾನೆ ಹಾಗೂ ವಿವಿಧ ಮಾಧ್ಯಮಗಳಿಂದ ಆನಂದ ಪಡೆಯಲು ಪ್ರಯತ್ನಿಸುತ್ತಾನೆ; ಆದರೆ ಅವನ ಈ ಆನಂದವನ್ನು ಶಾಶ್ವತಕ್ಕಿಂತ ಅಶಾಶ್ವತದಿಂದ ಪಡೆಯುವ ಪ್ರಯತ್ನದ ಪ್ರಮಾಣ ಹೆಚ್ಚಿರುತ್ತದೆ; ಏಕೆಂದರೆ ಇಂದಿನ ಕಲಿಯುಗದಲ್ಲಿ ಅವನು ಈಶ್ವರೀ ಆನಂದದ ಕಡೆಗೆ ಹೋಗುವ ಬದಲು ಮಾಯೆಯ ಸುಖದ ಕಡೆಗೆ ಆಕರ್ಷಿಸಲ್ಪಡುತ್ತಾನೆ. ಅವನಿಗೆ ಯೋಗ್ಯ ಮಾರ್ಗವನ್ನು ತೋರಿಸಿ ಈಶ್ವರೀ ಆನಂದದ ಕಡೆಗೆ ಒಯ್ಯುವ ವ್ಯವಸ್ಥೆ ಈ ಕಲಿಯುಗದಲ್ಲಿ ಹಾಗೂ ಇಂದಿನ ಜಾತ್ಯತೀತ ಭಾರತದಲ್ಲಿ ಇಲ್ಲದ ಕಾರಣ, ಮಾಯೆಯ ಪ್ರಭಾವ ಹೆಚ್ಚಿರುವುದರಿಂದ ಅವನು ಆ ದಿಕ್ಕಿನಿಂದ ಹೋಗುವುದೇ ಇಲ್ಲ. ಆದ್ದರಿಂದ ಕೊನೆಗೆ ಅವನು ಈ ಮಾಯೆಯಲ್ಲಿಯೆ ಸಿಲುಕಿಕೊಂಡು ಜನನ-ಮರಣದ ಚಕ್ರದಲ್ಲಿ ಸಿಲುಕುತ್ತಾನೆ ಹಾಗೂ ಈಶ್ವರನೊಂದಿಗೆ ಅಂದರೆ ಸಚ್ಚಿದಾನಂದನೊಂದಿಗೆ ಏಕರೂಪವಾಗಲು ಸಾಧ್ಯವಾಗುವುದಿಲ್ಲ. ಸತ್ಯ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಮನುಷ್ಯನಿಗೆ ಈಶ್ವರೀ ಆನಂದವನ್ನು ಪಡೆಯುವ ಹಾಗೂ ‘ಅವನೊಂದಿಗೆ ಏಕರೂಪವಾಗಲಿಕ್ಕಿದೆ, ಎಂಬುದರ ಬಗ್ಗೆ ಹೆಚ್ಚು ಪ್ರಮಾಣದಲ್ಲಿ ತಿಳಿದಿತ್ತು ಹಾಗೂ ಅವನು ಅದನ್ನು ಸಾಧಿಸಲು ಪ್ರಯತ್ನಿಸುತ್ತಿದ್ದನು; ಆದರೆ ಇಂದಿನ ಕಲಿಯುಗದಲ್ಲಿ ಮನುಷ್ಯನ ಆಧ್ಯಾತ್ಮಿಕ ಮಟ್ಟವೇ ಮೂಲತಃ ಶೇ. ೨೦ ರಿಂದ ಆರಂಭವಾಗುವುದರಿಂದ ಅವನಿಗೆ ಈಶ್ವರನ ಕಡೆಗೆ ಹೋಗುವ ವಿಚಾರ ಬರುವುದಾದರೂ ಹೇಗೆ ? ಕಲಿಯುಗದ ಈ ಸ್ಥಿತಿಯನ್ನು ಮೊದಲೇ ತಿಳಿದಿದ್ದ ಮಹರ್ಷಿ ನಾರದರು ಭಗವಾನ್ ಶ್ರೀವಿಷ್ಣುವಿನಲ್ಲಿ ಈ ವಿಷಯದಲ್ಲಿ ವಿಚಾರಿಸಿದ್ದರು. ‘ಕಲಿಯುಗದಲ್ಲಿ ಮನುಷ್ಯನು ಈಶ್ವರೀ ಆನಂದವನ್ನು ಪಡೆದು ಅವನು ಮೋಕ್ಷಕ್ಕೆ ಹೇಗೆ ಹೋಗಬಹುದು, ಎಂಬುದರ ಮಾರ್ಗವನ್ನು ತೋರಿಸಬೇಕು, ಎಂದು ಪ್ರಾರ್ಥನೆ ಮಾಡಿದ್ದರು. ಆಗ ಭಗವಾನ್ ವಿಷ್ಣುವು ಶ್ರೀಸತ್ಯನಾರಾಯಣ ದೇವರ ಕಥೆ ಮತ್ತು ವ್ರತವನ್ನು ಹೇಳಿದರು. ‘ಇದನ್ನು ಆಚರಿಸಿದರೆ ಮನುಷ್ಯ ಈಶ್ವರೀ ಆನಂದವನ್ನು ಪಡೆದು ಅವನು ನಿಜಧಾಮಕ್ಕೆ ಹೋಗಲು ಸಾಧ್ಯವಿದೆ, ಎಂದು ಹೇಳಿದರು. ಅಂದಿನಿಂದ ಕಲಿಯುಗದಲ್ಲಿ ಶ್ರೀಸತ್ಯನಾರಾಯಣ ಪೂಜೆ ಮತ್ತು ವ್ರತ ಆರಂಭವಾಗಿದೆ. ಅನೇಕ ಜನರು ಅದನ್ನು ಆಚರಿಸಿ ಆನಂದ ಪಡೆದು ನಿಜಧಾಮವನ್ನು ತಲುಪಿದ್ದಾರೆ.

ಗುರುಕೃಪಾಯೋಗಾನುಸಾರ ಸಾಧನೆ !

ಇಂದು ಕಲಿಯುಗಾಂತರ್ಗತ ಕಲಿಯುಗಾಂತರ್ಗತ ಕಲಿಯುಗ ಹೀಗೆ ಆರನೇ ಕಲಿಯುಗ ನಡೆಯುತ್ತಿದೆ. ಹೀಗಿರುವಾಗ ಮನುಷ್ಯನ ಆಧ್ಯಾತ್ಮಿಕ ಸ್ಥಿತಿ ಇನ್ನಷ್ಟು ಕುಸಿದಿದೆ. ಆದ್ದರಿಂದ ಭಗವಾನ್ ಶ್ರೀವಿಷ್ಣು ಮನುಷ್ಯನಿಗೆ ಕೇವಲ ಕೆಲವೇ ವರ್ಷಗಳಲ್ಲಿ ಜನನ-ಮರಣದ ಚಕ್ರದಿಂದ ಮುಕ್ತನಾಗಲು ಹೆಚ್ಚು ಸುಲಭವಾದ ಮಾರ್ಗವನ್ನು ತೋರಿಸಿದ್ದಾರೆ. ಜೀವನಾಡಿಶಾಸ್ತ್ರ ಪಟ್ಟಿಯಲ್ಲಿ ಮಹರ್ಷಿಗಳು ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವಿನ ಅವತಾರವೆಂದು ಘೋಷಿಸಿದ್ದಾರೆ. ಅವರೆ ಭಗವಾನ್ ಶ್ರೀರಾಮ, ಶ್ರೀಕೃಷ್ಣ ಮತ್ತು ಶ್ರೀಸತ್ಯನಾರಾಯಣ ಆಗಿದ್ದಾರೆ, ಎಂದು ಅವರು ಅದರಲ್ಲಿ ಹೇಳಿದ್ದಾರೆ. ಇದು ಹೇಗೆ ಸತ್ಯವೆಂಬುದು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಗುರುಕೃಪಾಯೋಗದಿಂದ ಸ್ಪಷ್ಟವಾಗುತ್ತದೆ. ಗುರುಕೃಪಾಯೋಗಕ್ಕನುಸಾರ ಕೆಲವೇ ವರ್ಷ ಭಾವಪೂರ್ಣ ಹಾಗೂ ಪರಿಪೂರ್ಣ ಸಾಧನೆ ಮಾಡಿದರೆ ಜೀವವು ಆನಂದಪ್ರಾಪ್ತಿ ಮಾಡಿ ಜನನ-ಮರಣದ ಚಕ್ರದಿಂದ ಮುಕ್ತವಾಗಬಹುದು. ಇಷ್ಟರವರೆಗೆ ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಗುರುಕೃಪಾಯೋಗಾನುಸಾರ ಸಾಧನೆ ಮಾಡಿ ೧ ಸಾವಿರಕ್ಕಿಂತಲೂ ಹೆಚ್ಚು ಸಾಧಕರು ಜನನ-ಮರಣ ಚಕ್ರದಿಂದ ಮುಕ್ತರಾಗಿದ್ದಾರೆ ಹಾಗೂ ಅದರ ಮುಂದಿನ ಹಂತಕ್ಕೆ ಹೋಗುವ ಮಾರ್ಗದಲ್ಲಿದ್ದಾರೆ, ಎಂಬುದು ವಾಸ್ತವಿಕತೆಯಾಗಿದೆ. ಭಗವಾನ್ ಶ್ರೀವಿಷ್ಣುವಿನ ಅವತಾರವೇ ಇಂತಹ ಕಾರ್ಯವನ್ನು ಮಾಡಲು ಸಾಧ್ಯವಿದೆ. ಈ ಅವತಾರಿ ಕಾರ್ಯವನ್ನು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ್ದಾರೆ. ಆದ್ದರಿಂದಲೇ ಜೀವನಾಡಿಪಟ್ಟಿಯಲ್ಲಿ ಪರಾತ್ಪರ ಗುರು ಡಾ.ಆಠವಲೆಯವರು ಅವತಾರಿ ಆಗಿದ್ದಾರೆ ಎಂದು ಹೇಳಲಾಗಿದೆ.

ಕೃಪಾವತ್ಸಲ ಗುರುವರ್ಯ !

ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಮುಂದಿನಂತೆ ಹೇಳಿದ್ದಾನೆ, ‘ಯಾವಾಗ ಧರ್ಮಕ್ಕೆ ಗ್ಲಾನಿ ಬರುವುದೋ, ಆಗ ನಾನು ಅವತಾರ ತಾಳಿ ಧರ್ಮವನ್ನು ಪುನರ್ಸ್ಥಾಪನೆ ಮಾಡುವೆನು. ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯವನ್ನು ನೋಡುವಾಗ ಅವರು ಇದನ್ನೇ ಮಾಡುತ್ತಿದ್ದಾರೆ, ಎಂಬುದು ಅರಿವಾಗುತ್ತದೆ. ಹಿಂದೂ (ಈಶ್ವರೀ) ರಾಷ್ಟ್ರ ಸ್ಥಾಪನೆಯೆಂದರೆ ಧರ್ಮದ ಪುನರ್ಸ್ಥಾಪನೆಯೇ ಆಗಿದೆ ! ಈ ಕಾರ್ಯವನ್ನು ಮಾಡಲು ಪರಾತ್ಪರ ಗುರು ಡಾ.ಆಠವಲೆ ಮತ್ತು ಅವರ ಮಾರ್ಗದರ್ಶನದಲ್ಲಿ ಸಾವಿರಾರು ಸಾಧಕರು ತಮ್ಮ ಸಾಧನೆ ಮತ್ತು ಆನಂದಪ್ರಾಪ್ತಿಯ ಮಾರ್ಗವೆಂದು ಕಾರ್ಯ ಮಾಡುತ್ತಿದ್ದಾರೆ. ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇಂತಹ ಆಧ್ಯಾತ್ಮಿಕ ಕಾರ್ಯ ಆಗಿರಲಿಲ್ಲ. ಇಂದಿನ ವಿಜ್ಞಾನ ಯುಗದಲ್ಲಿ ಜನರಿಗೆ ಸುಲಭದಲ್ಲಿ ಧರ್ಮದ ಜ್ಞಾನ ಸಿಗುವ ಹಾಗೆ ಯೋಗ್ಯವಾದ ಮಾರ್ಗದರ್ಶನ ನೀಡಿ ಜನರು ಸಾಧನೆ ಮಾಡುವ ಹಾಗೆ ಮಾಡಿ ಪರಾತ್ಪರ ಗುರು ಡಾ. ಆಠವಲೆಯವರು ಧರ್ಮವನ್ನು ಪುನರ್ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ವೈಜ್ಞಾನಿಕ ಸಂಶೋಧನೆಯ ಮೂಲಕ ಹಿಂದೂ ಧರ್ಮ ಮತ್ತು ಅದರ ಶಾಸ್ತ್ರ ಎಷ್ಟು ಪ್ರಗತ ಹಾಗೂ ಅಮೂಲ್ಯವಾಗಿದೆ, ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಆದ್ದರಿಂದ ಕೇವಲ ಭಾರತೀಯರು ಮಾತ್ರವಲ್ಲದೇ ವಿದೇಶಿಯರು (ಕ್ರೈಸ್ತರು ಮತ್ತು ಇನ್ನಿತರ ಪಂಥ ದವರು) ಸಹ ಗುರುಕೃಪಾಯೋಗಾನುಸಾರ ಸಾಧನೆ ಮಾಡಲು ಆರಂಭಿಸಿದ್ದಾರೆ ಹಾಗೂ ಅವರಲ್ಲಿ ಕೆಲವರು ಜನನ-ಮರಣದ ಚಕ್ರದಿಂದ ಮುಕ್ತರಾಗಿದ್ದಾರೆ. ಇದರಿಂದ ಸಾಧನೆಗೆ ಪಂಥಗಳ ಬಂಧನ ಇರುವುದಿಲ್ಲ, ಎಂಬುದು ಅರಿವಾಗುತ್ತದೆ. ಸಂಪೂರ್ಣ ಮನುಕುಲದ ಕಲ್ಯಾಣಕ್ಕಾಗಿಯೇ ಪರಾತ್ಪರ ಗುರು ಡಾ. ಆಠವಲೆಯವರು ಅಖಂಡವಾಗಿ ಕಾರ್ಯ ಮಾಡುತ್ತಿದ್ದಾರೆ. ಕಳೆದ ಒಂದೆರಡು ಸಾವಿರ ವರ್ಷಗಳಲ್ಲಿ ನಿರ್ಮಾಣವಾದ ವಿವಿಧ ಪಂಥಗಳು ಮೂಲ ಸನಾತನ ವೈದಿಕ ಧರ್ಮದಿಂದಲೇ ಬೇರ್ಪಟ್ಟು ನಿರ್ಮಾಣವಾಗಿವೆ. ಆದ್ದರಿಂದ ಶ್ರೀವಿಷ್ಣುವೇ ಅವರ ಪೂರ್ವಜರ ಆರಾಧ್ಯ ದೇವರಾಗಿದ್ದರು, ಎಂಬುದು ಅರಿವಾಗುತ್ತದೆ. ಧರ್ಮವನ್ನು ಪುನರ್ಸ್ಥಾಪನೆ ಮಾಡುವಾಗ ಮುಂದಿನ ಪೀಳಿಗೆಗೆ ಧರ್ಮದ ಜ್ಞಾನವನ್ನು ನೀಡಲು ಧರ್ಮಶಿಕ್ಷಣ ನೀಡುವ ಪ್ರಯತ್ನವನ್ನು ಪರಾತ್ಪರ ಗುರು ಡಾ. ಆಠವಲೆಯವರು ಪ್ರಾರಂಭದಿಂದಲೇ ಆರಂಭಿಸಿದ್ದಾರೆ. ಅದಕ್ಕಾಗಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಕೆಲವೇ ವರ್ಷಗಳಲ್ಲಿ ಇದರ ವಾಸ್ತು ನಿರ್ಮಾಣವಾಗಿ ಅದರಲ್ಲಿ ಸಾವಿರಾರು ಜೀವಗಳು ಧರ್ಮಶಿಕ್ಷಣ ಪಡೆದು ಅದರ ಮೂಲಕ ಧರ್ಮಾಚರಣೆ ಮಾಡಿ ಪೃಥ್ವಿಯ ಮೇಲೆ ಬರುವ ರಾಮರಾಜ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಕ್ಕಿದ್ದಾರೆ. ಈ ರಾಮರಾಜ್ಯದಲ್ಲಿ ವ್ಯಕ್ತಿಯ ಆಧ್ಯಾತ್ಮಿಕ ಮಾತ್ರವಲ್ಲ, ಬೌದ್ಧಿಕ ಪ್ರಗತಿ ಕೂಡ ಆಗುವ ವ್ಯವಸ್ಥೆ ಇರುವುದು. ಈ ರಾಮರಾಜ್ಯಕ್ಕಾಗಿ ಪರಾತ್ಪರ ಗುರುವರ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಶ್ರೀವಿಷ್ಣುವಿನ ಶ್ರೀ ಸತ್ಯನಾರಾಯಣ ರೂಪವು ಕೃಪಾವತ್ಸಲವಾಗಿದೆ. ಪರಾತ್ಪರ ಗುರುವರ್ಯರು ಅದೇ ರೂಪದಲ್ಲಿ ನಮ್ಮೆಲ್ಲ ಸಾಧಕರಿಗೆ ದರ್ಶನ ನೀಡಿ ನಮ್ಮನ್ನು ಪಾವನಗೊಳಿಸಿದ್ದಾರೆ.

Kannada Weekly | Offline reading | PDF