ಪ್ರಶಿಕ್ಷಣವರ್ಗ ಸೇವಕರಿಗೆ ಮಹತ್ವದ ಸೂಚನೆ

‘ಸ್ವರಕ್ಷಣಾ ಪ್ರಶಿಕ್ಷಣ ವರ್ಗ’ದ ಯುವಕರಿಗೆ ಪ್ರತಿದಿನ ೧ ಗಂಟೆ ಶ್ರೀಕೃಷ್ಣನ ಜಪ ಮಾಡಲು ಹೇಳಿ ಮುಂದಿನ ವರ್ಗದಲ್ಲಿ ಅದರ ವರದಿ ಪಡೆಯಿರಿ !

‘ಪ್ರತಿಯೊಂದು ಜಿಲ್ಲೆಯಲ್ಲಿ ಯುವಕರಿಗಾಗಿ ಸಾಪ್ತಾಹಿಕ ‘ಸ್ವರಕ್ಷಣಾ ಪ್ರಶಿಕ್ಷಣ ವರ್ಗ’ಗಳ ಆಯೋಜನೆ ಮಾಡಲಾಗುತ್ತದೆ. ಇದರಿಂದಾಗಿ ಯುವಕರ ಶಾರೀರಿಕ ಕ್ಷಮತೆ ಹೆಚ್ಚಲು ಸಹಾಯವಾಗುತ್ತದೆ. ಸದ್ಯ ಶಾರೀರಿಕ ಕ್ಷಮತೆಯೊಂದಿಗೆ ಆಧ್ಯಾತ್ಮಿಕ ಶಕ್ತಿ ನಿರ್ಮಾಣವಾಗುವುದು ಕಾಲಾನುಸಾರ ಅಗತ್ಯವಿದೆ. ಆದುದರಿಂದ ಪ್ರಶಿಕ್ಷಣವರ್ಗ ಸೇವಕರು ವರ್ಗದಲ್ಲಿ ಉಪಸ್ಥಿತ ಯುವಕರಿಗೆ ಸದ್ಯ ಕಾಲಾನುಸಾರ ಅಗತ್ಯವಿರುವ ‘ಓಂ ಓಂ ನಮೋ ಭಗವತೇ ವಾಸುದೇವಾಯ ಓಂ ಓಂ | ಈ ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡಲು ಹೇಳಬೇಕು. ನಾಮಜಪ ಮಾಡುವಾಗ ಆರಂಭದಲ್ಲಿ, ಪ್ರತಿ ೧೫ ನಿಮಿಷಕ್ಕೆ ಮತ್ತು ಕೊನೆಗೆ ಮುಂದಿನ ಪ್ರಾರ್ಥನೆ ಮಾಡಲು ಹೇಳಬೇಕು, ‘ಹೇ ಶ್ರೀಕೃಷ್ಣ, ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕಾಗಿ ನಮಗೆ  ಶಾರೀರಿಕ ಕ್ಷಮತೆ, ಹಾಗೆಯೇ ಆಧ್ಯಾತ್ಮಿಕ ಶಕ್ತಿಯನ್ನು ಅನುಗ್ರಹಿಸು. ನಮ್ಮ ಸಂಖ್ಯಾಬಲ ಮತ್ತು ಸಂಘಟಿತವೃತ್ತಿ ಹೆಚ್ಚಲಿ. ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿ, ಎಂದು ನಮ್ಮಿಂದ ತಳಮಳದಿಂದ ಪ್ರಯತ್ನವಾಗಲಿ, ಎಂದು ಭಾವಪೂರ್ಣವಾಗಿ ಪ್ರಾರ್ಥನೆ !’  ‘ಎಲ್ಲ ಯುವಕರು ಪ್ರತಿದಿನ ನಾಮಜಪ ಮಾಡುತ್ತಿದ್ದಾರೆಯೇ ?’ ಎಂಬ ವರದಿಯನ್ನು ವರ್ಗಸೇವಕರು ಮುಂದಿನ ಪ್ರಶಿಕ್ಷಣ ವರ್ಗದಲ್ಲಿ ತೆಗೆದುಕೊಳ್ಳಬೇಕು.’

Kannada Weekly | Offline reading | PDF