ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಅಖಿಲ ಮನುಕುಲಕ್ಕೆ ಅಧ್ಯಾತ್ಮದ ಜಗತ್ತನ್ನು ನಾವಿನ್ಯಪೂರ್ಣವಾಗಿ ಪರಿಚಯಿಸುವ ಸನಾತನ ಸಂಸ್ಥೆಯ ಧ್ವನಿಚಿತ್ರೀಕರಣಕ್ಕೆ ಸಂಬಂಧಿಸಿದ ಸೇವೆಗಳಲ್ಲಿ ಪಾಲ್ಗೊಂಡು ಧರ್ಮಕಾರ್ಯದಲ್ಲಿ ತಮ್ಮ ಕೊಡುಗೆ ನೀಡಿರಿ !

ಕು. ಪ್ರಿಯಾಂಕಾ ಲೊಟಲೀಕರ್

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನದಲ್ಲಿ ಸನಾತನದ ರಾಮನಾಥಿ ಆಶ್ರಮದಲ್ಲಿ ಆರಂಭವಾಗಿರುವ ‘ಧ್ವನಿಚಿತ್ರೀಕರಣದ ಸೇವೆ ಎಂದರೆ, ಹಿಂದೂ ಧರ್ಮ ಮತ್ತು ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಸಂಶೋಧನೆ ಇವುಗಳ ಅದ್ವಿತೀಯ ರೀತಿಯಲ್ಲಿ ಪರಿಚಯಿಸಿ ಕೊಡುವ ಅಮೂಲ್ಯ ಜ್ಞಾನಭಂಡಾರ ! ವಿವಿಧ ಸಾಧನಾಮಾರ್ಗಗಳಿಂದ ಸಾಧನೆ ಮಾಡಿರುವ ಸಂತರ ಸಾಧನೆಯ ಪ್ರವಾಸವನ್ನು ಬೆಳಕಿಗೆ  ತರುವ ಸಂದರ್ಶನ, ಹಿಂದೂ ಆಚಾರ ಮತ್ತು ಧಾರ್ಮಿಕ ಕೃತಿಗಳನ್ನು ಮಾಡುವ ಯೋಗ್ಯ ಪದ್ಧತಿ ಮತ್ತು ಅವುಗಳ ಹಿಂದಿನ ಶಾಸ್ತ್ರ, ವರ್ಷ ೨೦೨೩ ರಲ್ಲಿ ಸ್ಥಾಪನೆಯಾಗಲಿರುವ ಹಿಂದೂ ರಾಷ್ಟ್ರವನ್ನು ನಡೆಸಲು ದೇವರು ಉಚ್ಚಲೋಕಗಳಿಂದ ಪೃಥ್ವಿಯ ಮೇಲೆ ಜನ್ಮ ನೀಡಿದ ದೈವೀ ಬಾಲಕರ ಸಂದರ್ಶನ ಇಂತಹ ನಾನಾವಿಧಗಳ ನಾವಿನ್ಯಪೂರ್ಣ ವಿಷಯಗಳ ಬಗೆಗಿನ ಧ್ವನಿಚಿತ್ರೀಕರಣ ಮತ್ತು ಅದನ್ನೊಳಗೊಂಡ ವಿವಿಧ ಸೇವೆಗಳು ಸದ್ಯ ನಡೆಯುತ್ತಿವೆ. ಆಧ್ಯಾತ್ಮಿಕ ಸಂಶೋಧನೆಗಾಗಿ ಉಪಯೋಗವಾಗುವಂತಹ ಧ್ವನಿಚಿತ್ರೀಕರಣ ಮಾಡುವುದು ಒಂದು ಮುಖ್ಯ ವೈಶಿಷ್ಟ್ಯವಾಗಿದೆ. ದೇಶ-ವಿದೇಶಗಳಲ್ಲಿನ ತೀರ್ಥಕ್ಷೇತ್ರಗಳು, ಸಂತರ ಸಮಾಧಿಸ್ಥಾನಗಳು, ಐತಿಹಾಸಿಕ ಸ್ಥಳಗಳು ಇತ್ಯಾದಿಗಳ ಮಹಾನತೆ ಹಾಗೂ ಅವುಗಳ ಬಗೆಗಿನ ಆಧ್ಯಾತ್ಮಿಕ ಸಂಶೋಧನೆ; ಕೆಟ್ಟ ಶಕ್ತಿ ಮತ್ತು ಅವುಗಳ ತೊಂದರೆಗಳ ಮೇಲಿನ ಉಪಾಯ ಇವುಗಳ ಬಗೆಗಿನ ಸಂಶೋಧನೆ; ದೈವೀ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ದೃಶ್ಯಪರಿಣಾಮವನ್ನು ತೋರಿಸುವ ಸಂಶೋಧನೆ, ಸಾತ್ತ್ವಿಕ ಸಂಗೀತ, ನೃತ್ಯ, ವಾದ್ಯವಾದನಗಳಂತಹ ಕಲೆಗಳ ವಿಷಯದಲ್ಲಿ ಮಾಡಿದ ಸಂಶೋಧನೆ ಇಂತಹ ಬಹುಮುಖ ನಾವಿನ್ಯಪೂರ್ಣ ಸಂಶೋಧನೆಯ ಅಂಶಗಳನ್ನು ಬೆಳಕಿಗೆ ತರುವುದು ಈ ಧ್ವನಿಚಿತ್ರೀಕರಣದಿಂದಾಗಿ ಸಾಧ್ಯವಾಗುತ್ತಿದೆ.

ಧ್ವನಿಚಿತ್ರೀಕರಣದ ಮಾಧ್ಯಮದಿಂದ ಸಂಗ್ರಹವಾಗುತ್ತಿರುವ ಈ ಜ್ಞಾನಕ್ಕೆ ಅದ್ವಿತೀಯ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮೌಲ್ಯವಿದೆ. ಈ ಜ್ಞಾನವೆಂದರೆ, ಮುಂಬರುವ ಕಾಲದಲ್ಲಿ ೧೪ ವಿದ್ಯೆಗಳು ಮತ್ತು ೬೪ ಕಲೆಗಳ ಶಿಕ್ಷಣ ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವೇ ಆಗಿದೆ. ಧ್ವನಿಚಿತ್ರೀಕರಣಕ್ಕೆ ಸಂಬಂಧಿಸಿದ ಸೇವೆ ಮಾಡುವವರಿಗೆ ವಿವಿಧ ಸೇವೆಗಳಿಂದ ಜಗತ್ತಿಗೆ ಅಧ್ಯಾತ್ಮಜಗತ್ತಿನ ವಿನೂತನ ಪರಿಚಯವಾಗುವುದು ಹಾಗೂ ಜ್ಞಾನದ ಬೇರೆಯೆ ಒಂದು ಆನಂದವನ್ನು ಅನುಭವಿಸಲು ಸಿಗುವುದು. ೧-೨ ವರ್ಷಗಳಲ್ಲಿ ಮಹಾಭೀಕರ ಆಪತ್ಕಾಲವು ನಿಧಾನವಾಗಿ ಆರಂಭವಾಗಲಿಕ್ಕಿದೆ. ಅದಕ್ಕೂ ಮೊದಲೇ ಇವೆಲ್ಲ ಜ್ಞಾನಭಂಡಾರವನ್ನು ಅಖಿಲ ಮಾನವನವರೆಗೆ ತಲಪಿಸಲಿಕ್ಕಿದೆ. ಅದಕ್ಕಾಗಿ ಸೇವೆ ಮಾಡುವುದೆಂದರೆ ಶ್ರೇಷ್ಠವಾದಂತಹ ಸಮಷ್ಟಿ ಸಾಧನೆಯೇ ಆಗಿದೆ. ಈ ಸಾಧನೆ ಮಾಡಿ ಶೀಘ್ರ ಈಶ್ವರಪ್ರಾಪ್ತಿ ಮಾಡಿಕೊಳ್ಳೋಣ !

ಇದೆಲ್ಲ ಕಾರ್ಯ ಶೀಘ್ರಗತಿಯಲ್ಲಿ ಆಗಬೇಕಾದರೆ ಮನುಷ್ಯಬಲದ ತುರ್ತು ಅವಶ್ಯಕತೆಯಿದೆ. ತಾವು ತಮ್ಮ ಆಸಕ್ತಿಯ ಮತ್ತು ಕೌಶಲ್ಯ ಇವುಗಳಿಗನುಸಾರ ಮಂದೆ ನೀಡಲಾದ ಸೇವೆಗಳನ್ನು ಕಲಿಯಬಹುದು. ಈ ಮುಂದಿನ ಪೈಕಿ ಕೆಲವು ಸೇವೆಗಳನ್ನು ಆಶ್ರಮದಲ್ಲಿದ್ದು ಕಲಿತರೆ ನಂತರ ಮನೆಯಲ್ಲಿದ್ದು ಕೂಡ ಮಾಡಬಹುದು. ಇದಕ್ಕೆ ಅಂತರ್ಗತವಾಗಿರುವ ಸೇವೆ  ಮುಂದಿನಂತಿವೆ.

೧. ಲಭ್ಯವಿರುವ ವಿವಿಧ ಸೇವೆಗಳು

೧ ಅ. ಚಿತ್ರೀಕರಣ (ಶೂಟಿಂಗ್)

೧. ಚಿತ್ರೀಕರಣ ಮತ್ತು ಧ್ವನಿಮುದ್ರಣ (ರೆಕಾರ್ಡಿಂಗ್) ಮಾಡುವುದು

೨. ಚಿತ್ರೀಕರಣದ ಸಮಯದಲ್ಲಿ ಪ್ರಕಾಶಯೋಜನೆ, ವೇಷಭೂಷಣ ಇತ್ಯಾದಿಗಳಿಗಾಗಿ ಸಹಾಯ ಮಾಡುವುದು

೩. ಚಿತ್ರೀಕರಣದ ನೋಂದಣಿ ಹಾಗೂ ಚಿತ್ರೀಕರಣದ ವರ್ಗೀಕರಣ ಮಾಡುವುದು

೧ ಆ. ಛಾಯಾಚಿತ್ರಗಳನ್ನು ತೆಗೆಯವುದು (ಫೋಟೋಗ್ರಾಫಿ)

೧. ಛಾಯಾಚಿತ್ರಗಳನ್ನು ತೆಗೆಯುವುದು

೨. ೧,೭೪,೦೦೦ ಕ್ಕಿಂತಲೂ ಹೆಚ್ಚು ಛಾಯಾಚಿತ್ರಗಳಿಗೆ ವಿಷಯಕ್ಕನುಸಾರ ಸಂಕೇತಾಂಕಗಳನ್ನು (ಕೋಡ್) ಕೊಡುವುದು

೩. ೧ ಲಕ್ಷಕ್ಕಿಂತಲೂ ಹೆಚ್ಚು ಛಾಯಾಚಿತ್ರಗಳ ವಿಷಯಕ್ಕನುಸಾರ ವರ್ಗೀಕರಣ ಮಾಡುವುದು ಹಾಗೂ ಅವುಗಳಲ್ಲಿನ ಅನಾವಶ್ಯಕ ಛಾಯಾಚಿತ್ರಗಳನ್ನು ಅಳಿಸಿ ಹಾಕುವುದು

೧ ಇ. ಚಿತ್ರೀಕರಣದ ಸಂಕಲನ (ಎಡಿಟಿಂಗ್) ಮಾಡುವುದು

೧. ೪೦೦ ಕ್ಕಿಂತಲೂ ಹೆಚ್ಚು ವಿಷಯಗಳ ಬಗೆಗಿನ ಚಿತ್ರೀಕರಣದ ಸಂಕಲನ ಹಾಗೂ ಧ್ವನಿಸಮತೋಲನ (ಆಡಿಯೋ ಬ್ಯಾಲೆನ್ಸಿಂಗ್) ಮಾಡುವುದು

೨. ೪೦೦ ಕ್ಕಿಂತ ಹೆಚ್ಚು ಧ್ವನಿಚಿತ್ರ-ಮುದ್ರಿಕೆಗಳ (‘ವಿಸಿಡಿಗಳ) ತಾಂತ್ರಿಕ ದೃಷ್ಟಿಯಿಂದ ತಪಾಸಣೆ ಮಾಡುವುದು

೩. ಪ್ರತಿತಿಂಗಳು ೧೦೦ ಕ್ಕಿಂತಲೂ ಹೆಚ್ಚು ಛಾಯಾಚಿತ್ರಗಳನ್ನು ಧ್ವನಿಚಿತ್ರ-ಮುದ್ರಿಕೆಯಲ್ಲಿ ತೆಗೆದುಕೊಳ್ಳಲು ಸರಿಪಡಿಸಲು ‘ಫೊಟೋಶಾಪ್ನಲ್ಲಿ ಸೇವೆ ಮಾಡುವುದು

೪. ಗಣಕಯಂತ್ರದಲ್ಲಿ ಸೂಕ್ಷ್ಮ ಜ್ಞಾನದ ಬಗೆಗಿನ ಚಿತ್ರಗಳು ಮತ್ತು ಇತರ ಚಿತ್ರಗಳನ್ನು ಸಿದ್ಧಪಡಿಸುವುದು

೧ ಈ. ವಿವಿಧ ವಿಷಯಗಳ ಬಗೆಗಿನ ಸಂಹಿತೆಯ ಬರವಣಿಗೆ (ಸ್ಕ್ರಿಪ್ಟ್ ರೈಟಿಂಗ್) ಮಾಡುವುದು

೧. ಸಂಹಿತೆಗೆ ಆವಶ್ಯಕ ವಿಷಯಗಳನ್ನು (ಉದಾ. ಮಾಹಿತಿ, ಛಾಯಾಚಿತ್ರಗಳು, ಗ್ರಂಥ) ಸಂಗ್ರಹಿಸುವುದು

೨. ೫೦೦ ಕ್ಕೂ ಹೆಚ್ಚು ವಿಷಯಗಳ ಸಂಹಿತೆಗಳನ್ನು ಬರೆಯುವುದು

೩. ಸಂಕಲನ ಮಾಡಿದ ಧ್ವನಿಚಿತ್ರೀಕರಣದ ತಪಾಸಣೆ ಮಾಡುವುದು

೪. ಸಂಹಿತೆಯ ಅವಶ್ಯಕತೆಗನುಸಾರ ಇತರ ಭಾಷೆಗಳಲ್ಲಿ ಭಾಷಾಂತರ ಮಾಡುವುದು

೧ ಉ. ಧ್ವನಿಚಿತ್ರಸುರುಳಿಗಳಲ್ಲಿನ (‘ಕ್ಯಾಸೆಟ್ನಲ್ಲಿನ) ಚಿತ್ರೀಕರಣ (ಫೂಟೇಜ್) ಇವುಗಳಿಗೆ ಸಂಬಂಧಿಸಿದ ಸೇವೆ

೧. ೨,೦೦೦ ಕ್ಕಿಂತಲೂ ಹೆಚ್ಚು ಧ್ವನಿಚಿತ್ರಸುರುಳಿಗಳಲ್ಲಿನ ಚಿತ್ರೀಕರಣಗಳನ್ನು ಗಣಕಯಂತ್ರದಲ್ಲಿ ತೆಗೆದುಕೊಂಡು ಅವುಗಳು ಸರಿಯಾಗಿವೆಯೆ ಎಂದು ಪರಿಶೀಲಿಸುವುದು

೨. ೨೦,೦೦೦ ಕ್ಕಿಂತ ಹೆಚ್ಚು ಗಂಟೆಗಳ ಚಿತ್ರೀಕರಣದ ಆವಶ್ಯಕವಾಗಿರುವಂತಹ ಮಾಹಿತಿಯನ್ನು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಮಾಡುವುದು

೩. ೨೦,೦೦೦ ಕ್ಕಿಂತಲೂ ಹೆಚ್ಚು ಗಂಟೆಗಳ ಚಿತ್ರೀಕರಣದ ವಿಷಯಕ್ಕನುಸಾರ ವರ್ಗೀಕರಣ ಮಾಡಿ ಅವುಗಳಿಗೆ ಸಂಕೇತಾಂಕಗಳನ್ನು ಕೊಡುವುದು.

೧ ಊ ಇತರ ಸೇವೆಗಳು

೧. ಚಿತ್ರೀಕರಣದ ಸಾಹಿತ್ಯಗಳ ಸಂರಕ್ಷಣೆ ಮಾಡುವುದು ಹಾಗೂ ಅವುಗಳ ಕೊಡು-ಕೊಳ್ಳುವಿಕೆಯನ್ನು ನೋಡಿಕೊಳ್ಳುವುದು

೨. ಧ್ವನಿಚಿತ್ರ-ಮುದ್ರಿಕೆಗಳ ಲೆಕ್ಕಾಚಾರ (ಜಮೆ-ಖರ್ಚು) ನೋಡಿ ಕೊಳ್ಳುವುದು

೩ ಧ್ವನಿಚಿತ್ರ-ಮುದ್ರಿಕೆಗಳ ಸಂಗ್ರಹ (ಲೈಬ್ರರಿ) ನೋಡಿಕೊಳ್ಳುವುದು

೪. ಚಿತ್ರೀಕರಣ ಮತ್ತು ಸಂಕಲನಗಳಿಗೆ ಸಂಬಂಧಿಸಿದ ಉಪಕರಣಗಳ ಸಂರಕ್ಷಣೆ ಮತ್ತು ದುರುಸ್ತಿ ಮಾಡುವುದು.

ಈ ಮೇಲಿನ ಸೇವೆಗಳನ್ನು ಮಾಡಲು ಇಚ್ಛಿಸುವವರು ಜಿಲ್ಲಾಸೇವಕರ ಮೂಲಕ ಈ ಮುಂದಿನ ಕೋಷ್ಟಕಕ್ಕನುಸಾರ ತಮ್ಮ ಮಾಹಿತಿಯನ್ನು ಸೌ. ಭಾಗ್ಯಶ್ರೀ ಸಾವಂತ ಇವರ ಹೆಸರಿಗೆ  [email protected] ಈ ವಿ-ಅಂಚೆ ವಿಳಾಸಕ್ಕೆ ಅಥವಾ ಮುಂದಿನ ಅಂಚೆ ವಿಳಾಸಕ್ಕೆ ಕಳುಹಿಸಬೇಕು.

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ 24/B, ರಾಮನಾಥಿ, ಬಾಂದಿವಡೆ, ಫೋಂಡಾ ಗೋವಾ. ಪಿನ್ – 403401

ಘಟಕ  ವಿವರಣೆ  
೧. ಹೆಸರು ಮತ್ತು ಜಿಲ್ಲೆ
೨. ಸಂಪರ್ಕ ಕ್ರಮಾಂಕ
೩. ವಯಸ್ಸು (ವರ್ಷ)
೪. ಶಿಕ್ಷಣ
೫. ಯಾವ ಭಾಷೆಗಳ ಜ್ಞಾನವಿದೆ ?
೬. ಧ್ವನಿಚಿತ್ರೀಕರಣ ಕ್ಷೇತ್ರ ದಲ್ಲಿನ ಅನುಭವ (ಇದ್ದರೆ)
೭. ಈ ಮೇಲಿನ ಪೈಕಿ ಯಾವ ಸೇವೆ ಮಾಡಬಹುದು ?
೮. ಸೇವೆಗಾಗಿ ಆಶ್ರಮದಲ್ಲಿ ಪೂರ್ಣವೇಳೆ ಅಥವಾ ಕೆಲವು ಸಮಯಕ್ಕಾಗಿ ಇರುವೆನು
೯. ಕೆಲವು ಸಮಯಕ್ಕಾಗಿ  ಆಶ್ರಮದಲ್ಲಿರುವುದಿದ್ದರೆ ಎಷ್ಟು ದಿನ ಆಶ್ರಮದಲ್ಲಿರಬಹುದು ?

– ಕು. ಪ್ರಿಯಾಂಕಾ ಲೊಟಲೀಕರ್, ಸನಾತನ ಆಶ್ರಮ, ರಾಮನಾಥಿ ಗೋವಾ. (೧.೫.೨೦೧೪)

Kannada Weekly | Offline reading | PDF