ಪಾಕದಲ್ಲಿನ ಅಲ್ಪಸಂಖ್ಯಾತ ಹಿಂದೂಗಳು ಅನುಭವಿಸುತ್ತಿರುವ ನರಕಯಾತನೆ ಮತ್ತು ಭಾರತದಲ್ಲಿನ ಹಿಂದೂಗಳ ಕರ್ತವ್ಯ !

ಸ್ವಾತಂತ್ರ್ಯದ ಸಮಯದಲ್ಲಿ ಪಾಕ್‌ನಲ್ಲಿ ಹಿಂದೂಗಳ ಜನಸಂಖ್ಯೆ ಶೇ. ೨೫ ರಷ್ಟಿತ್ತು. ಇದು ಈಗ ಶೇ. ೩ ಕ್ಕಿಂತಲೂ ಕಡಿಮೆಯಾಗಿದೆ. ಅಲ್ಲಿನ ಹಿಂದೂಗಳು ಅಕ್ಷರಶಃ ನರಕಯಾತನೆ ಭೋಗಿಸುತ್ತಿದ್ದಾರೆ. ಅಲ್ಲಿ ಹಾಡುಹಗಲೇ ಹಿಂದೂ ಹುಡುಗಿಯರ ಅಪಹರಣ ಮಾಡಲಾಗುತ್ತಿದೆ, ಅವರ ಮತಾಂತರ ಮಾಡಿ ವೇಶ್ಯಾವಾಟಿಕೆಗಾಗಿ ಅವರ ಮಾರಾಟ ಮಾಡಲಾಗುತ್ತಿದೆ. ದಿನನಿತ್ಯ ಹಿಂದೂಗಳ ಹತ್ಯಾಕಾಂಡ ನಡೆಯುತ್ತಿದೆ. ಇಷ್ಟಾದರೂ ಅಲ್ಲಿನ ಹಿಂದೂಗಳ ಮೇಲಾಗುತ್ತಿದ್ದ ಅನ್ಯಾಯದ ಕಡೆಗೆ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಇದುವರೆಗಿನ ಎಲ್ಲ ಸರಕಾರಗಳು ಉದ್ದೇಶಪೂರ್ವಕವಾಗಿ ದುರ್ಲಕ್ಷಿಸುತ್ತಿವೆ. ಆದ್ದರಿಂದ ಭಾರತದಲ್ಲಿನ ಎಲ್ಲ ಹಿಂದೂಗಳು ತಮ್ಮ ಧರ್ಮಬಾಂಧವರಿಗೆ ಸಹಾಯ ಮಾಡುವ ಸಮಯ ಬಂದಿದೆ. ಅಲ್ಲಿನ ಹಿಂದೂಗಳಿಗೆ ನ್ಯಾಯ, ಆಶ್ರಯ ಮತ್ತು ಪ್ರತಿಷ್ಠೆ ದೊರಕಿಸಿಕೊಟ್ಟು ಅವರ ಭಾರತದಲ್ಲಿ ಪುನರ್ವಸತಿಗಾಗಿ ಪ್ರಯತ್ನಿಸುವುದು ಭಾರತದ ಪ್ರತಿಯೊಬ್ಬ ಹಿಂದೂವಿನ ಪ್ರಥಮ ಕರ್ತವ್ಯವಾಗಿದೆ. ಈ ಕುರಿತು ಪ್ರತಿಪಾದನೆ ಪ್ರಸ್ತುತ ಲೇಖನದಲ್ಲಿ ಮಾಡಲಾಗಿದೆ.

ಹಿಂದೂಗಳೇ, ಪಾಕ್‌ದಲ್ಲಿನ ನಮ್ಮ ಭಗಿನಿಯರ ರಕ್ಷಣೆಗಾಗಿ ಕೃತಿಶೀಲರಾಗಿರಿ !

೧. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ನರಕಯಾತನೆಯು ವಿಭಜನೆಯದೇ ಮಹಾಪಾಪವಾಗಿದೆ !

‘ಪಾಕ್‌ದಲ್ಲಿನ ಅಲ್ಪಸಂಖ್ಯಾತ ಹಿಂದೂಗಳು ಇಂದು ಬದುಕಿರುವಾಗಲೇ ನರಕಯಾತನೆ ಅನುಭವಿಸುತ್ತಿದ್ದಾರೆ. ಅವರೊಂದಿಗೆ ಕೀಳಾಗಿ ವರ್ತಿಸಲಾಗುತ್ತಿದೆ. ಭಾರತದ ಹಿಂದೂಗಳು ಶಾಂತಿಗಾಗಿ ವಿಭಜನೆ ಸ್ವೀಕರಿಸಿದರು; ಆದರೆ ಆ ಶಾಂತಿಯಿಂದ ಅವರಿಗೇನೂ ಸಿಗಲಿಲ್ಲ. ವಿಭಜನೆಗೆ ಅನೇಕರ ವಿರೋಧವಿತ್ತು; ಆದರೆ ಅಂದಿನ ಕಾಂಗ್ರೆಸ್ ನಾಯಕರು ವಿಭಜನೆ ಮಾಡಿ ಹಿಂದೂಗಳನ್ನು ಹಿಂದೂಗಳಿಂದ ಬೇರೆ ಮಾಡಿದರು. ಅದರ ಪರಿಣಾಮ ಭಾರತದಲ್ಲಿನ ಮತ್ತು ಪಾಕ್‌ದಲ್ಲಿನ ಹಿಂದೂಗಳು ಈಗಲೂ ಅನುಭವಿಸುತ್ತಿದ್ದಾರೆ.

೨. ಹಿಂದೂಗಳ ಹತ್ಯೆ ಮಾಡುವುದು ಮತ್ತು ಅವರ ಹೆಂಗಸರ ಉಪಭೋಗಿಸುವುದೆಂದರೆ ಶರಿಯತ್ ಕಾನೂನಿನ ಪಾಲನೆ !

೧೯೪೭ ರಿಂದ ಪಾಕಿಸ್ತಾನದಲ್ಲಿ ಶರಿಯತ್ ಕಾನೂನು ಅನ್ವಯಗೊಂಡನಂತರ ಹಿಂದೂಗಳ ಮಂತಾಂತರದ ಪ್ರಮಾಣ ಹೆಚ್ಚಾಗುತ್ತ ಹೋಯಿತು. ಶರಿಯತ್ ಕಾನೂನಿನಲ್ಲಿ, ‘ಕಾಫಿರರ ಹೆಂಗಸರನ್ನು ಗುಲಾಮರೆಂದು ಉಪಭೋಗಿಸಬೇಕು, ‘ಯಾವಾಗ ಮನಸ್ಸಿಗೆ ಬರುತ್ತದೆಯೋ, ಆಗ ಅವರ ಆಸ್ತಿಪಾಸ್ತಿ ದೋಚಬೇಕು, ‘ಅದನ್ನು ಅವರು ವಿರೋಧಿಸಿದರೆ, ಅವರನ್ನು ಕೊಲ್ಲಬೇಕು, ಹೀಗೆ ಹೇಳಲಾಗಿದೆ. ಅಲ್ಲಿನ ಮತಾಂಧರು ಅಲ್ಪಸಂಖ್ಯಾತ ಹಿಂದೂಗಳೊಂದಿಗೆ ವರ್ತಿಸುವಾಗ ಈ ಶರಿಯತ್ ಕಾನೂನಿನ ‘ಪಾಲನೆ ಮಾಡುತ್ತಾರೆ ! ಈ ಮತಾಂಧರಿಗೆ ಅಲ್ಲಿನ ಪೊಲೀಸರು ಮತ್ತು ನ್ಯಾಯಾಲಯವೂ ಸಹಾಯ ಮಾಡುತ್ತದೆ. ಇಂತಹದ್ದರಲ್ಲಿ ಅಲ್ಲಿನ ಹಿಂದೂಗಳಿಗೆ ಯಾವತ್ತಾದರೂ ನ್ಯಾಯ ಸಿಗುವುದೇ ?

೩. ಅಪ್ರಾಪ್ತ ಹಿಂದೂ ಹೆಣ್ಣುಮಕ್ಕಳ ಅಪಹರಣ ಹಾಗೂ ಮತಾಂತರ ಮಾಡಿ ಮುಸಲ್ಮಾನ ಮುದುಕನೊಂದಿಗೆ ಅವರ ನಿಕಾಹ ಮಾಡಿಕೊಡುವುದು ಇದು ನಿತ್ಯದ ಘಟನೆಯಾಗಿದೆ !

ಪಾಕ್‌ನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಅವರ ಮನೆಯಿಂದ ಬಹಿರಂಗವಾಗಿ ಅಪಹರಣ ಮಾಡಲಾಗುತ್ತದೆ. ಅವರ ಮೇಲೆ ೩-೪ ತಿಂಗಳು ಬಲಾತ್ಕಾರ ಮಾಡಲಾಗುತ್ತದೆ ಮತ್ತು ನಂತರ ಅವರ ಮತಾಂತರ ಮಾಡಲಾಗುತ್ತದೆ. ಅನಂತರ ಅವರ ಮದುವೆ ಯಾರಾದರೊಬ್ಬ ಮುಸಲ್ಮಾನರ ಮುದುಕನೊಂದಿಗೆ ಅಥವಾ ವೇಶ್ಯಾವಾಟಿಕೆಗಾಗಿ ಅವರ ಮಾರಾಟ ಮಾಡಲಾಗುತ್ತದೆ. ಅನಂತರ ಆ ಹೆಣ್ಣುಮಕ್ಕಳು ಮರಳಿ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ. ಈ ಘಟನೆ ಅಲ್ಲಿ ದಿನನಿತ್ಯವೇ ಆಗಿದೆ. ಅದರ ಪರಿಣಾಮ ಮನೆಯಲ್ಲಿನ ಹೆಣ್ಣುಮಕ್ಕಳು ನಾಪತ್ತೆ ಆದ ಮೇಲೆ ಆ ಮನೆಯಲ್ಲಿ ನಿರ್ಮಾಣವಾದ ಭಯ, ಅವರ ಗಾಬರಿಗೊಂಡ ಮುಖ ಮತ್ತು ಶಾರೀರಿಕ ಮತ್ತು ಮಾನಸಿಕ ಮಟ್ಟದಲ್ಲಾದ ಕುಸಿಯುವಿಕೆ ಈ ಎಲ್ಲ ವಿಷಯಗಳ ಬಗ್ಗೆ ನಾವು ಕಲ್ಪನೆ ಮಾಡಲು ಸಾಧ್ಯವೇ ಇಲ್ಲ.

೪. ಸಿಂಧ್ ಪ್ರದೇಶದಲ್ಲಿ ಪ್ರತಿದಿನ ಅಲ್ಪವಯಸ್ಸಿನ ೩ ಹಿಂದೂ ಹೆಣ್ಣು ಮಕ್ಕಳ ಅಪಹರಣ ಆಗುವುದು !

ಕಳೆದ ೨೦ ವರ್ಷಗಳಿಂದ ಸಿಂಧ್ ಪ್ರದೇಶದಲ್ಲಿ ಹಿಂದೂಗಳು ಅತ್ಯಂತ ಭಯದ ಜೀವನ ನಡೆಸುತ್ತಿದ್ದಾರೆ; ಏಕೆಂದರೆ ಅಲ್ಲಿ ಪ್ರತಿದಿನ ಕಡಿಮೆಪಕ್ಷ ೩ ಅಪ್ರಾಪ್ತ ಹಿಂದೂ ಹೆಣ್ಣುಮಕ್ಕಳ ಅಪಹರಣ ಮಾಡಲಾಗುತ್ತದೆ. ವಿಶೇಷವೆಂದರೆ ಪಾಕಿಸ್ತಾದಲ್ಲಿ ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹ ಕೊಡಲಾಗುತ್ತದೆ. ಇದು ಹಿಂದೂಗಳ ಬದುಕಿರುವಾಗಲೇ ಆಗುವ ವಂಶವಿಚ್ಛೇದವಿದೆ !

ಪಾಕ್‌ನಲ್ಲಿ ಅಪಹರಣವಾಗುವ ಭೀಕರ ಕೃತ್ಯದ ಉದಾಹರಣೆ ಇಲ್ಲಿ ಮಾಹಿತಿಗಾಗಿ ಕೊಡಲಾಗಿದೆ. ಇದರಿಂದ ಪ್ರತ್ಯಕ್ಷ ಅಲ್ಲಿ ಏನು ಪರಿಸ್ಥಿತಿ ಇರಬಹುದು, ಎಂಬ ಅಂದಾಜು ಬರಬಹುದು.

ಅ. ಪಾಕ್‌ದಲ್ಲಿನ ದೇಹರಕಿ ಗ್ರಾಮದಲ್ಲಿ ಮತಾಂಧ ಮುಸಲ್ಮಾನರು ಹರಜಿ ಇವರ ಇಬ್ಬರು ಹೆಣ್ಣುಮಕ್ಕಳ ಅಪಹರಣ ಮಾಡಿದರು. ಅನಂತರ ಘೋಟಗಿಯ ದರ್ಗಾದಲ್ಲಿ ಅವರ ಮತಾಂತರ ಮಾಡಲಾಯಿತು. ದರ್ಗಾದಲ್ಲಿನ ಧರ್ಮಗುರುಗಳ ಹೇಳಿಕೆನುಸಾರ ‘ಈ ಹೆಣ್ಣುಮಕ್ಕಳು ಇಸ್ಲಾಂ ಬೋಧನೆಯಿಂದಾಗಿ ಪ್ರಭಾವಿತಗೊಂಡಿರುವುದರಿಂದ ಅವರು ಸ್ವತಃ ಮತಾಂತರರಾದರು. ಈ ಹೆಣ್ಣುಮಕ್ಕಳು ಅಪ್ರಾಪ್ತರಾಗಿರುವುದರಿಂದ ಕಾನೂನಿಗನುಸಾರ ಅವರ ವಿವಾಹ ಆಗಲು ಸಾಧ್ಯವಿಲ್ಲ. ಆದುದರಿಂದ ಹೆಣ್ಣುಮಕ್ಕಳ ಕುಟುಂಬದವರು ‘ಮದುವೆ ಮಾಡಿಕೊಳ್ಳುವುದಕ್ಕಾಗಿ ನಮ್ಮ ಹೆಣ್ಣುಮಕ್ಕಳನ್ನು ಬಲವಂತವಾಗಿ ಅಪಹರಣ ಮಾಡಿ ಮತಾಂತರ ಮಾಡಲಾಯಿತು, ಎಂಬ ದೂರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿದರು.

‘ಸಿಂಧ್ ಚೈಲ್ಡಸ್ ಮ್ಯಾರೇಜ್ ರಿಸ್ಟೆಂಟ್ ಆಕ್ಟ್, ಈ ಕಾನೂನಿಗನುಸಾರ ‘೧೮ ವರ್ಷದ ಕೆಳಗಿನ ಯಾವುದೇ ಹುಡುಗ ಅಥವಾ ಹುಡುಗಿ ‘ಬಾಲ್ಯ ಎಂಬ ಶ್ರೇಣಿಯಲ್ಲಿ ಬರುತ್ತಾರೆ ಮತ್ತು ಅವರ ವಿವಾಹ ಆಗಲು ಸಾಧ್ಯವಿಲ್ಲ. ಆದರೂ ಪೊಲೀಸರು ದರ್ಗಾದ ಧರ್ಮಗುರುಗಳ ಹೇಳಿಕೆಯಂತೆ ನಡೆದು ‘ಈ ಹೆಣ್ಣುಮಕ್ಕಳು ತಾವಾಗಿ ಇಸ್ಲಾಂ ಸ್ವೀಕರಿಸಿದ್ದಾರೆ, ಎಂದು ಹೇಳುವ ಚಿತ್ರಮುದ್ರಿಕೆಯನ್ನು ಹೆಣ್ಣುಮಕ್ಕಳ ಕುಟುಂಬದವರಿಗೆ ತೋರಿಸಿದರು. ಹೆಣ್ಣುಮಕ್ಕಳು ಒತ್ತಡದಿಂದ ಹಾಗೆ ಮಾಡಿರಬಹುದು ಎಂದು ಸಂದೇಹಮೂಡದೇ ?

ಆ. ಪಾಕ್‌ದಲ್ಲಿನ ಬಾದೀನ ಜಿಲ್ಲೆಯಲ್ಲಿ ಕಾನಿಓ ಮೇಘವಾರ ಇವರ ೧೫ ವರ್ಷದ ಮಗಳನ್ನು ಮತಾಂಧ ಮುಸಲ್ಮಾನರು ತುಂಬಿದ ಪೇಟೆಯಲ್ಲಿ ಅಪಹರಣ ಮಾಡಿದರು. ಅವಳಿಗೆ ಮಾನಸಿಕ ಕಾಯಿಲೆ ಇರುವುದರಿಂದ ಅವಳ ಮಾನಸಿಕ ಸ್ಥಿತಿ ಚೆನ್ನಾಗಿರಲಿಲ್ಲ. ಚಿಕಿತ್ಸೆಗಾಗಿ ಅವಳು ಅವಳ ತಾಯಿಯೊಂದಿಗೆ ಕರಾಚಿಯಲ್ಲಿನ ಅವಳ ಸಹೋದರಿಯ ಬಳಿಗೆ ಇರಲು ಹೋಗಿದ್ದಳು. ಅವಳ ಮನೆಯ ಪರಿಸ್ಥಿತಿ ಅತ್ಯಂತ ಬಡತನ ಇದ್ದೂ ಅವಳ ತಾಯಿ ಜನರ ಮನೆಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆ ಅಪಹರಣವಾದ ಮಗಳು ಇನ್ನೂ ಪತ್ತೆಯಾಗಿಲ್ಲ.

೫. ಶರಿಯತ್‌ಯ ಕಾನೂನಿಗನುಸಾರ ಮುಸಲ್ಮಾನರ ವಿರುದ್ಧ ಕಾಫಿರರಿಗೆ ಸಹಾಯ ಮಾಡುವುದೆಂದರೆ, ‘ಕುರ್ಫ (ಅಪರಾಧ) ತಿಳಿಯುವುದರಿಂದ ಪೊಲೀಸ್ ಮತ್ತು ನ್ಯಾಯಾಲಯಗಳಿಂದ ಹಿಂದೂಗಳಿಗೆ ಸಹಾಯ ಇಲ್ಲ !

ಪಾಕ್‌ದಲ್ಲಿನ ಇಷ್ಟು ಭೀಕರ ದೌರ್ಜನ್ಯ ನಡೆದರೂ ಅವರಿಗೆ ಯಾರೂ ರಕ್ಷಕರಿಲ್ಲ. ಪೀಡಿತ ಹಿಂದೂಗಳು ನ್ಯಾಯ ಕೇಳುವುದಕ್ಕಾಗಿ ಪೊಲೀಸರಲ್ಲಿ ಹೋದರೆ ಪೊಲೀಸರು ಅವರಿಗೆ ಎಳ್ಳಷ್ಟೂ ಸಹಾಯ ಮಾಡುವುದಿಲ್ಲ; ಏಕೆಂದರೆ ಶರಿಯತ್ ಕಾನೂನಿಗನುಸಾರ ಮುಸಲ್ಮಾನರ ವಿರುದ್ಧ ಕಾಫೀರರಿಗೆ (ಮುಸಲ್ಮಾನೇತರ ಜನರಿಗೆ) ಸಹಾಯ ಮಾಡುವುದೆಂದರೆ, ‘ಕುರ್ಫ (ಅಪರಾಧ) ತಿಳಿಯಲಾಗುತ್ತದೆ ! ಆದುದರಿಂದ ಪೊಲೀಸ್ ಮತ್ತು ನ್ಯಾಯಾಲಯಗಳು ಪೀಡಿತ ಹಿಂದೂಗಳಿಗೆ ಸಹಾಯ ಮಾಡುವುದಿಲ್ಲ. ಪಾಕಿಸ್ತಾನದಲ್ಲಿನ ಹಿಂದೂಗಳು ಈ ಅನ್ಯಾಯವನ್ನು ಅತೀ ದೊಡ್ಡ ಪ್ರಮಾಣದಲ್ಲಿ ಅನುಭವಿಸುತ್ತಿದ್ದಾರೆ. ಅಮಾನವೀಯ ಅತ್ಯಾಚಾರವನ್ನು ಸಹಿಸಿಕೊಳ್ಳುವ ಶಕ್ತಿ ಅವರಲ್ಲಿ ಮುಗಿದಿದೆ. ಈ ನರಕಯಾತನೆಯಿಂದ ಬಿಡಿಸುವುದಕ್ಕಾಗಿ ಅವರು ಭಾರತದತ್ತ ಆಶೆಯಿಂದ ನೋಡುತ್ತಿದ್ದಾರೆ.

೬. ಪಾಕ್‌ನ ಪೀಡಿತ ಹಿಂದೂಗಳಿಗೆ ಭಾರತದಲ್ಲಿ ಪುನರ್ವಸತಿಯಾಗಬೇಕೆಂದು ಭಾರತದಲ್ಲಿನ ಹಿಂದೂಗಳು ಧ್ವನಿ ಎತ್ತುವ ಅವಶ್ಯಕತೆ ಇದೆ !

ಪಾಕ್‌ದಲ್ಲಿ ಹಿಂದೂಗಳಿಗೆ ಆಗುವ ವಂಶವಿಚ್ಛೆದನೆಯಿಂದ ಅವರು ಭಯಭೀತರಾಗಿದ್ದಾರೆ. ಅವರು ನ್ಯಾಯ ಸಿಗುವಸಲುವಾಗಿ ಭಾರತದತ್ತ ಆಶಾಭಾವನೆಯಿಂದ ದಾರಿ ನೋಡುತ್ತಿದ್ದಾರೆ. ಹೆಚ್ಚುಕಡಿಮೆ ಎಲ್ಲ ಹಿಂದೂಗಳೂ ಭಾರತಕ್ಕೆ ಬರಲು ಇಚ್ಛಿಸುತ್ತಿದ್ದಾರೆ; ಆದರೆ ಭಾರತ ಸರಕಾರವು ಪೀಡಿತ ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ದುರ್ಲಕ್ಷಿಸುತ್ತಿದೆ. ಇದು ಇನ್ನು ಎಷ್ಟು ದಿನ ಹೀಗೆಯೇ ನಡೆಯುತ್ತಿರುವುದು ? ಆದುದರಿಂದ ಈಗ ಭಾರತದಲ್ಲಿನ ಹಿಂದೂಗಳು ತಮ್ಮ ಧರ್ಮಬಾಂಧವರ ಸಹಾಯಕ್ಕೆ ಧಾವಿಸಬೇಕು. ಅವರಿಗೆ ನ್ಯಾಯ, ಆಶ್ರಯ ಮತ್ತು ಪ್ರತಿಷ್ಠೆ ದೊರಕಿಸಿ ಅವರಿಗೆ ಭಾರತದಲ್ಲಿ ಪುನರ್ವಸತಿ ಕಲ್ಪಿಸುವ ಸಲುವಾಗಿ ಪ್ರಯತ್ನಿಸುವುದು, ಇದು ಭಾರತದಲ್ಲಿನ ಪ್ರತಿಯೊಬ್ಬ ಹಿಂದೂಗಳ ಪ್ರಥಮಕರ್ತವ್ಯವಾಗಿದೆ. ಅದಕ್ಕಾಗಿ ಭಾರತದಲ್ಲಿ ಹಿಂದೂಗಳು ಧ್ವನಿ ಎತ್ತಲೇಬೇಕು. ಸರಕಾರಕ್ಕೆ ಇದನ್ನು ಮಾಡಲು ಒತ್ತಾಯಿಸಬೇಕು. ಪ್ರಸಂಗ ಬಂದರೆ ಕಾನೂನು ಮಾರ್ಗದಿಂದ ಪ್ರತಿಭಟನೆ ಮಾಡಬೇಕು. ನಾವು ಧರ್ಮದಿಂದ ಪರಸ್ಪರರ ಒಂದಾಗಿದ್ದೇವೆ. ಪಾಕ್ ದಲ್ಲಿನ ಹಿಂದೂಗಳಿಗೆ ಭಾರತವು ನಿಜವಾದ ಅರ್ಥದಿಂದ ಮನೆಯಾಗಿದೆ. ತಾವು ಗಡಿಗೆ ಹೋಗಿ ನಮ್ಮ ಹಿಂದೂ ಬಾಂಧವರನ್ನು ಭಾರತಕ್ಕೆ ಮರಳಿ ತರಬೇಕು.

೭. ಪಾಕ್‌ದಲ್ಲಿನ ಹಿಂದೂಗಳನ್ನು ಉಳಿಸಲು ಇದೇ ಸಮಯ !

ಸದ್ಯ ಎಲ್ಲ ಜಗತ್ತು ಇಸ್ಲಾಮಿ ಭಯೋತ್ಪಾದನೆಯ ವಿರುದ್ಧವಿದೆ. ಈ ಅನುಕೂಲ ಪರಿಸ್ಥಿತಿಯ ಲಾಭ ಪಡೆದು ನಾವು ಪಾಕ್‌ದಲ್ಲಿನ ನಮ್ಮ ಪೀಡಿತ ಹಿಂದೂ ಬಾಂಧವರನ್ನು ಮರಳಿ ತರುವುದಕ್ಕಾಗಿ ಹೆಜ್ಜೆ ಇಡಬೇಕು. ನಾವು ಒಂದುವೇಳೆ ಎಚ್ಚರಗೊಳ್ಳದಿದ್ದರೆ, ಪಾಕಿಸ್ತಾನದಲ್ಲಿರುವ ಕೇವಲ ಶೇ. ೩ ರಷ್ಟು ಹಿಂದೂಗಳು ಸಾಯಿಸಲ್ಪಡಬಹುದು ಅಥವಾ ಅವರ ಮತಾಂತರ ಮಾಡಲಾಗಬಹುದು ಮತ್ತು ಅವರು ನಮ್ಮನ್ನು ಶಾಶ್ವತವಾಗಿ ಅಗಲುವರು. ಹಾಗಾಗಿ ಎಲ್ಲ ಹಿಂದೂಗಳ ಇಚ್ಛಾಶಕ್ತಿ ಜಾಗೃತವಾದರೆ, ಶೇ. ೩ ರಷ್ಟು ಈ ಹಿಂದೂಗಳು ಬದುಕಬಹುದು ಮತ್ತು ಅವರು ಭಾರತಕ್ಕೆ ಬಂದನಂತರ ಇಲ್ಲಿನ ೧೦೦ ಕೋಟಿ ಹಿಂದೂಗಳ ಶಕ್ತಿ ಬೆಳೆಯಬಹುದು. ಹೀಗೆ ಮಾಡಿದರೆ ಈಗಲೇ ಆಗುವುದು ಇಲ್ಲದಿದ್ದರೆ ಮುಂದೆ ಎಂದಿಗೂ ಆಗುವುದಿಲ್ಲ. (ಆಧಾರ : ನಿರಾಶ್ರಿತ ಪಾಕಿಸ್ತಾನಿ ಹಿಂದೂಗಳಿಗಾಗಿ ಕಾರ್ಯನಿರತ ‘ನಿಮಿತ್ತೇಕಮ, ಎಂಬ ಸಂಘಟನೆಯಿಂದ ಲಭಿಸಿದ ಮಾಹಿತಿ)

Kannada Weekly | Offline reading | PDF