ಬಂಗಾಲದ ಬಗಾಖಾಲಿ ಎಂಬ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ  ಮಸೀದಿಗಳಿಂದ ಹಿಂದೂಗಳ ಮೇಲೆ ದಾಳಿ ಮಾಡುವ ಬಗ್ಗೆ ಬೆದರಿಕೆ

ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿರಿ, ಅವರ ಮೇಲೆ ಈಟಿ, ಖಡ್ಗ ಮತ್ತು ಚೂರಿಗಳಿಂದ ದಾಳಿ ಮಾಡಿ ! – ಮುಸಲ್ಮಾನರಿಂದ ಬೆದರಿಕೆ

ಕೋಲಕಾತಾ – ಬಂಗಾಲದ ದಕ್ಷಿಣ ೨೪ ಪರಗಣಾ ಜಿಲ್ಲೆಯ ಬಗಾಖಾಲಿ ಎಂಬ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಮೇ ೧೪ ರಂದು ಮಸೀದಿಗಳಲ್ಲಿನ ಭೋಂಗಾದ ಮೂಲಕ ಮುಸಲ್ಮಾನರಿಗೆ ಕರೆ ನೀಡಲಾಯಿತು, “ನೀವು ಈಟಿ, ಖಡ್ಗ ಇತ್ಯಾದಿ ಕೈಗೆ ಸಿಗುವ ಶಸ್ತ್ರಗಳಿಂದ ಹಿಂದೂಗಳ ಮೇಲೆ ದಾಳಿ ಮಾಡಿ ಅವರನ್ನು ಊರಿನಿಂದ ಹೊರದಬ್ಬಿರಿ. ಈ ಘೋಷಣೆಯ ವಿರುದ್ಧ ದೂರು ನೀಡಲು ಪ್ರಯತ್ನಿಸಿದ ೧೧ ಜನ ಹಿಂದೂಗಳನ್ನೇ ಪೊಲೀಸರು ಬಂಧಿಸಿದರು, ಎಂಬ ಮಾಹಿತಿ ಮೂಲಗಳಿಂದ ಸಿಕ್ಕಿದೆ. ಈ ಹಿಂದೂಗಳು ರಾ. ಸ್ವ. ಸಂಘದ ಸ್ವಯಂ ಸೇವಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಇದರ ವಿರುದ್ಧ ಯಾರಾದರೂ ಮುಂದೆ ಬಂದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆದರಿಕೆ ಕೂಡ ಮಸೀದಿಗಳಿಂದ ನೀಡಲಾಗಿದೆ ಎಂದು ಹಿಂದೂಗಳು ಹೇಳುತಿದ್ದಾರೆ. ಆದ್ದರಿಂದ ಪೊಲೀಸರ ಬಳಿ ಹೋಗಲು ಹಿಂದೂಗಳು ಧೈರ್ಯ ಮಾಡುವುದಿಲ್ಲವೆಂದು ಕಂಡುಬರುತ್ತದೆ. ಈ ವಾರ್ತೆಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿರುವುದರಿಂದ ರಾಷ್ಟ್ರೀಯ ಪ್ರಸಾರಮಾಧ್ಯಮಗಳಲ್ಲಿ ಇದರ ವಾರ್ತೆಯು ಬಿತ್ತರವಾಗಲಿಲ್ಲ.

ಈ ಘಟನೆಯ ನಂತರ ಆ ಊರಿನ ಹಿಂದೂಗಳು ಪಲಾಯನ ಗೈಯುತ್ತಿದ್ದಾರೆ. ದ್ವಿಚಕ್ರ, ಸೈಕಲ್ ಇತ್ಯಾದಿಗಳಲ್ಲಿ ಹಾಗೂ ಕಾಲ್ನಡಿಗೆಯಿಂದ ಹಿಂದೂಗಳು ಪಲಾಯನ ಗೈಯುತ್ತಿದ್ದಾರೆ. ಈ ವಿಷಯದ ಒಂದು ‘ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ ಹಾಗೂ ಸ್ಥಳೀಯ ವಾರ್ತಾವಾಹಿನಿಗಳಲ್ಲಿ ಇದರ ವಾರ್ತೆಯನ್ನು ತೋರಿಸಲಾಗಿದೆ. ಈ ಹಿಂದೂಗಳಿಗೆ ಪ್ರಶ್ನೆ ಕೇಳಿದಾಗ ಅವರು ಹೇಳಿದರು, “ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿರಿ. ಯಾವ ಹಿಂದೂವಿಗೂ ಮನೆಯಿಂದ ಹೊರಗೆ ಹೋಗಲು ಬಿಡಬೇಡಿ. ಲಾಠಿ, ಚೂರಿ, ಖಡ್ಗ ಏನು ಕೈಗೆ ಸಿಗುತ್ತದೆಯೊ, ಅದರ ಮೂಲಕ ಅವರ ಮೇಲೆ ಆಕ್ರಮಣ ಮಾಡಿರಿ, ಎಂದು ಮಸೀದಿಗಳಿಂದ ಘೋಷಣೆ ನೀಡಲಾಗುತ್ತಿದೆ.

ಬಂಗಾಲ ಭಾರತದಲ್ಲಿದೆಯೋ ಪಾಕಿಸ್ತಾನದಲ್ಲಿಯೋ ?

ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲಿ ಹಿಂದೂಗಳು ಅಸುರಕ್ಷಿತರು ! ‘ಮಮತಾ ಬ್ಯಾನರ್ಜಿಯವರನ್ನು ಆರಿಸಿದ ಹಿಂದೂಗಳಿಗೆ ಸಿಕ್ಕಿದ ಶಿಕ್ಷೆಯಾಗಿದೆ ಎಂದು ಯಾರಾದರೂ ಹೇಳಿದರೆ ಆಶ್ಚರ್ಯವೆನಿಸಲಿಕ್ಕಿಲ್ಲ !

ಕಾಶ್ಮೀರದಂತೆ ಈಗ ಬಂಗಾಲದಲ್ಲಿಯೂ ಹಿಂದೂಗಳಿಗೆ ಮಸೀದಿಗಳಿಂದ ಬೆದರಿಕೆ ನೀಡಿ ಓಡಿಸುತ್ತಿರುವಾಗ ಕೇಂದ್ರದ ಭಾಜಪ ಸರಕಾರ ನಿಷ್ಕ್ರಿಯವಾಗಿದ್ದು ಕೇವಲ ರಾಜಕೀಯ ಸ್ವಾರ್ಥ ಸಾಧಿಸಲು ಪ್ರಯತ್ನಿಸುತ್ತಿದೆ, ಎಂಬುದನ್ನು ಗಮನದಲ್ಲಿಡಿ !

ಕಾಶ್ಮೀರದಂತೆಯೇ ಈಗ ಬಂಗಾಲದಲ್ಲಿಯೂ ಹಿಂದೂಗಳು ನಿರಾಶ್ರಿತರಾಗುವ ಮೊದಲೇ ಹಿಂದೂ (ಈಶ್ವರಿ) ರಾಷ್ಟ್ರವನ್ನು ಸ್ಥಾಪನೆ ಮಾಡದೆ ಪರ್ಯಾಯವಿಲ್ಲ, ಎಂಬುದು ಹಿಂದೂಗಳಿಗೆ ಅರಿವಾದರೆ ಅದೆ ಸುದಿನ !

ಗೋಹತ್ಯೆ ಮಾಡುವ ಕಸಾಯಿಗಳ ಮೇಲೆ ಕೈ ಮಾಡಿದಾಗ ದೇಶದಲ್ಲಿ ಅಸಹಿಷ್ಣುತ್ವ ಹೆಚ್ಚಾಗಿದೆ ಎಂದು ಕೂಗಾಡುವ ಜಾತ್ಯತೀತವಾದಿಗಳಿಗೆ ಮತ್ತು ಪ್ರಗತಿಪರರಿಗೆ ಈಗ ಈ ಘಟನೆ ಕಾಣಿಸುವುದಿಲ್ಲವೇ ?

Kannada Weekly | Offline reading | PDF