ಫಲಕ ಪ್ರಸಿದ್ಧಿಗಾಗಿ

೧. ಕಮಲ ಹಾಸನರವರು ‘ಇಸ್ಲಾಮಿ ಭಯೋತ್ಪಾದನೆ’ ಎಂದು ಎಂದಾದರೂ ಹೇಳಿದ್ದಾರೆಯೇ ?

ಮಹಾತ್ಮಾ ಗಾಂಧಿಯವರ ಹತ್ಯೆ ಮಾಡುವ ನಾಥುರಾಮ ಗೋಡಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕನಾಗಿದ್ದನು ಮತ್ತು ಅವನು ಹಿಂದೂ ಆಗಿದ್ದನು, ಎಂದು ನಟ ಹಾಗೂ ‘ಎಮ್‌ಎನ್‌ಎಮ್’ ಪಕ್ಷದ ಮುಖ್ಯಸ್ಥ ಕಮಲ ಹಾಸನ ಹೇಳಿದ್ದಾರೆ.

೨. ಇದೇನು ಭಾರತವೋ ಪಾಕಿಸ್ತಾನವೋ ?

ದೆಹಲಿಯ ಮಹಮ್ಮದ ಆಲಮ್ ಎಂಬ ೨೦ ವರ್ಷದ ಯುವಕನು ತಂದೆಯೊಂದಿಗೆ ತೆರಳುತ್ತಿದ್ದ ಓರ್ವ ಹಿಂದೂ ಯುವತಿಗೆ ಕಿರುಕುಳ ನೀಡಿದನು. ಅದಕ್ಕಾಗಿ ಯುವತಿಯ ತಂದೆ ಆಲಮ್‌ಗೆ ಗದರಿಸಿದನೆಂದು ಆತ ಅವರ ಹತ್ಯೆ ಮಾಡಿದನು.

೩. ಬಂಗಾಲವು ಭಾರತದಲ್ಲಿದೆಯೋ ಪಾಕಿಸ್ತಾನದಲ್ಲಿಯೋ ?

ಬಂಗಾಲದ ಬಗಾಖಾಲಿ ಎಂಬ ಮುಸಲ್ಮಾನರು ಬಹುಸಂಖ್ಯೆಯಲ್ಲಿರುವ ಗ್ರಾಮದಲ್ಲಿ ಮೇ ೧೪ ರಂದು ಮಸೀದಿಗಳ ಧ್ವನಿವರ್ಧಕಗಳಿಂದ ‘ನೀವು ಬರ್ಚಿ, ಕತ್ತಿ, ಇತ್ಯಾದಿ ಕೈಗೆ ಸಿಗುವ ಶಸ್ತ್ರಗಳನ್ನು ಕೈಗೆತ್ತಿಕೊಂಡು ಹಿಂದೂಗಳನ್ನು ಗ್ರಾಮದಿಂದ ಹೊರಹಾಕಿ’, ಎಂದು ಮುಸಲ್ಮಾನರಿಗೆ ಕರೆ ನೀಡಿದಾಗ ಹಿಂದೂಗಳು ಅಲ್ಲಿಂದ ಪಲಾಯನ ಪ್ರಾರಂಭಿಸಿದ್ದಾರೆ.

೪. ಸಿಕ್ಖ್‌ರ ಹತ್ಯಾಕಾಂಡ ನಡೆಸಿದ ಮತ್ತು ಭ್ರಷ್ಟಾಚಾರ ಮಾಡುವ ಕಾಂಗ್ರೆಸ್ ‘ದೇಶಭಕ್ತ’ವಾಗಿದೆಯೇ ?

ಸಾಧ್ವಿ ಪ್ರಜ್ಞಾಸಿಂಹರವರು ಪಂಡಿತ ನಾಥುರಾಮ ಗೋಡಸೆ ಇವರನ್ನು ‘ದೇಶಭಕ್ತ’ ಎಂದು ಹೇಳಿದ ಪ್ರಕರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರ ಮೇಲೆ ಕ್ರಮಕೈಗೊಳ್ಳಬೇಕು, ಎಂದು ಕಾಂಗ್ರೆಸ್ ವಕ್ತಾರ ರಣದೀಪ ಸುರ್ಜೆವಾಲಾರವರು ಪತ್ರಕರ್ತರ ಪರಿಷತ್ತು ನಡೆಸಿ ಆಗ್ರಹಿಸಿದರು.

೫. ದೇಶದ ವಿಭಜನೆಗೆ ಸಮ್ಮತಿ ನೀಡುವವರನ್ನು ಹಿಂದೂಗಳು ಎಂದಾದರೂ ಕ್ಷಮಿಸಬಹುದೇ ?

ನಾಥುರಾಮ ಗೋಡಸೆ ದೇಶಭಕ್ತ ಎಂದು ಹೇಳುವ ಸಾಧ್ವಿ ಪ್ರಜ್ಞಾಸಿಂಹರವರು ಕ್ಷಮೆ ಕೇಳಿದ್ದರೂ, ನಾನು ಅಂತಃಕರಣದಿಂದ ಎಂದಿಗೂ ಕ್ಷಮಿಸಲಾರೆನು, ಎಂದು ಪ್ರಧಾನಮಂತ್ರಿ ಮೋದಿಯವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

೬. ಕಾಂಗ್ರೆಸ್ಸಿನ ಹಿಂದೂದ್ವೇಷ ತಿಳಿಯಿರಿ !

‘ಸಮಝೌತಾ ಎಕ್ಸ್‌ಪ್ರೆಸ್ ಬಾಂಬಸ್ಫೋಟ ಪ್ರಕರಣದಲ್ಲಿ ನಾನು ನಿರಪರಾಧಿಯಾಗಿ ಬಿಡುಗಡೆ ಯಾಗಿದ್ದರಿಂದ ‘ಹಿಂದೂ ಭಯೋತ್ಪಾದನೆ’ಯ ಪರಿಕಲ್ಪನೆ ನಾಶವಾಯಿತು. ಕಾಂಗ್ರೆಸ್ ಸುಳ್ಳು ಆರೋಪದಲ್ಲಿ ನಮಗೆ ಮೋಸ ಮಾಡಿ ನಮ್ಮ ಮೇಲೆ ದೌರ್ಜನ್ಯ ನಡೆಸಿತು; ಆದರೆ ನ್ಯಾಯಾಲಯವು ನಮಗೆ ನ್ಯಾಯ ನೀಡಿತು’, ಎಂದು ಸ್ವಾಮಿ ಅಸೀಮಾನಂದರು ಹೇಳಿದ್ದಾರೆ.

೭. ದೇಶದ ವಿಭಜನೆಗೆ ಮನ್ನಣೆ ನೀಡುವವರು ‘ದೇಶಭಕ್ತ’ರಾಗಿದ್ದರೇ ?

‘ನಾಥುರಾಮ ಗೋಡಸೆ ದೇಶಭಕ್ತರಿದ್ದರು’, ಎಂದು ಸಾಧ್ವಿ ಪ್ರಜ್ಞಾಸಿಂಗ್ ಹೇಳಿದ ನಂತರ, ‘ಭಾಜಪವು ಸಾಧ್ವಿ ಪ್ರಜ್ಞಾಸಿಂಹ ಇವರನ್ನು ಪಕ್ಷದಿಂದ ಹೊರದಬ್ಬುವ ವಿಚಾರಮಾಡಬೇಕು. ನಾವು ಈ ರೀತಿಯ ಹೇಳಿಕೆಗಳನ್ನು ಸಹಿಸಲಾರೆವು’, ಎಂದು ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಹೇಳಿದ್ದಾರೆ.

Kannada Weekly | Offline reading | PDF