ಪ್ರತಿಯೊಬ್ಬರೂ ಹಿಂದೂ ಸಂಸ್ಕೃತಿಯನ್ನು ತಿಳಿದುಕೊಂಡು ಧರ್ಮಾಚರಣೆ ಮತ್ತು ಸಾಧನೆ ಮಾಡುವುದು ಆವಶ್ಯಕವಾಗಿದೆ ! – ಸೌ. ಉಜ್ವಲಾ ಗಾವಡೆ

ಕಾರ್ಯಕ್ರಮದಲ್ಲಿ ಮಾರ್ಗದರ್ಶನ ಮಾಡುತ್ತಿರುವ ಸೌ. ಉಜ್ವಲ ಗಾವಡೆ

ಬೆಳಗಾವಿ – ನಾವು ದಿನವಿಡೀ ಮಾಡುತ್ತಿರುವ ಪ್ರತಿಯೊಂದು ಕೃತಿಯನ್ನು ಅದರ ಹಿಂದಿನ ಶಾಸ್ತ್ರವನ್ನು ತಿಳಿದುಕೊಂಡು ಆಚರಣೆ ಮಾಡಿದರೆ ಹಿಂದೂ ಸಂಸ್ಕೃತಿಯನ್ನು ಉಳಿಸಬಹುದು. ಆಧುನಿಕತೆಯ ಹೆಸರಿನಲ್ಲಿ ಮಹಿಳೆಯರು ಅಯೋಗ್ಯವಾದ ಉಡುಪುಗಳನ್ನು ಧರಿಸುವುದು, ಕುಂಕುಮ ಹಚ್ಚದಿರುವುದು ಇತ್ಯಾದಿಗಳೊಂದಿಗೆ ಇನ್ನೂ ಕೆಲವು ಅಯೋಗ್ಯ ಕೃತಿಗಳನ್ನು ಮಾಡುವುದರಿಂದ ಸಮಾಜದಲ್ಲಿ ಅಧರ್ಮ ಹೆಚ್ಚುತ್ತಿದೆ. ಶಿಕ್ಷಣ ವ್ಯವಸ್ಥೆ, ಕುಟುಂಬ ವ್ಯವಸ್ಥೆ ಹದಗೆಡುತ್ತಿದೆ. ಅದರಿಂದಲೆ ಮಹಿಳೆಯರ ಮೇಲೆ ಅತ್ಯಾಚಾರದಂತಹ ಗಂಭೀರ ಘಟನೆಗಳು ಪ್ರತಿದಿನ ಹೆಚ್ಚುತ್ತಿವೆ. ಇದನ್ನು ನಿಲ್ಲಿಸಲು ಪ್ರತಿಯೊಬ್ಬರೂ ಹಿಂದೂ ಸಂಸ್ಕೃತಿಯನ್ನು ತಿಳಿದುಕೊಂಡು ಧರ್ಮಾಚರಣೆ ಮತ್ತು ಸಾಧನೆ ಮಾಡುವುದು ಆವಶ್ಯಕವಾಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಸೌ. ಉಜ್ವಲ ಗಾವಡೆ ಇವರು ಮಾರ್ಗದರ್ಶನ ಮಾಡಿದರು. ಅವರು ಮೇ ೯ ರಂದು ಹಾಲಶಿರಗುರದಲ್ಲಿ (ರಾಯಬಾಗ ತಾಲೂಕು) ಶ್ರೀ ಮಹಾಲಕ್ಷ್ಮಿ ಯಾತ್ರೆಯ ಉತ್ಸವದ ನಿಮಿತ್ತದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು. ಈ ಸಂದರ್ಭದಲ್ಲಿ ಜ್ಞಾನಯೋಗ ಆಶ್ರಮದ ಮಾತೋಶ್ರೀ ಪೂ. ಅಕ್ಕಮಹಾದೇವಿ, ಸಿದ್ಧಾರೂಢ ಮಠದ ಪೂ. ಮಾತೋಶ್ರೀ ಕಾತ್ಯಾಯನೀ ಹಾಗೂ ಮಹಿಳಾ ಸಬಲೀಕರಣ ಸಂಸ್ಥೆಯ ಕು. ಮಂಜುಳಾ ಮುನೋವಳಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇವಿಯ ಉಡಿತುಂಬಿಸಿ ಆರಂಭಿಸಲಾಯಿತು. ೫೦೦ ಕ್ಕಿಂತಲೂ ಹೆಚ್ಚು ಸ್ತ್ರೀಯರು ಇದರ ಲಾಭ ಪಡೆದರು.

Kannada Weekly | Offline reading | PDF