ಈ ಘೋರ ಕಲಿಯುಗದಲ್ಲಿಯೂ ನಡೆಯುತ್ತಿದೆ ‘ಶ್ರೀ ರಾಮ ನಾಮ ಧನ ಬ್ಯಾಂಕ್ !

ಶ್ರೀ ರಾಮನಾಮ ಬರೆದಿರುವ ವಹಿಗಳನ್ನು ಈ ರೀತಿ ಚೀಲಗಳಲ್ಲಿ ಸಂಗ್ರಹಿಸಿಡಲಾಗುತ್ತದೆ

 

‘ರಾಮ ನಾಮದ ಮಾಧ್ಯಮದಿಂದ ‘ಸುಂದರಕಾಂಡ ಈ ಶಬ್ದವನ್ನು ಬರೆದಿರುವ ವಹಿಯ ಮೊದಲಪುಟ! ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ಪಕ್ಕದಲ್ಲಿ ಗೋಲದಲ್ಲಿ ದೊಡ್ಡದು ಮಾಡಿ ತೋರಿಸಲಾಗಿದೆ!
ಶ್ರೀ. ಆನಂದ ಜಾಖೊಟಿಯಾ

‘ಬ್ಯಾಂಕ್ ಎಲ್ಲಿದೆಯೋ ಅಲ್ಲಿ ಹಣ, ಇದು ಇಂದಿನ ಆಧುನಿಕ ಯುಗದ ಬೇರೆಯಾಗದ ಸಮೀಕರಣವಾಗಿದೆ. ಮನುಷ್ಯನ ದಿನವಿಡಿಯ  ಹೋರಾಟ ಈ ಬ್ಯಾಂಕಿನಲ್ಲಿರುವ ತನ್ನ ಠೇವಣಿಯನ್ನು ಭದ್ರಗೊಳಿಸುವುದಕ್ಕಾಗಿಯೇ ಇರುತ್ತದೆ. ಹೆಚ್ಚುತ್ತಿರುವ ತನ್ನ ಠೇವಣಿಯೊಂದಿಗೆ ಅವನಿಗೂ ಧನ್ಯಧನ್ಯನಾದಂತೆನಿಸುತ್ತದೆ. ಹಗರಣಗಳ ಸುದ್ದಿಯನ್ನು ಕೇಳಿದಾಗ ಮಾತ್ರ ಬ್ಯಾಂಕಿನಲ್ಲಿನ ಹಣದ ಮೇಲೆಯೇ ಅವಲಂಬಿಸಿರುವವರು ಭಯದಿಂದ ಕಕ್ಕಾಬಿಕ್ಕಿಯಾಗುತ್ತಾರೆ. ಇಂತಹ ಸ್ಥಿತಿಯಲ್ಲಿ ರಾಜಸ್ಥಾನದ ಪ್ರವಾಸದಲ್ಲಿರುವಾಗ ನನಗೆ ಶ್ರೀ ಗುರುಕೃಪೆಯಿಂದ ನೈಜ ಧನವನ್ನು ಸಂಗ್ರಹಿಸುವ ಒಂದು ಬ್ಯಾಂಕ್ ನೋಡಲು ಸಿಕ್ಕಿತು. ಎಲ್ಲರಿಗೂ ಅದರ ಮಾಹಿತಿಯಾಗಬೇಕೆಂದು ಅದನ್ನು ಇಲ್ಲಿ ನೀಡುತ್ತಿದ್ದೇನೆ.

೧. ಎಂದಿಗೂ ಮುಗಿಯದಿರುವ ಧನವನ್ನು ಸಂಗ್ರಹಿಸುವ ಒಂದು ಅದ್ಭುತವಾದ ಬ್ಯಾಂಕ್ !

ಒಂದು ಬ್ಯಾಂಕಿದೆ. ಅದು ನಿಮಗೆ ಎಂದಿಗೂ ಮುಗಿಯದ, ಕದಿಯಲು ಬಾರದಿರುವ ಅಥವಾ ಯಾವುದೇ ಹಗರಣದಲ್ಲಿ ಸಿಲುಕದ ಧನವನ್ನು ಸಂಗ್ರಹ ಮಾಡಲು ಪ್ರವೃತ್ತಗೊಳಿಸುತ್ತದೆ ಮತ್ತು ಈ ಧನವನ್ನು ಸಂರಕ್ಷಿಸುತ್ತದೆ. ಈ ಬ್ಯಾಂಕ್ ಬಗ್ಗೆ ಎಲ್ಲರಿಗೂ ಕುತೂಹಲವಿರಬಹುದಲ್ಲವೇ ? ಈ ಬ್ಯಾಂಕ್ ಎಂದರೆ ‘ಶ್ರೀ ರಾಮ-ನಾಮ ಧನ(ಸಂಗ್ರಹ) ಬ್ಯಾಂಕ್ ! ರಾಜಸ್ಥಾನದ ಅಜಯಮೇರೂ (ಅಜಮೇರ) ವಿನಿಂದ ಇದು ಸಂಚಾಲನೆಗೊಳ್ಳುತ್ತದೆ. ಸದ್ಯಕ್ಕೆ ಇದರ ವ್ಯಾಪ್ತಿ ರಾಜಸ್ಥಾನದ ಪ್ರಮುಖ ನಗರಗಳಿಗಷ್ಟೆ ಸೀಮಿತವಾಗಿದ್ದರೂ, ದೆಹಲಿ ಮತ್ತು ಉತ್ತರಪ್ರದೇಶ ಸ್ಥಳಗಳಲ್ಲಿಯೂ ಈ ಬ್ಯಾಂಕ್ ತನ್ನ ಶಾಖೆಗಳನ್ನು ಪ್ರಾರಂಭಿಸಿದೆ. ‘ಶ್ರೀ ಮಾನವ ಮಂಗಲ ಸೇವಾ ನ್ಯಾಸದ ವತಿಯಿಂದ ಈ ಉಪಕ್ರಮವನ್ನು ಕಳೆದ ೩೧ ವರ್ಷಗಳಿಂದ ನಡೆಸಲಾಗುತ್ತಿದೆ. ೭.೪.೧೯೮೭ ರಂದು ರಾಮನವಮಿಯ ಶುಭ ಮುಹೂರ್ತದಲ್ಲಿ ಈ ಬ್ಯಾಂಕಿನ ಶುಭಾರಂಭವಾಯಿತು. ಅಜಯಮೇರೂವಿನ ವರದಿಗಾರರಾದ ಶ್ರೀ. ವಿಜಯ ಸಿಂಹ ಇವರ ಮುಂದಾಳತ್ವದಲ್ಲಿ ಈ ಬ್ಯಾಂಕಿಗೆ ಪ್ರತ್ಯಕ್ಷ ಭೇಟಿ ನೀಡುವ ಯೋಗ ನನಗೆ ಲಭಿಸಿತು.

೨. ಅತ್ಯಾಧುನಿಕ ಬ್ಯಾಂಕಿನ ಖಾತೆ !

ಈ ಕಲಿಯುಗದಲ್ಲಿ ಅಲ್ಪ ಸ್ವಲ್ಪವಲ್ಲ, ಆದರೆ ಆಗಸ್ಟ್ ೨೦೧೮ರ ವರೆಗೆ ಈ ಬ್ಯಾಂಕಿನಲ್ಲಿ ೩೪ ಸಾವಿರ ೭೧೬ ಜನರು ತಮ್ಮ ಖಾತೆಯನ್ನು ತೆರೆದಿದ್ದಾರೆ. ಅದೂ ೮೪ ಲಕ್ಷ ಲಿಖಿತ ನಾಮಜಪದ ಸಂಕಲ್ಪದೊಂದಿಗೆ ! ಕೇವಲ ೧೩೧ ರೂಪಾಯಿಗಳನ್ನು ನೀಡಿ ನೀವು ಖಾತೆಯನ್ನು ತೆರೆದರೆ, ಸಂಗಣಕದ ಸಾಫ್ಟವೇರ ಸಹಾಯದಿಂದ ನಿಮ್ಮ ಖಾತೆಯ ಕ್ರಮಾಂಕ ಸಿದ್ಧಗೊಳ್ಳುತ್ತದೆ ಮತ್ತು ನಿಮಗೆ ರಾಮ ನಾಮ ಬರೆಯಲು ವಹಿಗಳನ್ನು ಲಭ್ಯ ಮಾಡಿಕೊಡಲಾಗುತ್ತದೆ. ರಾಮ-ನಾಮವನ್ನು ಬರೆದು ನೀವು ಈ ವಹಿಗಳನ್ನು ಅಂಚೆಯ ಮೂಲಕ  ಅಥವಾ ಖುದ್ದಾಗಿ ಜಮೆ ಮಾಡಬಹುದು. ನಿಮ್ಮ ವಹಿಗಳನ್ನು ಜಮೆ ಮಾಡಿಕೊಳ್ಳುವಾಗ ನಿಮ್ಮ ಖಾತೆಯಲ್ಲಿ ನೀವು ಇಲ್ಲಿಯವರೆಗೆ ಮಾಡಿದ ನಾಮಸ್ಮರಣೆಯ ಕ್ರೋಢೀಕೃತವಾಗಿ ‘ನಿಮ್ಮ ಇಲ್ಲಿಯವರೆಗೆ ಎಷ್ಟು ಜಪವಾಯಿತು ?, ಎನ್ನುವುದನ್ನು ಈ ‘ಸಾಫ್ಟವೇರ ನಿಮಗೆತೋರಿಸುತ್ತದೆ. ೮೪ ಲಕ್ಷ ಯೋನಿಗಳಿಂದ ಪ್ರವಾಸ ಮಾಡಿ ಮನುಷ್ಯಜನ್ಮ ದೊರಕುತ್ತದೆ. ಈ ಮನುಷ್ಯಜನ್ಮವನ್ನು ಸಾರ್ಥಕಗೊಳಿಸಲು ಈ ಬ್ಯಾಂಕಿನ ಖಾತೆಯನ್ನು ತೆರೆಯುವ ಪ್ರತಿಯೊಬ್ಬರಿಗೂ ೮೪ ಲಕ್ಷಗಳಷ್ಟು ಸಂಖ್ಯೆಯಲ್ಲಿ ನಾಮಜಪವನ್ನು ಮಾಡುವ ಪ್ರೇರಣೆ ಸಿಗುತ್ತದೆ. ೩೩೬ ವಹಿಗಳ ಮಾಧ್ಯಮದಿಂದ ಈ ನಾಮಜಪವು ಪೂರ್ಣಗೊಳ್ಳುತ್ತದೆ.

೩. ಅಲೌಕಿಕ ಸಂಗ್ರಹ !

ಅಜಯಮೇರೂ ಕಾರ್ಯಾಲಯದ ವ್ಯವಸ್ಥಾಪಕರಾದ ಶ್ರೀ. ಬಾಲಕೃಷ್ಣ ಪುರೋಹಿತ ಇವರು, ಜನರು ಜಮೆ ಮಾಡಿದ ವಹಿಗಳನ್ನು ಪ್ಲಾಸ್ಟಿಕನಲ್ಲಿ ಕಟ್ಟಿ ಹಳದಿ- ಕೆಂಪು ಬಣ್ಣಗಳ ರೇಶಿಮೆಯ ಗೋಣಿಚೀಲಗಳಲ್ಲಿ ಅವುಗಳನ್ನು ತುಂಬಿಸಿಡಲಾಗುತ್ತದೆ. ಸಂತರ ಆಜ್ಞೆಯಂತೆ ಇಲ್ಲಿಯವರೆಗೆ ಒಂದೇ ಒಂದು ವಹಿಯನ್ನು ವಿಸರ್ಜನೆ ಮಾಡದೇ, ಅವುಗಳನ್ನು ಸಂಗ್ರಹಿಸಿಡಲಾಗಿದೆ. ಒಂದು ವಹಿಯಲ್ಲಿ ೨೫ ಸಾವಿರ ಜಪವನ್ನು ಬರೆಯಲಾಗುತ್ತದೆ. ಒಂದು ಗೋಣಿಚೀಲದಲ್ಲಿ ಸಾಧಾರಣ ೧ ಸಾವಿರ ವಹಿಗಳಿರುತ್ತದೆ. ಅಂದರೆ ೨.೫೦ ಕೋಟಿ ನಾಮಜಪದ ಒಂದು ಗೋಣಿಚೀಲವು ಸಿದ್ಧವಾಗುತ್ತದೆ. ವರ್ಷದಲ್ಲಿ ಒಂದು ಬಾರಿ ಭಕ್ತರ ಆಗ್ರಹದ ಮೇರೆಗೆ ರಾಮನಾಮದ ಈ ಗೋಣಿಚೀಲಗಳನ್ನು ಒಂದು ಮೈದಾನದಲ್ಲಿಟ್ಟು ಅದಕ್ಕೆ ಪ್ರದಕ್ಷಿಣೆ ಹಾಕುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ೪೧ ಅಬ್ಜ ರಾಮನಾಮ ಬರೆದಿರುವ ಗೋಣಿಚೀಲಗಳನ್ನು ಟ್ರಕ್ಕಿನ ಮೂಲಕ ಪ್ರದಕ್ಷಿಣೆ ಹಾಕುವ ಸ್ಥಳಕ್ಕೆ ಒಯ್ಯಲಾಗುತ್ತದೆ. ೧೧ ದಿನಗಳ ಕಾಲ  ಪರಿಕ್ರಮದ ಈ ಕಾರ್ಯಕ್ರಮ ಜರುಗುತ್ತದೆ. ಇಲ್ಲಿಯವರೆಗೆ ೫೫ ಅಬ್ಜ ಜಪ ಬರೆದಿರುವ ವಹಿಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಹೇಳಿದರು.

೪. ಜನರಿಗೆ ಅನುಭೂತಿಯನ್ನು ನೀಡುವ ಚೈತನ್ಯದ ಠೇವಣಿ !

ವಿಶೇಷವೆಂದರೆ ಅಜಯಮೇರೂವಿನಲ್ಲಿ ಯಾವ ಸ್ಥಳದಲ್ಲಿ ಈ ಗೋಣಿಚೀಲಗಳನ್ನು ಇಡಲಾಗಿದೆಯೋ, ಅಲ್ಲಿ ಶಾಂತಿಯ ವಾತಾವರಣವಿದೆ. ನಗರದ ಜನರು ಶಾಂತಿಯನ್ನು ಅನುಭವಿಸಲು ಕೆಲವು ಕಾಲ ಈ ಕಾರ್ಯಾಲಯಕ್ಕೆ ಬಂದು ಕುಳಿತುಕೊಳ್ಳುತ್ತಾರೆ ಅಥವಾ ನಾಮಜಪವನ್ನು ಮಾಡುತ್ತಾರೆ. ವರ್ಷದಲ್ಲಿ ಒಮ್ಮೆ ಪ್ರದಕ್ಷಿಣೆಯನ್ನು ಹಾಕುವ  ಭಕ್ತಿರಿಗೂ ವಿಶೇಷ ಅನುಭೂತಿಗಳು ಬರುತ್ತವೆ. ಈ ಅನುಭೂತಿಗಳನ್ನು ಅವರು ಯೂ-ಟ್ಯೂಬನಲ್ಲಿಯೂ ಲಭ್ಯಮಾಡಿಕೊಟ್ಟಿದ್ದಾರೆ. ವಿಶೇಷವೆಂದರೆ ಯಾರ ಜಪ ಪೂರ್ಣಗೊಳ್ಳಲಿದೆಯೋ, ಅವರಿಗೆ ಅವರ ಸ್ವಭಾವದಲ್ಲಿ ವಿಶೇಷ ಬದಲಾವಣೆಯಾಗಿರುವ ಅರಿವಾಗುತ್ತಿದೆ.

೫. ಶ್ರೀರಾಮನಾಮದ ಭಕ್ತಿಯ ಆವಿಷ್ಕಾರ !

ಈ ಬ್ಯಾಂಕಿನ ಮತ್ತೆರಡು ವಿಶೇಷ ವಿಷಯಗಳು ನೋಡಲು ಸಿಕ್ಕಿತು. ಅದೆಂದರೆ ಸಾರ್ವಜನಿಕರ ಭಕ್ತಿಯ ಆವಿಷ್ಕಾರ ! ಇಲ್ಲಿ ‘ರಾಮ ಪಂಚಾಯತನದ ಒಂದು ಮೂರ್ತಿಯಿದೆ. ದೂರದಿಂದ ನೋಡಿದರೆ, ಅದು ಇತರೆ ಮೂರ್ತಿಗಳಂತೆಯೇ ಅನಿಸುತ್ತದೆ; ಆದರೆ  ನಾವು ಅದನ್ನು ಕೈಯಲ್ಲಿ ತೆಗೆದುಕೊಂಡು ಹತ್ತಿರದಿಂದ ನೋಡಿದಾಗ, ಆ ಮೂರ್ತಿಯ ಮೇಲೆ ೧೮ ಬಾರಿ ಸುಂದರಕಾಂಡ ಮತ್ತು ೫ ಬಾರಿ ರಾಮರಾಜತಿಲಕದ ವರ್ಣನೆಯನ್ನು ಬರೆದಿರುವುದು ಗಮನಕ್ಕೆ ಬಂದಿತು. ಮುಕುಟವಿರಲಿ ಅಥವಾ ಹಾರ, ಚಿತ್ರದಲ್ಲಿನ ಪ್ರತಿಯೊಂದು ಭಾಗವನ್ನು ಸೂಕ್ತವಾದ ಬಣ್ಣದಲ್ಲಿ ಮತ್ತು ಆಕಾರದಲ್ಲಿ ಶ್ರೀ ಸುಂದರಕಾಂಡವೆಂದು ಕೆತ್ತಲಾಗಿದೆ. ಮತ್ತು ಅದೂ ಅರಿವಿಗೆ ಬಾರದಂತೆ ! ಇದನ್ನು ಓದಲು ನಿಜವಾಗಿಯೂ ಕನ್ನಡಕದ ಗಾಜೇ ಬೇಕು; ಆದರೆ ಆ ಭಕ್ತನು ಅದನ್ನು ಹೇಗೆ ಕೆತ್ತಿರಬಹುದು? ಇನ್ನೊಬ್ಬ ಭಕ್ತನು ‘ರಾಮ ‘ರಾಮ ಈ ಅಕ್ಷರಗಳಲ್ಲಿ ಕೆತ್ತಿದ ಶ್ರೀ ರಾಮ ಚರಿತಮಾನಸ ಮತ್ತು ಸುಂದರಕಾಂಡ ಇವುಗಳ ವಹಿಗಳನ್ನು ಇಲ್ಲಿ ಅರ್ಪಣೆ ಮಾಡಿದ್ದಾನೆ. ಇಂದಿನ ಒತ್ತಡಭರಿತ ಜೀವನದಲ್ಲಿ ರಾಮನಾಮದ ಮಹಿಮೆಯನ್ನು ಅರಿತುಕೊಂಡು ಜನರನ್ನು ಅದಕ್ಕಾಗಿ ಪ್ರವೃತ್ತಗೊಳಿಸುವ ಈ ಪ್ರಯತ್ನವು ಖಂಡಿತವಾಗಿಯೂ ಪ್ರಶಂಸನೀಯವಾಗಿದೆ. ‘ಇಂದು ದೇವತೆಗಳ ನಾಮಜಪದ ಮನುಷ್ಯನ ಶರೀರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಎಂದು ಆಧುನಿಕ ಯಂತ್ರದ ಸಹಾಯದಿಂದ ಪರಿಶೀಲಿಸಬಹುದು. ನಾಮಜಪದಿಂದಾಗುವ ಸಕಾರಾತ್ಮಕ ಪರಿಣಾಮವನ್ನು ನೋಡಿ  ಯುವ ಪೀಳಿಗೆಯೂ ಈಗ ಆಶ್ಚರ್ಯಗೊಳ್ಳುತ್ತಿದೆ. ಇಂತಹ ಸ್ಥಿತಿಯಲ್ಲಿ ಮುಂಬರುವ ಕಾಲದಲ್ಲಿ ಈ ಪ್ರಯತ್ನಗಳಿಗೆ ಯುವ ಪೀಳಿಗೆಯಿಂದಲೂ ಖಂಡಿತವಾಗಿಯೂ ಸಹಕಾರ ದೊರಕುವುದು, ಇದರಲ್ಲಿ ಯಾವುದೇ ಸಂಶಯವಿಲ್ಲ.

– ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ರಾಜಸ್ಥಾನ ಮತ್ತು ಮಧ್ಯಪ್ರದೇಶ (ವರ್ಷ ೨೦೧೮)

Kannada Weekly | Offline reading | PDF