ಹಿಂದೂ ಆಗಿರುವುದು ಅಪರಾಧವೇ ?

ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಒಬ್ಬ ಹಿಂದೂ ತಂದೆ ತನ್ನ ಮಗಳೊಂದಿಗೆ ಮನೆಗೆ ಹೋಗುತ್ತಿದ್ದರು. ಆಗ ಕೆಲವು ಮತಾಂಧರು ಅವರ ಮಗಳಿಗೆ ಕಿರುಕುಳ ನೀಡಿದರು. ಆಗ ಈ ತಂದೆ ಮತಾಂಧರ ಮನೆಗೆ ಹೋಗಿ ಈ ವಿಷಯಕ್ಕಾಗಿ ಗದರಿಸಿದರು. ಆಗ ಕಿರುಕುಳ ನೀಡಿದ ಮತಾಂಧ ಹುಡುಗನ ತಂದೆ ತನ್ನ ಪತ್ನಿಗೆ ಜಾನುವಾರುಗಳನ್ನು ಕಡಿಯುವ ಚೂರಿಯನ್ನು ತರಲು ಹೇಳಿ ಎಲ್ಲರೂ ಸೇರಿ ಈ ಹಿಂದೂವಿಗೆ ಚೂರಿಯಿಂದ ಇರಿದರು, ಅಷ್ಟು ಮಾತ್ರವಲ್ಲ, ಆ ಹಿಂದೂವನ್ನು ರಕ್ಷಿಸಲು ಹೋದ ಅವರ ಮಗನ ಮೇಲೆ ಕೂಡ ಮತಾಂಧರು ಆಕ್ರಮಣ ಮಾಡಿ ಅವನನ್ನು ಗಾಯಗೊಳಿಸಿದರು. ಈ ಪ್ರಕರಣದಲ್ಲಿ ಹಿಂದೂ ತಂದೆ ಮೃತಪಟ್ಟರೆ ಮಗ ಆಸ್ಪತ್ರೆಯಲ್ಲಿ ಮರಣಾವಸ್ಥೆಯಲ್ಲಿದ್ದಾನೆ. ಇಷ್ಟು ದೊಡ್ಡ ಘಟನೆ ಘಟಿಸಿದರೂ ಮಾಧ್ಯಮಗಳು ಈ ವಾರ್ತೆಗೆ ಹೆಚ್ಚು ಪ್ರಸಿದ್ಧಿ ನೀಡಲಿಲ್ಲ, ಏಕೆಂದರೆ ಹೊಡೆದವರು ಮತಾಂಧರಾಗಿದ್ದು ಪೆಟ್ಟು ತಿನ್ನುವವರು ಹಿಂದೂಗಳಾಗಿದ್ದರು ! ಚುನಾವಣೆಯ ಸಮಯದಲ್ಲಿ ಪ್ರತಿಯೊಂದು ಸಣ್ಣ ವಿಷಯದಲ್ಲಿಯೂ ಕೋಲಾಹಲವೆಬ್ಬಿಸುವ ಭಾಜಪವಂತೂ ಇದನ್ನು ಖಂಡಿಸಿರುವುದೂ ಕೇಳಿಬಂದಿಲ್ಲ; ಏಕೆಂದರೆ ‘ಹಿಂದುತ್ವಕ್ಕೆ ಸಂಬಂಧಿಸಿದ ವಿಷಯಗಳು ತನ್ನ ರಾಜಕೀಯಕ್ಕೆ ಅನುಕೂಲವಲ್ಲ ಎಂದು ಭಾಜಪಕ್ಕೆ ಅನಿಸುತ್ತಿರಬಹುದು.

ತದ್ವಿರುದ್ಧ ಉತ್ತರಪ್ರದೇಶದಲ್ಲಿ ಗೋಹತ್ಯೆಯ ಆರೋಪವಿದ್ದ ಮತಾಂಧ ಅಖ್ಲಾಖನು ಜನಸಮೂಹದ ಕ್ರೋಧಕ್ಕೆ ಬಲಿಯಾದಾಗ ಸಂಪೂರ್ಣ ದೇಶದಲ್ಲಿ ಜ್ವಾಲಾಮುಖಿ ಉಕ್ಕಿಬಂದಿರುವಂತಹ ವಾತಾವರಣ ನಿರ್ಮಾಣವಾಗಿತ್ತು. ‘ಪ್ರಶಸ್ತಿ ಹಿಂತಿರುಗಿಸುವವರ ಗುಂಪು ಸಕ್ರಿಯವಾಗಿತ್ತು. ಅನೇಕರಿಗೆ ಈ ಘಟನೆಯು ದೇಶದ ಸಾರ್ವಭೌಮತ್ವದ ಮೇಲಿನ ಆಕ್ರಮಣದಂತೆ ಅನಿಸುತ್ತಿತ್ತು. ಈ ಘಟನೆಯ ನಂತರ ಪ್ರತಿ ದಿನ ದೂರಚಿತ್ರವಾಹಿನಿಗಳಲ್ಲಿ ಚರ್ಚಾಕೂಟ ನಡೆಯುತಿತ್ತು ಹಾಗೂ ಪ್ರಸಿದ್ಧಿಮಾಧ್ಯಮಗಳಲ್ಲಿ ಕೂಡ ಪುಟತುಂಬ ಪ್ರತಿಕ್ರಿಯೆಗಳು ಬರುತಿದ್ದುವು. ಎಡಪಂಥೀಯರು, ಪ್ರಗತಿ(ಅಧೋಗತಿ)ಪರರು, ಸೆಕ್ಯುಲರ್, ಕಾಂಗ್ರೆಸ್ ಮುಂತಾದವರೆಲ್ಲರಿಗೂ ‘ಅಖ್ಲಾಖ ಬಗ್ಗೆ ವಿಪರೀತ ಕಳವಳ ನಿರ್ಮಾಣವಾಗಿತ್ತು. ಆಗ ಭಾರತದ ಪ್ರಗತಿ(ಅಧೋಗತಿ)ಪರರು, ‘ಭಾರತದ ಮುಸಲ್ಮಾನರು ಭಯಭೀತರಾಗಿದ್ದಾರೆ ಎಂದು ಹೇಳುತ್ತಿದ್ದರು. ಇಂದು ಆ ಜನರಿಗೆ ಭಾರತದ ರಾಜಧಾನಿಯಲ್ಲಿ ಒಬ್ಬ ಹಿಂದೂವಿನ ಹತ್ಯೆಯಾದಾಗ ‘ಭಾರತದಲ್ಲಿನ ಹಿಂದೂಗಳು ಭಯಭೀತರಾಗಿದ್ದಾರೆ ಎಂದು ಅನಿಸುವುದಿಲ್ಲವೇಕೆ ? ಇದರ ಬಗ್ಗೆ ಯಾವುದೆ ಪ್ರಗತಿ(ಅಧೋಗತಿ)ಪರರು, ಹಾಗೂ ಸೆಕ್ಯುಲರ್‌ವಾದಿಗಳು ಮಾತನಾಡುವುದಿಲ್ಲವೇಕೆ ? ಮುಸಲ್ಮಾನರ ರಂಜಾನ್ ತಿಂಗಳಲ್ಲಿ ಉಪವಾಸ ವಿಡಲಾಗುತ್ತದೆ ಹಾಗೂ ಮುಸಲ್ಮಾನರು ಅದನ್ನು ಪವಿತ್ರವೆಂದು ತಿಳಿಯುತ್ತಾರೆ, ಅದೇ ಸಮಯದಲ್ಲಿ ಮತಾಂಧರು ಒಬ್ಬ ಹಿಂದೂವನ್ನು ಕೊಲೆ ಮಾಡಿದಾಗ ಯಾವ ಮೌಲಾನಾ, ಮೌಲ್ವಿ ಅಥವಾ ಮುಸಲ್ಮಾನರ ಇತರ ಸಂಘಟನೆಗಳು-ಪಕ್ಷ ನಿಷೇಧ ಮಾಡುವುದಿಲ್ಲವೇಕೆ ? ಈಗ ಎಲ್ಲ ಜಾತ್ಯತೀತರು ಎಲ್ಲಿದ್ದಾರೆ ?

ಇಂದು ಹಿಂದೂಗಳು ಮತಾಂಧರ ಅಕ್ಕಪಕ್ಕದಲ್ಲಿದ್ದು ಹಾಗೂ ತಮ್ಮ  ಹುಡುಗಿಯರಿಗೆ ಚುಡಾಯಿಸಿದಾಗ ಮತಾಂಧರಿಗೆ ಸ್ಪಷ್ಟೀಕರಣ ಕೇಳಿದರೆ ತನ್ನ ಜೀವವನ್ನೆ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವಾಗಲೂ ಪ್ರತಿಯೊಂದು ವಿಷಯದಲ್ಲಿ ಕೋಲಾಹಲವೆಬ್ಬಿಸುವ ರಾಹುಲ ಗಾಂಧಿ ಮತ್ತು ಅರವಿಂದ ಕೇಜರಿವಾಲ ಈಗ ಎಲ್ಲಿದ್ದಾರೆ ?

ಒಂದೆಡೆ ಬಂಗಾಲದಲ್ಲಿ ಹಿಂದೂಗಳಿಗೆ ನಿರಂತರ ಬೆದರಿಕೆ ನೀಡಲಾಗುತ್ತದೆ, ಹಾಗೂ ದೆಹಲಿಯಲ್ಲಿನ ಹುಡುಗಿಯರ ಶೀಲವನ್ನು ರಕ್ಷಿಸುವ ತಂದೆಯನ್ನು ಕೊಲೆ ಮಾಡಲಾಗುತ್ತದೆ ! ಭಾಜಪ ಇರಲಿ ಅಥವಾ ಇನ್ನಿತರ ಯಾವುದೆ ರಾಜಕೀಯ ಪಕ್ಷ ಹಿಂದೂಗಳಿಗಾಗಿ ಏನಾದರೂ ಮಾಡುವಂತಹ ಸ್ಥಿತಿಯಿಲ್ಲ. ಹಿಂದೂಗಳಿಗೆ ಇಂದು ಯಾರ ಆಶ್ರಯವೂ ಇಲ್ಲ, ಎಂಬುದೆ ನಿಜವಾದ ವಾಸ್ತವಿಕತೆಯಾಗಿದೆ. ಆದ್ದರಿಂದ ಬಹುಸಂಖ್ಯಾತ ಹಿಂದೂಗಳ ಕಲ್ಯಾಣಕ್ಕಾಗಿ ಕಾರ್ಯನಿರತವಾಗಿರುವ ಹಿಂದೂ ರಾಷ್ಟ್ರವೆ ಅದಕ್ಕೆ ಉತ್ತರವಾಗಿದೆ !

ತಲೆತಿರುಕರು ಯಾರು ?

‘ನಥುರಾಮ ಗೋಡ್ಸೆಯವರನ್ನು ನಟ ಹಾಗೂ ರಾಜಕೀಯ ಮುಖಂಡ ಕಮಲ ಹಸನ್ ಇವರು ‘ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರವಾದಿ ಎಂದು ನಿರ್ಧರಿಸಿದಾಗ ಸಾಧ್ವಿ ಪ್ರಜ್ಞಾಸಿಂಹ ಇವರು ‘ನಥುರಾಮ ಗೋಡ್ಸೆ ದೇಶಭಕ್ತರಾಗಿದ್ದರು ಹಾಗೂ ಆಗಿರುವರು, ಎಂದು ದೃಢವಾಗಿ ಹೇಳಿ ದೇಶಭಕ್ತರ ಪರವಾಗಿ ನಿಂತರು. ಆದರೆ ದುರ್ದೈವದ ಸಂಗತಿಯೆಂದರೆ, ‘ಹಿಂದುತ್ವನಿಷ್ಠ ಎಂದು ಹೇಳಿಕೊಳ್ಳುವ ಭಾಜಪ ಸಾಧ್ವಿ ಪ್ರಜ್ಞಾಸಿಂಹ ಇವರ ಹೇಳಿಕೆಯ ವಿಷಯದಲ್ಲಿ ಕ್ಷಮೆ ಯಾಚಿಸುವಂತೆ ಮಾಡಿತು. ‘ಭಾಜಪವೆಂದರೆ ಇನ್ನೊಂದು ಕಾಂಗ್ರೆಸ್ ಆಗುವ ಮಾರ್ಗದಲ್ಲಿದೆ ಎಂದು ಹೇಳುವುದರ ಹಿಂದೆ ಇದೊಂದು ಕಾರಣವಾಗಿದೆ ! ಭಾಜಪದ ಈ ರಾಜಕೀಯ ನಿಲುವು ದೇಶಭಕ್ತರಿಗೆ ಇಷ್ಟವಾಗುವುದಲ್ಲ. ಒಂದು ವೇಳೆ ಭಾಜಪ ನಥುರಾಮ ಗೋಡ್ಸೆಯವರನ್ನು ದೇಶದ್ರೋಹಿಯೆಂದು ನಿರ್ಧರಿಸಲು ಪ್ರಯತ್ನಿಸುತ್ತಿದ್ದರೆ, ‘ಗೋಡ್ಸೆಯವರು ಯಾವ ದೇಶದ್ರೋಹ ಮಾಡಿದ್ದರು ಎಂದು ಒಮ್ಮೆ ಹೇಳಬೇಕು. ಗಾಂಧಿಹತ್ಯೆಯ ಘಟನೆಯಿಂದ ನಥುರಾಮ ಗೋಡ್ಸೆಯವರು ಮಾಡಿದ ಕಾರ್ಯದ, ಅವರ ಪ್ರಖರ ದೇಶಪ್ರೇಮಿ ವಿಚಾರಗಳ ಮತ್ತು ವಿಶ್ಲೇಷಣೆಯ ಮೌಲ್ಯವು ಒಮ್ಮೆಲೆ ಶೂನ್ಯ ಆಗಲು ಹೇಗೆ ಸಾಧ್ಯ ? ಭಾರತವನ್ನು ವಿಭಜನೆ ಮಾಡಿದವರನ್ನು ‘ರಾಷ್ಟ್ರಪಿತ ಅವರನ್ನು ವಿರೋಧಿಸಿದವರನ್ನು ದೇಶದ್ರೋಹಿಯೆಂದು ನಿರ್ಧರಿಸುವುದು, ಇದು ಯಾವ  ನ್ಯಾಯ ?

ಪಾಕಿಸ್ತಾನಕ್ಕೆ ಆ ಕಾಲದಲ್ಲಿ ೫೫ ಕೋಟಿ (ಅಂದರೆ ಇಂದಿನ ಸುಮಾರು ೫೮ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು) ನೀಡಲು ಉಪವಾಸ ಮಾಡಿದ ಗಾಂಧಿಯವರಿಗೆ ಗೋಡ್ಸೆಯವರು ಮಾಡಿದ ವಿರೋಧ, ನಿಜಾಮನ ವಿರುದ್ಧ ಹೋರಾಡಲು ಭಾಗ್ಯನಗರಕ್ಕೆ (ಹೈದ್ರಾಬಾದ್‌ಗೆ) ನುಗ್ಗಿರುವುದು ಇದು ದೇಶದ್ರೋಹ ಹೇಗೆ ? ಪಾಕಿಸ್ತಾನದಿಂದ ಹಾಗೂ ಭಾರತದ ಮುಸಲ್ಮಾನಬಹುಳ ಪ್ರಾಂತಗಳಲ್ಲಿನ ಹಿಂದೂಗಳ ನರಸಂಹಾರವಾಗುತ್ತಿರುವಾಗ, ಸಾವಿರಾರು ಹಿಂದೂ ಸ್ತ್ರೀಯರಿಗೆ ಬಲತ್ಕಾರವಾಗುತ್ತಿರುವಾಗ ನಿಷ್ಕ್ರಿಯವಾಗಿದ್ದ ಕಾಂಗ್ರೆಸ್ಸಿನ ಮುಖಂಡರ ವಿರೋಧ, ಇದು ರಾಷ್ಟ್ರದ್ರೋಹವಾಗಿದೆಯೆ ? ಇದಕ್ಕೆ ಭಾಜಪ ಉತ್ತರ ನೀಡಬೇಕು. ಇಂದು ಕೇವಲ ಗಾಂಧಿಹತ್ಯೆಯಿಂದಾಗಿ ದೇಶಭಕ್ತ ನಥುರಾಮ ಗೋಡ್ಸೆಯವರಿಗೆ ‘ತಲೆತಿರುಕ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ನಥುರಾಮ ಗೋಡ್ಸೆಯವರನ್ನು ದೇಶಭಕ್ತ ಎಂದು ಹೇಳಿದ ಸಾಧ್ವಿ ಪ್ರಜ್ಞಾಸಿಂಹ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹೇಳುವ ಕಾಂಗ್ರೆಸ್ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಮಾಡಿದ ಸಿಕ್ಖ್‌ವಿರೋಧಿ ಗಲಭೆಯ ವಿಷಯದಲ್ಲಿ ಕ್ಷಮೆ ಯಾಚನೆಯ ಸಂದರ್ಭದಲ್ಲಿ ಒಂದು ಶಬ್ದವನ್ನು ಸಹ ಉಚ್ಚರಿಸಲಿಲ್ಲ, ಗಾಂಧಿಹತ್ಯೆಯ ನಂತರ ಬ್ರಾಹ್ಮಣ ಸಮಾಜದ ಮೇಲಾದ ಆಕ್ರಮಣದ ವಿಷಯದಲ್ಲಿ ಚಕಾರವೆತ್ತಲಿಲ್ಲ, ತದ್ವಿರುದ್ಧ ಒಸಾಮಾ ಬಿನ್ ಲಾಡೇನ್‌ಗೆ ‘ಓಸಾಮಾಜೀ ಎಂದು ಸಂಬೋಧಿಸಲಾಯಿತು, ಇದನ್ನು ಗಮನಿಸಬೇಕು. ಕಾಂಗ್ರೆಸ್ಸಿನ ವೃತ್ತಿ ಇದರಿಂದಲೆ ಅರಿವಾಗುತ್ತದೆ. ಹತ್ಯೆಯೆಂದರೆ ಹತ್ಯೆಯೆ. ಆದ್ದರಿಂದ ನಥುರಾಮ ಗೋಡ್ಸೆಯವರು ಮಾಡಿದ ಗಾಂಧಿ ಹತ್ಯೆಯನ್ನು ಸಮರ್ಥನೆ ಮಾಡಲು ಸಾಧ್ಯವಿಲ್ಲ. ಗಾಂಧಿಹತ್ಯೆಯ ಕಾರಣವನ್ನು ಅವರು ನ್ಯಾಯಾಲಯದಲ್ಲಿ ಯುಕ್ತಿವಾದದ ಸಮಯದಲ್ಲಿ ವಿವರಿಸಿ ಹೇಳಿದ್ದಾರೆ. ‘ಅಖಂಡ ಹಿಂದೂಸ್ತಾನದ ಕನಸು ಕಾಣುತ್ತಿದ್ದ ನಥುರಾಮ ಇವರು ತನ್ನ ಅಸ್ಥಿವಿಸರ್ಜನೆಯನ್ನು ಅಖಂಡ ಹಿಂದುಸ್ತಾನದಲ್ಲಿ ಹರಿಯುವ ಸಿಂಧೂ ನದಿಯಲ್ಲಿ ಮಾಡುವ ಇಚ್ಛೆಯನ್ನು ಪ್ರಕಟಿಸಿದ್ದರು. ಇದು ತಲೆತಿರುಕತನವಾಗಿದೆಯೆ ಅಥವಾ ನಥುರಾಮ ಗೋಡ್ಸೆಯವರ ಯುಕ್ತಿವಾದವನ್ನು ಪ್ರಸಾರ ಮಾಡುವವರ ವಿರುದ್ಧ ನಿರ್ಬಂಧ ಹೇರುವುದು, ಗಾಂಧಿಹತ್ಯೆಯ ಕಾರಣಗಳನ್ನು ಅಡಗಿಸುವುದು, ದೇಶಭಕ್ತರನ್ನು ದುರ್ಬಲಗೊಳಿಸುವುದು ಮತ್ತು ಉಗ್ರವಾದಿಗಳನ್ನು ಕೊಂಡಾಡುವುದು, ಕ್ರಾಂತಿಕಾರಿಗಳನ್ನು ಅವಮಾನಗೊಳಿಸುವುದು ಇತ್ಯಾದಿ ತಲೆತಿರುಕತನವಾಗಿದೆಯೆ ? ಶಾಂತ ಚಿತ್ತದಿಂದ ವಿಚಾರ ಮಾಡಿದರೆ ನಿಜವಾದ ತಲೆತಿರುಕ ಯಾರೆಂದು ಅರಿವಾಗುವುದು !

Kannada Weekly | Offline reading | PDF