ಕರ್ನಾಟಕ ರಾಜ್ಯ ಸ್ತರೀಯ ಧರ್ಮಪ್ರೇಮಿಗಳ ೨ ನೇ ಕಾರ್ಯಾಗಾರ ಸಂಪನ್ನ

ಧರ್ಮಪ್ರೇಮಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವ ಪೂ. ರಮಾನಂದ ಗೌಡ ಪಕ್ಕದಲ್ಲಿ ಶ್ರೀ. ಕಾಶಿನಾಥ ಪ್ರಭು

ಮಂಗಳೂರು – ಎಪ್ರಿಲ್ ೧೯ ರಿಂದ ೨೧ ರ ವರೆಗೆ ಕರ್ನಾಟಕ ರಾಜ್ಯ ಸ್ತರದಲ್ಲಿ ಧರ್ಮಪ್ರೇಮಿಗಳ ಕಾರ್ಯಾಗಾರವು ಮಂಗಳೂರಿನ ಸೇವಾಕೇಂದ್ರದಲ್ಲಿ ನಡೆಯಿತು. ಈ ಕಾರ್ಯಾಗಾರಕ್ಕೆ ಬಾಗಲಕೋಟೆ, ಧಾರವಾಡ, ಶಿವಮೊಗ್ಗ, ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ, ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಿಂದ ಒಟ್ಟು ೩೧ ಧರ್ಮಪ್ರೇಮಿಗಳು ಪಾಲ್ಗೊಂಡಿದ್ದರು. ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಪ್ರತ್ಯಕ್ಷವಾಗಿ ದೇವಸ್ಥಾನ ದರ್ಶನ ಮಾಡಿಸಲಾಯಿತು ಮತ್ತು ಮಂಗಳೂರು ಸೇವಾಕೇಂದ್ರದ ದರ್ಶನ ಮಾಡಿಸಿ, ಸೇವಾಕೇಂದ್ರದಲ್ಲಾದ ದೈವೀ ಬದಲಾವಣೆಗಳ ಬಗ್ಗೆ ತಿಳಿಸಲಾಯಿತು. ಶಿಬಿರದಲ್ಲಿ ಪ್ರಮುಖವಾಗಿ ಸ್ವಭಾವದೋಷ-ಅಹಂ ನಿರ್ಮೂಲನ ಪ್ರಕ್ರಿಯೆಯ ಮಹತ್ವ, ಗುರುಕೃಪಾಯೋಗಾನುಸಾರ ಸಾಧನೆಯ ಮಹತ್ವ, ವ್ಯಷ್ಟಿ ಮತ್ತು ಸಮಷ್ಟಿ ಸೇವೆಯ ಪ್ರತ್ಯಕ್ಷ ನಿಯೋಜನೆ ಮತ್ತು ವಿಷಯ ಮಂಡನೆಯನ್ನು ಮಾಡುವುದರ ಬಗ್ಗೆ ಪ್ರಾಯೋಗಿಕ ಭಾಗವನ್ನು ಮಾಡಲಾಯಿತು. ಶಿಬಿರದಲ್ಲಿ ಧರ್ಮಪ್ರಸಾರ ಸೇವಕರಾದ ಪೂ. ರಮಾನಂದ ಗೌಡ ಮತ್ತು ಶ್ರೀ. ಕಾಶಿನಾಥ ಪ್ರಭುರವರು ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.

ಶಿಬಿರದಲ್ಲಿನ ವೈಶಿಷ್ಟ್ಯಪೂರ್ಣ ಆಂಶಗಳು

೧. ದೇವಸ್ಥಾನಕ್ಕಿಂತ ಸೇವಾಕೇಂದ್ರದಲ್ಲಿ ಹೆಚ್ಚಿನ ಚೈತನ್ಯದ ಅರಿವಾಗುತ್ತದೆ ಎಂದು ಧರ್ಮಪ್ರೇಮಿಗಳು ತಮ್ಮ ಅನುಭವದಲ್ಲಿ ಹೇಳಿದರು.

೨. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಬಗ್ಗೆ ಇಲ್ಲಿಯವರೆಗೆ ಪತ್ನಿಯವರು ಹೇಳಿದ್ದರೂ ಅದರ ಕಡೆ ಗಮನ ನೀಡಲಿಲ್ಲ ಮತ್ತು ವಿರೋಧ ವ್ಯಕ್ತಪಡಿಸಿದ್ದೆ, ಆದರೆ ಇವತ್ತು ಈ ಪ್ರಕ್ರಿಯೆಯ ಮಹತ್ವ ಅರಿವಾಯಿತು. ಊರಿಗೆ ಹೋಗಿ ನನ್ನ ಪತ್ನಿಗೆ ಕ್ಷಮಾಯಾಚನೆ ಮಾಡುತ್ತೇನೆ ಎಂದು ಒಬ್ಬರು ಧರ್ಮಪ್ರೇಮಿಗಳು ಹೇಳಿದರು.

೩. ಓರ್ವ ಧರ್ಮಪ್ರೇಮಿ ಈ ಶಿಬಿರವು ನನ್ನ ಜೀವನದ ದಿಶೆಯನ್ನೇ ಬದಲಿಸಿತು ಎಂದು ಹೇಳಿದರು.

೪. ಪೂ. ರಮಾನಂದಣ್ಣನವರ ಮಾರ್ಗದರ್ಶನದ ನಂತರ ಎಲ್ಲ ಶಿಬಿರಾರ್ಥಿಗಳಿಗೆ ಜೀವನದಲ್ಲಿ ಸಾಧನೆಯ ಮಹತ್ವ ಅರಿವಾಗಿ ಭಾವಜಾಗೃತಿ ಮಾಡಿಕೊಂಡರು.

೫. ಎಲ್ಲ ಶಿಬಿರಾರ್ಥಿಗಳು ತಮ್ಮ ಜಿಲ್ಲೆಗೆ ಹೋಗಿ ಆಯೋಜನಬದ್ಧ ಸಮಷ್ಟಿ ಸೇವೆಯ ನಿಯೋಜನೆ ಮಾಡುವುದಾಗಿ ಹೇಳಿದರು.

Kannada Weekly | Offline reading | PDF