ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಅಪಹರಣ ಮತ್ತು ಮತಾಂತರದ ವಿರುದ್ಧ ಪ್ರತಿಭಟನೆ

ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾದ ನಂತರವೇ ಪಾಕ್ ಮತ್ತು ಇತರ ಇಸ್ಲಾಮೀ ದೇಶಗಳಲ್ಲಿನ ಇಂತಹ ಘಟನೆಗಳನ್ನು ತಡೆಗಟ್ಟಲು ಯೋಗ್ಯವಾದ ಪ್ರಯತ್ನ ಆಗಲು ಸಾಧ್ಯ !

ಇಸ್ಲಾಮಾಬಾದ್ – ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ತಾಹೀರ್ ತಾಮಾರಿ ಎಂಬವನು ತನ್ನ ತಂದೆ ಮತ್ತು ಸಹೋದರನ ಸಹಾಯ ದಿಂದ ೧೭ ವರ್ಷದ ನೈನಾ ಎಂಬ ಯುವತಿಯನ್ನು ಅಪಹರಿಸಿ ಅವಳನ್ನು ಮತಾಂತರ ಮಾಡಿದನಂತರ ಅವಳೊಂದಿಗೆ ನಿಕಾಹ ಮಾಡಿರುವ ಪ್ರಕರಣದಲ್ಲಿ ರಹೀಮ್ ಯಾರ ಖಾನ್ ನಗರದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಂದ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಂದೋಲನಕಾರರು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಹುಡುಗಿಯನ್ನು ಸುರಕ್ಷಿತವಾಗಿ ಹಿಂದಿರುಗಿಸಬೇಕೆಂದು ಪ್ರಧಾನಿ ಇಮ್ರಾನ್ ಖಾನ್ ಇವರಲ್ಲಿ ವಿನಂತಿಸಿದರು. ಹುಡುಗಿಯ ತಂದೆಯವರಾದ ರಘುರಾಮ ಇವರು ಇದರ ವಿರುದ್ಧ ಪೊಲೀಸರಲ್ಲಿ ದೂರನ್ನು ನೀಡಿದಾಗ ಪೊಲೀಸರು ಅಪರಾಧವನ್ನು ದಾಖಲಿಸಿಕೊಳ್ಳಲಾಗಿದೆ.

Kannada Weekly | Offline reading | PDF