ಹಿಂದೂ ರಾಷ್ಟ್ರದ ಸ್ಥಾಪನೆಯ ಆವಶ್ಯಕತೆ !

(ಪರಾತ್ಪರ ಗುರು) ಡಾ. ಆಠವಲೆ

ಅ ೧.   ಹಿಂದೂಗಳ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಹಿಂದೂ ರಾಷ್ಟ್ರದ ಸ್ಥಾಪನೆಯೇ ಪರ್ಯಾಯ :

‘ಸರಕಾರದಿಂದ ‘ಗೋಶಾಲೆಗೆ ಅನುದಾನ ನೀಡಿ, ಪಾಕಿಸ್ತಾನದಿಂದ ಬಂದಿರುವ ಹಿಂದೂಗಳನ್ನು ಶರಣಾರ್ಥಿಗಳೆಂದು ಸ್ವೀಕರಿಸಿರಿ, ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಿ, ‘ಗೋಹತ್ಯಾ ನಿರ್ಬಂಧ ಕಾನೂನು ಮಾಡಿ, ‘ಸಮಾನ ನಾಗರಿಕ ಕಾನೂನು ಮಾಡಿ, ‘ದೇವತೆಗಳ ವಿಡಂಬನೆಯನ್ನು ತಡೆಗಟ್ಟಲು ಕಾನೂನು ಮಾಡಿ, ಇಂತಹ ಅನೇಕ ವಿನಂತಿಗಳನ್ನು ಮಾಡುವ ಬದಲು ಹಿಂದೂ ಹಿತದ ಹಿಂದೂ ರಾಷ್ಟ್ರವನ್ನೇ ಸ್ಥಾಪಿಸೋಣ, ಅಂದರೆ ಯಾರಿಗೂ ವಿನಂತಿ ಮಾಡುವ ಆವಶ್ಯಕತೆ ಬೀಳುವುದಿಲ್ಲ ! ಈ ವಿಷಯದಲ್ಲಿ ಸಂತ ಕಬೀರರ ‘ಏಕ ಸಾಧೈ ಸಬ್ ಸಾಧೈ, ಸಬ್ ಸಾಧೈ, ಸಬ್ ಜಾಯ್|, ಅಂದರೆ ‘ಒಂದನ್ನು ಸಾಧಿಸಿದರೆ, ಎಲ್ಲವೂ ಸಾಧ್ಯವಾಗುತ್ತದೆ ಹಾಗೂ ಎಲ್ಲವನ್ನೂ ಸಾಧ್ಯಗೊಳಿಸಲು ಪ್ರಯತ್ನಿಸಿದರೆ, ಏನೂ ಸಾಧ್ಯವಾಗುವುದಿಲ್ಲ. ಈ ಸುವಚನವನ್ನು ಗಮನದಲ್ಲಿಡುವುದು ಆವಶ್ಯಕವಾಗಿದೆ. ಗೋರಕ್ಷಣೆ, ಗಂಗಾರಕ್ಷಣೆ, ದೇವಸ್ಥಾನಗಳ ರಕ್ಷಣೆ, ಸಂಸ್ಕೃತಿ ರಕ್ಷಣೆ, ಹಿಂದೂ ಧರ್ಮೀಯರ ರಕ್ಷಣೆ, ಭಯೋತ್ಪಾದನೆಯ ಪ್ರತಿಕಾರ ಇತ್ಯಾದಿ ಎಲ್ಲವನ್ನೂ ಸಾಧಿಸಲು ಪ್ರಯತ್ನಿಸಿದರೆ ಏನೂ ಸಾಧ್ಯವಾಗುವುದಿಲ್ಲ. ತದ್ವಿರುದ್ಧ ‘ಹಿಂದೂ ರಾಷ್ಟ್ರದ ಸ್ಥಾಪನೆ ಒಂದನ್ನು ಸಾಧ್ಯಗೊಳಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ !

ಅ ೨.   ಮನುಕುಲಕ್ಕೆ ಆಧಾರವಾಗಿರುವ ಏಕೈಕ ಹಿಂದೂ ಧರ್ಮವನ್ನು ಉಳಿಸಲು ಹಿಂದೂ ರಾಷ್ಟ್ರದ ಸ್ಥಾಪನೆಗೆ ಪರ್ಯಾಯವಿಲ್ಲ :

‘ಹಿಂದೂ ಸಮಾಜವು ಜಾತಿ, ಭಾಷೆ, ಸಂಪ್ರದಾಯ, ಸಂಘಟನೆ ಇತ್ಯಾದಿಗಳಿಂದ ಅನೇಕ ಘಟಕಗಳಲ್ಲಿ ವಿಭಜನೆಯಾಗಿದೆ. ಹಿಂದೂ ಧರ್ಮವನ್ನು ಉಳಿಸಲು ಆವಶ್ಯಕ ವಿರುವ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಒಂದೇ ಧ್ಯೇಯಕ್ಕಾಗಿ ಎಲ್ಲ ಹಿಂದೂಗಳು ಒಗ್ಗಟ್ಟಾಗಲು ಸಾಧ್ಯವಿದೆ; ಆದ್ದರಿಂದ ಅದಕ್ಕಾಗಿ ಪರಾಕಾಷ್ಠೆಯ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ.ಇಲ್ಲದಿದ್ದರೆ, ಮುಂದೆ ಮನುಕುಲಕ್ಕೆ ಆಧಾರವಾಗಿದ್ದ ಏಕೈಕ ‘ಹಿಂದೂ ಧರ್ಮ ವಿತ್ತು, ಎಂದು ಇತಿಹಾಸ ಹೇಳಬಹುದು ! ನಾವು ಹೇಗಾದರೂ ಮಾಡಿ ಹೀಗಾಗುವುದನ್ನು ತಪ್ಪಿಸಬೇಕು.- (ಪರಾತ್ಪರ ಗುರು) ಡಾ. ಆಠವಲೆ

Kannada Weekly | Offline reading | PDF