ಫಲಕ ಪ್ರಸಿದ್ಧಿಗಾಗಿ

೧. ಹಿಂದೂಗಳ ಮೇಲಾಗುವ ದಾಳಿಗಳ ವಾರ್ತೆಗಳನ್ನು ಎಂದಾದರೂ ಪ್ರಕಟಿಸಲಾಗುತ್ತದೆಯೇ ?

ಶ್ರೀಲಂಕಾದಲ್ಲಿನ ಸರಣಿ ಬಾಂಬ್‌ಸ್ಫೋಟದ ನಂತರ ಮುಸಲ್ಮಾನರಿಗೆ ದೇಶದಿಂದ ಹೊರಗೆ ಅಟ್ಟಲು ನೆಗೊಮ್ಬೊ ನಗರದಲ್ಲಿ ಕ್ರೈಸ್ತರ ಸಮೂಹ ಮನೆಯಲ್ಲಿ ನುಗ್ಗಿ ಮುಸಲ್ಮಾನರನ್ನು ಥಳಿಸುತ್ತ ಕೊಂದು ಹಾಕುವುದಾಗಿ ಬೆದರಿಕೆ ನೀಡುತ್ತಿದೆ, ಎಂಬ ವಾರ್ತೆ ಅಮೇರಿಕದ ದೈನಿಕ ‘ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದೆ.

೨.ಭಾರತದಲ್ಲಿ ಮದರಸಾಗಳ ಸರಕಾರೀಕರಣ ಯಾವಾಗ ಆಗಲಿದೆ ?

ಪಾಕ್‌ದಲ್ಲಿನ ಇಮ್ರಾನ್ ಖಾನ ಸರಕಾರವು ದೇಶದ ೩೦ ಸಾವಿರ ಮದರಸಾಗಳನ್ನು ವಶಪಡಿಸಿಕೊಳ್ಳಲಿದೆ, ಈ ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಮುಖ್ಯಪ್ರವಾಹದಲ್ಲಿನ ವಿಷಯವೂ ಕಲಿಸಲಾಗುವುದು, ಎಂಬ ಮಾಹಿತಿ ಸೈನ್ಯದ ವಕ್ತಾರರು ನೀಡಿದರು.

೩. ನೀತಿಸಂಹಿತೆಯ ಉಲ್ಲಂಘನೆ ಮಾಡುವವರ ಮೇಲೆ ಉಗ್ರಕ್ರಮ ಏಕೆ ಕೈಗೊಳ್ಳುವುದಿಲ್ಲ ?

ದೆಹಲಿಯಲ್ಲಿ ನೀತಿಸಂಹಿತೆಯ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ೨೦೮ ಅಪರಾಧಗಳನ್ನು ದಾಖಲಿಸಲಾಗಿದೆ. ಹಾಗೆಯೇ ೩ ಕೋಟಿ ರೂಪಾಯಿಗಳ ಸರಾಯಿ ಮತ್ತು ೧ ಸಾವಿರ ೪೦೦ ಕಿಲೋ ಅಮಲು ಪದಾರ್ಥಗಳನ್ನು ವಶಪಡಿಸಲಾಗಿದೆ.

೪.  ತಥಾಕಥಿತ ಸುಧಾರಣಾವಾದಿ ಜಾವೇದ ಅಖ್ತರರ ಮತಾಂಧತೆ ತಿಳಿಯಿರಿ !

ಒಂದು ವೇಳೆ ಬುರ್ಖಾ ನಿಷೇಧಿಸುವುದಾದರೆ ರಾಜಸ್ಥಾನದಲ್ಲಿ ‘ಘೂಂಗಟ(ಹಿಂದೂ ಮಹಿಳೆಯರು ತಲೆಯ ಮೇಲೆ ಸೆರಗು ಹಾಕಿ ಮುಖ ಮುಚ್ಚುವುದು) ಮೇಲೂ ನಿರ್ಬಂಧ ಹೇರಬೇಕು, ಎಂದು ಸಂಗೀತಕಾರ ಮತ್ತು ಲೇಖಕ ಜಾವೇದ ಅಖ್ತರ ಹೇಳಿದ್ದಾರೆ.

೫.  ಇದು  ಜಾತ್ಯತೀತತೆಯೇ ?

ತೆಲಂಗಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ರವರ ಸರಕಾರವು ಮೇ ೬ ರಿಂದ ಆರಂಭವಾಗಲಿರುವ ರಂಜಾನ್ ತಿಂಗಳಲ್ಲಿ ರಾಜ್ಯದ ೮೩೨ ಮಸೀದಿಗಳಿಗೆ  ಪ್ರತಿಯೊಂದಕ್ಕೆ ೧ ಲಕ್ಷ ರೂಪಾಯಿ ಮೌಲ್ಯದ ಉಡುಗೊರೆ ಕೊಡುವುದಾಗಿ ಘೋಷಣೆ ಮಾಡಿದೆ.

೬. ಭಾರತದಲ್ಲಿ ಹೀಗೆ ಎಂದಾದರೂ ಆಗಿದೆಯೇ  ?

ಶ್ರೀಲಂಕಾದಲ್ಲಿ ಜಿಹಾದಿಗಳು ಮಾಡಿದ ಬಾಂಬ್‌ಸ್ಪೋಟದ ನಂತರ ಮುಸಲ್ಮಾನರ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಆದ್ದರಿಂದ ಸಮೂಹದ ಮೂಲಕ ಆಕ್ರಮಣವಾಗುವ ಸಾಧ್ಯತೆಯಿಂದಾಗಿ ಮೇ ೩ ರಂದು ಅಂದರೆ ಶುಕ್ರವಾರ ನಮಾಜಿನ ಸಮಯದಲ್ಲಿ ಕೋಲಂಬೋದ ಮಸೀದಿಗಳಿಗೆ ಬಿಗಿ ಭದ್ರತೆಯನ್ನು ಪೂರೈಸಲಾಗಿತ್ತು ಹಾಗೆಯೇ ಅನೇಕ ಮಸೀದಿಗಳನ್ನು ಮುಚ್ಚಲಾಗಿತ್ತು.

೭. ಶಾಶ್ವತವಾಗಿಯಲ್ಲ ಕೇವಲ ‘ರಂಜಾನ್ ನಲ್ಲಿ ಉಗ್ರವಾದಿ ಚಟುವಟಿಕೆ ನಿಲ್ಲಿಸಿ, ಎನ್ನುವ ಮೆಹಬೂಬಾ ಮುಫ್ತಿ !

‘ರಂಜಾನ್‌ದಲ್ಲಿ ಸೈನ್ಯವು ಉಗ್ರರ ವಿರುದ್ಧದ ದಾಳಿಯನ್ನು ನಿಲ್ಲಿಸಬೇಕು, ಎಂದು ಹಾಗೂ ‘ಉಗ್ರರು ರಂಜಾನ್ ಸಮಯದಲ್ಲಿ ದಾಳಿ ಮಾಡಬಾರದು, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿರವರು ಕರೆ ನೀಡಿದ್ದಾರೆ.

Kannada Weekly | Offline reading | PDF