ಪರಾತ್ಪರ ಗುರು ಡಾ. ಆಠವಲೆಯವರು ಹಸ್ತಸ್ಪರ್ಶ ಮಾಡಿದ ಅವರ ಪಾದುಕೆಗಳು ಮಂಗಳೂರಿನ ಸೇವಾಕೇಂದ್ರದಲ್ಲಿ ಆಗಮನ ಹಾಗೂ ಪ್ರತಿಷ್ಠಾಪನೆ !

ಶ್ರೀ ಮಹಾಲಕ್ಷ್ಮೀ ದೇವಿಯ ಆಶೀರ್ವಾದ ಸ್ವರೂಪದಲ್ಲಿ ಲಭಿಸಿದ ‘ಶ್ರೀಂ ಬೀಜಮಂತ್ರದ ಪದಕ ಪ್ರತಿಷ್ಠಾಪನೆಯೂ ನೆರವೇರಿತು !

ಶ್ರೀ ಗುರುಪಾದುಕೆ ಮತ್ತು ‘ಶ್ರೀಂ ಬೀಜಮಂತ್ರದ ಪದಕ ಸಹಿತ ಸೇವಾಕೇಂದ್ರದೊಳಗೆ ಪ್ರವೇಶ ಮಾಡುತ್ತಿರುವ ಸನಾತನದ ಸಂತರಾದ ಹಾಗೂ ಕರ್ನಾಟಕ ರಾಜ್ಯ ಧರ್ಮಪ್ರಸಾರಕ ಸೇವಕರಾದ ಪೂ. ರಮಾನಂದ ಗೌಡ ಹಾಗೂ ಪೂ. ರಾಧಾ ಪ್ರಭು

ಮಂಗಳೂರು (ಕರ್ನಾಟಕ) – ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಾಧಕರಿಗೆ ಅಖಂಡ ಚೈತನ್ಯಪುಂಜವನ್ನು ಒದಗಿಸುವ ಹಾಗೂ ಪರಾತ್ಪರ ಗುರು ಡಾ. ಆಠವಲೆಯವರು ಭೃಗು ಮಹರ್ಷಿಯ ಆಜ್ಞೆಯಿಂದ ಹಸ್ತಸ್ಪರ್ಶ ಮಾಡಿದ ಪಾದುಕೆಗಳು ಚೈತ್ರ ಕೃಷ್ಣ ಪಕ್ಷ ನವಮಿ, ಅಂದರೆ ಎಪ್ರಿಲ್ ೨೮ ರ ಶುಭದಿನದಂದು ಇಲ್ಲಿಯ ಸೇವಾಕೇಂದ್ರದಲ್ಲಿ ಮಧ್ಯಾಹ್ನ ೧೨ ಗಂಟೆಗೆ ಆಗಮನವಾಯಿತು. ಕರ್ನಾಟಕದ ಸನಾತನದ ಧರ್ಮಪ್ರಸಾರ ಸೇವಕರಾದ ಪೂ. ರಮಾನಂದ ಗೌಡ ಇವರು ಶ್ರೀ ಗುರುಪಾದುಕೆ ಹಾಗೂ ಸನಾತನದ ಸಂತರಾದ ಪೂ. ರಾಧಾ ಪ್ರಭು ಇವರು ‘ಶ್ರೀಂ ಬೀಜಮಂತ್ರ ಪದಕ ಸಹಿತ ಆಶ್ರಮದಲ್ಲಿ ಪ್ರವೇಶ ಮಾಡಿದರು.

ಸನಾತನದ ಸಾಧಕಿಯಾದ ಸೌ. ಮಂಜುಳಾ ರಮಾನಂದ ಗೌಡ ಇವರು ಪ್ರವೇಶದ್ವಾರದಲ್ಲಿ ಪಾದುಕೆಗಳಿಗೆ ಆರತಿಯನ್ನು ಮಾಡಿದರು.

ಸನಾತನದ ಸಾಧಕಿಯಾದ ಸೌ. ಮಂಜುಳಾ ರಮಾನಂದ ಗೌಡ ಇವರು ಪ್ರವೇಶದ್ವಾರದಲ್ಲಿ ಪಾದುಕೆಗಳಿಗೆ ಆರತಿಯನ್ನು ಮಾಡಿದರು. ಪೂ. ರಮಾನಂದ ಗೌಡ ಇವರು ಶ್ರೀ ಪಾದುಕೆಯ ಹಾಗೂ ‘ಶ್ರೀಂ ಬೀಜಮಂತ್ರ ಪದಕದ ಪೂಜೆ ಹಾಗೂ ಪ್ರತಿಷ್ಠಾಪನೆಯನ್ನು ಮಾಡಿದರು.

ಸನಾತನದ ಸಾಧಕರಾದ ಶ್ರೀ. ಪ್ರಶಾಂತ ಹರಿಹರ ಇವರು ಪೌರೋಹಿತ್ಯವನ್ನು ಮಾಡಿದರು

ಈ ವೇಳೆ ಸನಾತನದ ಸಾಧಕರಾದ ಶ್ರೀ. ಪ್ರಶಾಂತ ಹರಿಹರ ಇವರು ಪೌರೋಹಿತ್ಯವನ್ನು ಮಾಡಿದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಉಪಸ್ಥಿತರಿದ್ದರು, ಅದೇ ರೀತಿ ಈ ಸಮಯದಲ್ಲಿ ಶಿಬಿರದ ನಿಮಿತ್ತ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾಧಕರಿಗೂ ಈ ಅಮೂಲ್ಯ ಕ್ಷಣವು ಲಭಿಸಿದ ಕಾರಣಕ್ಕಾಗಿ ಕೃತಜ್ಞತೆ ಎನಿಸಿತು.

ಈ ದಿನ ವಾತಾವರಣವು ಶಾಂತವಾಗಿತ್ತು ಅದೇ ರೀತಿ ತಂಪಿನ ಅರಿವಾಗುತ್ತಿತ್ತು, ಅದೇ ರೀತಿ ಬೆಳಿಗ್ಗೆಯಿಂದ ಹೆಚ್ಚು ಬಿಸಿಲು ಇರದೇ ಮಂದವಾಗಿತ್ತು. ಅಲ್ಲದೇ ಸೇವಾಕೇಂದ್ರವನ್ನು ಹೂವು ಮತ್ತು ರಂಗೋಲಿಗಳಿಂದ ಅಲಂಕರಿಸಲಾಗಿತ್ತು.

Kannada Weekly | Offline reading | PDF